• Tag results for Curb

ಕೋವಿಡ್-19 ನಿಯಂತ್ರಣ ಮಾರ್ಗಸೂಚಿ, ನಿರ್ಬಂಧಗಳು ತಿಂಗಳಾಂತ್ಯದವರೆಗೂ ವಿಸ್ತರಣೆ: ಸಿಎಂ ಸಭೆಯ ಮುಖ್ಯಾಂಶಗಳು ಇಂತಿವೆ...

ರಾಜ್ಯದಲ್ಲಿ ಕೋವಿಡ್-19 ಸೋಂಕು ಏರಿಕೆಯ ಹಿನ್ನೆಲೆಯಲ್ಲಿ ಸ್ಥಿತಿ ಗತಿ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಗಳ ಸಭೆ ನಡೆದಿದ್ದು ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. 

published on : 11th January 2022

ಕೋವಿಡ್ ನಿರ್ಬಂಧಕ್ಕೆ ಸಚಿವರಿಂದಲೇ ವಿರೋಧ: ಜ.15ರ ಬಳಿಕ ಮರು ಪರಿಶೀಲನೆಗೆ ಸರ್ಕಾರ ನಿರ್ಧಾರ

ಹಲವು ಸಚಿವರು ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಜನವರಿ 19ರವರೆಗೆ ವಿಧಿಸಲಾಗಿರುವ ಕೋವಿಡ್‌ ನಿರ್ಬಂಧಗಳನ್ನು ಜನವರಿ 15ರ ಬಳಿಕ ಮರು ಪರಿಶೀಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

published on : 7th January 2022

ಓಮಿಕ್ರಾನ್ ಸೋಂಕು ತಡೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ; ವಿವರ ಹೀಗಿದೆ...

ದಕ್ಷಿಣ ಆಫ್ರಿಕಾದಿಂದ ಬಂದಿದ್ದವರ ಪೈಕಿ ಇಬ್ಬರಿಗೆ ಓಮಿಕ್ರಾನ್ ಕೊರೋನಾ ರೂಪಾಂತರಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ರಾಜ್ಯ ಸರ್ಕಾರ ಡಿ.03 ರಂದು ನಿರ್ದಿಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. 

published on : 3rd December 2021

ತಜ್ಞರ ಜೊತೆ ಸಮಾಲೋಚಿಸಿ ಶೀಘ್ರವೇ ಕೋವಿಡ್ ನಿಯಮ ಸರಳೀಕರಣ, ಪ್ರಾಥಮಿಕ ಶಾಲಾರಂಭ ಕುರಿತು ನಿರ್ಧಾರ: ಸಿಎಂ ಬೊಮ್ಮಾಯಿ

ಕೋವಿಡ್‌ ಸೋಂಕು ನಿಯಂತ್ರಣದಲ್ಲಿ ಇರುವುದರಿಂದ ಶೀಘ್ರದಲ್ಲಿಯೇ ಕೋವಿಡ್‌ ನಿಯಮಗಳನ್ನು ಸರಳಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

published on : 16th October 2021

ಕರ್ನಾಟಕದ ಹೊಸ ಕೋವಿಡ್ ನಿರ್ಬಂಧಗಳು ಕೇಂದ್ರ ಮಾರ್ಗಸೂಚಿಗಳ ಉಲ್ಲಂಘನೆ: ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್

ಅಂತರ್ ರಾಜ್ಯ ಪ್ರಯಾಣಿಕರಿಗೆ ಕರ್ನಾಟಕ ಸರ್ಕಾರದ ಹೊಸ ನಿಯಮಾವಳಿಗಳು ಮತ್ತು  ಗಡಿ ರಸ್ತೆಗಳ ನಿರ್ಬಂಧ ಕೇಂದ್ರ ಸರ್ಕಾರ ಮಾರ್ಗಸೂಚಿಗಳ ಉಲ್ಲಂಘನೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಗುರುವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ.

published on : 6th August 2021

ಶೇ.10 ರಷ್ಟು ಕೋವಿಡ್ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಪರಿಗಣಿಸಿ: ಕೇಂದ್ರ

ಭಾರತದ 46 ಜಿಲ್ಲೆಗಳಲ್ಲಿ ಕೋವಿಡ್-19 ಪರೀಕ್ಷೆ ಪಾಸಿಟಿವಿಟಿ ದರ ಶೇ.10 ರಷ್ಟಿದ್ದು, ಈ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ವಿಧಿಸುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

published on : 31st July 2021

ಬಕ್ರೀದ್ ಗೆ ಕೋವಿಡ್ ನಿರ್ಬಂಧಗಳ ಸಡಿಲಿಕೆ ಏಕೆ? ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ಬಕ್ರೀದ್ ಆಚರಣೆಗಳಿಗೆ ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಿರುವುದು ಏಕೆ ಎಂದು ವಿವರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇರಳ ಸರ್ಕಾರವನ್ನು ಕೇಳಿದೆ.

