• Tag results for COVID vaccination

ಮನೆ ಇಲ್ಲದ ನಿರ್ಗತಿಕರಿಗೆ ಲಸಿಕೆ ನೋಂದಣಿ ನಿರ್ಬಂಧಿಸಲಾಗಿದೆ ಎಂಬ ಮಾಧ್ಯಮಗಳ ವರದಿ ಸುಳ್ಳು: ಕೇಂದ್ರ ಸ್ಪಷ್ಟನೆ

ಮನೆ ಇಲ್ಲದ ನಿರ್ಗತಿಕರನ್ನು ಕೊರೋನಾ ಲಸಿಕೆ ಪಡೆಯಲು ಲಸಿಕೆ ನೋಂದಣಿ ಪ್ರಕ್ರಿಯೆಯಿಂದ ನಿರ್ಬಂಧಿಸಲಾಗಿದೆ ಎಂಬ ಮಾಧ್ಯಮಗಳ ವರದಿ ಸುಳ್ಳು ಎಂದು ಕೇಂದ್ರ ಸರ್ಕಾರ ಹೇಳಿದೆ. 

published on : 23rd June 2021

ಜೂನ್ 21ರ ದಾಖಲೆಯ ಲಸಿಕೆ ಅಭಿಯಾನದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗಗಳಲ್ಲಿ ಅತಿ ಹೆಚ್ಚು ಲಸಿಕೆ ವಿತರಣೆ

ಜೂನ್ 21 ರಂದು ಒಂದೇ ದಿನದಲ್ಲಿ ಭಾರತವು 88.09 ಲಕ್ಷ ಮಂದಿಗೆ ಕೊರೋನಾವೈರಸ್ ಲಸಿಕೆ ನೀಡಿ "ಐತಿಹಾಸಿಕ ಮೈಲಿಗಲ್ಲು" ಸಾಧಿಸಿದಂತೆ, ಸುಮಾರು 64 ಶೇಕಡಾ ಡೋಸ್ ಗಳನ್ನು ಗ್ರಾಮೀಣ ಭಾಗಗಳಲ್ಲಿ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

published on : 22nd June 2021

ಒಂದೇ ದಿನ ದೇಶದ 80 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ: ದಾಖಲೆಯ ಲಸಿಕೆ ವಿತರಣೆ ಸಂಖ್ಯೆ ಸಂತಸ ತಂದಿದೆ ಎಂದ ಪ್ರಧಾನಿ ಮೋದಿ

ದಾಖಲೆ ಸಂಖ್ಯೆಯ ಕೋವಿಡ್ ಲಸಿಕೆ ಡೋಸ್ ಗಳನ್ನು ಸೋಮವಾರ ದೇಶದ ಜನತೆಗೆ ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಸಾಧನೆಯನ್ನು "ಸಂತೋಷಕರ" ಎಂದು ಶ್ಲಾಘಿಸಿದ್ದಾರೆ. ರೋಗದ ವಿರುದ್ಧ ಹೋರಾಡಲು ಲಸಿಕೆ ನಮ್ಮ ಪ್ರಬಲ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ.

published on : 21st June 2021

ವಿದೇಶಕ್ಕೆ ತೆರಳುವವರಿಗೆ ಬೆಂಗಳೂರು ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಜೂನ್ 22ರಂದು ಲಸಿಕೆ

ನೂತನ ಲಸಿಕಾ ನೀತಿ ಇಂದಿನಿಂದ ಜಾರಿಗೆ ಬರುತ್ತಿರುವ ಬೆನ್ನಲ್ಲೇ ನಾಳೆ ಅಂದರೆ ಜೂನ್ 22ರಂದು ವ್ಯಾಸಂಗ ಅಥವಾ ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವವರಿಗೆ ಲಸಿಕೆ ಅಭಿಯಾನ ಆರಂಭಿಸಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರು ಮಾಹಿತಿ ನೀಡಿದ್ದಾರೆ.

published on : 21st June 2021

ಜೂನ್‌ನಲ್ಲಿ 12 ಕೋಟಿ ಡೋಸ್ ಸಿಗಲಿದೆ; ಕೊರೋನಾ ವ್ಯಾಕ್ಸಿನೇಷನ್ ಸಂಖ್ಯೆ ಹೆಚ್ಚಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

