• Tag results for Covid vaccine

ಪರೀಕ್ಷೆಗೂ ಮುನ್ನ ಕೊರೋನಾ ಲಸಿಕೆ ನೀಡಿ: ಸರ್ಕಾರಕ್ಕೆ ಬೆಂಗಳೂರು ವಿದ್ಯಾರ್ಥಿಗಳ ಸಮುದಾಯ ಆಗ್ರಹ

ಪರೀಕ್ಷೆಗಳನ್ನು ನಡೆಸಲು ಸರ್ಕಾರ ಪಟ್ಟುಹಿಡಿದಿದ್ದೇ ಆದರೆ, ಪರೀಕ್ಷೆಗಳಿಗೂ ಮುನ್ನ ವಿದ್ಯಾರ್ಥಿಗಳಿಗೆ ಕೊರೋನಾ ಲಸಿಕೆ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಬೆಂಗಳೂರು ವಿದ್ಯಾರ್ಥಿಗಳ ಸಮುದಾಯ ಆಗ್ರಹಿಸಿದೆ. 

published on : 17th April 2021

ಕೋವಿಡ್ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಕಚ್ಚಾ ವಸ್ತುಗಳ ರಫ್ತು ನಿಷೇಧ ತೆಗೆಯಿರಿ: ಅಮೆರಿಕ ಅಧ್ಯಕ್ಷರಿಗೆ ಆದಾರ್ ಪೂನವಾಲಾ ಆಗ್ರಹ

ಕೋವಿಡ್ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುವಂತೆ ಕಚ್ಚಾ ವಸ್ತುಗಳ ರಫ್ತಿಗೆ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ತೆಗೆದುಹಾಕಬೇಕಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಿಇಒ ಆದಾರ್ ಪೂನವಾಲಾ ಹೇಳಿದ್ದಾರೆ.

published on : 16th April 2021

ಖ್ಯಾತ ತಮಿಳು ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ಖ್ಯಾತ ತಮಿಳು ನಟ ವಿವೇಕ್ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರದಿಗಳ ಅನುಸಾರ ಅವರನ್ನು ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

published on : 16th April 2021

ಕೊರೋನಾ ಉಲ್ಬಣ: 18 ವರ್ಷ ಮೇಲ್ಪಟ್ಟ ಎಲ್ಲರಿಗೆ ಲಸಿಕೆ ಒದಗಿಸಿ; ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್

ದೇಶಾದ್ಯಂತ ಕೊರೋನಾವೈರಸ್ ಪ್ರಕರಣಗಳಲ್ಲಿ ಹಠಾತ್ ಏರಿಕೆ ಕಂಡುಬಂದ ಕಾರಣ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ -19 ಲಸಿಕೆ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)ಯೊಂದು ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದೆ.

published on : 16th April 2021

ಕೋವಿಡ್ ಲಸಿಕೆ ಅಭಿಯಾನಕ್ಕೆ ರಾಯಭಾರಿಯಾಗಿ ನಟ ಸೋನ್ ಸೂದ್‌ರನ್ನು ಘೋಷಿಸಿದ ಸಿಎಂ ಅಮರೀಂದರ್ ಸಿಂಗ್

ಬಾಲಿವುಡ್ ನಟ ಸೋನು ಸೂದ್ ಅವರನ್ನು ರಾಜ್ಯದ ಕೋವಿಡ್ 19 ವ್ಯಾಕ್ಸಿನೇಷನ್ ಡ್ರೈವ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.

published on : 11th April 2021

ಮಹಾರಾಷ್ಟ್ರ 1.10 ಕೋಟಿ ಡೋಸ್ ಲಸಿಕೆ ಪಡೆದಿದೆ, 1100 ವೆಂಟಿಲೇಟರ್‌ಗಳು ಸಹ ಸಿಗಲಿವೆ: ಪ್ರಕಾಶ್ ಜಾವಡೇಕರ್

