• Tag results for Chamarajanagar

ಚಾಮರಾಜನಗರ: ಕಾರು-ಬೈಕ್ ನಡುವೆ ಡಿಕ್ಕಿ; ತಂದೆ-ಮಗ ದುರ್ಮರಣ, ತಾಯಿ-ಮಗನ ಸ್ಥಿತಿ ಗಂಭೀರ!

ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟಿನ ಬಳಿ ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ದಾರುಣ ಸಾವನ್ನಪ್ಪಿದ್ದಾರೆ.

published on : 11th May 2022

ಚಾಮರಾಜನಗರ ಜಿಲ್ಲಾಸ್ಪತ್ರೆ ದುರಂತಕ್ಕೆ ಒಂದು ವರ್ಷ: 12 ಮೃತ ರೋಗಿಗಳ ಕುಟುಂಬಕ್ಕೆ ಸರ್ಕಾರದಿಂದ ಇನ್ನೂ ಸಿಗದ ಪರಿಹಾರ!

ಕಳೆದ ವರ್ಷ 2021ರಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ರಾಷ್ಟ್ರದ ಗಮನ ಸೆಳೆದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 36 ರೋಗಿಗಳ ಸಾವಿಗೆ ಕಾರಣವಾದ ಆಮ್ಲಜನಕ ಕೊರತೆ ದುರಂತ ಸಂಭವಿಸಿ ಒಂದು ವರ್ಷ ಕಳೆದಿದೆ.

published on : 4th May 2022

ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಠೆ ಮಾಡಿ: ಚಾಮರಾಜನಗರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಆಗ್ರಹ

ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೆ ಚಾಮರಾಜನಗರದ ಖಾಸಗಿ ಕಾಲೇಜಿನ ಸುಮಾರು 10 ವಿದ್ಯಾರ್ಥಿಗಳು ಕಾಲೇಜು ಮುಂದೆ ಪ್ರತಿಭಟನೆ ನಡೆಸಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

published on : 17th March 2022

ಚಾಮರಾಜನಗರ ಕಲ್ಲು ಕ್ವಾರಿ ದುರಂತ: ಓರ್ವನ ಶವ ಹೊರಕ್ಕೆ, ಇನ್ನಿಬ್ಬರಿಗಾಗಿ ಮುಂದುವರಿದ ಕಾರ್ಯಾಚರಣೆ

ಗುಂಡ್ಲುಪೇಟೆಯ ಗುಮ್ಮಕಲ್ಲುಗುಡ್ಡ ಗಣಿ ಕುಸಿತ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಎನ್‍ಡಿಆರ್‌ಎಫ್ ಪಡೆಗಳು ಈವರೆಗೂ ಒಬ್ಬರ ಶವ ಹೊರ ತೆಗೆದಿದೆ.

published on : 6th March 2022

ಕಲ್ಲು ಗಣಿ ದುರಂತದಲ್ಲಿ ಐವರ ರಕ್ಷಣೆ: ಕ್ವಾರಿ ಮುಚ್ಚಲು ಒತ್ತಾಯಿಸುತ್ತಿದ್ದರೂ ನಿರ್ಲಕ್ಷ್ಯ; ಕೆಆರ್ ಆರ್ ಎಸ್ ಆರೋಪ

ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಗುಮ್ಮಕಲ್ಲುಗುಡ್ಡಗಣಿಯಲ್ಲಿ ಫೆಬ್ರವರಿ 4ರಂದು ದುರಂತ ಸಂಭವಿಸಿತ್ತು.

published on : 5th March 2022

ಚಾಮರಾಜನಗರ: ಕಲ್ಲು ಕ್ವಾರಿಯಲ್ಲಿ ಗುಡ್ಡ ಕುಸಿದು ಆರು ಕಾರ್ಮಿಕರು ಸಾವು ಶಂಕೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿಯ ಬಿಳಿ ಕಲ್ಲು ಕ್ವಾರಿಯಲ್ಲಿ ಶುಕ್ರವಾರ ಗುಡ್ಡ ಕುಸಿತ ಸಂಭವಿಸಿದ್ದು, ಘಟನೆಯಲ್ಲಿ ಆರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದು, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

published on : 4th March 2022

ಗಾಳಿಯ ಉತ್ತಮ ಗುಣಮಟ್ಟ: ಭಾರತದಲ್ಲಿಯೇ ಚಾಮರಾಜನಗರಕ್ಕೆ ಮೊದಲ ಸ್ಥಾನ!

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಕಟಿಸುವ ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ಶುಕ್ರವಾರ ಚಾಮರಾಜನಗರ ಮೊದಲ ಸ್ಥಾನದಲ್ಲಿದೆ.

published on : 19th February 2022

ಈ ಬಾರಿ ನಿಗದಿಯಂತೆ ಎಸ್ ಎಸ್ ಎಲ್ ಸಿ ಪರೀಕ್ಷೆ- ಸಚಿವ ಬಿಸಿ ನಾಗೇಶ್

ಚಾಮರಾಜನಗರ: ಈ ಬಾರಿ ರಾಜ್ಯದಲ್ಲಿ ನಿಗದಿಯಂತೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದಾರೆ. ಚಾಮರಾಜನಗರದ ರಾಮುಸಮುದ್ರದಲ್ಲಿ ದೀನಬಂಧು ಸಂಸ್ಥೆ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ದೀನಬಂಧು ವಿಜ್ಞಾನ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ನಿಂದಾಗಿ ಅನೇಕ ರಾಜ್ಯಗಳಲ್ಲಿ

