• Tag results for CAA Protests

ದೆಹಲಿ ಗಲಭೆ: ಹಿಂಸೆಗೆ ಪ್ರಚೋದನೆ ಆರೋಪ, 'ಪಿಎಫ್‌ಐ ಸದಸ್ಯ'ನ ಬಂಧನ

ಸಿಎಎ ವಿರೋಧಿ ಪ್ರತಿಭಟನೆ ವೇಳೆ ಅಪಪ್ರಚಾರ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸ್ ವಿಶೇಷ ಪಡೆಉತ್ತರ ಪ್ರದೇಶದ  ಮೊರಾದಾಬಾದ್‌ನ ಪಿಎಫ್‌ಐ ಸದಸ್ಯ ಡ್ಯಾನಿಶ್‌ನನ್ನು ಸೋಮವಾರ ಬಂಧಿಸಿದೆ.

published on : 9th March 2020

ಸಿಎಎ ವಿರೋಧಿ ಪ್ರತಿಭಟನೆಗೆ ಪ್ರಚೋದನೆ: ಐಸಿಸ್‌ ನಂಟು ಹೊಂದಿದ್ದ ದಂಪತಿ ಬಂಧನ 

ಇತ್ತೀಚಿನ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇಬ್ಬರು ಶಂಕಿತ ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾವಿನ್ಸ್ (ಐಎಸ್ಕೆಪಿ) ಭಯೋತ್ಪಾದಕರನ್ನು ದೆಹಲಿ ಪೋಲೀಸರು ಓಖ್ಲಾದಲ್ಲಿ ಬಂಧಿಸಿದ್ದಾರೆ. ಈ ಮಧ್ಯೆ ಈ ಜೋಡಿ  ದೇಶದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ.

published on : 8th March 2020

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾದ 'ಈ ವ್ಯಕ್ತಿಗಳಿಗೆ' ದೇಶ ಬಿಡುವಂತೆ ಸರ್ಕಾರದ ಸೂಚನೆ! 

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ನಿಯಮಗಳ ಉಲ್ಲಂಘನೆ ಮಾಡಿದವರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. 

published on : 3rd March 2020

ತುಕಡೆ ತುಕಡೆ ಗ್ಯಾಂಗ್‌ ಗಳಿಂದ ದೇಶದಲ್ಲಿ ಆಂತರಿಕ ಯುದ್ಧ: ಸಿ‌.ಟಿ.ರವಿ

ದೇಶದಲ್ಲಿ ಸಿಎಎ ವಿರೋಧದ ಹೆಸರಿನಲ್ಲಿ ಕೆಲವು ತುಕಡೆ ಗ್ಯಾಂಗ್ ‌ಗಳಿಂದ ಆಂತರಿಕ ಯುದ್ಧ ಜಾರಿಯಾಗುವ ಭೀತಿ ಎದುರಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಚಿವ ಸಿ.ಟಿ.ರವಿ ಗಂಭೀರ ಆರೋಪ ಮಾಡಿದ್ದಾರೆ.

published on : 26th February 2020

ದೆಹಲಿಯಲ್ಲಿ ಸಿಎಎ ಪರ-ವಿರೋಧಿಗಳ ನಡುವೆ ಕಲ್ಲು ತೂರಾಟ: ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಬೆಂಬಲಿಸಿ ದೆಹಲಿಯ ಮೌಜ್ ಪುರ್ ಪ್ರದೇಶದಲ್ಲಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.

published on : 23rd February 2020

ಸಿಎಎ ಬಿಕ್ಕಟ್ಟು: ಸಮಗ್ರತೆ-ಐಕ್ಯತೆ ಎತ್ತಿಹಿಡಿಯುವುದೂ ಮೂಲಭೂತ ಹಕ್ಕು, ನ್ಯಾಯಾಧೀಶರಲ್ಲಿ ನಂಬಿಕೆಯಿಡಿ: ರಂಜನ್ ಗೊಗೋಯ್

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜನತೆ ಕೋರ್ಟ್ ಮತ್ತು ನ್ಯಾಯಾಧೀಶರನ್ನು ನಂಬಬೇಕು, ವಿಶ್ವಾಸವಿಡಬೇಕು ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಹೇಳಿದ್ದಾರೆ.

published on : 11th February 2020

ಸಿಎಎ ವಿರೋಧಿ ಪ್ರತಿಭಟನೆ - ಪಿಎಫ್ಐ ನಡುವೆ ಆರ್ಥಿಕ ನಂಟು ಪತ್ತೆ ಹಚ್ಚಿದ ಇಡಿ

ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆ ಮತ್ತು ಕೇರಳ ಮೂಲದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಡುವೆ ಹಣಕಾಸಿನ ನಂಟು ಇರುವುದನ್ನು ಜಾರಿ ನಿರ್ದೇಶನಾಲಯ(ಇಡಿ) ಪತ್ತೆ ಹಚ್ಚಿದೆ ಎಂದು ಸೋಮವಾರ ಅಧಿಕೃತ ಮೂಲಗಳು ತಿಳಿಸಿವೆ.

