• Tag results for Bollywood

ನಾನು ವಿದೇಶಕ್ಕೆ ಹೋಗಬೇಕು, ಪಾಸ್ ಪೋರ್ಟ್‌ಗಾಗಿ ಅನುಮತಿ ನೀಡಿ: ಕೋರ್ಟ್‌ಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮನವಿ

200 ಕೋಟಿ ವಂಚನೆ ಪ್ರಕರಣದಲ್ಲಿ ಇಡಿ ವಿಚಾರಣೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ವಿದೇಶಕ್ಕೆ ಹಾರಲು ಅನುಮತಿ ನೀಡುವಂತೆ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದಾರೆ.

published on : 11th May 2022

ನನ್ನನ್ನು ಮದುವೆಯಾಗು ಎಂದು ನಟಿ ಜಾಹ್ನವಿ ಕಪೂರ್ ಟ್ವೀಟ್ ಮಾಡಿದ್ದೇಕೆ?

ಭಾರತೀಯ ಚಿತ್ರರಂಗದ ಸುಪ್ರಸಿದ್ಧ ತಾರೆ ಶ್ರೀದೇವಿ, ಬಾಲಿವುಡ್‌ ಚಿತ್ರರಂಗದ ಅದ್ದೂರಿ ಸಿನೆಮಾಗಳ ನಿರ್ಮಾಪಕ ಬೋನಿ ಕಪೂರ್‌ ಅವರ ಪುತ್ರಿ  ಇಂದು ತಮ್ಮ ಟ್ವೀಟ್‌ ಮೂಲಕ ಅಚ್ಚರಿ ಮೂಡಿಸಿದ್ದಾರೆ.

published on : 10th May 2022

ಬಾಲಿವುಡ್ ನನ್ನನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಮತ್ತು ನನ್ನ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ: ಮಹೇಶ್ ಬಾಬು 

ಪುಷ್ಪ, ಆರ್ ಆರ್ ಆರ್, ಕೆಜಿಎಫ್ 2 ಚಿತ್ರ ಭಾರತ ಚಿತ್ರರಂಗದಲ್ಲೇ ದೊಡ್ಡ ಹೆಸರು ಮಾಡಿವೆ. ದಕ್ಷಿಣ ಭಾರತದ ಈ ಸಿನಿಮಾಗಳು ಬಾಲಿವುಡ್ ಚಿತ್ರರಂಗ ಸೌತ್ ಇಂಡಿಯಾ ಕಡೆ ತಿರುಗಿ ನೋಡುವಂತೆ ಮಾಡಿವೆ. ಸೌತ್ ಇಂಡಿಯನ್ ಸಿನಿಮಾಗಳ...

published on : 10th May 2022

ನಟ ಶಾರೂಖ್ ಖಾನ್ ಬಂಗಲೆ ಪಕ್ಕದ ಅಪಾರ್ಟ್‌ಮೆಂಟ್ ಗೆ ಹೊತ್ತಿಕೊಂಡ ಬೆಂಕಿ: ಆತಂಕ ಸೃಷ್ಟಿ

ಮುಂಬೈನ ಐಷಾರಾಮಿ ಪ್ರದೇಶದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಬಂಗಲೆ ಮನ್ನತ್ ಪಕ್ಕದಲ್ಲಿರುವ ಅಪಾರ್ಟ್‌ಮೆಂಟ್   14ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

published on : 10th May 2022

ಅಮೀರ್ ಖಾನ್'ರ ದಂಗಲ್ ಕಲೆಕ್ಷನ್ ದಾಖಲೆ ಹಿಂದಿಕ್ಕಿ 400 ಕೋಟಿಯತ್ತ ಮುನ್ನುಗಿದ ಕೆಜಿಎಫ್ 2; ಮುಂದಿದೆ ಬಾಹುಬಲಿ 2!

ಸಾರ್ವಕಾಲಿಕ ದಾಖಲೆಗಳನ್ನು ನಿರ್ಮಿಸಿ ಮುನ್ನುಗುತ್ತಿರುವ ಕೆಜಿಎಫ್ 2 ಚಿತ್ರ ಇದೀಗ ಮೂಲ ಹಿಂದಿ ಭಾಷೆಯ ದಂಗಲ್ ಚಿತ್ರವನ್ನು ಹಿಂದಿಕ್ಕಿ ಅತೀ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ. 

published on : 5th May 2022

ಕಾಫಿ ವಿತ್ ಕರಣ್ ಹೊಸ ಸೀಸನ್ ಬರುವುದಿಲ್ಲ: ಭಾವನಾತ್ಮಕವಾಗಿ ವಿಷಯ ತಿಳಿಸಿದ ಕರಣ್ ಜೋಹರ್

ಹಿಂದಿಯ ಖ್ಯಾತ ಶೋ ಕಾಫಿ ವಿತ್​ ಕರಣ್ ಮತ್ತೆ ಬರುವುದಿಲ್ಲ ಎಂಬ ವಿಚಾರವನ್ನು ಭಾವನಾತ್ಮಕವಾಗಿ ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದ ಕರಣ್ ಜೋಹರ್ ಅವರು ಬುಧವಾರ ಹಂಚಿಕೊಂಡಿದ್ದಾರೆ.

published on : 4th May 2022

ಕೆಜಿಎಫ್ ಚಿತ್ರದ ಅಬ್ಬರ ನೋಡಿ ಹೆದರಿದ್ದೆ: ಬಾಲಿವುಡ್ ನಟ ಅಮೀರ್ ಖಾನ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ದೇಶಾದ್ಯಂತ ನಾಗಾಲೋಟ ಮುಂದುವರೆಸಿದೆ. ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾದರೂ ಮೂರನೇ ವಾರವೂ ಕೆಜಿಎಫ್ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿದೆ. 

published on : 2nd May 2022

ನಟ ಅಕ್ಷಯ್ ಕುಮಾರ್ ಬಾಚಣಿಗೆಯಿಂದ ಹಲ್ಲು ಕೆರೆದುಕೊಂಡಿದ್ದನ್ನು ಗುಟ್ಕಾ ಎಫೆಕ್ಟ್ ಎಂದ ನೆಟ್ಟಿಗರು, ವಿಡಿಯೋ ವೈರಲ್!

