• Tag results for Dakshina Kannada

ಕೊರೋನಾ ಹೆಚ್ಚಳ: ದಕ್ಷಿಣ ಕನ್ನಡದಲ್ಲಿ ಹೊಸ ನಿರ್ಬಂಧಗಳು, ವಾರಾಂತ್ಯದಲ್ಲಿ ದೇವಾಲಯಗಳು ಬಂದ್

ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಆಗಸ್ಟ್ 15 ರವರೆಗೆ ಜಿಲ್ಲೆಯ ದೇವಸ್ಥಾನಗಳಿಗೆ ಹೊಸ ನಿರ್ಬಂಧಗಳನ್ನು ಜಾರಿ ಮಾಡಿದೆ.

published on : 4th August 2021

ಕೋವಿಡ್-19: ಕರ್ನಾಟಕ-ಕೇರಳ ಗಡಿಯಲ್ಲಿ ನಿರ್ಬಂಧಗಳ ಮುಂದುವರಿಕೆ, ಕೇರಳದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಕೇರಳದಲ್ಲಿ ಕೊರೋನಾ ಸೋಂಕು ಉಲ್ಪಣವಾಗಿರುವುದರಿಂದ ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ಮುಂದುವರೆಸಲಾಗುತ್ತದೆ ಎಂದು ಕರ್ನಾಟಕ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

published on : 3rd August 2021

ರಾಜ್ಯದಲ್ಲಿ ಕೊರೋನಾ ಏರಿಕೆ: ದಕ್ಷಿಣ ಕನ್ನಡದಲ್ಲಿ ನಿನ್ನೆ ಬೆಂಗಳೂರಿಗಿಂತ ಹೆಚ್ಚು ಕೇಸ್ ಪತ್ತೆ

3ನೇ ಅಲೆಯ ಭೀತಿ ನಡುವೆಯೇ ರಾಜ್ಯದಲ್ಲಿ ಕೊರೋನಾ ಏರುಗತಿ ಮುಂದುವರೆದಿದೆ. ರಾಜ್ಯದಲ್ಲಿ ನಿನ್ನೆ 1875 ಹೊಸ ಕೇಸ್'ಗಳು ಪತ್ತೆಯಾಗಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. ಈ ನಡುವೆ ಈ ವರೆಗೆ ಕೋವಿಡ್ ನಲ್ಲಿ ನಂ,1 ಸ್ಥಾನ ಹೊಂದಿದ್ದ ಬೆಂಗಳೂರನ್ನು ದಕ್ಷಿಣ ಕನ್ನಡ ಜಿಲ್ಲೆಯು ದೈನಂದಿನ ಕೇಸಿನಲ್ಲಿ ಹಿಂದಿಕ್ಕಿದೆ.

published on : 2nd August 2021

ಹಾಳಾದ ರಸ್ತೆ: ಅಪಘಾತ ತಡೆಯಲು ರಸ್ತೆ ದುರಸ್ತಿ ಮಾಡಿದ ಆಶಾ ಕಾರ್ಯಕರ್ತೆ

ಮಳೆಯಿಂದಾಗಿ ಹಾಳಾದ ರಸ್ತೆಯಲ್ಲಿ ಅಪಘಾತಗಳನ್ನು ತಡೆಗಟ್ಟುವ ಮತ್ತು ಪ್ರಯಾಣಿಕರಿಗೆ ಸುಲಭ ಪ್ರಯಾಣವನ್ನು ಕಲ್ಪಿಸುವ ಉದ್ದೇಶದಿಂದ, ಆಶಾ ಕಾರ್ಯಕರ್ತೆ ಮತ್ತು ಆಕೆಯ ಪೋಷಕರು ಕಡಬಾ-ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

published on : 30th July 2021

ವಿಧಾನಸಭಾ ಅಧಿವೇಶನದಲ್ಲಿ ಕರಾವಳಿ ಭಾಗದ ಶಾಸಕರಿಗೆ ತುಳು ಬಳಕೆಗೆ ಅವಕಾಶ ನೀಡಿ: ಸ್ಪೀಕರ್'ಗೆ ಶಾಸಕ ರಘುಪತಿ ಭಟ್ ಮನವಿ

ರಾಜ್ಯದಲ್ಲಿ ತುಳುವಿಗೆ ಅಧಿಕೃತ ಮಾನ್ಯತೆ ಸಿಗಬೇಕು. ಈ ನಿಟ್ಟಿನಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಕರಾವಳಿ ಭಾಗದ ಶಾಸಕರಿಗೆ ತುಳುವಿನಲ್ಲೇ ಮಾತನಾಡಲು ಅವಕಾಶ ಕಲ್ಪಿಸುವಂತೆ ಉಡುಪಿ ಶಾಸಕ ರಘುಪತಿ ಭಟ್ ಅವರು ಸ್ಪೀಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. 

published on : 20th July 2021

ದಕ್ಷಿಣ ಕನ್ನಡ: ಬಡತನದ ಕಾರಣದಿಂದ ಆರೈಕೆ ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯ ಮಕ್ಕಳು ಸೇರ್ಪಡೆ

 ದಕ್ಷಿಣ ಕನ್ನಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗವು ಈ ವರ್ಷ ಅತಿಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ 6 ತಿಂಗಳಿನಿಂದ 5 ವರ್ಷದೊಳಗಿನ 47 ಮಕ್ಕಳನ್ನು ಗುರುತಿಸಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಇದ್ದರೂ, ಇದು ಇಲಾಖೆಗೆ ಕಳವಳಕಾರಿಯಾಗಿದೆ.

