- Tag results for Congress government
![]() | ಆದೇಶ ಧಿಕ್ಕರಿಸಿ ತಮಿಳುನಾಡಿಗೆ ನೀರು ಬಿಡದಿದ್ದರೆ ರಾಜ್ಯ ಸರ್ಕಾರದ ವಿಸರ್ಜನೆಗೂ ಕಾರಣವಾಗಬಹುದು: ಸಿಎಂ ಸಿದ್ದರಾಮಯ್ಯತಮಿಳುನಾಡಿಗೆ ನೀರು ಬಿಡಬಾರದು ಎಂಬ ರೈತರ ಅಭಿಪ್ರಾಯವನ್ನು ರಾಜ್ಯ ಸರ್ಕಾರ ಒಪ್ಪುತ್ತದೆ, ಆದರೆ ಅದು ನ್ಯಾಯಾಂಗ ನಿಂದನೆ ಮತ್ತು ಸರ್ಕಾರವನ್ನು ವಜಾಗೊಳಿಸುವುದಕ್ಕೆ ಕಾರಣವಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. |
![]() | ಬೆಂಗಳೂರು ಬಂದ್‌ನಿಂದಾಗಿ ಅಂದಾಜು 1,500 ರಿಂದ 2,000 ಕೋಟಿ ರೂ. ನಷ್ಟ; ಕರ್ನಾಟಕ ಬಂದ್‌ಗೆ ಅನುಮತಿಯಿಲ್ಲ- ಪರಮೇಶ್ವರಸೆಪ್ಟೆಂಬರ್ 29ರಂದು ಪ್ರತಿಭಟನೆಗೆ ಮಾತ್ರ ಅವಕಾಶವಿದೆ. ಯಾರಾದರೂ ಬಂದ್ ಆಚರಿಸುವಂತೆ ಬಲವಂತ ಮಾಡಿದರೆ, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಗುರುವಾರ ಹೇಳಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. |
![]() | ತಮ್ಮ ವೈಯಕ್ತಿಕ ಸ್ನೇಹ ಕಾಪಾಡಿಕೊಳ್ಳಲು, ರಾಜ್ಯದ ಜನತೆಗೆ ಕಾಂಗ್ರೆಸ್ ದ್ರೋಹ: ಬಿಜೆಪಿ ಆರೋಪರಾಜಕೀಯ ಮಿತ್ರರನ್ನು ಮೆಚ್ಚಿಸಲು, I.N.D.I. ಮೈತ್ರಿಕೂಟದ ಪಾಲುದಾರ ಸ್ಟಾಲಿನ್‌ರನ್ನು ಓಲೈಸಲು ಜನರು ನೀಡಿದ ಅಧಿಕಾರವನ್ನು ಬಳಸಬೇಡಿ ಜನರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ, ಸರ್ಕಾರ ಅವರ ಭಾವನೆಗಳನ್ನು ಆಲಿಸುವುದು ಬಿಟ್ಟು ಪೊಲೀಸ್ ಬಲದ ಮೂಲಕ ಹತ್ತಿಕ್ಕುತ್ತಿರುವುದು ಖಂಡನೀಯ ಎಂದಿದೆ. |
![]() | ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ: ಇದು ಸಾರಾಯಿ ಗ್ಯಾರಂಟಿ ಸರ್ಕಾರ ಎಂದು ಬಸವರಾಜ ಬೊಮ್ಮಾಯಿ ಕಿಡಿಸದ್ಯ ರಾಜ್ಯದಲ್ಲಿ ಬರಗಾಲವಿದ್ದು, ನೀರು ಕೊಡಲು ವಿಫಲವಾಗಿದ್ದರೂ ಎಲ್ಲೆಂದರಲ್ಲಿ ಮದ್ಯ ಸಿಗುವಂತೆ ಸಿದ್ಧತೆ ನಡೆಸುತ್ತಿರುವ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ 'ಮದ್ಯದ ಗ್ಯಾರಂಟಿ ಸರ್ಕಾರ' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. |
![]() | ಸರ್ವಜನಾಂಗದ ಶಾಂತಿಯ ತೋಟ ಈಗ ಕುಡುಕರ ತೋಟ: ಮನೆಮನೆಗೂ 'ಮದ್ಯಭಾಗ್ಯ' ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿಕರ್ನಾಟಕ ರಾಜ್ಯವು ವಿಜ್ಞಾನ, ತಂತ್ರಜ್ಞಾನ, ಆವಿಷ್ಕಾರ ಐಟಿ-ಬಿಟಿಗೆ ಪ್ರಸಿದ್ಧಿ. ಇನ್ನು ಮುಂದೆ ಇದು ಬದಲಾಗಬಹುದು. ಕಾರಣವಿಷ್ಟೇ, ಕಾಂಗ್ರೆಸ್ ಸರಕಾರ 'ಕರ್ನಾಟಕವನ್ನು ಕುಡುಕರ ತೋಟ'ವನ್ನಾಗಿ ಮಾಡಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. |
