• Tag results for Dr Rajkumar

ಕಂಠೀರವ ಸ್ಟುಡಿಯೊದಲ್ಲಿ ಡಾ ರಾಜ್ ಕುಮಾರ್, ಪಾರ್ವತಮ್ಮ, ಪುನೀತ್ ಸಮಾಧಿ ಸ್ಥಳ ಅಭಿವೃದ್ಧಿ: ಕುಟುಂಬ ಸದಸ್ಯರಿಂದ ಸಿಎಂ ಭೇಟಿ

ಕಂಠೀರವ ಸ್ಟೂಡಿಯೋದಲ್ಲಿರುವ ವರನಟ ಡಾ. ರಾಜ್‌ಕುಮಾರ್, ಪಾರ್ವತಮ್ಮ, ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವ ವಿಚಾರವಾಗಿ ಡಾ. ರಾಜ್ ಕುಟುಂಬದ ಸದಸ್ಯರು ಸಿಎಂ ಬಸವರಾಜ ಬೊಮ್ಮಾಯಿ‌ ಅವರನ್ನು  ಬುಧವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

published on : 17th August 2022

ಜನರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಡಾ.ರಾಜ್'ಕುಮಾರ್'ರಿಂದ ಕಲಿತೆ: ನಟ ಕಮಲ್ ಹಾಸನ್

'ವಿಕ್ರಮ್' ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ನಟ ಕಮಲ್ ಹಾಸನ್ ಅವರು ಬೆಂಗಳೂರು ನಗರಕ್ಕೆ ಆಗಮಿಸಿದ್ದು, ಈ ವೇಳೆ ಡಾ.ರಾಜ್ ಕುಮಾರ್ ಅವರನ್ನು ಕೊಂಡಾಡಿದ್ದಾರೆ.

published on : 4th June 2022

ಡಾ.ರಾಜ್, ವಿಷ್ಣುವರ್ಧನ್ ರಂತಹ ದೇವಮಾನವರನ್ನು ಬಾಲಿವುಡ್ ಅವಮಾನಿಸಿತು: 23 ವರ್ಷಗಳ ಹಿಂದಿನ ಘಟನೆ ನೆನಪಿಸಿದ ಮೆಗಾಸ್ಟಾರ್ ಚಿರಂಜೀವಿ

ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಕಿಚ್ಚ ಸುದೀಪ್ ನೀಡಿರುವ ಹೇಳಿಕೆಗೆ ಬಾಲಿವುಡ್ ಸಿಂಗಂ ಅಜಯ್ ದೇವಗನ್ ಪ್ರತಿಕ್ರಿಯೆ ಕೊಟ್ಟ ನಂತರ ದೇಶಾದ್ಯಂತ ಭಾಷಾ ವಿಚಾರ, ಭಾರತೀಯ ಚಿತ್ರೋದ್ಯಮ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. 

published on : 29th April 2022

ಡಾ.ರಾಜ್ ಕುಮಾರ್ 93ನೇ ಜಯಂತಿ, ಕುಟುಂಬಸ್ಥರಿಂದ ಸಮಾಧಿಗೆ ಪೂಜೆ, 

ಕನ್ನಡದ ವರನಟ, ಗಾನ ಗಂಧರ್ವ, ಪದ್ಮ ಭೂಷಣ, ನಟಸಾರ್ವಭೌಮ ಡಾ.ರಾಜ್ ಕುಮಾರ್(Dr Rajkumar) ಅವರ 93ನೇ ಹುಟ್ಟುಹಬ್ಬ ಇಂದು(ಏಪ್ರಿಲ್ 24).

published on : 24th April 2022

ಡಾ ರಾಜ್ ಕುಮಾರ್ 16ನೇ ಪುಣ್ಯತಿಥಿ: ಅಪ್ಪಾಜಿ ತೀರಿಕೊಂಡು 16 ವರ್ಷಗಳಾದರೂ ಅಭಿಮಾನಿಗಳ ಪ್ರೀತಿ, ವಿಶ್ವಾಸ ಜೀವಂತ

ಇಂದು ಮಂಗಳವಾರ (ಏಪ್ರಿಲ್ 12) ಕನ್ನಡದ ವರನಟ, ನಟ ಸಾರ್ವಭೌಮ, ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು ಡಾ ರಾಜ್ ಕುಮಾರ್ (Dr Rajkumar) ಅವರ ಪುಣ್ಯತಿಥಿ. ಕನ್ನಡಿಗರನ್ನು ಅವರು ಅಗಲಿ ಇಂದಿಗೆ 16 ವರ್ಷಗಳಾಗಿವೆ. 

published on : 12th April 2022

ಗಾಜನೂರಿನಲ್ಲಿ ರಾಘವೇಂದ್ರ ರಾಜಕುಮಾರ್ ನಟನೆಯ 'ಖಡಕ್ ಹಳ್ಳಿ ಹುಡುಗರು' ಶೂಟಿಂಗ್!

