• Tag results for Boycott

ಧರ್ಮ ದಂಗಲ್ ನಡುವೆಯೇ ನೆರವೇರಿತು ವಿವಿ ಪುರಂ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ, ಬೆಳ್ಳಿ ತೇರು ಎಳೆದು ಸಂಭ್ರಮಿಸಿದ ಭಕ್ತರು!

ಧರ್ಮ ದಂಗಲ್ ವಿವಾದದ ನಡುವೆಯೇ ವಿಶ್ವೇಶ್ವರಪುರದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಮಂಗಳವಾರ ರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. 

published on : 29th November 2022

ಗುಜರಾತ್ ನ 18 ಗ್ರಾಮಗಳಲ್ಲಿ ವಿಧಾನಸಭಾ ಚುನಾವಣೆಗೆ ಬಹಿಷ್ಕಾರ!

ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಗುಜರಾತ್ ನಲ್ಲಿ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿದ್ದರೆ, ನವ್ಸಾರಿಯ ಅಂಚೆಲಿ ಹಾಗೂ 17 ಇನ್ನಿತರ ಗ್ರಾಮಗಳು ಚುನಾವಣೆಯನ್ನು ಬಹಿಷ್ಕರಿಸಿವೆ. 

published on : 13th November 2022

ಜಾಹೀರಾತಿನಲ್ಲಿ ಪ್ರಧಾನಿ ಮೋದಿಗೆ ಅವಮಾನ?: ಟ್ವಿಟರ್ ನಲ್ಲಿ ಟ್ರೆಂಡ್ ಆದ 'ಬಾಯ್ಕಾಟ್ ಕ್ಯಾಡ್​​ಬರಿ'

ಜಾಹೀರಾತೊಂದರಲ್ಲಿ ಪ್ರಧಾನಿ ಮೋದಿಗೆ ಅವಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಇದೀಗ ಟ್ವಿಟರ್ ನಲ್ಲಿ ಬಾಯ್ಕಾಟ್ ಕ್ಯಾಡ್​​ಬರಿ ಟ್ರೆಂಡ್ ಆಗಿದೆ.

published on : 30th October 2022

ಒಂದು ಸಮುದಾಯವನ್ನು 'ಸಂಪೂರ್ಣ ಬಹಿಷ್ಕಾರ'ಕ್ಕೆ ಕರೆ ನೀಡಿದ ಬಿಜೆಪಿ ಸಂಸದ ಪರ್ವೇಶ್ ವರ್ಮಾ

ಈಶಾನ್ಯ ದೆಹಲಿಯಲ್ಲಿ ಹಿಂದೂ ಯುವಕನ ಹತ್ಯೆಯನ್ನು ಪ್ರತಿಭಟಿಸುವ ಕಾರ್ಯಕ್ರಮವೊಂದರಲ್ಲಿ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಒಂದು ಸಮುದಾಯವನ್ನು ಸಂಪೂರ್ಣ ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

published on : 10th October 2022

ಸ್ಯಾಂಡಲ್ ವುಡ್ ಗೂ ಬಂತು #boycott ಟ್ರೆಂಡ್; ವೈರಲ್ ಆಯ್ತು #boycottBanaras, ಶಾಸಕ ಜಮೀರ್ ಪುತ್ರ ಝೈದ್ ಖಾನ್ ಚಿತ್ರಕ್ಕೆ ವಿರೋಧ

ಬಾಲಿವುಡ್ ನಲ್ಲಿ ವ್ಯಾಪಕ ಟ್ರೆಂಡ್ ಆಗಿರುವ #Boycott ಇದೀಗ ಸ್ಯಾಂಡಲ್ ವುಡ್ ಗೂ ಪ್ರವೇಶ ಮಾಡಿದ್ದು, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ರ ಬನಾರಸ್ ಚಿತ್ರಕ್ಕೆ (#boycottBanaras) ವಿರೋಧ ವ್ಯಕ್ತವಾಗುತ್ತಿದೆ.

published on : 2nd September 2022

TNIE ವರದಿ ಇಂಪ್ಯಾಕ್ಟ್: 10 ವರ್ಷಗಳ ಹಿಂದೆ ಗ್ರಾಮದಿಂದ ಬಹಿಷ್ಕಾರಕ್ಕೊಳಗಾಗಿದ್ದ ಕುಟುಂಬ ಮತ್ತೆ ಗ್ರಾಮಕ್ಕೆ!

