• Tag results for CAA

ನಾಪತ್ತೆಯಾದ ಸಿಎಎ ಪ್ರತಿಭಟನಾಕಾರರ ಸುಳಿವು ನೀಡಿದವರಿಗೆ ನಗದು ಬಹುಮಾನ ಘೋಶಿಸಿದ ಯೋಗಿ  ಆದಿತ್ಯನಾಥ್ 

 ಉತ್ತರ ಪ್ರದೇಶದಲ್ಲಿ ನಾಪತ್ತೆಯಾಗಿರುವ ಸಿಎಎ ವಿರೋಧಿ ಪ್ರತಿಭಟನಾಕಾರರ ಸುಳಿವು ನೀಡಿದವರಿಗೆ ಸಿಎಂ ಯೋಗಿ ಆದಿತ್ಯನಾಥ್ ನಗದು ಬಹುಮಾನ ಘೋಷಿಸಿದ್ದಾರೆ.  

published on : 6th November 2020

ಕೋವಿಡ್-19 ಕಾರಣದಿಂದಾಗಿ ಸಿಎಎ ಜಾರಿ ವಿಳಂಬ, ಶೀಘ್ರದಲ್ಲೇ ಜಾರಿಗೆ ಬರಲಿದೆ: ಜೆ ಪಿ ನಡ್ಡಾ

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಪೌರತ್ವ(ತಿದ್ದುಪಡಿ) ಕಾಯ್ದೆ ಜಾರಿಗೊಳಿಸುವುದು ವಿಳಂಬವಾಗಿದ್ದು, ಶೀಘ್ರದಲ್ಲೇ ಕಾನೂನು ಜಾರಿಗೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೋಮವಾರ ಹೇಳಿದ್ದಾರೆ.

published on : 19th October 2020

ಮಂಗಳೂರು ಗಲಭೆ: 21 ಆರೋಪಿಗಳಿಗೆ ಸುಪ್ರೀಂನಿಂದ ಜಾಮೀನು ಮಂಜೂರು

ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿಆರ್ ವಿರೋಧಿಸಿ ನಡೆದ ಪ್ರತಿಭಟನೆ, ಗೋಲಿಬಾರ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 21 ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ ಬುಧವಾರ ಜಾಮೀನು ಮಂಜೂರು ಮಾಡಿದೆ.

published on : 9th September 2020

ಸದ್ಯ ಎನ್ಕೌಂಟರ್ ಮಾಡಿಲ್ಲ: ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಫೀಲ್ ಖಾನ್ ಕಿಡಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಸತತ 8 ತಿಂಗಳ ಸೆರೆವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವಿವಾದಿತ ವೈದ್ಯ ಕಫೀಲ್ ಖಾನ್ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

published on : 2nd September 2020

ಸಿಎಎ ವಿರೋಧಿ ಭಾಷಣ: ಡಾ.ಕಫೀಲ್ ಖಾನ್ ಜೈಲಿನಿಂದ ಬಿಡುಗಡೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾಷಣ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ಉತ್ತರಪ್ರದೇಶದ ವೈದ್ಯ ಡಾ.ಕಫೀಲ್ ಖಾನ್ ಅವರನ್ನು ಬುಧವಾರ ಮಧ್ಯರಾತ್ರಿ ಮಥುರಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

published on : 2nd September 2020

ಮಂಗಳೂರು ಪೋಲೀಸ್ ಫೈರಿಂಗ್: ಚಾರ್ಜ್ ಶೀಟ್ ಸಲ್ಲಿಕೆಯಾಗಿ ವಾರದ ನಂತರ ಪೋಲೀಸ್ ಆಯುಕ್ತ ಹರ್ಷ ವರ್ಗಾವಣೆ

ಡಿಸೆಂಬರ್ 19, 2019 ರಂದು ನಡೆದ ಮಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ ಒಂದು ವಾರದ ನಂತರ ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅವರನ್ನು ವರ್ಗಾವಣೆ ಮಾಡಲಾಗಿದೆ.   ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. 

published on : 27th June 2020

ಪಾಕ್ ಪರ ಘೋಷಣೆ ಪ್ರಕರಣ: ಅಮೂಲ್ಯ ಲಿಯೋನ್‍ಗೆ ಷರತ್ತು ಬದ್ಧ ಜಾಮೀನು ಮಂಜೂರು

ಕೇಂದ್ರ ಸರ್ಕಾರದ ಸಿಎಎ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಬಂಧನಕ್ಕೊಳಗಾಗಿದ್ದ ಅಮೂಲ್ಯ ಲಿಯೋನಾಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

published on : 11th June 2020

ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ಕೇಸು:ಇಬ್ಬರು ಜೆಎನ್ ಯು ವಿದ್ಯಾರ್ಥಿನಿಯರ ಬಂಧನ

ಕಳೆದ ಫೆಬ್ರವರಿಯಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಸಂದರ್ಭದಲ್ಲಿ ಈಶಾನ್ಯ ದೆಹಲಿಯ ಜಫ್ರಾಬಾದ್ ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾವು ನೋವು ಉಂಟಾದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಜವಹರಲಾಲ್ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

published on : 24th May 2020

ಪೌರತ್ವ ಕಾಯ್ದೆ ಬೆಂಬಲಿಸಿದ್ದ ಮುಸ್ಲಿಂಯೇತರ ವಿದ್ಯಾರ್ಥಿಗಳು ಫೇಲ್, ಜಾಮಿಯಾ ವಿವಿಯ ಪ್ರೊಫೆಸರ್ ಅಮಾನತು!

