• Tag results for ED

ಮನೆಗೆಲಸದವರು, ಸಹಾಯಕರು,ವಾಹನ ಚಾಲಕರಿಗೆ ಮಾಲೀಕರು ವೇತನ ಕಡಿತ ಮಾಡಬೇಡಿ:ಬಿ ಎಸ್ ಯಡಿಯೂರಪ್ಪ

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೆಲಸಕ್ಕೆ ಬಾರಲು ಸಾಧ್ಯವಾಗದ ಕಾರ್ಮಿಕರ ವೇತನವನ್ನು ಅವರ ಮಾಲೀಕರು ಸದ್ಯದ ಪರಿಸ್ಥಿತಿಯಲ್ಲಿ ಕಡಿತ ಮಾಡಬಾರದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

published on : 4th April 2020

ಕೋವಿಡ್-19: ಪೌರ ಕಾರ್ಮಿಕರಿಗೆ ಅರಿವು ಎಷ್ಟಿದೆ? ದೊಡ್ಡ ಪ್ರಶ್ನೆಯಾಗಿದೆ!

ರಾಜ್ಯದಲ್ಲಿರುವ ಪೌರ ಕಾರ್ಮಿಕರಿಗೆ ಕೋವಿಡ್-19 ಸೋಂಕಿನ ಬಗ್ಗೆ ಎಷ್ಟು ಅರಿವಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.ರಾಜ್ಯದಲ್ಲಿ ಸುಮಾರು 98000 ಪೌರ ಕಾರ್ಮಿಕರಿದ್ದು, ಪ್ರತಿಯೊಬ್ಬರೂ ಘನತ್ಯಾಜ್ಯ ಸಂಗ್ರಹಿಸುತ್ತಾ ಹತ್ತಾರು ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.  ಇಂತಹವರಿಗೆ ವೈರಸ್ ಹೇಗೆ ಹರಡುತ್ತದೆ ಎಂಬ ಜ್ಞಾನವಿಲ್ಲ.

published on : 4th April 2020

ತಬ್ಲೀಗ್‌ ಜಮಾತ್‌ನಿಂದ ಹಿಂದಿರುಗಿದ ವ್ಯಕ್ತಿ ಸಾವು: ತಮಿಳುನಾಡಿನಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2ಕ್ಕೆ ಏರಿಕೆ

ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ತಮಿಳುನಾಡು ರಾಜ್ಯದಲ್ಲಿ ತಬ್ಲೀಘ್ ಜಮಾತ್‌ನಿಂದ ಹಿಂದಿರುಗಿದ್ದ ವ್ಯಕ್ತಿಯೊಬ್ಬರು ಶನಿವಾರ ಬಲಿಯಾಗಿದ್ದು, ಇದರಂತೆ ದೇಶದಲ್ಲಿ ಕೊರೋನಾ ವೈರಸ್'ಗೆ ಬಲಿಯಾದವರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ. 

published on : 4th April 2020

ಪಡಿತರ ಚೀಟಿ ಇಲ್ಲದವರಿಗೂ ಆಹಾರ ಧಾನ್ಯಗಳ ವಿತರಣೆ: ಸಿಎಂ ಯಡಿಯೂರಪ್ಪ

ಕೊರೋನಾ ವೈರಸ್ ಸೋಂಕಿನ ತಡೆಗೆ ಲಾಕ್ ಡೌನ್ ಆಗಿರುವುದರಿಂದ ಕೂಲಿ ಕಾರ್ಮಿಕರು ಸೇರಿದಂತೆ ಬಡವರಿಗೆ ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗಿದ್ದು ಈ ನಿಟ್ಟಿನಲ್ಲಿ ಜನರು ಹಸಿವಿನಿಂದ ಪರಿತಪಿಸಬಾರದು ಎಂದು ಪಡಿತರ ಚೀಟಿ ಇಲ್ಲದವರಿಗೂ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