ವಿಶ್ವ ನಗು ದಿನದಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಬಾಚಣಿಗೆಯಿಂದ ತಮ್ಮ ಹಲ್ಲನ್ನು ಕೆರೆದುಕೊಂಡಿದ್ದು ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ನೋಡಿದ ನೆಟ್ಟಿಗರು ನಟನ ವಿರುದ್ಧ ಛಾಟಿ ಬೀಸಿದ್ದಾರೆ. 

published on : 2nd May 2022

ಬೆಂಗಳೂರು ಆಸ್ಪತ್ರೆಯಿಂದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಡಿಸ್ಚಾರ್ಜ್!

ತೀವ್ರ ಹೊಟ್ಟೆ ನೋವು, ಜ್ವರದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

published on : 2nd May 2022

ಬಿಸಿಲ ಧಗೆ: ಬಿಕಿನಿ ತೊಟ್ಟು ಈಜುಕೊಳದಲ್ಲಿ ಪ್ರಿಯಾಂಕಾ ಚೋಪ್ರಾ ಕೂಲ್ ಕೂಲ್; ಪತಿ ಹೇಳಿದ್ದೇನು?

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಈಜುಕೊಳದಲ್ಲಿ ಬಿಸಿಲಿಗೆ ಮೈವೊಡ್ಡಿ ಕುಳಿತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಮಚಿಕೊಂಡಿದ್ದಾರೆ.

published on : 30th April 2022

ಹಿಂದಿ ರಾಷ್ಟ್ರ ಭಾಷೆ ವಿವಾದ: ಬಾಲಿವುಡ್ ಸ್ಟಾರ್ಸ್ ಗಳಿಗೆ ಸವಾಲು ಹಾಕಿದ ಆರ್ ಜಿವಿ!

ಹಿಂದಿ ರಾಷ್ಟ್ರ ಭಾಷೆ ವಿಚಾರವಾಗಿ ನಟರಾದ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ವಾಗ್ಯುದ್ದ ದೇಶಾದ್ಯಂತ ತೀವ್ರ ಚರ್ಚೆಯಾಗುತ್ತಿರುವಂತೆಯೇ, ತಮ್ಮ ನೇರ ನುಡಿ ಮತ್ತು ಮುಕ್ತ ಅಭಿಪ್ರಾಯಕ್ಕೆ ಹೆಸರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಬಾಲಿವುಡ್ ಸ್ಟಾರ್ ಗಳಿಗೆ ಸವಾಲು ಹಾಕಿದ್ದಾರೆ.

published on : 29th April 2022

ಕಿರುಕುಳ ಪ್ರಕರಣ: ನಟ ನವಾಜುದ್ದೀನ್ ಸಿದ್ದಿಕಿ ಸೇರಿದಂತೆ ಕುಟುಂಬಕ್ಕೆ ಕ್ಲೀನ್ ಚಿಟ್

ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬದ ನಾಲ್ವರಿಗೆ ಉತ್ತರಪ್ರದೇಶದ ಮುಜಾಫರ್‌ನಗರದ ನ್ಯಾಯಾಲಯವು ಕಿರುಕುಳ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ.

published on : 28th April 2022

ಬಾಲಿವುಡ್ ಕಲೆಕ್ಷನ್ ನಲ್ಲಿ ಟೈಗರ್ ಜಿಂದಾ ಹೈ, ಪಿಕೆ, ಸಂಜು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ ಕೆಜಿಎಫ್-2!

ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಾ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಕನ್ನಡ ಡಬ್ಬಿಂಗ್ ಚಿತ್ರ ಇಂದು ಮತ್ತೊಂದು ದಾಖಲೆ ಸೃಷ್ಟಿಸಿದೆ. ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪೈಕಿ ಮೂರನೇ ಸ್ಥಾನಕ್ಕೇರಿದೆ. 

published on : 28th April 2022

ಬಾಲಿವುಡ್ ಗೆ ಸಾರಾ ತೆಂಡೂಲ್ಕರ್?

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿ. ಸ್ಟಾರ್ ಕಿಡ್, ಆದಾಗ್ಯೂ ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಆಸಕ್ತಿ ಹೊಂದಿದ್ದಾರೆ.

published on : 25th April 2022

ಸೋಮವಾರದ 'ಅಗ್ನಿ ಪರೀಕ್ಷೆ' ಗೆದ್ದ 'ಕೆಜಿಎಫ್-2'; ಮಕಾಡೆ ಮಲಗಿದ ತಮಿಳು ಚಿತ್ರ 'ಬೀಸ್ಟ್'!!

ಭಾರತೀಯ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್-2 ಕಮಾಲ್ ಮುಂದುವರೆದಿದ್ದು, ಸೋಮವಾರದ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿ ಹಿಂದಿಯಲ್ಲಿ ತನ್ನ ಗಳಿಕೆಯನ್ನು 219 ಕೋಟಿಗೇರಿಸಿಕೊಂಡಿದೆ.

published on : 19th April 2022
1 2 3 4 5 6 > 

ರಾಶಿ ಭವಿಷ್ಯ