published on : 27th January 2020

ಸಿಎಎ ಪರ ರ್ಯಾಲಿ: ಕೋಲಾರದಲ್ಲಿ ಪೋಲೀಸರಿಂದ ಲಾಠಿ ಚಾರ್ಜ್

ಪೂರ್ವಾನುಮತಿ ಇಲ್ಲದೆ ಸಿಎಎ ಪರ ರ್ಯಾಲ, ಮೆರವಣಿಗೆ ನಡೆಸಿದ್ದ  ಬಿಜೆಪಿ ಮತ್ತು ಹಿಂದೂ ಪರ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರದ  ಎಸ್‌ಎನ್‌ಆರ್ ಸರ್ಕಲ್ ಬಳಿ ಪೋಲೀಸರು ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಲಾಠಿ ಬೀಸಿದ್ದಾರೆ.

published on : 4th January 2020

ಫೈರ್ ಮಾಡಿದ್ರೂ ಒಬ್ಬನೂ ಸಾಯಲಿಲ್ಲ: ಹಿಂಸಾಚಾರದ ವೇಳೆ ಮಂಗಳೂರು ಪೊಲೀಸ್ ಹೇಳಿಕೆ ವಿಡಿಯೋ ವೈರಲ್

ನಿಷೇಧಾಜ್ಞೆ ಉಲ್ಲಂಘಿಸಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರು ಪೊಲೀಸರ ಗುಂಡಿಗೆ ಬಲಿಯಾಗಿದ್ದು, ಪೊಲೀಸರ ಗೋಲಿಬಾರ್ ಈಗಾಗಲೇ ಭಾರೀ ವಿವಾದವನ್ನು ಹುಟ್ಟುಹಾಕಿದೆ. ಇದರ ನಡುವಲ್ಲೇ ಪೊಲೀಸ್ ಅಧಿಕಾರಿ ಮಾತನಾಡಿದ್ದಾರೆನ್ನಲಾದ ವಿಡಿಯೋವೊಂದು ಭಾರೀ ಸುದ್ದಿಗೆ ಗ್ರಾಸವಾಗಿದೆ. 

published on : 20th December 2019

ಪೌರತ್ವ ಕಾಯ್ಜೆ ವಿರುದ್ಧ ಬೀದಿಗಿಳಿದ ಪ್ರತಿಭಟನಾಕಾರರು: ಪ್ರತಿಭಟನೆ ಬಿಸಿಗೆ ರಸ್ತೆಯಲ್ಲೇ ಗಂಟೆಗಟ್ಟಲೆ ನಿಂತ ವಾಹನಗಳು

ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಇದಾವುದನ್ನೂ ಲೆಕ್ಕಿಸದೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಚಿಂತಕರು ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆಗಿಳಿದ ಪರಿಮಾಮ ರಾಜಧಾನಿಯ ಕೇಂದ್ರ ಭಾಗದಲ್ಲಿ ಗುರುವಾರ ಭಾರೀ ಸಂಚಾರ ದಟ್ಟಣೆ ಎದುರಾಗಿ, ಸಾರ್ವಜನಿಕರು ಹೈರಾಣರಾದರು. 

published on : 20th December 2019

ನಿಷೇಧಾಜ್ಞೆ ನಡುವೆಯೂ ನಗರದಲ್ಲಿ ಹೆಚ್ಚಿದ ಪೌರತ್ವದ ರೋಷಾಗ್ನಿ

ನಿಷೇಧಾಜ್ಞೆ ಜಾರಿ ನಡುವೆಯೂ ರಾಜಧಾನಿ ಬೆಗಳೂರಿನಲ್ಲೂ ಪೌರತ್ವ ಕಾಯ್ದೆ ವಿರುದ್ಧದ ಹೋರಾಟದ ಕಿಚ್ಚು ದೊಡ್ಡ ಪ್ರಮಾಣದಲ್ಲಿ ಹೊತ್ತಿಕೊಂಡಿದೆ. 

published on : 20th December 2019

ಧರ್ಮದ ಉಲ್ಲೇಖವಿರುವ ಯಾವುದೇ ಗುರುತಿನ ಚೀಟಿ ಇಲ್ಲವೇ..? ನಟಿ ದಿಯಾ ಮಿರ್ಜಾ ಕಾಲೆಳೆದ ನೆಟ್ಟಿಗರು!

ಧರ್ಮದ ಆಧಾರದ ಮೇಲೆ ಭಾರತೀಯತೆಯನ್ನು ಸಾಬೀತು ಪಡಿಸಬೇಕೇ ಎಂದು ಪ್ರಶ್ನಿಸುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ಗೆಗೆ ವಿರೋಧ ವ್ಯಕ್ತಪಡಿಸಿದ್ದ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

published on : 19th December 2019