- Tag results for Bollywood
![]() | ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂ. ಬಾಚಿದ 'ದಿ ಕೇರಳ ಸ್ಟೋರಿ'ವಿವಾದ ಹಾಗೂ ತೀವ್ರ ಚರ್ಚೆಯ ನಡುವೆಯೂ 'ದಿ ಕೇರಳ ಸ್ಟೋರಿ' ದೇಶಾದ್ಯಂತ ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಇದು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ. ದೇಶಾದ್ಯಂತ ಪ್ರದರ್ಶನ ಮುಂದುವರೆದಿದೆ ಎಂದು ನಿರ್ಮಾಣ ಸಂಸ್ಥೆ ಸನ್‌ಶೈನ್ ಪಿಕ್ಚರ್ಸ್ ಹೇಳಿಕೆಯಲ್ಲಿ ತಿಳಿಸಿದೆ. |
![]() | ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮನೆಯಲ್ಲಿ ಕಳ್ಳತನ: ಮನೆ ಕೆಲಸದವನ ಬಂಧನಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಮನೆಯಲ್ಲಿ ಕಳ್ಳತನವಾಗಿದೆ. ಇದಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಅರ್ಪಿತಾ ಖಾನ್ ಅವರ ಮನೆ ಕೆಲಸದವನನ್ನು ಬಂಧಿಸಿದ್ದಾರೆ. |
![]() | ರಾಜಕಾರಣಿಗಳು, ದೇಶವಿರೋಧಿಗಳ ವಿರುದ್ಧ ಮಾತನಾಡಿದ ನಂತರ ವರ್ಷಕ್ಕೆ 30-40 ಕೋಟಿ ರೂ. ನಷ್ಟವಾಗುತ್ತಿದೆ: ಕಂಗನಾ ರಣಾವತ್'ರಾಜಕಾರಣಿಗಳು, ದೇಶವಿರೋಧಿಗಳು, ತುಕ್ಡೆ-ತುಕ್ಡೆ ಗ್ಯಾಂಗ್' ವಿರುದ್ಧ ಮಾತನಾಡಿದ್ದರಿಂದ 25 ಬ್ರಾಂಡ್ ಜಾಹೀರಾತುಗಳಿಂದ ನನ್ನನ್ನು ಕೈಬಿಡಲಾಗಿದೆ ಮತ್ತು ಇದರಿಂದ ಪ್ರತಿ ವರ್ಷ 30-40 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸುತ್ತಿದ್ದೇನೆ ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ. |
![]() | ಟ್ರಾಫಿಕ್ ಕಿರಿಕಿರಿ, ಅಪರಿಚಿತನ ಬೈಕ್ ಏರಿ ಸರಿಯಾದ ವೇಳೆಗೆ ಶೂಟಿಂಗ್ ಸ್ಪಾಟ್ ತಲುಪಿದ ಅಮಿತಾಬ್!ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಾಣಿಜ್ಯ ನಗರಿ ಮುಂಬೈನ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅಪರಿಚಿತನ ಬೈಕ್ ಏರಿ ಸರಿಯಾದ ಸಮಯಕ್ಕೆ ಶೂಟಿಂಗ್ ಸ್ಪಾಟ್ ತಲುಪಿದ್ದಾರೆ. ಈ ಪೋಟೋವನ್ನು ತಮ್ಮ ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ 80 ವರ್ಷದ ಬಚ್ಚನ್, ಅಪರಿಚಿತ ವ್ಯಕ್ತಿಗೆ ಧನ್ಯವಾದ ಸಲ್ಲಿಸಿದ್ದಾರೆ. |