ಭಾರತದಲ್ಲಿ ಜೂನ್ ತಿಂಗಳಲ್ಲಿ ಪ್ರತಿದಿನ ಸರಾಸರಿ ಸುಮಾರು 40 ಲಕ್ಷ ಕೋವಿಡ್ ಲಸಿಕೆ ಹಾಕಲಾಗುತ್ತದೆ.

published on : 1st June 2021

ಖಾಸಗಿ ಆಸ್ಪತ್ರೆಗಳು ಸ್ಟಾರ್ ಹೊಟೇಲ್ ಗಳ ಜೊತೆ ಸೇರಿಕೊಂಡು ಕೋವಿಡ್ ಲಸಿಕೆ ಪ್ಯಾಕೇಜ್ ನೀಡುವ ಮೂಲಕ ಮಾರ್ಗಸೂಚಿ ಉಲ್ಲಂಘಿಸುತ್ತಿವೆ: ಕೇಂದ್ರ ಸರ್ಕಾರ 

ಸ್ಟಾರ್ ಹೊಟೇಲ್ ಗಳ ಜೊತೆ ಸೇರಿಕೊಂಡು ಖಾಸಗಿ ಆಸ್ಪತ್ರೆಗಳು ಕೋವಿಡ್-19 ಪ್ಯಾಕೇಜ್ ನೀಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇದು ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನದ ಮಾರ್ಗಸೂಚಿಗೆ ವಿರುದ್ಧವಾಗಿದ್ದು ತಕ್ಷಣವೇ ನಿಲ್ಲಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

published on : 30th May 2021

2021 ವರ್ಷಾಂತ್ಯದ ವೇಳೆಗೆ ದೇಶದ ಎಲ್ಲ ಪ್ರಜೆಗಳಿಗೂ ಕೋವಿಡ್ ಲಸಿಕೆ: ಕೇಂದ್ರ ಸರ್ಕಾರ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಮುಂದುವರೆದಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ತ್ವರಿತಗೊಳಿಸಲು ಯೋಜಿಸಿದ್ದು, ವರ್ಷ್ಯಾಂತ್ಯದ ವೇಳೆಗೆ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದೆ.

published on : 28th May 2021

ಕೋವಿಡ್ ಲಸಿಕೆ: ಕೋವಿನ್ ಪೋರ್ಟಲ್​ಗೆ ಹೊಸ ಸೆಕ್ಯುರಿಟಿ ಕೋಡ್ ಸೌಲಭ್ಯ, ಬಳಕೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಕೋವಿಡ್ ಲಸಿಕೆ ವಿತರಣೆಯ ದತ್ತಾಂಶ ಸಂಗ್ರಹಿವಲ್ಲಿ ಉಂಟಾಗುತ್ತಿದ್ದ ದೋಷ ನಿವಾರಣೆಗೆ ಕೇಂದ್ರ ಆರೋಗ್ಯ ಇಲಾಖೆ ಹೊಸ ಸೆಕ್ಯುರಿಟಿ ಕೋಡ್ ಮಾದರಿಯನ್ನು ಜಾರಿಗೆ ತಂದಿದ್ದು, ನಾಳೆ ಅಂದರೆ ಮೇ 8ರಿಂದಲೇ ಈ ನೂತನ ಸೇವೆ ಜಾರಿಯಾಗಲಿದೆ.

published on : 7th May 2021

ಕೋವಿಡ್-19 ಲಸಿಕೆ: 18-45 ವಯಸ್ಸಿನ 59 ಕೋಟಿ ಮಂದಿಗೆ 122 ಕೋಟಿ ಡೋಸ್ ಲಸಿಕೆ ಅಗತ್ಯ- ಕೇಂದ್ರ 

ಹೊಸ ಕೋವಿಡ್-19 ಲಸಿಕೆ ನೀತಿಯ ಅಡಿಯಲ್ಲಿ 18-45 ವಯಸ್ಸಿನ 59 ಕೋಟಿ ಮಂದಿಗೆ ಲಸಿಕೆ ನೀಡುವುದಕ್ಕೆ 122 ಕೋಟಿ ಲಸಿಕೆ ಡೋಸ್ ಅಗತ್ಯ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. 

