• Tag results for Bangalore

ಬೆಂಗಳೂರಿನ ಶೇ 57 ರಷ್ಟು ನಾಗರಿಕರು ನಗರದಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ತೃಪ್ತಿ ಹೊಂದಿಲ್ಲ!

ಮಹದೇವಪುರ ವಲಯದ ನಿವಾಸಿಗಳು ಮೂಲಭೂತ ಸೌಲಭ್ಯಗಳ ಬಗ್ಗೆ ಹೆಚ್ಚಿನ ಅಸಮಾಧಾನವನ್ನು ಹೊಂದಿದ್ದರೆ, ರಾಜರಾಜೇಶ್ವರಿನಗರದ ನಿವಾಸಿಗಳು ಹೆಚ್ಚು ಸಂತೃಪ್ತರಾಗಿದ್ದಾರೆ ಎಂದು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ.ಪಿಎಸಿ) ಬುಧವಾರ ಬಿಡುಗಡೆ ಮಾಡಿರುವ ವರದಿ ಬಹಿರಂಗಪಡಿಸಿದೆ.

published on : 22nd September 2022

411 ಮರಗಳ ತೆರವಿಗೆ ಹೈಕೋರ್ಟ್ ಅನುಮತಿ: ಬೆಂಗಳೂರು ಮೆಟ್ರೋದ ವಿಮಾನ ನಿಲ್ದಾಣದ ಮಾರ್ಗದ ಅಡ್ಡಿ ನಿವಾರಣೆ

ಕೆಆರ್ ಪುರಂ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೂಲಸೌಕರ್ಯ ಕಾಮಗಾರಿಗೆ ಅಡ್ಡಿಯಾಗಿದ್ದ 411 ಮರಗಳನ್ನು ತೆರವುಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ಗೆ(ಬಿಎಂಆರ್‌ಸಿಎಲ್) ಹೈಕೋರ್ಟ್ ಒಪ್ಪಿಗೆ ನೀಡಿದೆ.

published on : 17th September 2022

ಬೆಂಗಳೂರು ವಿವಿ ಕ್ಯಾಂಪಸ್ ನಲ್ಲಿ ಗಣೇಶ ದೇವಾಲಯ: ಕೇಸರಿಕರಣಕ್ಕೆ ಬಿಜೆಪಿ ಯತ್ನ ಎಂದು ವಿದ್ಯಾರ್ಥಿಗಳ ಆರೋಪ, ಪ್ರತಿಭಟನೆ

ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗಡೆ ಗಣೇಶ ದೇವಾಲಯ ಸ್ಥಾಪನೆಗೆ ಅವಕಾಶ ನೀಡುವ ಮೂಲಕ ಬಿಜೆಪಿ ಸರ್ಕಾರ ವಿವಿ ಕ್ಯಾಂಪಸ್ ನ್ನು ಕೇಸರಿಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

published on : 9th September 2022

ಭಾರಿ ಮಳೆ: ಮಂಗಳವಾರ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

published on : 30th August 2022

ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಲ್ಲಿ ಖಾದಿ ಜಾತ್ರೆ: ಬಿಎಂಆರ್‌ಸಿಎಲ್

ಸ್ವಾತಂತ್ರ್ಯೋತ್ಸವ ಅಂಗವಾಗಿ ಕೈಮಗ್ಗ ಮತ್ತು ಖಾದಿ ಉತ್ಪನ್ನಗಳನ್ನು ಉತ್ತೇಜಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ಮೆಟ್ರೋ ರೈಲು ನಿಲ್ದಾಣದಲ್ಲಿ ಖಾದಿ ಮಾರಾಟಕ್ಕೆ ಅನುವು ಮಾಡಿಕೊಡುತ್ತಿದೆ.

published on : 13th August 2022

ಶಿಕ್ಷಕರ ನೇಮಕಾತಿ: ಗರಿಷ್ಠ ವಯೋಮಿತಿ ಎರಡು ವರ್ಷ ಹೆಚ್ಚಳ

ಶಿಕ್ಷಕರ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಎರಡು ವರ್ಷಗಳವರೆಗೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟವು ಶುಕ್ರವಾರ ನಿರ್ಧರಿಸಿದೆ ಮತ್ತು ಅರ್ಹತೆಗಾಗಿ ಕಟಾಫ್ ಅಂಕಗಳನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿದೆ. 

published on : 13th August 2022

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 20 ಮೀಟರ್ ಶಿಲ್ಪ ನಿರ್ಮಾಣಕ್ಕಾಗಿ ಪ್ರಸ್ತಾವನೆ ಆಹ್ವಾನಿಸಿದ BIAL

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20-ಮೀಟರ್ ಶಿಲ್ಪ ನಿರ್ಮಾಣಕ್ಕಾಗಿ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಪ್ರಸ್ತಾವನೆ ಆಹ್ವಾನಿಸಿದೆ.

published on : 12th August 2022

ಸ್ವಾತಂತ್ರ್ಯದ ಅಮೃತಮಹೋತ್ಸವ: ಆಗಸ್ಟ್ 15ರಂದು ವೊಲ್ವೊ ಸೇರಿ ಎಲ್ಲಾ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ

ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಸ್ಮರಣಾರ್ಥ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಗಸ್ಟ್ 15 ರಂದು ನಗರದ ಎಲ್ಲಾ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಘೋಷಿಸಿದೆ.

published on : 11th August 2022

ಆಗಸ್ಟ್‌ 4ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವ: ಈ ಬಾರಿ ಓಟಿಟಿಯಲ್ಲೂ ಬಿಡುಗಡೆ!

