- Tag results for Conversion
![]() | ಧಾರ್ಮಿಕ ಮತಾಂತರ ಗಂಭೀರ ವಿಷಯ: ಸುಪ್ರೀಂ ಕೋರ್ಟ್ಧಾರ್ಮಿಕ ಮತಾಂತರ ಗಂಭೀರವಾದ ವಿಷಯ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಈ ವಿಷಯಕ್ಕೆ ರಾಜಕೀಯ ಬಣ್ಣ ನೀಡಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. |
![]() | ಒತ್ತಾಯ ಪೂರ್ವಕ ಮತಾಂತರ: ಗುಜರಾತ್ ನಲ್ಲಿ ಸಂತಾ ಕ್ಲಾಸ್ ವೇಷಧಾರಿಗೆ ಬಿತ್ತು ಧರ್ಮದೇಟು!ಹೊಸ ವರ್ಷಾಚರಣೆ ವೇಳೆಯಲ್ಲಿ ಗುಜರಾತ್ ನಲ್ಲಿ ಸಂತಾ ಕ್ಲಾಸ್ ವೇಷಧಾರಿಯನ್ನು ಸ್ಥಳೀಯರು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. |
![]() | ಧಾರ್ಮಿಕ ಮತಾಂತರಕ್ಕೆ ಒತ್ತಾಯ, ನಿರಾಕರಿಸಿದ್ದಕ್ಕೆ ತಾಯಿ-ಮಗನ ಮೇಲೆ ಹಲ್ಲೆ: ದೂರು ದಾಖಲುಬೇರೊಂದು ಧರ್ಮಕ್ಕೆ ಮತಾಂತರಗೊಳ್ಳಲು ವಿರೋಧಿಸಿದ್ದಕ್ಕೆ ತಮ್ಮ ಮತ್ತು ಮಗನ ಮೇಲೆ ಹಲ್ಲೆ ನಡೆಸಿರುವುದಾಗಿ 32 ವರ್ಷದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಜಿಗಣಿಯ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. |
![]() | ಬೆಂಗಳೂರು; ಕ್ರೈಸ್ತ ಧರ್ಮಕ್ಕೆ ಮತಾಂತರ ಯತ್ನ ಆರೋಪ; ಆಂಧ್ರ ಪ್ರದೇಶದ ಮೂವರ ವಿರುದ್ಧ FIRಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದ ಮೇರೆಗೆ ಆಂಧ್ರ ಪ್ರದೇಶ ಮೂಲದ ಮೂವರ ವಿರುದ್ಧ ಬೆಂಗಳೂರು ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. |
![]() | ಬಲವಂತದ ಧಾರ್ಮಿಕ ಮತಾಂತರದ ವಿರುದ್ಧದ ಅರ್ಜಿ: ಜನವರಿ 2ರಂದು ಸುಪ್ರೀಂ ಕೋರ್ಟ್ ವಿಚಾರಣೆಮೋಸದ ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡುವಂತೆ ಕೋರಿ ಸಲ್ಲಿಸಲಾದ ಹೊಸ ಅರ್ಜಿಯ ವಿಚಾರಣೆಯನ್ನು ಜ. 2ರಂದು ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ. |
![]() | ವಿಧಾನಸಭೆ: ಭೂಪರಿವರ್ತನೆ ಕಾಲಾವಧಿ ಏಳು ದಿನಗಳಿಗೆ ಇಳಿಕೆ ಮಸೂದೆ ಅಂಗೀಕಾರಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿ ವಿಳಂಬ ತಪ್ಪಿಸುವ ಉದ್ದೇಶದ ಕರ್ನಾಟಕ ಭೂಕಂದಾಯ (2ನೇ ತಿದ್ದುಪಡಿ) ಮಸೂದೆ -2022’ಕ್ಕೆ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರ ನೀಡಲಾಯಿತು. |
![]() | ಬಲವಂತದ ಮತಾಂತರ ಭಾರತದ ಭದ್ರತೆಗೆ ಗಂಭೀರ ಬೆದರಿಕೆ: ಕೇಂದ್ರ ಗೃಹ ಅಮಿತ್ ಶಾಬಲವಂತದ ಮತಾಂತರದ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ ಸಚಿವರು ಇದು ದೇಶದ ಭದ್ರತೆಗೆ ಬೆದರಿಕೆ ಎಂದು ಹೇಳಿದ್ದಾರೆ. |
![]() | ಬಲವಂತದ ಧಾರ್ಮಿಕ ಮತಾಂತರ, ಅಪ್ರಾಪ್ತ ಬಾಲಕಿಯ ಅತ್ಯಾಚಾರ: ಕೊಪ್ಪಳದ ಪಾದ್ರಿಯ ವಿರುದ್ಧ ಎಫ್ ಐ ಆರ್ಬಲವಂತದ ಧಾರ್ಮಿಕ ಮತಾಂತರ ಆರೋಪದ ಮೇಲೆ ಒಂದೇ ಕುಟುಂಬದ ಮೂವರ ವಿರುದ್ಧ ಕೊಪ್ಪಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮೂವರೂ ತಲೆಮರೆಸಿಕೊಂಡಿದ್ದು, ಕೊಪ್ಪಳದ ಕಾರಟಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ |
