• Tag results for Chidambaram

ಕೊನೆ ಚುನಾವಣೆ ಎಂದು ಹೇಳುವ ಮೂಲಕ ನಿತೀಶ್ ಅನುಕಂಪ ಕೋರುತ್ತಿದ್ದಾರೆ: ಚಿದಂಬರಂ

ಕೊನೆ ಚುನಾವಣೆ ಎಂದು ಹೇಳುವ ಮೂಲಕ ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಲೇವಡಿ ಮಾಡಿದ್ದಾರೆ.

published on : 6th November 2020

10ಕ್ಕಿಂತ 19 ಚಿಕ್ಕದು ಅಂತ ಗೊತ್ತಿರಲಿಲ್ಲ: ಬಿಜೆಪಿಯ 19 ಲಕ್ಷ ಉದ್ಯೋಗ ಭರವಸೆಗೆ ಚಿದಂಬರಂ ಟಾಂಗ್

ಬಿಹಾರ ಚುನಾವಣಾ ಪ್ರಣಾಳಿಕೆಯಲ್ಲಿ ಆರ್ ಜೆಡಿಯ 10 ಲಕ್ಷ ಉದ್ಯೋಗದ ಭರವಸೆಯನ್ನು ಅಪಹಾಸ್ಯ ಮಾಡಿದ್ದ ಬಿಜೆಪಿ ಸ್ವತಃ ಈಗ 19 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದೆ.

published on : 23rd October 2020

ಆರ್ಥಿಕತೆ ರಿಂಗ್ ಮಾಸ್ಟರ್ ಹೇಳಿದಂತೆ ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿತ್ತು: ಮಾಜಿ ವಿತ್ತ ಸಚಿವ ಚಿದಂಬರಂ ಹೀಗೆ ಹೇಳಿದ್ದೇಕೆ?

ದೇಶದ ಆರ್ಥಿಕತೆ ಬಗ್ಗೆ ಆರ್ ಬಿಐ ಗೌರ್ನರ್, ಸೆಬಿ ಮುಖ್ಯಸ್ಥ ಹಾಗೂ ಡಿಇಎ ಕಾರ್ಯದರ್ಶಿ ಮಾತನಾಡಿರುವ ಬೆನ್ನಲ್ಲೇ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, ಆರ್ಥಿಕತೆ ರಿಂಗ್ ಮಾಸ್ಟರ್ ಮಾತು ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 

published on : 23rd October 2020

ತಮಿಳುನಾಡು ಚುನಾವಣೆ: ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಕಾರ್ತಿ ಚಿದಂಬರಂ ಭೇಟಿ, ಮಾತುಕತೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಕೆಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪುತ್ರ, ಹಾಲಿ ಸಂಸದ ಕಾರ್ತಿ ಚಿದಂಬರಂ ಭಾನುವಾರ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

published on : 19th October 2020

ವಿಭಜನೆಯ ವಿರುದ್ಧ ಏಕತೆಯ ಆಯ್ಕೆ: ಬಿಡನ್ ಹೇಳಿಕೆ ಉಲ್ಲೇಖಿಸಿ ಬಿಹಾರ ಮತದಾರರಿಗೆ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಚಿದಂಬರಂ ಕರೆ

ಯುಎಸ್ ಚುನಾವಣೆಯಲ್ಲಿ ಡೆಮೋಕ್ರಾಟಿಕ್ ಅಭ್ಯರ್ಥಿ ಜೋ ಬಿಡೆನ್ ಅವರ ಹೇಳಿಕೆ ಉಲ್ಲೇಖಿಸಿ "ಭೀತಿಯ ವಿರುದ್ಧ ಭರವಸೆ, ವಿಭಜನೆಯ ವಿರುದ್ಧ ಏಕತೆ್ಯ ಆಯ್ಕೆ" ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಭಾರತದಲ್ಲಿಯೂ ಬಿಹಾರ, ಮಧ್ಯಪ್ರದೇಶ ಮತ್ತು ಇತರೆಡೆಗಳಲ್ಲಿ ಮತ ಚಲಾಯಿಸುವ ಜನತೆ ಇದೇ ರೀತಿಯ ಪ್ರತಿಜ್ಞೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

published on : 18th October 2020

ಸಿಎಜಿ ವರದಿ ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯುತ್ತಿದೆ: ಕೇಂದ್ರದ ವಿರುದ್ಧ ಚಿದಂಬರಂ ವಾಗ್ದಾಳಿ