published on : 6th February 2022

ಆರ್ ಎನ್ ಆರ್ ತಳಿ ಭತ್ತದ ಬೆಳೆ; ರೈತರ ಮೊಗದಲ್ಲಿ ಮಂದಹಾಸ

 ಭತ್ತದ ಬೆಳೆಯಲ್ಲಿ ಹೆಚ್ಚು ಇಳುವರಿ ಕಾಣದೇ ನಷ್ಟ ಅನುಭವಿಸಿ ಕಂಗಾಲಾಗಿದ್ದ ರೈತರಿಗೆ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಹೊಸದಾಗಿ ಪರಿಚಯಿಸಿಕೊಟ್ಟ ಆರ್ ಎನ್ ಆರ್-15048  ಭತ್ತದ ತಳಿಯಿಂದ ಜಿಲ್ಲೆಯ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

published on : 17th December 2021

ಪರಿಷತ್ ಚುನಾವಣೆ: ಮೈಸೂರು, ಚಾಮರಾಜನಗರ ಕ್ಷೇತ್ರದಲ್ಲಿ ಮತ ಚಲಾಯಿಸಲು ಸಹಾಯಕರನ್ನು ಕೋರಿದ 57 ಜನಪ್ರತಿನಿಧಿಗಳು!

ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ 57 ಅನಕ್ಷರಸ್ಥ ಹಾಗೂ ದಿವ್ಯಾಂಗ ಮತದಾರರು ತಮ್ಮ ಮತ ಚಲಾಯಿಸಲು ಸಹಾಯಕರ ನೆರವನ್ನು ಕೋರಿರುವುದಾಗಿ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ.

published on : 10th December 2021

ಚಾಮರಾಜನಗರ: ಭಾರಿ ಮಳೆ; ತುಂಬಿದ ಹಳ್ಳಕೊಳ್ಳ; ಶಾಲೆಗೆ ತೆರಳಲು ವಿದ್ಯಾರ್ಥಿಗಳ ಪರದಾಟ

ನಿರಂತರವಾಗಿ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ನದಿಯಂತಾಗಿದ್ದು, ಪೋಷಕರ ಹೆಗಲ ಮೇಲೆ ಕುಳಿತು ವಿದ್ಯಾರ್ಥಿಗಳು ರಸ್ತೆ ದಾಟಿದ್ದಾರೆ.

published on : 17th November 2021

ಚಾಮರಾಜನಗರಕ್ಕೆ ಬರದೇ ಇರುತ್ತಿದ್ದರೆ ನನ್ನ ಕರ್ತವ್ಯ ಲೋಪವಾಗುತ್ತಿತ್ತು: ಸಿಎಂ ಬಸವರಾಜ ಬೊಮ್ಮಾಯಿ

ಜಿಲ್ಲೆಗೆ ಬರುವುದು ನನ್ನ ಕರ್ತವ್ಯ. ನನ್ನ ಕೆಲಸ, ಚಾಮರಾಜನಗರದ ಜನಕಲ್ಯಾಣ ಮಾಡುವುದು ನನ್ನ ಆದ್ಯ ಕರ್ತವ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

published on : 8th October 2021

ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಹುಲಿ ಅಭಯಾರಣ್ಯಗಳು!

ಚಾಮರಾಜನಗರವು ಮೂರು ಹುಲಿ ಅಭಯಾರಣ್ಯಗಳನ್ನು ಹೊಂದಿರುವ ದೇಶದ ಮೊದಲ ಜಿಲ್ಲೆಯಾಗಲಿದೆ. ಸುಮಾರು ಶೇಕಡಾ 51 ರಷ್ಟು  ಅರಣ್ಯವನ್ನು ಹೊಂದಿರುವ ಇದು ಈಗಾಗಲೇ ಬಂಡೀಪುರ ಮತ್ತು ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ವನ್ಯಜೀವಿ ಧಾಮಗಳನ್ನು ಹೊಂದಿದೆ. ಇದಕ್ಕೆ ಎಂಎಂ ಹಿಲ್ಸ್ ಟೈಗರ್ ಪ್ರಾಜೆಕ್ಟ್ ಸೇರ್ಪಡೆಯಾಗಿದೆ.

published on : 26th September 2021

ಚಾಮರಾಜನಗರ: ಕೋವಿಡ್ 3ನೇ ಅಲೆ ಭೀತಿ; ರಾಜ್ಯದ ಏಕೈಕ ಗೌರಿ ದೇವಾಲಯ ಈ ಬಾರಿಯೂ ಬಂದ್

ರಾಜ್ಯದ ಏಕೈಕ ಗೌರಿ ದೇವಾಲಯ ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಬಂದ್ ಆಗಿದೆ. ಚಾಮರಾಜನಗರ ಜಿಲ್ಲೆ ಕುದೇರು ಗ್ರಾಮದಲ್ಲಿ ಸ್ವರ್ಣಗೌರಿ ದೇವಾಲಯವಿದ್ದು  ಗೌರಿ ಹಬ್ಬದ ಸಂಭ್ರಮ ಮಾಯವಾಗಿದೆ.‌ 

published on : 11th September 2021

ಚಾಮರಾಜನಗರ: ಪ್ರಕರಣದ ವಿಚಾರಣೆಗೆ ಬಂದಿದ್ದಾಗ ಕುಸಿದು ಬಿದ್ದು ನಗರಸಭಾ ಸದಸ್ಯ ಸಾವು

ಪ್ರಕರಣವೊಂದರ ವಿಚಾರಣೆಗಾಗಿ ಜಿಲ್ಲಾ ನ್ಯಾಯಾಲಯಕ್ಕೆ ಬಂದಿದ್ದ‌ ನಗರಸಭಾ ಸದಸ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.

published on : 1st September 2021
1 2 3 4 5 6 > 

ರಾಶಿ ಭವಿಷ್ಯ