![]() | ಬಾಲಿವುಡ್ ನಟ ವರುಣ್ ಧವನ್ 'ಶರ್ಟ್‌ಲೆಸ್ ಇಮೇಜ್' ಗೆ ಅಭಿಮಾನಿಗಳು ಫಿದಾ!ಬಾಲಿವುಡ್ ನಟ ವರುಣ್ ಧವನ್ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೆಕ್ಸಿಯೆಸ್ಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸುತ್ತಾರೆ. |
![]() | ಪಶ್ಚಿಮ ಬಂಗಾಳದಲ್ಲಿ 'ದಿ ಕೇರಳ ಸ್ಟೋರಿ'ಗೆ ನಿಷೇಧ: ಮೇ 12ರಂದು ನಿರ್ಮಾಪಕರ ಅರ್ಜಿ ಆಲಿಸಲು 'ಸುಪ್ರೀಂ' ಸಮ್ಮತಿವಿವಾದಾತ್ಮಕ ಬಹುಭಾಷಾ ಚಿತ್ರ 'ದಿ ಕೇರಳ ಸ್ಟೋರಿ' ಚಿತ್ರದ ಪ್ರದರ್ಶನವನ್ನು ನಿಷೇಧಿಸಿರುವ ಮಮತಾ ಬ್ಯಾನರ್ಜಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ನಿರ್ಮಾಪಕರು ಸಲ್ಲಿಸಿರುವ ಅರ್ಜಿಯನ್ನು ಮೇ 12ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. |
![]() | ಮೇ 13ಕ್ಕೆ ನಟಿ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ ನಿಶ್ಚಿತಾರ್ಥಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರು, ಮೇ 13ರಂದು ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದು, ಕೊನೆಗೂ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. |
![]() | 1971ರ ನಂತರ ಬಾಂಗ್ಲಾದೇಶದಲ್ಲಿ ಇದೇ ಮೊದಲ ಬಾರಿಗೆ ಹಿಂದಿ ಸಿನಿಮಾ ಬಿಡುಗಡೆ; ಮೇ 12 ರಂದು 'ಪಠಾಣ್' ತೆರೆಗೆಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಬ್ಲಾಕ್‌ಬಸ್ಟರ್ 'ಪಠಾನ್' ಈಗ 1971ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಇದು ಬಾಂಗ್ಲಾದೇಶದಲ್ಲಿ ಮೇ 12 ರಂದು ಬಿಡುಗಡೆಯಾಗಲಿದೆ. |
![]() | ಮದುವೆ ಪ್ರೀತಿಯ ಬಂಧನ: ಸಲಿಂಗ ವಿವಾಹಕ್ಕೆ ಕಂಗನಾ ಬೆಂಬಲ!ಸಲಿಂಗ ವಿವಾಹಕ್ಕೆ ಬೆಂಬಲ ನೀಡಿರುವ ಬಾಲಿವುಡ್ ನಟಿ ನಟಿ ಕಂಗನಾ ರಣಾವತ್ "ಹೃದಯಗಳು ಒಂದಾಗಿರುವಾಗ" ಜನರ ಆದ್ಯತೆಗಳು ಮುಖ್ಯವಲ್ಲ ಎಂದು ಹೇಳಿದ್ದಾರೆ. |
![]() | 'ಆಕೆಗೆ ನನ್ನ ಪರ್ಮಿಷನ್ ಬೇಕಿಲ್ಲ'; ಪತ್ನಿಗೆ ಸಿನಿಮಾ ಮಾಡಲು ಬಿಡಿ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಖಡಕ್ ತಿರುಗೇಟು!ಪತ್ನಿಗೆ ಸಿನಿಮಾ ಮಾಡಲು ಬಿಡಿ ಎಂದ ಅಭಿಮಾನಿಗೆ ಅಭಿಷೇಕ್ ಬಚ್ಚನ್ ಖಡಕ್ ತಿರುಗೇಟು ನೀಡಿದ್ದು, ಆಕೆಗೆ ನನ್ನ ಪರ್ಮಿಷನ್ ಬೇಕಿಲ್ಲ ಎಂದು ಹೇಳಿದ್ದಾರೆ. |