10 ವರ್ಷಗಳ ಹಿಂದೆ ಬಗಿಷ್ಕಾರಕ್ಕೆ ಒಳಗಾಗಿದ್ದ ಕುಟುಂಬಕ್ಕೆ ಈಗಲೂ ಗ್ರಾಮಕ್ಕೆ ಪ್ರವೇಶವಿಲ್ಲ ಎನ್ನುವ ಕುರಿತಂತೆ  ಭಾನುವಾರ (ಆ. 21) ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು kannadaprabha.com ಮಾಡಿದ್ದ ವರದಿ ಇದೀಗ ಫಲಪ್ರದವಾಗಿದ್ದು, ಸದ್ಯ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

published on : 23rd August 2022

ಮದುವೆಗೆ ಸಂಬಂಧಿಕರನ್ನು ಆಹ್ವಾನಿಸದ ಕಾರಣಕ್ಕೆ 10 ವರ್ಷಗಳ ಹಿಂದೆ ಬಹಿಷ್ಕಾರ! ಇಂದಿಗೂ ತಪ್ಪದ ಜಂಜಾಟ

ಹಾಲಕ್ಕಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಬಂಟ್ ವೆಂಕುಗೌಡ ಅವರ ಕುಟುಂಬವನ್ನು ಅವರ ಗ್ರಾಮವಾದ ಹಾರವಾಡದಿಂದ ಗಡಿಪಾರು ಮಾಡಿ ದಶಕಗಳೇ ಕಳೆದಿದೆ. ಆದರೆ, ಇಂದಿಗೂ ಅವರ ಸಂಕಷ್ಟ ದೂರಾಗಿಲ್ಲ.

published on : 21st August 2022

ಅಮೀರ್ ಖಾನ್ ಬೆಂಬಲಿಸಿದ್ದ ಹೃತಿಕ್ ರೋಷನ್ ಗೆ ಎದುರಾಯ್ತು ಸಂಕಷ್ಟ!

ಬಾಲಿವುಡ್ ನಟ ಅಮೀರ್ ಖಾನ್ ರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ ನಟ ಹೃತಿಕ್ ರೋಷನ್ ಗೆ ಇದೀಗ ಸಂಕಷ್ಟ ಎದುರಾಗಿದೆ. 

published on : 15th August 2022

'ನಾನು ಯಾರ ಮನಸ್ಸನ್ನಾದರೂ ನೋಯಿಸಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ': ನಟ ಅಮೀರ್ ಖಾನ್

ಬಾಲಿವುಡ್ ನ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಅಮೀರ್ ಖಾನ್ ನಾಯಕ ನಟನಾಗಿ ಅಭಿನಯಿಸಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ನಾಳೆ ತೆರೆಗೆ ಬರುತ್ತಿದೆ. 

published on : 10th August 2022

ರಾಜ್ಯಗಳ ವಿರುದ್ಧ ಕೇಂದ್ರದ 'ತಾರತಮ್ಯ' ಪ್ರತಿಭಟಿಸಿ ನೀತಿ ಆಯೋಗ ಸಭೆಗೆ ಕೆಸಿಆರ್ ಬಹಿಷ್ಕಾರ  

ರಾಜ್ಯಗಳ ವಿರುದ್ಧ ಕೇಂದ್ರದ ತಾರತಮ್ಯ' ಧೋರಣೆ ವಿರೋಧಿಸಿ ತೀವ್ರ ಪ್ರತಿಭಟನೆಯ ಸಂಕೇತವಾಗಿ ಆಗಸ್ಟ್ 7 ರಂದು ನಡೆಯಲಿರುವ ನೀತಿ ಆಯೋಗದ 7 ನೇ ಆಡಳಿತ ಮಂಡಳಿ ಸಭೆಯನ್ನು ಬಹಿಷ್ಕರಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ. 

published on : 7th August 2022

ಮಂಗಳೂರು: ಹಿಜಾಬ್ ವಿವಾದ ಮತ್ತೆ ಸ್ಫೋಟ, ತರಗತಿ ಬಹಿಷ್ಕರಿಸಿ ಕಾಲೇಜ್ ವಿದ್ಯಾರ್ಥಿಗಳ ಪ್ರತಿಭಟನೆ