published on : 19th July 2021

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅವಕಾಶ ಸಿಗದೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಗೆ ಸಚಿವ ಸುರೇಶ್ ಕುಮಾರ್ ಸಹಾಯದ ಭರವಸೆ

ಜುಲೈ 19 ಮತ್ತು ಜುಲೈ 22 ರಂದು ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗದಿರುವ ಬಗ್ಗೆ ಚಿಂತೆಗೀಡಾದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯೊಬ್ಬಳು ಕಳೆದ ರಾತ್ರಿ ಕೊರಟಗೆರೆಯ ಹನುಮಂತಪುರದಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದಾಳೆಂದು ವರದಿಯಾಗಿದೆ.

published on : 17th July 2021

ದಕ್ಷಿಣ ಕನ್ನಡ-ಕೊಡಗಿನಲ್ಲಿ ಜಿಟಿ ಜಿಟಿ ಮಳೆ: ಶೀತ ಗಾಳಿ, ಜನಜೀವನ ಅಸ್ತವ್ಯಸ್ತ; ಹಲವು ಮನೆಗಳಿಗೆ ಹಾನಿ

ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಗುರುವಾರವೂ ಭರ್ಜರಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಡೀ ದಿನ ಸುರಿದ ಧಾರಾಕಾರ ಮಳೆಗೆ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.

published on : 16th July 2021

ದಕ್ಷಿಣ ಕನ್ನಡ: ಸರ್ಕಾರಿ ಆಸ್ಪತ್ರೆಗಳ ತಾತ್ಕಾಲಿಕ ಸೇವೆಗಳ ಹುದ್ದೆ ಭರ್ತಿ ಅರ್ಜಿ ಆಹ್ವಾನಕ್ಕೆ ನೀರಸ ಪ್ರತಿಕ್ರಿಯೆ

ಮಹಾಮಾರಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿದ್ದು, ಈ ನಡುವಲ್ಲೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ತಾತ್ಕಾಲಿಕ ಸೇವೆಗಳ ಹುದ್ದೆ ಭರ್ತಿಗೆ ನೀಡಲಾಗಿದ್ದ ಅರ್ಜಿ ಆಹ್ವಾನಕ್ಕೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. 

published on : 31st May 2021

ಮಂಗಳೂರು: 24 ವರ್ಷದ ಪ್ರೊಬೇಷನರಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಕೋವಿಡ್ ಗೆ ಬಲಿ

24 ವರ್ಷದ ಪ್ರೊಬೇಷನರಿ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ.

published on : 18th May 2021

ಮಿತಿ ಮೀರುತ್ತಿರುವ ಕೋವಿಡ್ ಕೇಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಟೈನ್ ಮೆಂಟ್ ವಲಯಗಳ ಹೆಚ್ಚಳ!

ಕೋವಿಡ್ ಎರಡನೇ ಅಲೆ ರಾಜ್ಯಾದ್ಯಂತ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಟೈನ್ ಮೆಂಟ್ ವಲಯಗಳ ಸಂಖ್ಯೆಯು ಹೆಚ್ಚುತ್ತಿದೆ.

published on : 15th May 2021

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಸರಬರಾಜಿನಲ್ಲಿ ವ್ಯತ್ಯಯ ಕಂಡು ಬಂದಿರುವುದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆಯನ್ನು ನೀಡಲಾಗುವುದು.

published on : 29th April 2021

ಕೊರೋನಾ ಉಲ್ಬಣ: ದಕ್ಷಿಣ ಕನ್ನಡದಲ್ಲಿ ಸೆಕ್ಷನ್ 144 ಜಾರಿ, ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಆದೇಶ

ಕೊರೋನಾವೈರಸ್ ಎರಡನೇ ಅಲೆ ಪ್ರಭಾವದಿಂದ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಿಲ್ಲೆಯಾದ್ಯಂತ ಸಿಆರ್‌ಪಿಸಿಯ ಸೆಕ್ಷನ್ 144 ಜಾರಿಗೊಳಿಸಿ ಆದೇಶಿಸಿದ್ದಾರೆ. ಅಲ್ಲದೆ ಎಲ್ಲಾ ಧಾರ್ಮಿಕ ಸಮಾರಂಭಗಳಿಗೆ ನಿಷೇಧ ಹೇರಿದ್ದಾರೆ.

published on : 30th March 2021

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ನಾಯಕ ಸದಾನಂದ ಪೂಂಜ ನಿಧನ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ,, ಕಾಂಗ್ರೆಸ್ ಹಿರಿಯ ನಾಯಕ ಸದಾನಂದ ಪೂಂಜ (80) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

published on : 13th March 2021

ಕೊರೋನಾ ಎಫೆಕ್ಟ್: ಕೇರಳ- ದಕ್ಷಿಣ ಕನ್ನಡ ಸಂಚಾರಕ್ಕೆ 5 ರಸ್ತೆಗಳು ಬಿಟ್ಟು ಉಳಿದೆಲ್ಲಾ ಗಡಿ ರಸ್ತೆಗಳು ಬಂದ್

ಕೇರಳದಲ್ಲಿ ಕೊರೋನಾ ಸೋಂಕು ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ-ದಕ್ಷಿಣ ಕನ್ನಡ ಪ್ರಯಾಣಿಕರ ಸಂಚಾರಕ್ಕೆ ಗಡಿಭಾಗದಲ್ಲಿ ಇನ್ನು ಮುಂದೆ 5 ಚೆಕ್ ಪೋಸ್ಟ್ ಗಳಲ್ಲಿ ಮಾತ್ರ ಅವಕಾಶ ಕಲ್ಪಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

published on : 22nd February 2021
1 2 >