ರಫೇಲ್‌ ಯುದ್ಧ ವಿಮಾನ ಖರೀದಿ ಸಂಬಂಧ ರಷ್ಯಾದ ಡಸಾಲ್ಟ್‌ ಏವಿಯೇಷನ್ ಕಂಪನಿಯೊಂದಿಗಿನ ಒಪ್ಪಂದಗಳನ್ನು ಪಾಲಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಬಹಿರಂಗಪಡಿಸಿದ ಸಿಎಜಿ ವರದಿ ಉಲ್ಲೇಖಿಸಿ ಕಾಂಗ್ರೆಸ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

published on : 24th September 2020

ರಾಜ್ಯಸಭೆ ಕಲಾಪ: ಅನಾರೋಗ್ಯದ ಕಾರಣ ರಜೆ ಕೋರಿದ ಮನಮೋಹನ್ ಸಿಂಗ್, ಚಿದಂಬರಂ

ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ವೈದ್ಯಕೀಯ ಆಧಾರದ ಮೇಲೆ ಪ್ರಸಕ್ತ ಮುಂಗಾರು ಅಧಿವೇಶನಕ್ಕೆ ಗೈರಾಗಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ ಎಂದು ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಬುಧವಾರ ಹೇಳಿದ್ದಾರೆ.

published on : 16th September 2020

ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 65 ಲಕ್ಷ ತಲುಪಬಹುದು: ಕೇಂದ್ರದ ವಿರುದ್ದ ಚಿದಂಬರಂ ದಾಳಿ ಕಿಡಿ

ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 65 ಲಕ್ಷ ತಲುಪಬಹುದು ಎಂದು ಕೊರೋನಾ ಪರಿಸ್ಥಿತಿ ನಿರ್ವಹಣೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 

published on : 5th September 2020

ಪಿಎಂ-ಕೇರ್ಸ್ ಗೆ 5 ದಿನಗಳಲ್ಲಿ 3,076 ಕೋಟಿ ರೂಪಾಯಿ: ಹೆಸರು ಬಹಿರಂಗಪಡಿಸಲು ಚಿದಂಬರಂ ಆಗ್ರಹ  

ಪಿಎಂ-ಕೇರ್ಸ್ ಗೆ 5 ದಿನಗಳಲ್ಲಿ 3,076 ಕೋಟಿ ಹರಿದುಬಂದಿದೆ. 2020 ನೇ ಆರ್ಥಿಕ ವರ್ಷಕ್ಕೆ ಸರ್ಕಾರದ ಆಡಿಟ್ ಬಹಿರಂಗಗೊಂಡಿದ್ದು, ಇದರಲ್ಲಿ ಮಾ.27-31 ವರೆಗೆ ಬಂದಿರುವ ದೇಣಿಗೆಗಳ ವಿವರವನ್ನು ಮಾತ್ರ ಬಹಿರಂಗಗೊಳಿಸಲಾಗಿದೆ. 

published on : 2nd September 2020

ಮಾನವ ನಿರ್ಮಿತ ದುರಂತಕ್ಕೆ ದೇವರನ್ನು ದೂಷಿಸಬೇಡಿ; ಕೇಂದ್ರದ ವಿರುದ್ಧ ಚಿದಂಬರಂ ಕಿಡಿ

ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿತ ಕಂಡಿದೆ. ಭಾರತದ ಜಿಡಿಪಿ ಶೇ.-24ಕ್ಕೆ ತಲುಪಿದೆ. ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಹಿಂಜರಿತಕ್ಕೆ ಕೊರೋನಾ ವೈರಸ್‌ ಕಾರಣ.

