- Tag results for Belagavi
![]() | ಬೆಳಗಾವಿಯಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭ: ಪ್ರಯೋಗ ಯಶಸ್ವಿಯಾದರೆ ಕಾವೇರಿ ಜಲಾನಯನ ಪ್ರದೇಶಗಳಲ್ಲೂ ಯತ್ನ!ಈ ವರ್ಷ ಮುಂಗಾರು ಮಳೆ ಕೈಕೊಟ್ಟು ಬರಗಾಲದಿಂದ ತತ್ತರಿಸಿ ಹೋಗಿರುವ ರೈತರ ನೆರವಿಗೆ ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ನಿನ್ನೆ ಶುಕ್ರವಾರ ಮೋಡ ಬಿತ್ತನೆ ಕಾರ್ಯ ನಡೆಸಿತು. |
![]() | ಬೆಳಗಾವಿ: ಇನ್‌ಸ್ಟಾಗ್ರಾಮ್ ಜಗಳ ಬಾಲಕನ ಕೊಲೆಯಲ್ಲಿ ಅಂತ್ಯ; ಮೂವರು ಅಪ್ರಾಪ್ತರು ವಶಕ್ಕೆ, ಓರ್ವನ ಬಂಧನಇನ್ಸ್ಟಾಗ್ರಾಮ್ನಲ್ಲಿ ಪ್ರಾರಂಭವಾದ ಜಗಳವು ಅಪ್ರಾಪ್ತ ಬಾಲಕನ ಹತ್ಯೆಯಲ್ಲಿ ಕೊನೆಯಾಗಿರುವ ದುರಂತ ಘಟನೆಯೊಂದು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಮೃತನನ್ನು 17 ವರ್ಷದ ಪ್ರಜ್ವಲ್ ಸುಂಕದ ಎಂದು ಗುರುತಿಸಲಾಗಿದೆ. |
![]() | ಅಕ್ಟೋಬರ್ 2, 3 ರಂದು ಬೆಳಗಾವಿಯಲ್ಲಿ ಕುರುಬರ ಸಮಾವೇಶಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಕುರುಬ ಸಮುದಾಯದ ಮುಖಂಡರನ್ನು ಸೆಳೆಯಲು ಪಕ್ಷಗಳು ಕಸರತ್ತು ನಡೆಸುತ್ತಿವೆ. ಹಿಂದುಳಿದ ಈ ಸಮುದಾಯ ರಾಷ್ಟ್ರದಾದ್ಯಂತ ಸುಮಾರು 11 ಕೋಟಿ ಜನಸಂಖ್ಯೆಯನ್ನು ಹೊಂದಿದೆ. |
![]() | ಬೆಳಗಾವಿ: ಪತ್ನಿ ಮೇಲೆ ಕೋಪ, ನಾಲ್ಕು ತಿಂಗಳ ಹಸುಗೂಸನ್ನು ರಸ್ತೆಗೆ ಎಸೆದು ಕೊಂದ ತಂದೆಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಸಿಟ್ಟಿನ ಭರದಲ್ಲಿ ವ್ಯಕ್ತಿಯೊಬ್ಬ ತನ್ನ ನಾಲ್ಕು ತಿಂಗಳ ಗಂಡು ಮಗುವನ್ನು ರಸ್ತೆಗೆ ಎಸೆದು ಕೊಂದಿರುವ ದಾರುಣ ಘಟನೆ ಗಣೇಶ ಹಬ್ಬದಂದು ನಡೆದಿದೆ. |
![]() | ಬೆಳಗಾವಿಯಲ್ಲಿ ಅದ್ದೂರಿ ಗಣೇಶೋತ್ಸವ, ಈದ್ ಮೆರವಣಿಗೆ ಮುಂದೂಡಿಕೆ!ಸೋಮವಾರ ನಾಡಿನಾದ್ಯಂತ ವಿಘ್ನ ನಿವಾರಕನನ್ನು ಶ್ರದ್ದಾ ಭಕ್ತಿಯಿಂದ ಬರಮಾಡಿಕೊಂಡು ಸಂಭ್ರಮದಿಂದ ಆಚರಿಸಲಾಯಿತು. ಇನ್ನೂ 10 ದಿನಗಳ ಕಾಲ ಗಣೇಶೋತ್ಸವ ಜೋರಾಗಿರುತ್ತದೆ. |
![]() | ಲೋಕಾಯುಕ್ತ ಅಧಿಕಾರಿ ಎಂದು ನಕಲಿ ಗುರುತಿನ ಚೀಟಿ ತೋರಿಸಿ ಬ್ಲ್ಯಾಕ್‌ಮೇಲ್; ಬೆಳಗಾವಿ ಮೂಲದ ವ್ಯಕ್ತಿ ಬಂಧನಕಳೆದೆರಡು ದಿನಗಳ ಹಿಂದೆ ಲೋಕಾಯುಕ್ತ ಅಧಿಕಾರಿ ಎಂದು ನಕಲಿ ಗುರುತನ್ನು ತೋರಿಸಿ ಸರ್ಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಬೆಳಗಾವಿ ಮೂಲದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇದನ್ನು ಪೊಲೀಸರು ಶನಿವಾರ ಬಹಿರಂಗಪಡಿಸಿದ್ದಾರೆ. |
![]() | ನೇಮಿನಾಥ ತೀರ್ಥಂಕರ ದೇವಸ್ಥಾನ: ಬೆಳಗಾವಿ ಕಮಲ ಬಸದಿಯ ಬೆರಗುಗೊಳಿಸುವ ಸೌಂದರ್ಯ ಸವಿಯಿರಿ...ಬೆಳಗಾವಿ ಕೋಟೆಯೊಳಗಿನ ಮತ್ತೊಂದು ಅದ್ಭುತವೆಂದರೆ 'ಕಮಲ ಬಸದಿ'. ಇದು ಶ್ರೀ ನೇಮಿನಾಥ ತೀರ್ಥಂಕರ ದೇವಸ್ಥಾನ ಎಂಬ ಜೈನ ದೇವಾಲಯವಾಗಿದ್ದು, ಕಮಲ ಬಸದಿ ಎಂದೇ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿನ ದೇವಸ್ಥಾನದ ರ೦ಗಮ೦ಟಪದ ಛಾವಣಿಯಲ್ಲಿ ಕಮಲದ ದಳಗಳನ್ನು ಕೆತ್ತಲಾಗಿದ್ದು, ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. |