![]() | ತನ್ನ ವೈಫಲ್ಯ ಮುಚ್ಚಿಹಾಕಲು ಕಾಂಗ್ರೆಸ್ ಕಾವೇರಿ ವಿವಾದವನ್ನು ರಾಜಕೀಯಗೊಳಿಸುತ್ತಿದೆ, ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಲಿ: ಬೊಮ್ಮಾಯಿಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಕರ್ನಾಟಕದ ಹಿತಾಸಕ್ತಿ ಕಡೆಗಣಿಸಿದರೆ ಮಠಾಧೀಶರು, ರೈತರು, ಬೆಂಗಳೂರಿನ ನಾಗರಿಕರು ದಂಗೆ ಏಳಲಿದ್ದಾರೆ ಎಂದು ಮಾಜಿ ಸಿಎಂ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. |
![]() | ರಾಜ್ಯದಲ್ಲಿರುವುದು ಸ್ಟಾಲಿನ್ ಅವರ ಗುಲಾಮ ಸರ್ಕಾರ: ಬಿಜೆಪಿ ವಾಗ್ದಾಳಿಕನ್ನಡಿಗರ ಪೌರುಷ, ಕನ್ನಡಿಗರ ಸಾಹಸ, ಕನ್ನಡಿಗರ ಸ್ವಾಭಿಮಾನ, ಕನ್ನಡದ ಆಸ್ಮಿತೆಯನ್ನು ಕಾಂಗ್ರೆಸ್ ಕೇವಲ ರಾಜಕೀಯ ಅಸ್ತ್ರವಾಗಿಸಿಕೊಂಡು ಕಿವಿ ಮೇಲೆ ಹೂವಿಟ್ಟು ಅಣಕಿಸುತ್ತಿದೆ. |
![]() | ಕಾವೇರಿ ಸಮಸ್ಯೆಗೆ ಡಿಎಂಕೆ-ಕಾಂಗ್ರೆಸ್ ಹೊಂದಾಣಿಕೆ ಕಾರಣ; ಕೋರ್ಟ್ ಮುಂದೆ ಸಮರ್ಪಕ ವಾದ ಮಂಡಿಸಲು ಸರ್ಕಾರ ವಿಫಲ: ಬಿಎಸ್ ಯಡಿಯೂರಪ್ಪರಾಜ್ಯ ಸರ್ಕಾರ ಸಮರ್ಪಕ ವಾದ ಮಾಡದೆ ಇದ್ದುದರಿಂದ, ವಾಸ್ತವಿಕ ಸ್ಥಿತಿಯನ್ನು ಸಮರ್ಥವಾಗಿ ಮನದಟ್ಟು ಮಾಡಿಕೊಡಲು ವಿಫಲವಾಗಿದ್ದರಿಂದ ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. |
![]() | ಸಂಕಷ್ಟ ಸೂತ್ರವೇ ಇಲ್ಲ ಎಂದ ಮೇಲೆ ನೀರು ಬಿಟ್ಟಿದ್ದೇಕೆ? ನಿಯಂತ್ರಣ ಸಮಿತಿಯವರು ದೇವಲೋಕದಿಂದ ಇಳಿದು ಬಂದಿದ್ದಾರೆಯೇ? ಎಚ್.ಡಿಕೆಕಾವೇರಿ ನೀರು ಹಂಚಿಕೆಯ ಬಗ್ಗೆ ಸಂಕಷ್ಟ ಸೂತ್ರವೇ ಇಲ್ಲದಿರುವಾಗ, ನೀರಿಲ್ಲದ ಈ ಹೊತ್ತಿನಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದ್ದು ತಪ್ಪು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. |
![]() | ಕಾಂಗ್ರೆಸ್ ಸರ್ಕಾರಕ್ಕೆ ತಿಂಗಳು ಮೂರು; ಒಳಜಗಳ ನೂರಾರು; ಅನ್ನದಾತನಿಗೆ ಆತ್ಮಹತ್ಯೆ ಗ್ಯಾರಂಟಿ!ಇದು ಯಾರು ಬರೆದ ಕಥೆಯೋ, ನಮಗಾಗಿ ಬಂದ ವ್ಯಥೆಯೋ ಎಂಬಂತಾಗಿದೆ ಅನ್ನದಾತರ ಬದುಕು, ರಾಜ್ಯದಲ್ಲಿ ದಿನನಿತ್ಯ ರೈತರು ನೇಣಿನ ಕುಣಿಕೆಗೆ ಕೊರಳಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹರಿಹಾಯ್ದಿದೆ. |