published on : 4th April 2020

ಸ್ಪಾಟ್ ಫಿಕ್ಸರ್ ಗಳನ್ನು ಗಲ್ಲಿಗೇರಿಸಬೇಕು: ಜಾವೇದ್‌ ಮಿಯಾಂದಾದ್‌ 

ಕ್ರಿಕೆಟ್‌ ಆಟದಲ್ಲಿ ಮೋಸದಾಟವಾಡಿ ದೇಶಕ್ಕೆ ಕಳಂಕ ತಂದ ಕ್ರಿಕೆಟಿಗರ ವಿರುದ್ಧದ ಆರೋಪ ಸಾಬೀತಾದರೆ ಅವರನ್ನು ಗಲ್ಲಿಗೇರಿಸಬೇಕು ಎಂದು ಪಾಕಿಸ್ತಾನದ ಮಾಜಿ ನಾಯಕ ಜಾವೇದ್‌ ಮಿಯಾಂದಾದ್‌ ಅಭಿಪ್ರಾಯ ಪಟ್ಟಿದ್ದಾರೆ.

published on : 4th April 2020

ಲಾಕ್'ಡೌನ್ ನಡುವೆಯೂ ಕಾರಿನಲ್ಲಿ ಜಾಲಿ ರೈಡ್: ಅಪಘಾತಕ್ಕೀಡಾಗಿ ನಟಿ ಶರ್ಮಿಳಾ ಮಾಂಡ್ರೆಗೆ ಗಾಯ

ಕೊರೋನಾ ಭೀತಿಯಿಂದಾಗಿ ದೇಶವನ್ನೇ ಲಾಕ್ ಡೌನ್ ಮಾಡಿದ್ದರೂ, ಜಾಲಿ ರೈಡ್'ಗೆ ಹೊರಟ ನಟಿ ಶರ್ಮಿಳಾ ಮಾಂಡ್ರೆಯವರ ಕಾರು ಅಪಘಾತಕ್ಕೀಡಾಗಿ, ಗಾಯಗೊಂಡಿರುವ ಘಟನೆ ಶನಿವಾರ ವಸಂತನಗರದಲ್ಲಿ ನಡೆದಿದೆ. 

published on : 4th April 2020

ದೇಶದಲ್ಲಿ ವೈದ್ಯರು ಸೇರಿ ಸುಮಾರು 50 ವೈದ್ಯಕೀಯ ಸಿಬ್ಬಂದಿಗೆ ಕೊವಿಡ್ -19 ಪಾಸಿಟಿವ್

ಮಹಾಮಾರಿ ಕೊರೋನಾ ವೈರಸ್ ದೇಶದಲ್ಲಿ ವೈದ್ಯರನ್ನೂ ಬಿಡದೆ ಕಾಡುತ್ತಿದ್ದು, ಇದುವರೆಗೆ ದೇಶಾದ್ಯಂತ ವೈದ್ಯರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ....

published on : 3rd April 2020

ಕೋವಿಡ್-19: ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗಾಗಿ ಧಾರವಾಡ ಐಐಟಿಯಿಂದ 3ಡಿ ಮುದ್ರಿತ ಫೇಸ್ ಶೀಲ್ಡ್ಸ್ ತಯಾರಿಕೆ

ಕೊರೋನಾವೈರಸ್ ರೋಗಿಗಳು ಹಾಗೂ ಶಂಕಿತರನ್ನು ಆರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗಾಗಿ ಮುಖಕ್ಕೆ ಹಾಕಿಕೊಳ್ಳುವ  ಫೇಸ್ ಶೀಲ್ಡ್ಸ್ ನೊಂದಿಗೆ ಧಾರಾವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ ಮುಂದೆ ಬಂದಿದೆ. ಇದು 500 ಫೇಸ್ ಶಿಲ್ಡ್ ಗಳನ್ನು ತಯಾರಿಸಿದ್ದು,   ಕಿಮ್ಸ್ ಆಸ್ಪತ್ರೆಗೆ ಹಸ್ತಾಂತರಿಸಿದೆ.

published on : 3rd April 2020

ಕೊರೋನಾ ನಿಯಂತ್ರಣ ಕುರಿತು ದಿನವಿಡೀ ಸಭೆ ನಡೆಸಿದ ಸಿಎಂ ಯಡಿಯೂರಪ್ಪ

ರ್ಕಾರ ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್ ಹಾಗೂ ಆರೋಗ್ಯ ಕಿಟ್ ‌ಗಳನ್ನು ಒದಗಿಸುತ್ತಿಲ್ಲ ಎಂಬ ವಿಪಕ್ಷಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಈ ಸಂಬಂಧ....