![]() | ಡ್ರಗ್ಸ್ ಕೇಸ್ ನಲ್ಲಿ ದುಬೈ ಜೈಲು ಸೇರಿದ 'ಸಡಕ್ 2' ನಟಿ! ಪ್ರಧಾನಿ, ಎಂಇಎಗೆ ಸಂಬಂಧಿಕರ ಮೊರೆಮಾದಕ ವಸ್ತು ಸಾಗಟ ಪ್ರಕರಣದಲ್ಲಿ ಬಾಲಿವುಡ್ ನ ನಟಿಯೊಬ್ಬರು ದುಬೈನಲ್ಲಿ ಜೈಲು ಸೇರಿದ್ದಾರೆ. ಟ್ರೋಫಿಯಲ್ಲಿ ಬಚ್ಚಿಟ್ಟಿದ್ದ ಮಾದಕ ವಸ್ತು ಸಾಗಿಸುತ್ತಿರುವುದು ಪತ್ತೆಯಾದ ನಂತರ ಸಡಕ್ -2 ನಟಿ ಕ್ರಿಸನ್ ಪೆರೇರಾ ಸಿಕ್ಕಿ ಬಿದಿದ್ದು, ನಂತರ ಯುಎಇಯ ಶಾರ್ಜಾ ಜೈಲು ಸೇರಿದ್ದಾರೆ. |
![]() | ಸೆಕ್ಸ್ ರಾಕೆಟ್ ಜಾಲ ಭೇದಿಸಿದ ಮುಂಬೈ ಪೊಲೀಸರು: ಕಾಸ್ಟಿಂಗ್ ಡೈರೆಕ್ಟರ್ ಆರತಿ ಮಿತ್ತಲ್ ಬಂಧನಸೆಕ್ಸ್ ರಾಕೆಟ್ ಜಾಲವನ್ನು ಭೇದಿಸಿರುವ ಮುಂಬೈ ಪೊಲೀಸರು ಕಾಸ್ಟಿಂಗ್ ಡೈರೆಕ್ಟರ್ ಮತ್ತು ನಟಿ ಆರತಿ ಮಿತ್ತಲ್ ರನ್ನು ಬಂಧಿಸಿದ್ದಾರೆ. |
![]() | 'ನಿನ್ನನ್ನು ಹೊಡೆದು ಸಾಯಿಸಬೇಕು': ನಿರ್ದೇಶಕರ ಕಚೇರಿಯಿಂದ ಉರ್ಫಿ ಜಾವೇದ್‌ಗೆ ಬೆದರಿಕೆ; ಎಫ್‌ಐಆರ್ ದಾಖಲು!ತನ್ನ ವಿಭಿನ್ನ ಬಟ್ಟೆ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುವ ಉರ್ಫಿ ಜಾವೇದ್‌ಗೆ ಮತ್ತೊಮ್ಮೆ ಬೆದರಿಕೆ ಬಂದಿದೆ. ನಿರ್ದೇಶಕ ನೀರಜ್ ಪಾಂಡೆ ಅವರ ಕಚೇರಿಯಿಂದ ಯಾರೋ ನಟಿಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ನಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. |
![]() | 33 ವರ್ಷಗಳ ನಂತರ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮತ್ತೆ ಕಾಣಿಸಿಕೊಂಡ ಸಿನಿಮಾ ಪೋಸ್ಟರ್‌ಗಳು!ಯಾವುದೇ ಒಂದು ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಪೋಸ್ಟರ್ ಗಳನ್ನು ಪ್ರಮುಖ ಜಾಗಗಳ ರಸ್ತೆ ಪಕ್ಕದ ಗೋಡೆಗಳ ಮೇಲೆ ಅಂಟಿಸಲಾಗುತ್ತದೆ. ಈ ಮೂಲಕ ಜನರನ್ನು ಗಮನವನ್ನು ಸೆಳೆಯುವುದು ಚಿತ್ರತಂಡದ ಉದ್ದೇಶ. ದೇಶಾದ್ಯಂತ ಇಂತಹ ಸಿನಿಮಾ ಪೋಸ್ಟರ್ ಗಳನ್ನು ಕಾಣಬಹುದು. ಆದರೆ ಇದು ಶ್ರೀನಗರಕ್ಕೆ ಹೊಸದಾಗಿದೆ. |
![]() | ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಮತ್ತೊಂದು ಭಾವನಾತ್ಮಕ ಪತ್ರ ಬರೆದ ವಂಚಕ ಸುಕೇಶ್ ಚಂದ್ರಶೇಖರ್ಆರೋಪಿ ಸುಕೇಶ್ ಚಂದ್ರಶೇಖರ್, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ 'ಹ್ಯಾಪಿ ಈಸ್ಟರ್' ಎಂದು ಶುಭಕೋರಿದ್ದಾರೆ ಮತ್ತು ತಾನು 'ಹೃದಯದ ಆಳದಿಂದ ಪ್ರೀತಿಸುತ್ತಿರುವುದರಿಂದ ನಟಿಯ ಒಡನಾಟವನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. |