![]() | ಸಮಸ್ಯೆ ಎದುರಾದಾಗ ಬೀದಿಯಲ್ಲಿ ನಿಂತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಸಿಎಂ ಸಿದ್ದರಾಮಯ್ಯ ಬೃಹನ್ನಳೆ ನಾಟಕ!ರಾಜ್ಯದಲ್ಲಿ ನೂರಾರು ಸಮಸ್ಯೆಗಳು ಎದುರಾಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೀದಿಯಲ್ಲಿ ನಿಂತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಬೃಹನ್ನಳೆ ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. |
![]() | ಕಾವೇರಿ ವಿಚಾರದಲ್ಲಿ ಸರ್ಕಾರ ಹೆಜ್ಜೆಹೆಜ್ಜೆಗೂ ಎಡವಿದೆ; ನೀರಿನ ವಿಚಾರದಲ್ಲಿ ಬೆಂಗಳೂರಿಗರ ಮೌನ ಅಚ್ಚರಿ ತಂದಿದೆ: ಎಚ್.ಡಿ.ಕೆನೆರೆ ರಾಜ್ಯಗಳಿಂದ ಬಂದು ಇಲ್ಲಿ ನೆಮ್ಮದಿಯಾಗಿರುವವರು ಕೂಡ ಕಾವೇರಿ ಬಗ್ಗೆ ದನಿ ಎತ್ತಬೇಕು. ಇವರಾರಿಗೂ ಕಾವೇರಿ ನೀರಿನ ಚಿಂತೆಯೇ ಇಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. |
![]() | ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಪತ್ರ ಬರೆದಿದ್ದ ಒಂಬತ್ತನೇ ತರಗತಿ ಬಾಲಕಿ!ಕುಂದಗೋಳ ತಾಲೂಕಿನ ಮಳಲಿ ಗ್ರಾಮದ ಶ್ರೀ ಜಗದ್ಗುರು ಫಕ್ಕೀರೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಆಶಾ ಪಾಟೀಲ ಅವರು ಶನಿವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಲಾಘವ ಮಾಡಿದ್ದು ವಿಶೇಷವಾಗಿತ್ತು. |
![]() | ದೇಶದ್ಯಾಂತ ಮುಂಗಾರು ಕಣ್ಣಮುಚ್ಚಾಲೆ; ಗಗನಕ್ಕೇರುತ್ತಿದೆ ಅಕ್ಕಿ ಬೆಲೆ: ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯಕ್ಕೆ ಕುತ್ತು!ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ತಲಾ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಈಡೇರಿಸಲು ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿದೆ, ಆದರೆ ಈ ಯೋಜನೆಗೆ ಗಂಭೀರ ತೊಡಕು ಎದುರಾಗಿದೆ. |
![]() | ಮಾನವ-ಆನೆ ಸಂಘರ್ಷ ತಡೆಗೆ ಕ್ರಮ ತೆಗೆದುಕೊಳ್ಳಲು ಸರ್ಕಾರ ಬದ್ಧ: ಸಚಿವ ಈಶ್ವರ ಖಂಡ್ರೆರಾಜ್ಯದಲ್ಲಿ ಮಾನವ- ಪ್ರಾಣಿ ಸಂಘರ್ಷವನ್ನು ಎದುರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಹಂತ ಹಂತವಾಗಿ ಈ ಸಂಘರ್ಷವನ್ನು ನಿಭಾಯಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಬುಧವಾರ ಹೇಳಿದ್ದಾರೆ. |