published on : 2nd September 2020

ಕೊರೋನಾ ಪೂರ್ವ ಅಸಮರ್ಪಕ ಆರ್ಥಿಕತೆಯನ್ನು ದೇವರ ಸಂದೇಶವಾಹಕಿಯಾಗಿ ಹೇಗೆ ವಿವರಿಸುವಿರಿ: ನಿರ್ಮಲಾ ಸೀತಾರಾಮನ್ ಗೆ ಪಿ ಚಿದಂಬರಂ ಪ್ರಶ್ನೆ

ಕೊರೋನಾ ಲಾಕ್ಡೌನ್ ಮತ್ತು ದೇಶದ ಆರ್ಥಿಕತೆ ಕುಸಿಯುತ್ತಿರುವುದು ದೇವರ ಆಟ ಎಂದು ಹೇಳಿಕೆ ನೀಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ವ್ಯಂಗ ಮಾಡಿರುವ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ, ದೇವರ ಸಂದೇಶಗಾರ್ತಿಯಾಗಿ ನಿರ್ಮಲಾ ಸೀತಾರಾಮನ್ ಅವರು ಕೊರೋನಾಕ್ಕಿಂತ ಮೊದಲು ಆರ್ಥಿಕತೆಯ ಅಸಮರ್ಪಕ ನಿರ್ವಹಣೆ ಹೇಗಾಯಿತು ಎಂದು ಹೇಳಬಹುದೇ ಎಂದು ಕೇಳಿದ್ದಾರೆ.

published on : 29th August 2020

ಮೂರು ತಿಂಗಳೂಳಗೆ ಕಾಂಗ್ರೆಸ್ ಗೆ ಹೊಸ ಅಧ್ಯಕ್ಷರು: ಪಿ. ಚಿದಂಬರಂ

ಮುಂದಿನ ಮೂರು, ನಾಲ್ಕು ತಿಂಗಳೊಳಗೆ ಎಐಸಿಸಿ ಚುನಾವಣೆ ನಡೆಯಲಿದ್ದು. ಆ ಪ್ರಕ್ರಿಯೆ ಪೂರ್ಣಗೊಂಡ ನಂತರ ನೂತನ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

published on : 25th August 2020

ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ, ಕಾರ್ತಿ ವಿರುದ್ಧದ ತನಿಖೆ ಪೂರ್ಣಗೊಳಿಸಲು ಸಿಬಿಐ, ಇಡಿಗೆ 3 ತಿಂಗಳ ಗಡುವು

ಮಾಜಿ ಕೇಂದ್ರ ಸಚಿವ ಚಿದಂಬರಂ, ಕಾರ್ತಿ ಚಿದಂಬರಂ ವಿರುದ್ಧದ ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ದೆಹಲಿ ಕೋರ್ಟ್ ಸಿಬಿಐ, ಇಡಿಗೆ 3 ತಿಂಗಳ ಕಾಲಾವಕಾಶ ನೀಡಿದೆ. 

published on : 4th August 2020

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ'ಗೆ ಕೊರೋನಾ ಪಾಸಿಟಿವ್

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ಕೊರೋನಾ ಪಾಟಿಸಿವ್ ಬಂದಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

published on : 3rd August 2020

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅರ್ಧಸತ್ಯ ಮಾತನಾಡುವುದರಲ್ಲಿ ಎತ್ತಿದ ಕೈ: ಪಿ. ಚಿದಂಬರಂ

2005ರಲ್ಲಿ ಕಾಂಗ್ರೆಸ್ ನೇತೃತ್ವದ ಡಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ 20 ಲಕ್ಷ ರೂಪಾಯಿಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ರಾಜೀವ್ ಗಾಂಧಿ ಫೌಂಡೇಶನ್ ಗೆ ವರ್ಗಾವಣೆ ಮಾಡಲಾಗಿತ್ತು ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಬಿಜೆಪಿ ಆರೋಪದಲ್ಲಿ ಅರ್ಧ ಸತ್ಯವಿದೆ ಎಂದು ಆರೋಪಿಸಿದ್ದಾರೆ.

published on : 27th June 2020
1 2 3 4 5 6 >