![]() | ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 150 'ಗ್ರಾಮ ಒನ್' ಕೇಂದ್ರಗಳು, ಶೀಘ್ರದಲ್ಲೇ ಪ್ರಾರಂಭಬೆಳಗಾವಿ ಜಿಲ್ಲೆಯ ಪ್ರತಿ ಹಳ್ಳಿಯ ಜನರಿಗೆ ಎಲ್ಲಾ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 150 'ಗ್ರಾಮ ಒನ್' ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ. |
![]() | ಬೆಳಗಾವಿ: ಮನೆ ಮುಂದಿದ್ದ ಕಸ ತೆಗೆಯಲು ಹೋಗಿ ವಿದ್ಯುತ್ ಸ್ಪರ್ಶ; ತಂದೆ-ಮಗ ದಾರುಣ ಸಾವುಮನೆಯ ಮುಂದಿದ್ದ ವಿದ್ಯುತ್ ಕಂಬದ ತಂತಿ ತಗುಲಿ ತಂದೆ ಮತ್ತು ಮಗ ಮೃತಪಟ್ಟ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ. |
![]() | ಬೆಳಗಾವಿ: ಮಾರ್ಕೆಟ್ ಪೊಲೀಸರಿಂದ ಕಳ್ಳನ ಬಂಧನ, 10 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳು ವಶಕ್ಕೆಬೆಳಗಾವಿಯ ಸಮರ್ಥ ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಮಾರ್ಕೆಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನಿಪ್ಪಾಣಿ ನಿವಾಸಿ ಯಾಸೀನ್ ಹಾಶಿಮ್ ಶೇಖ್ (23) ಎಂದು ಗುರುತಿಸಲಾಗಿದೆ. |
![]() | ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣ ದುರುಪಯೋಗ: ವಿಸ್ತೃತ ತನಿಖೆ ಆರಂಭ- ಸಚಿವ ಸತೀಶ್ ಜಾರಕಿಹೊಳಿಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಣ ದುರುಪಯೋಗ ಹಾಗೂ ಶೇ.40 ಕಮಿಷನ್ ಅವ್ಯವಹಾರದ ಬಗ್ಗೆ ವಿಸ್ತೃತ ತನಿಖೆ ನಡೆಸಲು ಇದು ಸೂಕ್ತ ಸಮಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭಾನುವಾರ ಹೇಳಿದರು. |
![]() | ಅಕ್ಟೋಬರ್ 5 ರಿಂದ ಬೆಳಗಾವಿಯಿಂದ ದೆಹಲಿಗೆ ಇಂಡಿಗೋ ವಿಮಾನ ಸೇವೆ ಆರಂಭಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದರೂ ಕೂಡ ಹಲವಾರು ಕಾರಣಗಳಿಂದಾಗಿ, ಕಳೆದ ಕೆಲವು ವರ್ಷಗಳಿಂದ ಬೆಳಗಾವಿ ವಿಮಾನ ನಿಲ್ದಾಣದಿಂದ ಹಲವಾರು ಪ್ರಮುಖ ಸ್ಥಳಗಳಿಗೆ ತೆರಳುವ ವಿಮಾನ ಸೇವೆಗಳು ಸ್ಥಗಿತಗೊಂಡಿವೆ. |
![]() | ಚಿಕ್ಕಹಟ್ಟಿಹೊಳಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ 60 ಕೋಟಿ ರೂ. ಮೀಸಲು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಹುಟ್ಟೂರಾದ ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ 60 ಕೋಟಿ ರೂ. ಮೀಸಲಿಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬುಧವಾರ ಹೇಳಿದರು. |
![]() | ಪತ್ರ ಬರೆದ ಕಾಂಗ್ರೆಸ್ ಶಾಸಕರನ್ನು ಹೆದರಿಸಲು ಆಪರೇಷನ್ ತಂತ್ರ; ನಾನು ಬೆಳಗಾವಿ ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ: ಬಾಲಚಂದ್ರಮುಂಬರುವ ಬೆಳಗಾವಿ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿಲ್ಲ. |
![]() | ಲಿಫ್ಟ್ ನಲ್ಲಿ ಸಿಲುಕಿಕೊಂಡ ಸತೀಶ್ ಜಾರಕಿಹೊಳಿ ಪುತ್ರ: ಕೆಲಕಾಲ ಆತಂಕ ಸೃಷ್ಟಿಸಚಿವ ಸತೀಶ್ ಜಾರಕಿಹೊಳಿಯವರ ಪುತ್ರ ರಾಹುಲ್ ಜಾರಕಿಹೊಳಿ ಅವರು ಜಿಲ್ಲಾಸ್ಪತ್ರೆಯ ಲಿಫ್ಟ್ ನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡು, ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಸೋಮವಾರ ನಡೆಯಿತು. |