ಪೌರತ್ವ ಕಾಯ್ದೆ(ಸಿಎಎ) ಬೆಂಬಲಿಸಿದ್ದ ಹದಿನೈದು ಮುಸ್ಲಿಂಯೇತರ ವಿದ್ಯಾರ್ಥಿಗಳನ್ನು ಫೇಲ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರೊಪೆಸರ್ ಅಬ್ರಾರ್ ಅಹ್ಮದ್ ನನ್ನು ವಿಶ್ವವಿದ್ಯಾಲಯ ಅಮಾನತು ಮಾಡಿದೆ. 

published on : 28th March 2020

ಕೊರೋನಾ ವೈರಸ್ ಭೀತಿ: ಜೆಸಿಬಿ ಮೂಲಕ ಶಹೀನ್ ಭಾಗ್ ಪ್ರತಿಭಟನಾ ಸ್ಥಳ ತೆರವು

ಮಾರಕ ಕೊರೋನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ದೆಹಲಿಯ ಶಹೀನ್ ಭಾಗ್ ನ ಸಿಎಎ ವಿರೋಧಿ ಪ್ರತಿಭಟನಾಕಾರನ್ನು ತೆರವುಗೊಳಿಸಲಾಗಿದೆ.

published on : 24th March 2020

ಕೊರೋನಾ ವೈರಸ್ ಎಫೆಕ್ಟ್: ಸದ್ದೇ ಇಲ್ಲದೇ ಖಾಲಿಯಾಗುತ್ತಿದೆ 'ಶಹೀನ್ ಬಾಗ್'

ಪೌರತ್ವ ತಿದ್ದಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕ ನೋಂದಣಿ (ಎನ್ ಪಿಆರ್) ವಿರುದ್ಧ ದೆಹಲಿಯ ಶಾಹೀನ್ ಬಾಗ್ ನಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಕೊರೋನಾ ವೈರಸ್ ಅಡ್ಡಿಯಾಗಿದ್ದು, ಪ್ರತಿಭಟನಾ ಸ್ಥಳದಿಂದ ಸದ್ದೇ ಇಲ್ಲದೇ ಪ್ರತಿಭಟನಾಕಾರರು ಜಾಗ ಖಾಲಿ ಮಾಡುತ್ತಿದ್ದಾರೆ.

published on : 18th March 2020

ಚೆನ್ನೈ: ಕೊರೋನಾವೈರಸ್ ಹರಡುವ ಭೀತಿ, ಸಿಎಎ ವಿರೋಧಿ ಪ್ರತಿಭಟನೆ ರದ್ದು

ಕೋವಿಡ್ -19 ಹರಡುವ ಭೀತಿಯಿಂದಾಗಿ ಇಲ್ಲಿನ ವಾಷರ್ ಮೆನ್ ಪೇಟ್ ಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಸಲಾಗುತ್ತಿದ್ದ ಸಿಎಎ ವಿರೋಧಿ  ಪ್ರತಿಭಟನೆಯನ್ನು ಪ್ರತಿಭಟನಾಕಾರರು ಕೈಬಿಟ್ಟಿದ್ದಾರೆ.

published on : 18th March 2020

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಹಕ್ಕು ನಮಗಿದೆ: ಸಿದ್ದರಾಮಯ್ಯ

ಸಂಸತ್ತಿನಲ್ಲಿ ಅಂಗೀಕಾರಗೊಂಡ ಕಾಯ್ದೆಯನ್ನು ವಿರೋಧಿಸುವ ಹಕ್ಕು ನಮಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

published on : 17th March 2020

ಅಯೋಧ್ಯೆ, ಆರ್ಟಿಕಲ್ 370, ಸಿಎಎ: 'ಸುಪ್ರೀಂ' ಕೇಂದ್ರ ಸರ್ಕಾರವನ್ನು ಪ್ರಶಂಸಿಸಿದ ಆರ್‌ಎಸ್ಎಸ್ ಸರಸಂಚಾಲಕ ಭೈಯಾಜಿ ಜೋಶಿ

ಅಯೋಧ್ಯೆ ರಾಮಜನ್ಮಭೂಮಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆರವು ಮತ್ತು ಸಿಎಎ ಜಾರಿ ಕುರಿತಂತೆ ಕೇಂದ್ರ ಸರ್ಕಾರದ ದಿಟ್ಟ ಕ್ರಮಗಳನ್ನು ಆರ್‌ಎಸ್ಎಸ್ ಪ್ರಶಂಸಿಸಿದೆ. 

published on : 16th March 2020

ಸಿಎಎ ಪ್ರತಿಭಟಕಾರರ ವಿರುದ್ಧ ಪೋಸ್ಟರ್: ನಿಮ್ಮ ಕ್ರಮ ಬೆಂಬಲಿಸುವ ಯಾವುದೇ ಕಾನೂನಿಲ್ಲ- ಯೋಗಿ ಸರ್ಕಾರದ ವಿರುದ್ಧ ಸುಪ್ರೀಂ ಕಿಡಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದವರಿಗೆ ಹೆಸರು, ಫೋಟೋ ಹಾಗೂ ವಿಳಾಸವನ್ನೊಳಗೊಂಡ ಪೋಸ್ಟರ್ ಹಾಕಿದ್ದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ತೀವ್ರವಾಗಿ ಕಿಡಿಕಾರಿದೆ. 

published on : 12th March 2020
1 2 3 4 5 6 >