ರಾಘವೇಂದ್ರ ರಾಜ್​ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ‘ಖಡಕ್​ ಹಳ್ಳಿ ಹುಡುಗರು’ ಸಿನಿಮಾದ ಮುಹೂರ್ತ ಗಾಜನೂರಿನಲ್ಲೇ ನಡೆಯಲಿದೆ.

published on : 10th March 2022

'ಫೋಟೋ ಮ್ಯೂಸಿಯಂ' ಆಗಿ ಬದಲಾಗಲಿದೆ ಗಾಜನೂರಿನ ಡಾ.ರಾಜ್ ಕುಮಾರ್ ಪೂರ್ವಜರ ಮನೆ

ಕನ್ನಡದ ನಟಸಾರ್ವಭೌಮ ದಿವಂಗತ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಇದು ಸಿಹಿಸುದ್ದಿ. ರಾಜ್ ಕುಮಾರ್ ಅವರ ಪೂರ್ವಜರ ಮನೆ ಕರ್ನಾಟಕ-ತಮಿಳು ನಾಡಿನ ಗಡಿಯಲ್ಲಿರುವ ದೊಡ್ಡ ಗಾಜನೂರಿನ ಹಳೆ ಮನೆ ಸದ್ಯದಲ್ಲಿಯೇ ಫೋಟೋ ಸಂಗ್ರಹಾಲಯವಾಗಿ ಬದಲಾಗಲಿದೆ.

published on : 12th December 2021

ಮಿನುಗುವ ನಕ್ಷತ್ರದಂತಿದ್ದ 'ಅಪ್ಪು'ವಿನ ಸುಂದರ ಪಯಣಕ್ಕೆ ಹಠಾತ್ ಕೊನೆ: ಪುನೀತ್ ರಾಜ್ ಕುಮಾರ್ ಅಂತಿಮ ವಿದಾಯ 

ಕನ್ನಡ ಚಿತ್ರರಂಗದ ದಂತಕಥೆಯ ಪುತ್ರ, ಸ್ವತಃ ನಾಯಕ ನಟ. ಪವರ್ ಸ್ಟಾರ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಈ ವ್ಯಕ್ತಿ ವೈಯಕ್ತಿಕ ಖಾಸಗಿ ಬದುಕಿನಲ್ಲಿ ಕೂಡ ಅಷ್ಟೇ ಸೌಮ್ಯ ವಿನಯವಂತ. ಆಗರ್ಭ ಶ್ರೀಮಂತ ಅಷ್ಟೇ ಕೊಡುಗೈ ದಾನಿ. ಇದು ಒಟ್ಟಾರೆಯಾಗಿ ಹೇಳಬಹುದಾದ ಪುನೀತ್ ರಾಜ್ ಕುಮಾರ್ ಪರಿಚಯ. ತೀವ್ರ ಹೃದಯಾಘಾತದಿಂದ 46 ವರ್ಷಕ್ಕೇ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ

published on : 30th October 2021

ಕನ್ನಡಿಗರ ಕಣ್ಮಣಿ 'ಅಪ್ಪು', 'ರಾಜಕುಮಾರ' ಪುನೀತ್ ಇನ್ನಿಲ್ಲ; ತೀವ್ರ ಹೃದಯಾಘಾತದಿಂದ ವಿಧಿವಶ 

ಕನ್ನಡದ ಖ್ಯಾತ ಪ್ರತಿಭಾವಂತ ನಟ ಡಾ. ರಾಜ್ ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ ಶುಕ್ರವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು ಕುಟುಂಬಸ್ಥರು, ಅಸಂಖ್ಯಾತ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.

published on : 29th October 2021

ಡಾ. ರಾಜ್ ಕುಮಾರ್ 92ನೇ ಜಯಂತಿ: ಮಕ್ಕಳಿಂದ ರಾಜ್ ಸ್ಮಾರಕಕ್ಕೆ ಪೂಜೆ, ಮನದುಂಬಿ ಹಾಡಿದ ಪುನೀತ್

ಗಾನ ಗಂಧರ್ವ, ಪದ್ಮ ಭೂಷಣ ವರನಟ ಡಾ ರಾಜ್ ಕುಮಾರ್ ಅವರ 92ನೇ ಜಯಂತಿ ಇಂದು. ಬೆಂಗಳೂರಿನಲ್ಲಿರುವ ಡಾ ರಾಜ್ ಸ್ಮಾರಕಕ್ಕೆ ಇಂದು ಅವರ ಮಕ್ಕಳು, ಕುಟುಂಬಸ್ಥರು ಹೋಗಿ ಕೊರೋನಾ ನಿಯಮದಡಿ ಪೂಜೆ ಸಲ್ಲಿಸಿ ಬಂದಿದ್ದಾರೆ.

published on : 24th April 2021

ರಾಶಿ ಭವಿಷ್ಯ