ಸ್ವಲ್ಪ ದಿನ ವಿರಾಮ ಪಡೆದುಕೊಂಡಿದ್ದ ಹಿಜಾಬ್ ವಿವಾದ ಮಂಗಳೂರಿನ ಕಾಲೇಜಿನಲ್ಲಿ ಗುರುವಾರ ಮತ್ತೆ ಹಿಜಾಬ್ ಸ್ಫೋಟಗೊಂಡಿತು. 

published on : 26th May 2022

ಮುಸ್ಲಿಮ್ ಹುಡುಗರನ್ನು ಪ್ರೀತಿಸುವ ಹೆಣ್ಣುಮಕ್ಕಳ ಕುಟುಂಬಗಳನ್ನು ಬಹಿಷ್ಕರಿಸಿ: ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ನಾಯಕ

ಮುಸ್ಲಿಮ್ ಹುಡುಗರನ್ನು ಪ್ರೀತಿಸುವ ಹೆಣ್ಣುಮಕ್ಕಳ ಕುಟುಂಬಗಳನ್ನು ಬಹಿಷ್ಕರಿಸಿ ಎಂದು ಹುಬ್ಬಳ್ಳಿ-ಧಾರವಾಡ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ್ ಕಲಬುರಗಿ ಕರೆ ನೀಡಿದ್ದು ವಿವಾದದ ಕಿಡಿ ಹೊತ್ತುಕೊಂಡಿದೆ. 

published on : 9th April 2022

ಮೈಸೂರು: ಆಸ್ತಿ ವಿವಾದ ಹಿನ್ನೆಲೆ, ಕುಟುಂಬವೊಂದಕ್ಕೆ ಗ್ರಾಮಸ್ಥರಿಂದ ಸಾಮಾಜಿಕ ಬಹಿಷ್ಕಾರ!

ಮೀನು ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಆಗಿರುವ ಅನ್ಯಾಯದ ವಿರುದ್ಧ ಸೆಟೆದು ನಿಂತಿದ್ದ ಕುಟುಂಬವೊಂದು ಇದೀಗ ಸಾಮಾಜಿಕ ಬಹಿಷ್ಕಾರಕ್ಕೆ ಗುರಿಯಾಗಿದೆ.  ಆ ಕುಟುಂಬದ ಸದಸ್ಯರೊಂದಿಗೆ ಮಾತನಾಡುವವರಿಗೆ ರೂ. 3000  ದಂಡ ವಿಧಿಸಲು ಗ್ರಾಮದ ಮುಖಂಡರು ನಿರ್ಧರಿಸಿದ್ದಾರೆ.

published on : 22nd March 2022

ಹಿಜಾಬ್ ವಿವಾದ: ಶಿವಮೊಗ್ಗ ಜಿಲ್ಲೆಯಲ್ಲಿ ತರಗತಿಗಳನ್ನು ಬಹಿಷ್ಕರಿಸಿದ 43 ವಿದ್ಯಾರ್ಥಿಗಳು, ಪ್ರಾಯೋಗಿಕ ಪರೀಕ್ಷೆಗೆ 10 ಮಂದಿ ಗೈರು

ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬರಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಒಟ್ಟು 43 ಮುಸ್ಲಿಂ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದು, 10 ಮಂದಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಬಹಿಷ್ಕರಿಸಿದ ಘಟನೆ ನಡೆದಿದೆ.

published on : 1st March 2022

ಹುಂಡೈ ಬಹಿಷ್ಕರಿಸುವಂತೆ ಟ್ವೀಟರ್ ನಲ್ಲಿ ಟ್ರೆಂಡಿಂಗ್: ಕಾರಣವೇನು?

ದೇಶದ ಅತಿ ದೊಡ್ಡ ಕಾರು ಉತ್ಪಾದಕ ಕಂಪನಿ ಹುಂಡೈ ಬಹಿಷ್ಕರಿಸುವಂತೆ ಟ್ವೀಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಹುಂಡೈ ಕಂಪನಿಯ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸುವಂತೆ ಟ್ವೀಟರ್ ಬಳಕೆದಾರರು ಮನವಿ ಮಾಡುತ್ತಿದ್ದಾರೆ

published on : 7th February 2022
1 2 > 

ರಾಶಿ ಭವಿಷ್ಯ