social_icon
  • Tag results for China

ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ: ಚರ್ಚೆಯಾಗಲಿರುವ ವಿಷಯಗಳ ಪಟ್ಟಿಯಲ್ಲಿ ವಾಣಿಜ್ಯ ಒಪ್ಪಂದ, ಚೀನಾ

ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಮಾ.20 ರಂದು ಭಾರತಕ್ಕೆ ಆಗಮಿಸಿದ್ದು, ದ್ವಿಪಕ್ಷೀಯ ಸಭೆಯಲ್ಲಿ ವಾಣಿಜ್ಯ, ತಂತ್ರಜ್ಞಾನದ ಒಪ್ಪಂದವನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ಹಾಗೂ ಚೀನಾದಿಂದ ಎದುರಾಗುತ್ತಿರುವ ಆತಂಕಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ.

published on : 20th March 2023

'ಭಾರತದ ನೈತಿಕತೆ ಕುಗ್ಗಿಸಿದ್ದಾರೆ': ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ಟೀಕೆಗೆ ಜೈಶಂಕರ್ ತಿರುಗೇಟು

ಇತ್ತೀಚೆಗಷ್ಟೇ ಬ್ರಿಟನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಚೀನಾದ ಕುರಿತು ಮಾಡಿದ ಟೀಕೆಗಳಿಗಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ಶನಿವಾರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ನಾಯಕ ಭಾರತದ ಬಗ್ಗೆ ತಿರಸ್ಕಾರ ಮಾತನಾಡುತ್ತಿದ್ದು, ಚೀನಾದ ಮೇಲೆ ಜೊಲ್ಲು ಸುರಿಸುತ್ತಿರುವುದನ್ನು ಕಂಡು ಬೇಸರವಾಗಿದೆ ಎಂದಿದ್ದಾರೆ.

published on : 19th March 2023

ಮೆಕ್ ಮಹೊನ್ ರೇಖೆಯೇ ಚೀನಾ-ಅರುಣಾಚಲ ಪ್ರದೇಶದ ನಡುವಿನ ಗಡಿ ರೇಖೆ: ಭಾರತ ಪರ ನಿಂತ ಅಮೆರಿಕಾ

ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಮೆಕ್ ಮಹೊನ್ ರೇಖೆಯೇ ಚೀನಾ ಮತ್ತು ಅರುಣಾಚಲ ಪ್ರದೇಶದ ನಡುವಿನ ಅಂತಾರಾಷ್ಟ್ರೀಯ ಗಡಿ ಎಂದು ಅಮೆರಿಕಾ ಹೇಳಿದೆ.

published on : 15th March 2023

ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಆಪ್ತ ಲಿ ಕಿಯಾಂಗ್ ಚೀನಾದ ನೂತನ ಪ್ರಧಾನಿ!

ಚೀನಾದ ಸಂಸತ್ತು ಇಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಪ್ತ ಲಿ ಕಿಯಾಂಗ್ ಅವರನ್ನು ದೇಶದ ಹೊಸ ಪ್ರಧಾನಿ ಎಂದು ದೃಢಪಡಿಸಿದೆ. ಲಿ ಕಿಯಾಂಗ್ ಕಳೆದ 10 ವರ್ಷಗಳಿಂದ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಮೇಲ್ವಿಚಾರಣೆ ಮಾಡಿದ ಲಿ ಕೆಕಿಯಾಂಗ್ ಅವರ ಉತ್ತರಾಧಿಕಾರಿಯಾಗಿದ್ದಾರೆ.

published on : 11th March 2023

ಚೀನಾದ ನೆರವು: ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಬದ್ಧವೈರಿಗಳಾದ ಇರಾನ್-ಸೌದಿ ಒಪ್ಪಿಗೆ!

ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಬದ್ಧ ವೈರಿಗಳಾದ ಇರಾನ್ ಹಾಗೂ ಸೌದಿ ಅರೇಬಿಯಾ ಒಪ್ಪಿಗೆ ಸೂಚಿಸಿದ್ದು, 7 ವರ್ಷಗಳ ನಂತರ ರಾಯಭಾರ ಕಚೇರಿಗಳನ್ನು ಮತ್ತೆ ತೆರೆಯಲು ಮುಂದಾಗಿವೆ.

published on : 11th March 2023

ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಕ್ಸಿ- ಜಿನ್ ಪಿಂಗ್ ಆಯ್ಕೆ

ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಆಯ್ಕೆಯಾಗಿದ್ದಾರೆ.  ಈ ಮೂಲಕ ದೇಶದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ.

published on : 10th March 2023

ಸೇನಾ ಪಡೆಗಳನ್ನು ತ್ವರಿತವಾಗಿ ಮೇಲ್ದರ್ಜೆಗೇರಿಸಲು ಷಿ ಜಿನ್ಪಿಂಗ್ ಕರೆ

ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ದೇಶದ ಸೇನಾ ಪಡೆಗಳನ್ನು ವಿಶ್ವದರ್ಜೆ ಮಾನದಂಡಗಳಿಗೆ ಮೇಲ್ದರ್ಜೆಗೆ ಏರಿಸಲು ಕರೆ ನೀಡಿದ್ದಾರೆ.  

published on : 10th March 2023

ಭಾರತ-ಪಾಕಿಸ್ತಾನ, ಭಾರತ-ಚೀನಾ ನಡುವೆ ಸಶಸ್ತ್ರ ಸಂಘರ್ಷ; ಯುಎಸ್ ಇಂಟೆಲ್ ಆತಂಕ: ವರದಿ

ಭಾರತ - ಪಾಕಿಸ್ತಾನ ಮತ್ತು ಭಾರತ - ಚೀನಾ ನಡುವಿನ ಸಂಭಾವ್ಯ ಸಂಘರ್ಘದೊಂದಿಗೆ  ಉದ್ವೀಗ್ನತೆ ಹೆಚ್ಚುವ ಆತಂಕವಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಇಂಟೆಲ್ ಬುಧವಾರ ತನ್ನ ಜನಪ್ರತಿನಿಧಿಗಳಿಗೆ ಹೇಳಿದೆ. 

published on : 9th March 2023

ಐಎಂಎಫ್ ನಿಂದ 2.9 ಬಿಲಿಯನ್ ಡಾಲರ್ ಬೇಲ್ ಔಟ್ ಪ್ಯಾಕೇಜ್; ಚೀನಾ ಭರವಸೆ, ಶ್ರೀಲಂಕಾ ಸುರಕ್ಷಿತ!

ಶ್ರೀಲಂಕಾದ ಸಾಲ ಪುನ ರಚನೆ ಬೆಂಬಲಿಸುವುದಾಗಿ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿರುವ ದೇಶಕ್ಕೆ ಐಎಂಎಫ್ ನಿಂದ ಅಗತ್ಯವಿರುವ 2.9 ಬಿಲಿಯನ್ ಡಾಲರ್ ಬೇಲ್ ಔಟ್ (ಹಣಕಾಸಿನ ಬೆಂಬಲ) ಪ್ಯಾಕೇಜ್  ಪಡೆಯಲು ಇದ್ದ ದೊಡ್ಡ ಅಡಚಣೆಯನ್ನು ತೆರವುಗೊಳಿಸುವುದಾಗಿ ಚೀನಾ ಭರವಸೆ ನೀಡಿದೆ ಎಂದು ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮಂಗಳವಾರ ಹೇಳಿದ್ದಾರೆ.

published on : 7th March 2023

ಸಾಲದ ಆ್ಯಪ್ ಕಂಪನಿಗಳ ಮೇಲಿನ ಇಡಿ ತನಿಖೆ ಸ್ಥಗಿತಗೊಳಿಸಲಾಗದು: ಹೈಕೋರ್ಟ್

ಚೀನಾದ ಸಂಸ್ಥೆಗಳು ನಡೆಸುತ್ತಿರುವ ಮೊಬೈಲ್ ಲೋನ್ ಆ್ಯಪ್‌ಗಳ ಕಿರುಕುಳ ತಾಳಲಾರದೆ ಹಲವಾರು ಜನರು ಆತ್ಮಹತ್ಯೆಗೆ ಶರಣಾಗಿದ್ದು, ಜನರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಕೇರಳ ಮೂಲದ ಇಂಡಿಟ್ರೇಡ್ ಫಿನ್‌ಕಾರ್ಪ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ತಿರಸ್ಕರಿಸಿದೆ.