![]() | ಬೇರೊಂದು ಧರ್ಮಕ್ಕೆ ಮತಾಂತರಗೊಂಡ ಬಳಿಕ ಜಾತಿಯಾಧಾರಿತ ಮೀಸಲಾತಿ ಬಯಸುವಂತಿಲ್ಲ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪುಮತಾಂತರದೊಂದಿಗೆ ಜಾತಿ ಮುಂದುವರಿಯುವುದಿಲ್ಲ ಎಂದು ಹೇಳುವ ಮೂಲಕ ಇಸ್ಲಾಂಗೆ ಮತಾಂತರಗೊಂಡ ಹಿಂದೂ ಯುವಕನ ಹಿಂದುಳಿದ ಕೋಟಾ ಹಕ್ಕನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ. |
![]() | ಪತ್ನಿ ನನ್ನನ್ನು ಮತ್ತು ಪೋಷಕರನ್ನು ಮತಾಂತರಗೊಳ್ಳುವಂತೆ ಬಲವಂತ ಮಾಡುತ್ತಾಳೆ, ಹಿಂಸೆ ಕೊಡುತ್ತಾಳೆ: ಬೆಂಗಳೂರು ಯುವಕನ ಆರೋಪಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ತನಗೆ ಮತ್ತು ತನ್ನ ಹೆತ್ತವರಿಗೆ ಪತ್ನಿ ಒತ್ತಡ ಹಾಕುತ್ತಿದ್ದಾಳೆ ಎಂದು 28ರ ಹರೆಯದ ಯುವಕ ನೀಡಿರುವ ಖಾಸಗಿ ದೂರಿನ ತನಿಖೆ ನಡೆಸುವಂತೆ ಸಿಟಿ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. |
![]() | ಡಿಸೆಂಬರ್ 21ರಿಂದ ಧರ್ಮ ರಕ್ಷಾ ಅಭಿಯಾನ: ವಿಹೆಚ್ ಪಿಯಿಂದ 'ಲವ್ ಜಿಹಾದ್' ಆರೋಪದ ಸುಮಾರು 400 ಕೇಸ್ ಗಳ ಪಟ್ಟಿ ಬಿಡುಗಡೆಕಳೆದ ಕೆಲವು ವರ್ಷಗಳಲ್ಲಿ 420ಕ್ಕೂ ಹೆಚ್ಚು 'ಲವ್ ಜಿಹಾದ್' ಪ್ರಕರಣಗಳು ವರದಿಯಾಗಿರುವುದಾಗಿ ವಿಶ್ವ ಹಿಂದೂ ಪರಿಷತ್ ಜಂಟಿ ರಾಷ್ಟ್ರೀಯ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಆರೋಪಿಸಿದ್ದಾರೆ. |
![]() | ಉತ್ತರಾಖಂಡ ವಿಧಾನಸಭೆಯಲ್ಲಿ ಮತಾಂತರ ನಿಷೇಧ, ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಪೂರಕ ಬಜೆಟ್ ಅಧಿವೇಶನದ ಎರಡನೇ ದಿನವಾದ ಗುರುವಾರ ಉತ್ತರಾಖಂಡ ವಿಧಾನಸಭೆಯಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. |
![]() | ರಾಮನಗರ: ಧಾರ್ಮಿಕ ಮತಾಂತರದ ವಿರುದ್ಧ ದೂರು ಸಲ್ಲಿಸಿದ ಹಿಂದೂ ಜಾಗರಣ ವೇದಿಕೆಹಿಂದೂ ಜಾಗರಣ ವೇದಿಕೆ ಮತ್ತು ಗ್ರಾಮಸ್ಥರು ಬುಧವಾರ ರಾಮನಗರ ಜಿಲ್ಲೆಯ ಫಾರ್ಮ್ ಹೌಸ್ನಲ್ಲಿ ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. |
![]() | ಧಾರ್ಮಿಕ ಸ್ವಾತಂತ್ರ್ಯವೆಂದರೆ ಇತರರನ್ನು ಮತಾಂತರ ಮಾಡುವ ಹಕ್ಕು ಅಲ್ಲ: ಸುಪ್ರೀಂ ಗೆ ಕೇಂದ್ರಧಾರ್ಮಿಕ ಸ್ವಾತಂತ್ರ್ಯವೆಂದರೆ ಇತರರರನ್ನು ಮತಾಂತರ ಮಾಡುವುದಕ್ಕೆ ಇರುವ ಹಕ್ಕು ಅಂತ ಅಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ. |
![]() | ಮಂಗಳೂರು: ಬಲವಂತದ ಮತಾಂತರಕ್ಕೆ ಒತ್ತಾಯ; ಮೂವರ ವಿರುದ್ಧ ಪ್ರಕರಣ ದಾಖಲುಮಂಗಳೂರು ನಗರದಲ್ಲಿ ಹಿಂದೂ ಮಹಿಳೆಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲು ಯತ್ನಿಸಿದ ಆರೋಪದ ಮೇಲೆ ವೈದ್ಯೆ ಸೇರಿದಂತೆ ಮೂವರ ವಿರುದ್ಧ ಇಲ್ಲಿನ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. |