published on : 19th July 2021

ಕೆಲ ನಿರ್ಬಂಧಗಳೊಂದಿಗೆ ನಗರದಲ್ಲಿ ಬಸ್, ಮೆಟ್ರೋ ಸಂಚಾರ ಆರಂಭಕ್ಕೆ ಚಿಂತನೆ: ಬಿಬಿಎಂಪಿ

ಎರಡನೇ ಹಂತದ ಅನ್'ಲಾಕ್ ನಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ಸಲುವಾಗಿ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ರೈಲು ಸಂಚಾರವನ್ನು ಆರಂಭಿಸಲು ಹಾಗೂ ಧಾರ್ಮಿಕ ಕ್ಷೇತ್ರಗಳ ತೆರೆಯಲು ಚಿಂತನೆಗಳು ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.

published on : 17th June 2021

ಕೋವಿಡ್ ನಿರ್ಬಂಧ ಉಲ್ಲಂಘನೆ ಆರೋಪ: ಮುಂಬೈ ಕಾಂಗ್ರೆಸ್ ಅಧ್ಯಕ್ಷ ವಿರುದ್ಧ ಎಫ್ಐಆರ್ ದಾಖಲು!

ಕೋವಿಡ್-19 ಸಾಂಕ್ರಾಮಿ ನಿಯಮಗಳನ್ನು ಉಲ್ಲಂಘಿಸಿ ತೈಲ ಬೆಲೆ ಏರಿಕೆ ವಿರುದ್ಧ ಹೊರವಲಯ ಗುರಂಗಾವ್ ನಲ್ಲಿ ಪ್ರತಿಭಟನೆ ನಡೆಸಿದ ಆರೋಪದ ಮೇರೆಗೆ ಮುಂಬೈ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಅಲಿಯಾಸ್ 'ಭಾಯ್' ಜಗ್ತಾಪ್ ಹಾಗೂ 50 ಪಕ್ಷದ ಕಾರ್ಯಕರ್ತರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

published on : 13th June 2021

ಜೂನ್ 15ರ ವರೆಗೆ ನಿರ್ಬಂಧ ಮುಂದುವರಿಸಿದ ಮಹಾರಾಷ್ಟ್ರ ಸರ್ಕಾರ: ಪಾಸಿಟಿವ್ ದರ, ಆಕ್ಸಿಜನ್ ಬೆಡ್ ಲಭ್ಯತೆ ಆಧಾರದಲ್ಲಿ ಸಡಿಲಿಕೆ 

ಜೂನ್ 15ರವರೆಗೆ ಲಾಕ್ ಡೌನ್ ರೀತಿಯ ನಿರ್ಬಂಧವನ್ನು ವಿಸ್ತರಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.

published on : 31st May 2021

ದೆಹಲಿಯಲ್ಲಿ ಕೆಲ ರಿಯಾಯಿತಿಯೊಂದಿಗೆ ಜೂ.7ರವರೆಗೂ ನಿರ್ಬಂಧ ಮುಂದುವರಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ಲಾಕ್ಡೌನ್ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು  ಕಡಿಮೆಯಾಗದ ಕಾರಣ,  ಕೆಲ ರಿಯಾಯಿತಿಯೊಂದಿಗೆ  ಲಾಕ್ಡೌನ್ ನಿರ್ಬಂಧಗಳು ಬರುವ ಜೂನ್ 7 ವರೆಗೂ  ಮುಂದುವರೆಯಲಿದೆ.

published on : 30th May 2021

ಮೈಸೂರಿನಲ್ಲಿ ತಾಯಿ ಮತ್ತು ಎರಡು ಮರಿ ಚಿರತೆಗಳ ಸಾವು: ವಿಷಪ್ರಾಶನದ ಶಂಕೆ

ತಾಯಿ ಮತ್ತು ಎರಡು ಮರಿ ಚಿರತೆಗಳು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಬೆಮೆಲ್ ನಲ್ಲಿ ಎರಡು ದಿನಗಳ ಹಿಂದೆ ತಿರುಗಾಟ ಮಾಡುತ್ತಿದ್ದ ಕುಟುಂಬಸ್ಥರ ಕೈವಾಡವೇ ಚಿರತೆಗಳ ಸಾವಿನ ಹಿಂದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

published on : 22nd May 2021

ಕೋವಿಡ್-19: ಲಾಕ್ ಡೌನ್ ಸಂಬಂಧ ಏ. 18ರಂದು ಸರ್ವಪಕ್ಷ ಸಭೆ ಕರೆದಿರುವ ಮುಖ್ಯಮಂತ್ರಿ ಯಡಿಯೂರಪ್ಪ

ಕೋವಿಡ್ -19 ಪರಿಸ್ಥಿತಿ ಮತ್ತು ಲಾಕ್‌ಡೌನ್ ಹೇರುವ ಕುರಿತು ಚರ್ಚಿಸಲು ಈ ತಿಂಗಳ 18 ರಂದು ಸರ್ವಪಕ್ಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

published on : 13th April 2021

ಕೋವಿಡ್ -19 ಹೆಚ್ಚಳ: ದೆಹಲಿಯ ಮೆಟ್ರೋ, ಬಸ್ ಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ 

ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಗಮನಿಸುತ್ತಿರುವ ದೆಹಲಿ ಸರ್ಕಾರ, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ನಿರ್ಬಂಧಗಳನ್ನು ಹೆಚ್ಚಿಸಿ ಶನಿವಾರ ಹೊಸ ಆದೇಶವನ್ನು ಪ್ರಕಟಿಸಿದೆ.

published on : 11th April 2021

ರಾಶಿ ಭವಿಷ್ಯ