• Tag results for Bengaluru rain

ಬೆಂಗಳೂರು ಮಳೆಗೆ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಪ್ರಕಟ

ನಿನ್ನೆಯ ಮಳೆಗೆ ಉಲ್ಲಾಳ ಸಮೀಪ ಪೈಪ್ ಲೈನ್ ನಲ್ಲಿ ಸಿಲುಕಿ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

published on : 18th May 2022

ರಾಜಕಾಲುವೆ ಒತ್ತುವರಿಯಿಂದ ಮಳೆ ಅನಾಹುತ, ಮನೆಗೆ ನೀರು ನುಗ್ಗಿ ಹಾನಿಯಾದವರಿಗೆ 25 ಸಾವಿರ ರೂ. ಪರಿಹಾರ: ಸಿಎಂ ಬೊಮ್ಮಾಯಿ

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಮಂಗಳವಾರ ಸಾಯಂಕಾಲ ಗಂಟೆಗಳ ಕಾಲ ಸುರಿದ 100 ಮಿಲಿ ಮೀಟರ್ ಗೂ ಅಧಿಕ ಮಳೆಯಿಂದ ಆದ ಅವಾಂತರಗಳು ಅಷ್ಟಿಷ್ಟಲ್ಲ, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮನೆಗಳಿಗೆ ನೀರು ನುಗ್ಗಿದೆ.

published on : 18th May 2022

ಬೆಂಗಳೂರಿನಲ್ಲಿ ದಾಖಲೆಯ ಮಳೆಯ ಅವಾಂತರ: ಇಬ್ಬರು ಕಾರ್ಮಿಕರು ಸಾವು, ಪೈಪ್ ಲೈನ್ ನಲ್ಲಿ ಮೃತದೇಹ

ನಿನ್ನೆ ಮಂಗಳವಾರ ಸಾಯಂಕಾಲದಿಂದ ರಾಜಧಾನಿ ಬೆಂಗಳೂರಲ್ಲಿ (Bengaluru) ಸುರಿದ ದಿಢೀರ್ ಭಾರೀ ಮಳೆಗೆ (Rain) ಆದ ಅವಾಂತರಗಳು ಒಂದೆರಡಲ್ಲ. ನಿನ್ನೆ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. 

published on : 18th May 2022

ಬೆಂಗಳೂರಿನ ಮಳೆ ಅವಾಂತರ ಸ್ಥಿತಿಗತಿ ಅರಿಯಲು ಖುದ್ದು ಭೇಟಿ ನೀಡುತ್ತೇನೆ, ಬಿಬಿಎಂಪಿ ಕಂಟ್ರೋಲ್ ರೂಂ ಸ್ಥಾಪನೆ: ಸಿಎಂ ಬೊಮ್ಮಾಯಿ

ರಾಜಧಾನಿ ಬೆಂಗಳೂರಿನ ಹಲವಾರು ಕಡೆಗಳಲ್ಲಿ 100 ಮಿಲಿ ಮೀಟರ್ ಗಿಂತ ಜಾಸ್ತಿ ಮಳೆ ಸುರಿದಿದೆ. 90 ಮಿಲಿ ಮೀಟರ್ ಮಳೆ ಬಿದ್ದಾಗಲೇ ಬೆಂಗಳೂರಿಗೆ ಆತಂಕವಾಗುತ್ತದೆ. ಅಂತಹುದರಲ್ಲಿ ನಿನ್ನೆ 100 ಮಿಲಿ ಮೀಟರ್ ಗಿಂತ ಹೆಚ್ಚು ಬಿದ್ದಿರುವುದು ಹಲವು ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿರುವುದು ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

published on : 18th May 2022

ಬೆಂಗಳೂರು: ಹೊರಮಾವು ವಾರ್ಡ್​ನ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹೊರಮಾವು ವಾರ್ಡ್​ನ ಬಿಡಿಎಸ್ ನಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

published on : 24th November 2021

ಬೆಂಗಳೂರಲ್ಲಿ ಇಂದು ಕೂಡ ಮುಂದುವರಿದ ಜಿಟಿಜಿಟಿ ಮಳೆ: ಆರೆಂಜ್ ಅಲರ್ಟ್ ಘೋಷಣೆ

ನವೆಂಬರ್ ತಿಂಗಳ ದೀಪಾವಳಿ ಕಳೆದು ಇನ್ನೇನು ಚುಮು ಚುಮು ಚಳಿ ಆರಂಭವಾಗಬೇಕೆನ್ನುವಷ್ಟರಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ ಜಿಟಿಜಿಟಿ ಮಳೆಯಾಗುತ್ತಿದೆ.

published on : 12th November 2021

ಮಳೆಯಿಂದ ಉರುಳಿದ್ದ ಮರಕ್ಕೆ ಡಿಕ್ಕಿ ಹೊಡೆದು ಹೋಟೆಲ್ ಮಾಲೀಕ ಸಾವು!

ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆಯ ಪರಿಣಾಮ ಉರುಳಿದ್ದ ಮರಕ್ಕೆ ಡಿಕ್ಕಿ ಹೊಡೆದು ಹೋಟೆಲ್ ಮಾಲಿಕ ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಿಗ್ಗೆ 4.30ಕ್ಕೆ ನಡೆದಿದೆ. 

published on : 4th October 2021

ರಾಶಿ ಭವಿಷ್ಯ