ಮಹಾರಾಷ್ಟ್ರ ಕೊರೋನಾ ಲಸಿಕೆ ಕೊರತೆ ಎದುರಿಸುತ್ತಿದೆ ಎಂಬ ವರದಿಗಳ ಮಧ್ಯೆಯೇ ರಾಜ್ಯಕ್ಕೆ ಇದುವರೆಗೆ 1.10 ಕೋಟಿ ಡೋಸ್ ಕೊರೋನಾ ಲಸಿಕೆ ಬಂದಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ಹೇಳಿದ್ದಾರೆ.

published on : 10th April 2021

ಕೋವಿಡ್ ಲಸಿಕೆ ದಾಸ್ತಾನು 2 ದಿನದಲ್ಲಿ ಮುಗಿಯಲಿದೆ, ಕನಿಷ್ಠ 30 ಲಕ್ಷ ಡೋಸ್ ಲಸಿಕೆ ನೀಡಿ: ಪ್ರಧಾನಿಗೆ ಅಶೋಕ್ ಗೆಹ್ಲೋಟ್ ಮನವಿ

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಲಸಿಕೆ ದಾಸ್ತಾನು ಮುಂದಿನ ಎರಡು ದಿನಗಳಲ್ಲಿ ಮುಗಿಯಲಿದೆ.

published on : 9th April 2021

ಉತ್ತರ ಪ್ರದೇಶ: 3 ಮಹಿಳೆಯರಿಗೆ ಕೋವಿಡ್ ಬದಲಿಗೆ ಆಂಟಿ ರೇಬೀಸ್ ಲಸಿಕೆ ನೀಡಿಕೆ ಆರೋಪ; ತನಿಖೆಗೆ ಆದೇಶ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಮಹಿಳೆಯರಿಗೆ ಕೋವಿಡ್-19 ಲಸಿಕೆ ಬದಲಿಗೆ ಆಂಟಿ ರೇಬೀಸ್ ಲಸಿಕೆ ನೀಡಲಾಗಿದೆ ಎಂದು ಅವರ ಕುಟುಂಬಗಳು ಆರೋಪಿಸಿದೆ.

published on : 9th April 2021

ಲಸಿಕೆಯ ಮೊದಲ ಡೋಸ್ ಪಡೆದಿದ್ದ ನಟಿ, ರಾಜಕಾರಣಿ ನಗ್ಮಾಗೆ ಕೊರೋನಾ ದೃಢ

ನಟಿ, ರಾಜಕಾರಣಿ ನಗ್ಮಾ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ನಗ್ಮಾ ಕೊರೋನಾ ಪಾಸಿಟಿವ್ ವರದಿ ಪಡೆದಿದ್ದು ಹೋಂ ಕ್ಯಾರೆಂಟೈನ್‌ನಲ್ಲಿದ್ದಾರೆ ಎಂದು ಮೂಲಗಳು ಹೇಳಿದೆ.

published on : 7th April 2021

ಎರಡನೇ ಡೋಸ್ ಲಸಿಕೆ ಪಡೆದು 28 ದಿನಗಳ ನಂತರ ಚಾಮರಾಜನಗರ ಡಿಸಿಗೆ ಕೊರೋನಾ ಸೋಂಕು!

ಕೋವಿಡ್ ಬಗೆಗಿನ ಸಾರ್ವಜನಿಕರಲ್ಲಿರುವ ಗೊಂದಲಗಳ ನಡುವೆ ನಡೆದ ಮತ್ತೊಂದು ಬೆಳವಣಿಗೆಯಲ್ಲಿ ಕೊರೋನಾಗಾಗಿನ ಲಸಿಕೆಯ ಎರಡನೇ ಡೋಸ್ ಪಡೆದು 28 ದಿನಗಳ ನಂತರ, ಚಾಮರಾಜಾಗರ ಜಿಲ್ಲಾಧಿಕಾರಿ ಎಂ.ಆರ್.ರವಿಯವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

published on : 4th April 2021

ಮೊಬೈಲ್ ನಲ್ಲಿ ಮಾತನಾಡುತ್ತಲೇ ಒಂದೇ ಬಾರಿಗೆ ಎರಡು ಡೋಸ್ ಕೊರೋನಾ ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿ!

