• Tag results for Bengaluru Police

ಬೆಂಗಳೂರು: ಪ್ರಿಯತಮನಿಗಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆಂಧ್ರ ಮೂಲದ ಯುವತಿ ಬಂಧನ

ಪೋಷಕರಿಂದ ದೂರವಿದ್ದು ಪ್ರಿಯತಮನಿಗಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆಂಧ್ರ ಪ್ರದೇಶ ಮೂಲದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

published on : 16th June 2021

'ರಾಬರ್ಟ್' ನಿರ್ಮಾಪಕ ಹತ್ಯೆ ಯತ್ನ ಪ್ರಕರಣ: ರೌಡಿಶೀಟರ್ ರಾಜೀವ್ ಬಂಧನ

ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಅವರ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ರಾಜೀವ್ ಅಲಿಯಾಸ್ ಕರಿಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

published on : 15th June 2021

ಬೆಂಗಳೂರು: ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಮಾರಾಟ-ನಾಲ್ವರ ಬಂಧನ

ನಗರದಲ್ಲಿ ಅಕ್ರಮವಾಗಿ ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

published on : 9th June 2021

ಬೆಂಗಳೂರಿನಲ್ಲಿ ಅಕ್ರಮ ಮದ್ಯ ಸಾಗಾಟ: ಇಬ್ಬರ ಬಂಧನ

ತರಕಾರಿ ಸಾಗಾಟ ಮಾಡುವ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರೂ ಆರೋಪಿಗಳನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

published on : 9th June 2021

ಅಗತ್ಯವಿರುವವರಿಗೆ ಆಹಾರ ಪೂರೈಸಲು ಸ್ವಂತ ವಾಹನ ಬಳಸುವಂತಿಲ್ಲ: ಬೆಂಗಳೂರು ಪೊಲೀಸರ ಎಚ್ಚರಿಕೆ

ಅಗತ್ಯವಿರುವವರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುವ ನೆಪದಲ್ಲಿ ಜನರು ತಮ್ಮ ಸ್ವಂತ ವಾಹನಗಳನ್ನು ಹೊರಗೆ ತರಬಾರದು ಅವರು ಸರಕು ವಾಹನಗಳನ್ನು ಬಳಸಬೇಕು ಅಥವಾ ವಿತರಣಾ ಕಂಪನಿಗಳ ಮೂಲಕ ಹಂಚಬೇಕು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

published on : 2nd June 2021

ಬೆಂಗಳೂರು: ಅಕ್ರಮ ರೆಮ್ ಡಿಸಿವಿರ್ ಮಾರಾಟ ನಡೆಸಿದ್ದ ಮೂವರ ಸೆರೆ

ಅಕ್ರಮವಾಗಿ ರೆಮ್ ಡಿಸಿವಿರ್ ಔಷಧಿ ಮಾರಾಟ ನಡೆಸಿದ್ದ ಮೂವರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.

published on : 26th May 2021

ಖುದ್ದು ರಸ್ತೆಗಿಳಿದ ಪೊಲೀಸ್ ಆಯುಕ್ತ​​ ಕಮಲ್​ ಪಂತ್; ಬೆಂಗಳೂರಿನಲ್ಲಿ 3 ಗಂಟೆಯಲ್ಲೆ 1500 ವಾಹನ ಜಪ್ತಿ!

ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್​​ಡೌನ್ ಜಾರಿಗೊಳಿಸಿದ್ದು, ಲಾಕ್​​ಡೌನ್​ ಯಶಸ್ವಿಗೊಳಿಸಲು ಖುದ್ದು ನಗರ ಪೊಲೀಸ್​ ಆಯುಕ್ತ​ ಕಮಲ್​​​ ಪಂತ್ ಅವರೇ ರಸ್ತೆಗೆ ಇಳಿದು ವಾಹನಗಳನ್ನು ಪರಿಶೀಲನೆ ನಡೆಸಿದರು.

published on : 22nd May 2021

ತವರಿಗೆ ತೆರಳಲು ಜರ್ಮನ್ ಪ್ರಜೆಗೆ ಬೆಂಗಳೂರು ಪೊಲೀಸರ ಸಹಾಯ

ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದ ಜರ್ಮನ್ ಪ್ರಜೆಗೆ ವಾಪಸ್ ತೆರಳಲು 38 ವರ್ಷದ ವ್ಯಕ್ತಿಗೆ ಬೆಂಗಳೂರು ಪೊಲೀಸರು ಸಹಾಯ ಮಾಡಿದ್ದಾರೆ.

