• Tag results for Crime

ಮಂಡ್ಯ: ಹಾಡಹಗಲೇ ನಡು ರಸ್ತೆಯಲ್ಲಿ ಯುವಕನ ಕಗ್ಗೊಲೆ

ನಡು ರಸ್ತೆಯಲ್ಲೇ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ. 

published on : 19th October 2019

ಮೀಟರ್ ಬಡ್ಡಿ ಕಿರುಕುಳ: ಟೀ ಅಂಗಡಿ ಮಾಲೀಕ ಆತ್ಮಹತ್ಯೆಗೆ ಶರಣು

ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಸತ್ತು ಚಹಾ ಅಂಗಡಿ ಮಾಲೀಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಸುಂದರ್ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.

published on : 18th October 2019

3 ವರ್ಷಗಳಲ್ಲಿ 207 ಪ್ರಕರಣ: ಮಂಗಳೂರು ಸೈಬರ್ ಕ್ರೈಮ್ ಬ್ರಾಂಚ್ ಇತ್ಯರ್ಥಗೊಳಿಸಿದ್ದು ಕೇವಲ 6!

ಮಂಗಳೂರು ವಿಭಾಗದ ಸಿಟಿ ಸೈಬರ್ ಕ್ರೈಮ್ ಬ್ರಾಂಚ್ (ಸಿಸಿಸಿಬಿ) ಪ್ರಾರಂಭವಾಗಿ 3 ವರ್ಷಗಳಾಗಿದೆ. ಈ ವರೆಗೆ ಒಟ್ಟಾರೆ 207 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಇತ್ಯರ್ಥಗೊಳಿಸಲು ಸಾಧ್ಯವಾಗಿರುವುದು ಕೇವಲ 6 ಪ್ರಕರಣಗಳನ್ನಷ್ಟೇ!

published on : 17th October 2019

ಮೂತ್ರ ವಿಸರ್ಜನೆಗೂ ಬಿಡದ ಕಾಮುಕರು, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಮಧ್ಯ ಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಬಹಿರ್ದೆಸೆಗೆ ತೆರಳಿದ್ದ ಮಹಿಳೆಯನ್ನು ಎಳೆದೊಯ್ದು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಗೈದಿದ್ದಾರೆ.

published on : 15th October 2019

ಅಪ್ಪ-ಅಮ್ಮನ ಕಿತ್ತಾಟಕ್ಕೆ 5 ತಿಂಗಳ ಹಸುಗೂಸು ಬಲಿ

ತಂದೆ-ತಾಯಿಯ ಜಗಳದಲ್ಲಿ ಏನೂ ಅರಿಯದ ಹಸುಗೂಸೊಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆಯೊಂದು ಪೂರ್ವ ದೆಹಲಿಯ ಕೊಂಡ್ಲಿ ಎಂಬ ಪ್ರದೇಶದಲ್ಲಿ ನಡೆದಿದೆ. 

published on : 10th October 2019

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ದಾಳಿ: ಗಾಂಜಾ, ಚಾಕು, ಕಠಾರಿಗಳು ವಶ

ನಗರದ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ಬುಧವಾರ ಏಕಾಏಕೀ​ ದಾಳಿ ನಡೆಸಿ, 37 ಚಾಕು, ಗಾಂಜಾ ಹಾಗೂ ಗಾಂಜಾ ಸೇದುವ ಪೈಪ್​, ಕತ್ತಿ, ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

published on : 9th October 2019

ಮಹಾರಾಷ್ಟ್ರ: ಬಿಜೆಪಿ ನಾಯಕ ರವೀಂದ್ರ ಖರತ್ ಸೇರಿ ನಾಲ್ವರ ಬರ್ಬರ ಹತ್ಯೆ

ಬಿಜೆಪಿ ಮುಖಂಡ ರವೀಂದ್ರ ಖರತ್ ಹಾಗೂ ಅವರ ಕುಟುಂಬದ ನಾಲ್ವರು ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. 

published on : 7th October 2019

ಗುಜರಾತ್'ನಲ್ಲಿ ಭೀಕರ ಬಸ್ ಅಪಘಾತ: 21 ಸಾವು, 53 ಜನರಿಗೆ ಗಾಯ

ಉತ್ತರ ಗುಜರಾತ್"ನ ಬನಸ್ಕಾಂತ ಜಿಲ್ಲೆಯಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ 21 ಮಂದಿ ಸಾವನ್ನಪ್ಪಿ, 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ. 

published on : 1st October 2019

ಬೆಂಗಳೂರು: ದಾರಿತಪ್ಪಿ ಬೇರೆ ಅಪಾರ್ಟ್‌ಮೆಂಟ್‌ಗೆ ನುಗ್ಗಲು ಯತ್ನಿಸಿದ ವ್ಯಕ್ತಿ, ದರೋಡೆ ಪ್ರಕರಣ ದಾಖಲು

ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ತನ್ನ ಸೋದರಿಯ ಅಪಾರ್ಟ್‌ಮೆಂಟ್‌ಗೆ ತೆರಳುವ ಬದಲು ಆಕಸ್ಮಿಕವಾಗಿ ಪಕ್ಕದ ಅಪಾರ್ಟ್‌ಮೆಂಟ್‌ಗೆ ಹೋಗಿರುವುದಲ್ಲದೆ ಅಲ್ಲಿನ ಸೆಕ್ಯುರಿಟಿ ಗಾರ್ಡ್‌ ಗಳೊಡನೆ ವಾವ್ಗಾದ ನಡೆಸಿ ಹಲ್ಲೆ ಮಾಡಿದ್ದು. ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಕಾರನ್ನು ಸಹ ಜಖಂ ಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

published on : 30th September 2019

ತನ್ನನ್ನು ಬಿಟ್ಟು ಮತ್ತೊಬ್ಬಳ ಜೊತೆ ಚಕ್ಕಂದವಾಡುತ್ತಿದ್ದ ಪತಿಗೆ ಒನಕೆಯಿಂದ ಹೊಡೆದು ಬರ್ಬರ ಹತ್ಯೆ!

ಮದುವೆಯಾಗಿ ಮಗುವಾದ ನಂತರ ಮತ್ತೊಬ್ಬಳ ಜೊತೆ ಚಕ್ಕಂದವಾಡುತ್ತಿದ್ದ ಪತಿಯ ವರ್ತನೆಯಿಂದ ರೋಸಿ ಹೋದ ಪತ್ನಿಯೊರ್ವಳು ಒನಕೆಯಿಂದ ಆತನ ತಲೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

published on : 30th September 2019

ಬೆಂಗಳೂರು: ಎಟಿಎಂಗೆ ತುಂಬಿಸಬೇಕಾಗಿದ್ದ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಯ ಬಂಧನ  

ಕಮ್ಮನಹಳ್ಳಿ ಮುಖ್ಯರಸ್ತೆಯ ಐಸಿಐಸಿಐ ಬ್ಯಾಂಕ್‌ನ ಎಟಿಎಂಗೆ ಹಣ ತುಂಬಿಸುತ್ತಿದ್ದಾಗ ಹಣ ತಂದಿದ್ದ ಕಸ್ಟೋಡಿಯನ್ ವಾಹನದೊಂದಿಗೆ ಪರಾರಿಯಾಗಿದ್ದ ಚಾಲಕ ಪವನ್‌ ಎಂಬಾತನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

published on : 29th September 2019

ಬೆಂಗಳೂರು: ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿದ್ದವನಿಗೆ ಗೂಸಾ

ಯುವತಿ ಜೊತೆಗಿನ ಖಾಸಗಿ ದೃಶ್ಯವನ್ನು ಸೆರೆಹಿಡಿದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಯುವಕನಿಗೆ ಗೂಸಾ ನೀಡಿರುವ ಘಟನೆ ನಗರದ ರಾಮಮೂರ್ತಿನಗರದಲ್ಲಿ ಶನಿವಾರ ನಡೆದಿದೆ.

published on : 28th September 2019

ನೋಂದಣಿ ಇಲ್ಲದೆ ಕಾರು ಚಾಲನೆ: ಇಬ್ಬರ ಬಂಧನ

ನೋಂದಣಿ ಇಲ್ಲದೆ ರಸ್ತೆಯಲ್ಲಿ ಕಾರು ಚಾಲನೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಹೆಣ್ಣೂರು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 

published on : 27th September 2019

ಮಂಗಳೂರಿನಲ್ಲಿ ದರೋಡೆ: 2 ಆಫ್ಘನ್ ಪ್ರಜೆಗಳು ಸೇರಿ ಮೂವರ ಬಂಧನ

ಮಂಗಳೂರಿನ ಭವಂತಿ ಸ್ಟ್ರೀಟ್'ನ ಅರುಣ್ ಜ್ಯುವೆಲ್ಲರಿ ಸ್ಟೋರ್ಸ್ ನಲ್ಲಿ ಸೆ.2ರ ತಡರಾತ್ರಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಫ್ಘಾನಿಸ್ತಾನದ ಇಬ್ಬರು ಪ್ರಜೆಗಳು ಸೇರಿ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 

published on : 27th September 2019

ಉದ್ಯಮಿ ಕೊಲೆಗೆ ಪ್ರೇಯಸಿ ಯತ್ನ; ದೂರು ದಾಖಲು

ಆಸ್ತಿಗಾಗಿ ಪ್ರೇಯಸಿಯೊಬ್ಬಳು ತನ್ನ ಪ್ರಿಯತಮನನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಗರದ ನೈಸ್ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

published on : 24th September 2019
1 2 3 4 5 6 >