• Tag results for Chetan

ಪವರ್ ಸ್ಟಾರ್ ಪುನೀತ್ ಅಗಲುವಿಕೆ ನೋವಲ್ಲಿ ಚಿತ್ರೀಕರಣ ಮುಗಿಸಿದ 'ಜೇಮ್ಸ್' ತಂಡ: ವಿಶೇಷ ಪಾತ್ರದಲ್ಲಿ ಶಿವಣ್ಣ, ರಾಘಣ್ಣ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power star Puneet Rajkumar) ಅವರ ಬಹುನಿರೀಕ್ಷಿತ ಚಿತ್ರ ಜೇಮ್ಸ್ (James). ಅವರು ನಿಧನ ಹೊಂದುವ ಸಂದರ್ಭದಲ್ಲಿ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದು ಕೊನೆಯ ಹಂತ ತಲುಪಿತ್ತು. ಇದು ಪುನೀತ್ ಅಭಿನಯದ ಕೊನೆಯ ಚಿತ್ರ ಕೂಡ ಹೌದು.

published on : 22nd January 2022

ಟಿ20 ನಾಯಕತ್ವ ಬಿಡದಂತೆ ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದೆವು; ಚೇತನ್ ಶರ್ಮಾ ಶಾಕಿಂಗ್ ಹೇಳಿಕೆ

ಟೀಂ ಇಂಡಿಯಾ ನಾಯಕತ್ವದ ವಿಚಾರವಾಗಿ ವಿರಾಟ್ ಕೊಹ್ಲಿ ಮಾಧ್ಯಮಗಳ ಮುಂದೆ ಸುಳ್ಳು ಹೇಳಿದ್ರಾ.. ಎಂಬ ಪ್ರಶ್ನೆ ಇದೀಗ ಉದ್ಭವವಾಗಿದ್ದು, ಇದಕ್ಕೆ ಕಾರಣ ತಂಡದ ಆಯ್ಕೆ ಸಮಿತಿ ಸದಸ್ಯ ಚೇತನ್ ಶರ್ಮಾ ಅವರ ಹೇಳಿಕೆ.

published on : 1st January 2022

ಬಸವರಾಜ ಬೊಮ್ಮಾಯಿ ಒಬ್ಬ ಕೋಮುವಾದಿ ಮುಖ್ಯಮಂತ್ರಿ: ನಟ ಚೇತನ್‌

ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಸರ್ಕಾರದ ನಿರ್ಧಾರಕ್ಕೆ ವಿರೋಧಿಸುವ ಸ್ವಾಮೀಜಿಗಳು ಬಸವತತ್ವದವರು ಅಲ್ಲ. ಕೆಲ ಸ್ವಾಮೀಜಿಗಳು ಸಸ್ಯಹಾರಿಗಳಿಗೆ ಪ್ರತ್ಯೇಕ ಶಾಲೆಗಳನ್ನ ಕೇಳುತ್ತೀರುವುದು ಬೇಸರದ ವಿಚಾರವಾಗಿದೆ.

published on : 25th December 2021

ಆದಿವಾಸಿಗೆ ಗುಂಡೇಟು: ಸೂಕ್ತ ತನಿಖೆಗೆ ನಟ ಚೇತನ್ ಆಗ್ರಹ

ಆದಿವಾಸಿ ವ್ಯಕ್ತಿಯೊಬ್ಬರಿಗೆ ಕ್ಷುಲ್ಲಕ ಕಾರಣಕ್ಕೆ ಅರಣ್ಯ ಸಿಬ್ಬಂದಿ ಬಂದೂಕಿನಿಂದ ಗುಂಡಿಕ್ಕಿ ಗಾಯಗೊಳಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಬಳಿಯ ರಾಣಿಗೇಟ್ ಜೇನುಕುರುಬರ ಹಾಡಿಯಲ್ಲಿ ನಡೆದಿರುವುದು ವರದಿಯಾಗಿದೆ. 

published on : 3rd December 2021

ಪೇಜಾವರ ಹಿರಿಯ ಶ್ರೀಗಳ ಬಗ್ಗೆ ಹೇಳಿಕೆ: ಹಂಸಲೇಖ ವಿಚಾರಣೆಗೆ ಹಾಜರು, ಪೊಲೀಸ್ ಠಾಣೆ ಬಳಿ ಹೈಡ್ರಾಮಾ; ಒಂದು ತಾಸಿನ ನಂತರ ನಿರ್ಗಮನ