published on : 19th May 2021

ನೇಪಾಳ ಮೂಲದ ನಾಲ್ವರ ಬಂಧನ: 75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಡಿಜೆ ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಳವು ಮಾಡುತ್ತಿದ್ದ ನೇಪಾಳ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

published on : 13th May 2021

ಪೊಲೀಸರು ಹೊಡೆಯುವ ಮುಂಬೈ ವಿಡಿಯೋ ರಾಜ್ಯದ್ದು ಎಂದು ಹರಿಬಿಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತೆ ಬಂಧನ

ಮಹಾರಾಷ್ಟ್ರದ ಮುಂಬೈನ ವಿಡಿಯೋವನ್ನು ರಾಜ್ಯದ ಪೊಲೀಸರ ವಿಡಿಯೋ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಮಹಿಳೆಯನ್ನು ದಕ್ಷಿಣ ವಿಭಾಗದ ಸಿಇಎನ್​ ಪೊಲೀಸರು ಬಂಧಿಸಿದ್ದಾರೆ.

published on : 12th May 2021

ಬೆಂಗಳೂರಿನಲ್ಲಿ ಲಾಕ್ ಡೌನ್ ಉಲ್ಲಂಘನೆ: ಪೊಲೀಸರಿಂದ 2410 ವಾಹನ ಜಪ್ತಿ

ಕೊರೋನಾ ಎರಡನೇ ಅಲೆ ನಿಯಂತ್ರಿಸಲು ಲಾಕ್ ಡೌನ್ ಜಾರಿಯಾಗಿದ್ದರು ನಿಯಮ ಮೀರಿ ರಸ್ತೆಗಿಳಿದಿದ್ದ 2410 ವಾಹನಗಳನ್ನು ನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

published on : 11th May 2021

ಆಸ್ಪತ್ರೆಯಲ್ಲಿ ಬೆಡ್ ಬುಕ್ಕಿಂಗ್ ದಂಧೆ: ಇಬ್ಬರು ವೈದ್ಯರು ಸೇರಿ ಆರು ಮಂದಿ ಬಂಧನ!

ಕೊರೋನಾ ಸಂಕಷ್ಟ ಸಮಯದಲ್ಲಿ ಆಸ್ಪತ್ರೆ ಬೆಡ್ ಗಳನ್ನು ಕಾಳಸಂತೆಯಲ್ಲಿ ಬುಕ್ಕಿಂಗ್ ಮಾಡುತ್ತಿದ್ದ ದಂಧೆಯನ್ನು ಭೇದಿಸಿರುವ ಬೆಂಗಳೂರು ಕೇಂದ್ರ ವಿಭಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

published on : 6th May 2021

ಕೊರೋನಾ ಕರ್ಫ್ಯೂ ಉಲ್ಲಂಘನೆ: ಬೆಂಗಳೂರು ಪೊಲೀಸರಿಂದ 2.85 ಕೋಟಿ ರೂ. ದಂಡ ವಸೂಲಿ!

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕರ್ಫ್ಯೂ ಜಾರಿಯಲಿದ್ದರೂ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದವರಿಗೆ ನಗರ ಪೊಲೀಸರು ಭಾರೀ ದಂಡ ವಿಧಿಸುತ್ತಿದ್ದಾರೆ.

published on : 5th May 2021

ಬೆಂಗಳೂರು ಪೋಲೀಸ್ ಕಾರ್ಯಾಚರಣೆ: 8.20 ಲಕ್ಷ ಮೌಲ್ಯದ 70 ಮೊಬೈಲ್ ವಶ, ಮೂವರ ಸೆರೆ

ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಾ ಮೊಬೈಲ್ ಫೋನ್ ಕದಿಯುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ,

published on : 18th April 2021

ಬೆಂಗಳೂರು: ಕುಖ್ಯಾತ ರೌಡಿಶೀಟರ್ ಕಾಲಿಗೆ ಗುಂಡೇಟು

ತಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದ ಕೊಲೆ ಆರೋಪಿ ಕುಖ್ಯಾತ ರೌಡಿ ಶೀಟರ್ ಒಬ್ಬನ ಮೇಲೆ ಸಿಲಿಕಾನ್ ಸಿಟಿ ಬೆಂಗಳೂರು ಪೋಲೀಸರು ಫೈರಿಂಗ್ ನಡೆಸಿದ್ದಾರೆ. ಶುಕ್ರವಾರ ನಸುಕಿನ ವೇಳೆ ಸಿ.ಕೆ.ಅಚ್ವುಕಟ್ಟು ಠಾಣೆ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

published on : 26th March 2021
1 2 3 >