published on : 2nd May 2021

ಭಾರತಕ್ಕೆ ಬಂದ ಮೂರನೇ ಲಸಿಕೆ: ರಷ್ಯಾದಿಂದ 1.5 ಲಕ್ಷ ಡೋಸ್ ಸ್ಪುಟ್ನಿಕ್ ವಿ ಲಸಿಕೆಗಳ ರವಾನೆ

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದ ರಷ್ಯಾದ ಸ್ಪುಟ್ನಿಕ್ ವಿ ಕೋವಿಡ್ ಲಸಿಕೆಯ ಮೊದಲ ಬ್ಯಾಚ್ ನ ಸುಮಾರು 1.5 ಲಕ್ಷ ಡೋಸ್ ಲಸಿಕೆಗಳು ಇದೀಗ ಭಾರತಕ್ಕೆ ಬಂದಿಳಿದಿವೆ.

published on : 1st May 2021

ಪೋಲಿಯೋ ಲಸಿಕೆ ಮಾದರಿಯಲ್ಲಿ ಮನೆಮನೆಗೆ ಹೋಗಿ ಕೋವಿಡ್ ಲಸಿಕೆ ನೀಡಿ: ಡಿಕೆಶಿ ಆಗ್ರಹ

ಪೋಲಿಯೋ ಲಸಿಕೆ ಮಾದರಿಯಲ್ಲಿ ಸರ್ಕಾರ ಮನೆಮನೆಗೆ ಹೋಗಿ ರಾಜ್ಯದ ಜನರಿಗೆ ಕೋವಿಡ್ ಲಸಿಕೆ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

published on : 30th April 2021

ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್‌ಗೆ ಮಹಾರಾಷ್ಟ್ರ ಕಾಂಗ್ರೆಸ್ ನಿಂದ ಸುಮಾರು 2 ಕೋಟಿ ರೂ. ದೇಣಿಗೆ

18 ರಿಂದ 44 ವರ್ಷದೊಳಗಿನ ಜನರಿಗೆ ಉಚಿತ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್‌ಗೆ ತನ್ನ ಕೊಡುಗೆ ನೀಡುವುದಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ(ಸಿಎಮ್‌ಆರ್‌ಎಫ್) ಸುಮಾರು 2 ಕೋಟಿ ರೂ.ಗಳನ್ನು ದೇಣಿಗೆ ನೀಡುವುದಾಗಿ...

published on : 29th April 2021

ಲಸಿಕೆ ಹಾಕಿಸಿಕೊಂಡ ಹಿರಿಯರಿಗೆ ಕೋವಿಡ್ ಸೋಂಕು ತಗುಲಿದರೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.94ರಷ್ಟು ಕಡಿಮೆ: ಸಂಶೋಧನೆ

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅತ್ಯಂತ ಅಪಾಯದ ಸ್ಥಿತಿಯಲ್ಲಿರುವುದು ಹಿರಿಯರು.. ಆದರೆ ನೂತನ ವರದಿಯ ಅನ್ವಯ ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಕೋವಿಡ್ ಸೋಂಕು ತಗುಲಿದರೂ ಹಿರಿಯರನ್ನು ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಶೇ.94ರಷ್ಟು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

published on : 29th April 2021

18-45 ವಯಸ್ಸಿನವರಿಗೆ ಲಸಿಕೆ ನೀಡುವ ಮೊದಲು ಹೆಚ್ಚು ಖಾಸಗಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

ಮೇ 1 ರಿಂದ ಕೋವಿಡ್-19 ಲಸಿಕೆಯ ಹೊಸ ನಿಯಮಗಳು ಜಾರಿಗೆ ಬರಲಿದ್ದು, 18 ವರ್ಷದ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತದೆ. ಇದಕ್ಕೂ ಮುನ್ನ ಖಾಸಗಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 

published on : 24th April 2021

ಲಸಿಕೆ ಪಡೆದ 10,000 ಭಾರತೀಯರಲ್ಲಿ ಇಬ್ಬರಿಂದ 4 ಜನರಿಗಷ್ಟೇ ಸೋಂಕು: ಐಸಿಎಂಆರ್ 

ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಏರಿಳಿತ ನಡುವೇ ಅನೇಕ ಜನರು ಲಸಿಕೆ ಪಡೆದ ತರುವಾಯವೂ ಕೋವಿಡ್ -19 ಸೋಂಕಿಗೆ ಒಳಗಾಗಿತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಬುಧವಾರ ಬಿಡುಗಡೆಗೊಳಿಸಿದ ದತ್ತಾಂಶ ಹೇಳುವಂತೆ ಅಂತಹ ಸೋಂಕಿತರ ಸಂಖ್ಯೆ ತೀರಾ ಕನಿಷ್ಟ ಪ್ರಮಾಣದಲ್ಲಿದೆ.

published on : 21st April 2021
1 2 >