ಬೆಂಗಳೂರು ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವ (BISFF) ತನ್ನ 12ನೇ ಆವೃತ್ತಿಯನ್ನು ಆಗಸ್ಟ್ 4ರಿಂದ 14ರವರೆಗೆ ಆಯೋಜಿಸಲಾಗಿದೆ. ಈ ವರ್ಷ ಕಿರು ಚಲನಚಿತ್ರೋತ್ಸವದ ವಿಶೇಷವೆಂದರೆ, ಚಿತ್ರೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಕಿರು ಚಿತ್ರಗಳನ್ನು ಥಿಯೇಟರ್‌ನಲ್ಲಿ ಮಾತ್ರವಲ್ಲದೇ ಓಟಿಟಿನಲ್ಲಿಯೂ ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

published on : 3rd August 2022

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಮನೆಗಳು, ರಸ್ತೆಗಳು ಜಲಾವೃತ; ಜನರಿಗೆ ಸಂಕಷ್ಟ

ರಾಜ್ಯದಾದ್ಯಂತ ಮಳೆ ಮುಂದುವರಿದಿದ್ದು, ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಭಾರಿ ಮಳೆಯಿಂದಾಗಿ ಕೆಲ ಮನೆಗಳಿಗೆ ನೀರು ನುಗ್ಗಿದ್ದರೆ, ಹಲವು ರಸ್ತೆಗಳು ಜಲಾವೃತವಾಗಿವೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

published on : 31st July 2022

ಬೆಂಗಳೂರು: ರಾಜಕಾಲುವೆ ಮೇಲಿನ ಅರಮನೆ, ಮಾಲ್ ಗಳ ಮೇಲೆ ಬುಲ್ಡೋಜರ್ ಹೋಗಲ್ಲ- ಕುಮಾರಸ್ವಾಮಿ

ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್ ಗಳು, ಅರಮನೆಯಂತಹ ಭಂಗಲೆಗಳ ಮೇಲೆ ಬುಲ್ಡೋಜರ್ ಗಳು ಹೋಗುವುದಿಲ್ಲ. ಆದರೆ, ಬಡವರು ಯಾರಾದರೂ ಸಣ್ಣ ಮನೆ, ಗುಡಿಸಲು ಕಟ್ಟಿಕೊಂಡಿದ್ದರೆ ಅವರ ಮನೆಗಳ ಮೇಲೆ ಬುಲ್ಡೋಜರ್ ಗಳು ನಿರ್ದಯವಾಗಿ ಹರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

published on : 3rd July 2022

ಬೆಂಗಳೂರು: ಫೋಲ್ಡಬಲ್ ಸೈಕಲ್ ಕೊಂಡೊಯ್ಯಲು ಪ್ರಯಾಣಿಕರಿಗೆ ನಮ್ಮ ಮಟ್ರೋ ಅನುಮತಿ; ಹೆಚ್ಚುವರಿ ಶುಲ್ಕ ಇಲ್ಲ!

ಹಸಿರು ಉಪಕ್ರಮನ್ನು ಉತ್ತೇಜಿಸಲು ಬಿಎಂಆರ್'ಸಿಎಲ್ ಶುಲ್ಕ ವಿನಾಯಿತಿಯೊಂದಿಗೆ ಮಡಚಬಹುದಾದ ಸೈಕಲ್ ಜೊತೆಗೆ ಪ್ರಯಾಣಿಸಲು ಪ್ರಯಾಣಿಕರಿಗೆ ಅನುಮತಿ ನೀಡಿದೆ.

published on : 8th June 2022

ಜಾಗತಿಕ ಅಗ್ರ ಐದು ಶಾಲೆಗಳಲ್ಲಿ ಸ್ಥಾನ ಪಡೆದ IIM-ಬೆಂಗಳೂರು!

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIMB) ಜಾಗತಿಕ  ಅತ್ಯುತ್ತಮ ಪ್ರವರ್ತಕ ವ್ಯಾಪಾರ ಶಾಲೆಗಳಲ್ಲಿ ಒಂದಾಗಿದೆ. 

published on : 7th June 2022

ಬೆಂಗಳೂರು ವಿವಿ ಆವರಣದಲ್ಲಿ ಹಲಸು ಫಸಲು: ಮೇ 31ರಂದು ಬಹಿರಂಗ ಹರಾಜು

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಹಲಸಿನ ಮರಗಳಲ್ಲಿ ಉತ್ತಮ ಫಸಲು ಬಂದಿದ್ದು, ಇದನ್ನು ಬಹಿರಂಗ ಹರಾಜು ಹಾಕಲು ವಿಶ್ವವಿದ್ಯಾಲಯ ಮುಂದಾಗಿದೆ. ಫೆ.31ರ ಬೆಳಿಗ್ಗೆ 11.30ಕ್ಕೆ ಸಾರ್ವಜನಿಕ ಹರಾಜು ನಡೆಯಲಿದೆ.

published on : 27th May 2022

ಐಐಎಸ್ ಸಿ ಬೆಂಗಳೂರು ಕ್ಯಾಂಪಸ್‌ನಲ್ಲಿ ಹಸಿರು ನಾಶ: ಅರಣ್ಯ ಇಲಾಖೆಯಿಂದ ತನಿಖೆ

ಸಾಧನೆ ಮತ್ತು ಪುರಸ್ಕಾರಗಳಿಗೆ ಹೆಸರಾದ ಭಾರತದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಈ ಬಾರಿ ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದೆ.

published on : 26th May 2022
1 2 3 4 > 

ರಾಶಿ ಭವಿಷ್ಯ