ದಲಿತರ ಮನೆಯಲ್ಲಿ ಬಲಿತರು ಬಂದು ಮಾಂಸಾಹಾರ ಸೇವಿಸುವುದು, ಪೇಜಾವರದ ಹಿರಿಯ ಯತಿಗಳು ದಲಿಕೇರಿಗೆ ಹೋಗುತ್ತಿದ್ದ ಬಗ್ಗೆ ಹೇಳಿಕೆ ನೀಡಿ ತೀವ್ರ ವಿವಾದ ಉಂಟಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಹಿರಿಯ ಸಂಗೀತ ನಿರ್ದೇಶಕ ಡಾ ಹಂಸಲೇಖ ಗುರುವಾರ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. 

published on : 25th November 2021

ಇಂದಿರಾ ಗಾಂಧಿ ಅವರಿಂದಲೇ ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ: ನಟ ಚೇತನ್

ರಾಜಕೀಯವಾಗಿ ಹಲವಾರು ಕಮೆಂಟ್ ಗಳನ್ನು ಮಾಡುತ್ತಿರುವ ನಟ ಚೇತನ್ ಇದೀಗ ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಅವರೇ ಕಾಂಗ್ರೆಸ್ ನ ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದಾರೆ ಎಂದು ಹೇಳಿದ್ದಾರೆ.

published on : 11th September 2021

ಸಿದ್ದರಾಮಯ್ಯನವರೇ, ಸ್ವಾತಂತ್ರ್ಯ ಕೇವಲ ಕಾಂಗ್ರೆಸ್ಸಿನಿಂದ ಬಂದಿದ್ದಲ್ಲ- ನಟ ಚೇತನ್ 

ಕಾಂಗ್ರೆಸ್, ಬಿಜೆಪಿ ಮತ್ತು ಆರ್ ಎಸ್ ಎಸ್ ಬಗ್ಗೆ ಮಾತನಾಡಿದ್ದ  ನಟ ಚೇತನ್ ಇದೀಗ, ಸ್ವಾತಂತ್ರ್ಯ ಕೇವಲ ಕಾಂಗ್ರೆಸ್ಸಿನಿಂದ ಬಂದಿದ್ದಲ್ಲ ಎಂದಿದ್ದಾರೆ.

published on : 10th September 2021

ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದರಿಂದ ಕಾಂಗ್ರೆಸ್ ಮತ್ತು ಆರ್ ಎಸ್ ಎಸ್ ಎರಡಕ್ಕೂ ಲಾಭ: ನಟ ಚೇತನ್

ಸಮಾಜದಲ್ಲಿ ಸಮಾನತೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನು ಸೋಲಿಸಬೇಕು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.

published on : 10th September 2021

ರಾಜಕಾರಣಿಗಳು ಕನಕದಾಸರನ್ನು ಹೈಜಾಕ್ ಮಾಡಲು ಬಿಡಬಾರದು: ಚೇತನ್ ಟ್ವಿಟ್ ನ ಮರ್ಮವೇನು?

ಕೆಲ ದಿನಗಳ ಹಿಂದಷ್ಟೇ  ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 'ಜಾತಿ ನಾಯಕ' ಎಂದು ಟ್ವೀಟ್ ಮಾಡಿದ್ದ ನಟ ಚೇತನ್ ಇಂದು, ಅಧಿಕಾರಕ್ಕಾಗಿ ಜಾತಿ ಗುರುತನ್ನು ಬಳಸಿಕೊಳ್ಳುವ ಸ್ವ- ಸೇವಕ ರಾಜಕಾರಣಿಗಳು ಕನಕದಾಸರನ್ನು ಹೈ ಜಾಕ್ ಮಾಡಲು ಬಿಡಬಾರದು ಎಂದು ಟ್ವೀಟ್ ಮಾಡಿದ್ದಾರೆ.

published on : 7th September 2021

ಸಿದ್ದರಾಮಯ್ಯ 'ಜಾತಿ ನಾಯಕ' ಚರ್ಚೆಗೆ ಗ್ರಾಸವಾದ ನಟ ಚೇತನ್ ಹೇಳಿಕೆ!

ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಚರ್ಚೆ ಶುರುವಾಗಿದ್ದು, ಸಿದ್ದರಾಮಯ್ಯ ಪರ ಹೆಚ್ಚು ಒಲವಿದೆ ಎನ್ನಲಾಗುತ್ತಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಟ ಹೋರಾಟಗಾರ ಚೇತನ್  ಸಿದ್ದರಾಮಯ್ಯ ಕುರಿತು ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

published on : 5th September 2021

ಕುಮಾರಸ್ವಾಮಿಯ ಕ್ರಾಂತಿಕಾರಿ ಮಾತುಗಳೆಲ್ಲ 'ನಾನ್ ಸೆನ್ಸ್' ಎಂದ ನಟ ಚೇತನ್

ರಾಜ್ಯದಲ್ಲಿ ಐದು ವರ್ಷ ಸರ್ಕಾರ ನಡೆಸುವ ಅವಕಾಶ ಸಿಕ್ಕರೆ ಕ್ರಾಂತಿಕಾರಿ ಬದಲಾವಣೆ ತರುತ್ತೇನೆ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರ ಮಾತುಗಳು ನಾನ್ ಸೆನ್ಸ್ ಎಂದು ನಟ ಚೇತನ್ ಹೇಳಿದ್ದಾರೆ.

published on : 22nd August 2021

ಬ್ರಾಹಣ್ಯ ಹೇಳಿಕೆ ವಿವಾದ: ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ನಟ ಚೇತನ್ ಮಾನನಷ್ಟ ಮೊಕದ್ದಮೆ ದಾಖಲು

ಬ್ರಾಹಣ್ಯ ಟೀಕೆ ಆರೋಪಕ್ಕಾಗಿ ತಮ್ಮ ವಿರುದ್ಧ ಅವಹೇಳನಾಕಾರಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ನಟ ಚೇತನ್ ಕುಮಾರ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆಯನ್ನು ನಗರದ ನ್ಯಾಯಾಲಯವೊಂದರಲ್ಲಿ ಹಾಕಿದ್ದಾರೆ.

published on : 28th June 2021

'ನನ್ನ ಹೋರಾಟ ಅಸಮಾನತೆ, ಬೇಧ-ಭಾವದ ವಿರುದ್ಧ, ಇದನ್ನು ನಿಲ್ಲಿಸುವುದಿಲ್ಲ, ಮುಂದುವರಿಸುತ್ತೇನೆ': ನಟ ಚೇತನ್

ನಾನು ಯಾವ ಜಾತಿ-ಜನಾಂಗದ ವಿರೋಧಿಯಲ್ಲ, ಹುಟ್ಟಿನ ಆಧಾರದ ಮೇಲೆ ಇವರು ಶ್ರೇಷ್ಠ, ಅವರು ಕನಿಷ್ಠ ಎಂಬ ಮನೋಸ್ಥಿತಿ, ವ್ಯವಸ್ಥೆ ವಿರುದ್ಧ ಮಾತ್ರ ನನ್ನ ಹೋರಾಟ, ಅನೇಕರು ಈ ವ್ಯವಸ್ಥೆಯೊಳಗೆ ಪಾಲುದಾರರಾಗಿದ್ದಾರೆ ಎಂದು ನಟ ಚೇತನ್ ಹೇಳಿದ್ದಾರೆ.

published on : 16th June 2021

ಬ್ರಾಹ್ಮಣರ ಅವಹೇಳನ: ನಟ ಚೇತನ್ ಪೊಲೀಸ್ ವಿಚಾರಣೆಗೆ ಹಾಜರು

ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಕುರಿತು ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದಡಿ 'ಆ ದಿನಗಳು' ಚಿತ್ರ ಖ್ಯಾತಿಯ ಚೇತನ್ ಬುಧವಾರ ವಿಚಾರಣೆಗೆ ಹಾಜರಾಗಿದ್ದಾರೆ.

published on : 16th June 2021

ಬ್ರಾಹ್ಮಣ ವಿರೋಧಿ ಹೇಳಿಕೆ ನೀಡಿದ ನಟ ಚೇತನ್ ನನ್ನು ಅಮೆರಿಕಾಗೆ ಗಡಿಪಾರು ಮಾಡಿ: ವಿಎಚ್‌ಪಿ ಕಾರ್ಯಕರ್ತರ ಮನವಿ

ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕನ್ನಡ ನಟ ಚೇತನ್ ವಿರುದ್ಧ ಎರಡು ಎಫ್‌ಐಆರ್ ದಾಖಲಾದ ನಂತರ ಅಮೆರಿಕಾದ ನಾಗರಿಕತ್ವ ಹೊಂದಿರುವ ಚೇತನ್ ಅವರನ್ನು ಒತ್ತಾಯಪೂರ್ವಕ ಗಡಿಪಾರು ಮಾಡಬೇಕೆಂದು ವಿಎಚ್‌ಪಿ ಕಾರ್ಯಕರ್ತರೊಬ್ಬರು ಮನವಿ ಸಲ್ಲಿಸಿದ್ದಾರೆ.

published on : 14th June 2021
1 2 > 

ರಾಶಿ ಭವಿಷ್ಯ