published on : 2nd March 2023

ಸೇನೆಯಿಂದ ಚೀನಾ, ಪಾಕ್ ಗಡಿ ಭಾಗಗಳಿಗೆ 307 ಹೊವಿಟ್ಜರ್ ಗಳ ಖರೀದಿ

ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾದತ್ತ ದೃಢವಾದ ಹೆಜ್ಜೆ ಇರಿಸಲು ಚೀನಾ, ಪಾಕಿಸ್ತಾನ ಗಡಿಗಳಿಗೆ ನಿಯೋಜಿಸಲು ರಕ್ಷಣಾ ಸಚಿವಾಲಯ ಭಾರತೀಯ ಸೇನೆಯಿಂದ 307 ಅತ್ಯಾಧುನಿಕ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ಸ್ ಗಳ ಖರೀದಿಗೆ ಪ್ರಸ್ತಾವನೆ ಬಂದಿದೆ

published on : 1st March 2023

ನವದೆಹಲಿ: ಜಿ-20 ಸಭೆಯಲ್ಲಿ ಚೀನಾ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಭಾಗಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಚೀನಾ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಭಾಗವಹಿಸಲಿದ್ದಾರೆ.

published on : 28th February 2023

ಚೀನಾ, ರಷ್ಯಾದಿಂದ 2 ಪ್ಯಾರಾಗಳ ಬದಲಾವಣೆ; ಜಿ-20ಯಿಂದ ಇಲ್ಲ ಜಂಟಿ ಹೇಳಿಕೆ

ಬೆಂಗಳೂರಿನಲ್ಲಿ ಶನಿವಾರ ಮುಕ್ತಾಯಗೊಂಡ ಜಿ-20 ಆರ್ಥಿಕ ಸಚಿವರ ಸಭೆಯ ಫಲಿತಾಂಶದ ಸಾರಾಂಶವನ್ನು  ಭಾರತ ಪ್ರಕಟಿಸಿದೆ. ಆದರೆ ಸಭೆಯ ಬಳಿಕ ಜಂಟಿ ಹೇಳಿಕೆ ಬಿಡುಗಡೆ ಮಾಡಿಲ್ಲ.

published on : 26th February 2023

ರಷ್ಯಾ- ಉಕ್ರೇನ್ ಕದನ ವಿರಾಮಕ್ಕೆ, ಶಾಂತಿ ಮಾತುಕತೆಗೆ ಚೀನಾ ಕರೆ, ಅಣ್ವಸ್ತ್ರ ಬಳಕೆ ವಿರುದ್ಧ ಎಚ್ಚರಿಕೆ

ರಷ್ಯಾ- ಉಕ್ರೇನ್ ಕದನ ವಿರಾಮಕ್ಕೆ, ಶಾಂತಿ ಮಾತುಕತೆಗೆ ಚೀನಾ ಕರೆ ನೀಡಿದೆ.

published on : 24th February 2023

ಚೀನಾದ ಎಫ್‌ಡಿಐ ಹೆಚ್ಚಾದಂತೆ ಇ-ಫಾರ್ಮಾ ಮೇಲೆ ಸರ್ಕಾರ ಕಣ್ಣು; ಔಷಧಗಳ ಆನ್‌ಲೈನ್ ಮಾರಾಟ ನಿಷೇಧಕ್ಕೆ ಚಿಂತನೆ

ಚೀನಾ ಮತ್ತು ಭಾರತದ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ, ನೆರೆಯ ದೇಶವು 20,000 ಕೋಟಿ ರೂಪಾಯಿಗಳಷ್ಟು ನೇರ ಬಂಡವಾಳ ಹೂಡಿಕೆಯನ್ನು ಹೊಂದಿರುವುದರಿಂದ, ಆನ್‌ಲೈನ್ ಔಷಧಗಳ ಮಾರಾಟವನ್ನು ನಿಷೇಧಿಸುವ ವಿಚಾರದಲ್ಲಿ ಸರ್ಕಾರವು ದೃಢವಾಗಿ ನಿಂತಿದೆ ಎಂದು ಗೌಪ್ಯ ಸರ್ಕಾರಿ ಮೂಲಗಳು ತಿಳಿಸಿವೆ. 

published on : 24th February 2023
1 2 3 4 5 6 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9