ಆರೋಗ್ಯ ಕಾರ್ಯಕರ್ತೆಯೊಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಲೇ ಮಹಿಳೆಯೊಬ್ಬರಿಗೆ ಒಂದೇ ಬಾರಿ ಎರಡು ಡೋಸ್ ಕೊರೋನಾ ಲಸಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯ ಅಕ್ಬರ್ಪುರ್ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

published on : 3rd April 2021

ಬ್ರಿಟನ್: ಆಸ್ಟ್ರಾಜೆನೆಕಾ ಲಸಿಕೆ ಪಡೆದಿದ್ದ 7 ಮಂದಿ ರಕ್ತ ಹೆಪ್ಪುಗಟ್ಟಿ ಸಾವು

ಆಸ್ಟ್ರಾಜೆನೆಕಾ-ಆಕ್ಸ್ ಫರ್ಡ್ ಸಂಸ್ಥೆಗಳು ಜಂಟಿಯಾಗಿ ಸಂಶೋಧಿಸಿರುವ ಕೋವಿಡ್ ಲಸಿಕೆ ಪಡೆದವರ ಪೈಕಿ 7 ಮಂದಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ನ ವೈದ್ಯಕೀಯ ನಿಯಂತ್ರಕ ಸಂಸ್ಥೆ (ಎಂಹೆಚ್ ಆರ್ ಎ) ಮಾಹಿತಿ ನೀಡಿದೆ.

published on : 3rd April 2021

ಲಸಿಕೆ ಪಡೆದಿದ್ದ ಮೈಸೂರು ಮೇಯರ್ ಗೆ ಕೊರೋನಾ ಸೋಂಕು!

ಕೊರೋನಾ ಲಸಿಕೆ ಪಡೆದಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯತ್ ರುಕ್ಮಿಣಿ ಮಾದೇಗೌಡ ಅವರಿಗೆ ಸೋಂಕು ದೃಢಪಟ್ಟಿದೆ.

published on : 2nd April 2021

ಕೊರೋನಾ ವೈರಸ್ ವಿರುದ್ಧ ಪ್ರತಿಕಾಯಗಳಿರುವ ಶಿಶುವಿಗೆ ಜನ್ಮ ನೀಡಿದ ಮಹಿಳೆ!

ಮಹಿಳೆಯೊಬ್ಬರು ಗರ್ಭಾವಸ್ಥೆಯಲ್ಲಿದ್ದಾಗಲೇ ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದಿದ್ದು ಅವರೀಗ ಕೊರೋನಾವೈರಸ್ ಗೆ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಮೆರಿಕಾದ ವೈದ್ಯರು ಹೇಳಿದ್ದಾರೆ. 

published on : 18th March 2021

ಕೊರೋನಾ ಲಸಿಕೆ ವ್ಯರ್ಥ ಮಾಡಿದ ರಾಜ್ಯಗಳಿಗೆ ಪ್ರಧಾನಿ ಮೋದಿ ತರಾಟೆ; ತೆಲಂಗಾಣದಲ್ಲಿ ಶೇ.17% ರಷ್ಟು ವ್ಯರ್ಥ

ಕೊರೋನಾ ಲಸಿಕೆ ವ್ಯರ್ಥಮಾಡುತ್ತಿರುವ ರಾಜ್ಯಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವು ರಾಜ್ಯಗಳಲ್ಲಿ ಕೋವಿಡ್ -19 ಲಸಿಕೆ ಮಿತಿಮೀರಿ ವ್ಯರ್ಥವಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದರು.

published on : 17th March 2021
1 2 3 4 5 >