published on : 3rd April 2020

ಕೊಪ್ಪಳ: ಹಾಲು ತರಲು ಬಂದವನಿಗೆ ಲಾಠಿ ಏಟು, ರೈತನ ಸ್ಥಿತಿ ಚಿಂತಾಜನಕ

ದೇಶಾದ್ಯಂತ ತೀವ್ರ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದ್ದು, ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಸುತ್ತಾಡಬೇಡಿ ಎಂದು ಕೊಪ್ಪಳ ಪೊಲೀಸರು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

published on : 3rd April 2020

ಇಲಿಗಳ ಮೇಲೆ ಕೋವಿಡ್-19 ಲಸಿಕೆ ಪ್ರಯೋಗ: ರೋಗ ನಿರೋಧಕ ಶಕ್ತಿ ಉತ್ಪತ್ತಿ- ವರದಿ

ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ -19 ನಿಯಂತ್ರಣಕ್ಕಾಗಿ ಸಂಶೋಧಕರು ಸಂಶೋಧಿಸಿರುವ ಸಂಭಾವ್ಯ ಲಸಿಕೆಯನ್ನು ಇಲಿಗಳ ಮೇಲೆ  ಪ್ರಯೋಗಿಸಲಾಗಿದೆ. ಕೊರೋನಾವೈರಸ್ ನಿಯಂತ್ರಣಕ್ಕಾಗಿ ಸಾಕಾಗುವಷ್ಟು ರೋಗ ನಿರೋಧಕ ಶಕ್ತಿಯನ್ನು ಈ ಲಸಿಕೆಯಿಂದ  ಉತ್ಪತ್ತಿ ಮಾಡಬಹುದು ಎಂಬುದು ಗೊತ್ತಾಗಿದೆ.

published on : 3rd April 2020

ಮುಸ್ಲಿಂ ಮುಖಂಡರ ಜೊತೆ ಯಡಿಯೂರಪ್ಪ ಸಭೆ: ವೈದ್ಯಕೀಯ ಸಿಬ್ಬಂದಿಗೆ ಸಹಕರಿಸಲು ಮನವಿ

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಲವರಲ್ಲಿ ಕೋವಿಡ್-19 ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಆರೋಗ್ಯ ಪರೀಕ್ಷೆ ಮಾಡಲು ಹೋದ ವೈದ್ಯಕೀಯ ಸಿಬ್ಬಂದಿ ಮೇಲೆ ಗುಂಪಿನ ದಾಳಿ ನಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ರಾಜ್ಯದ ಮುಸ್ಲಿಂ ಮುಖಂಡರು ಹಾಗೂ ಶಾಸಕರೊಂದಿಗೆ ಸಮಾಲೋಚನಾ ಸಭೆ ನಡೆಸಿದರು.

published on : 3rd April 2020

ರಾಯಪುರ: ಲಾಕ್ ಡೌನ್ ವೇಳೆ ಜನಿಸಿದ ಅವಳಿ ನವಜಾತ ಶಿಶುಗಳಿಗೆ ಕೊರೋನಾ-ಕೋವಿಡ್ ಎಂದು ನಾಮಕರಣ

ಹೊಸ ಸಾಂಕ್ರಾಮಿಕ ವೈರಾಣುವಿನಿಂದ ಜಗತ್ತಿನಾದ್ಯಂತ ಮನುಕುಲ ಸಂಕಷ್ಟ ಸಿಲುಕಿ ತೊಳಲಾಡುತ್ತಿರುವಂತೆ  ಛತ್ತೀಸ್ ಗಢದ ದಂಪತಿಯೊಬ್ಬರು ತಮ್ಮ ಅವಳಿ ನವಜಾತ ಶಿಶುಗಳಿಗೆ ಕೊರೋನಾ- ಕೋವಿಡ್ ಎಂದು ನಾಮಕರಣ ಮಾಡಿದ್ದಾರೆ.

published on : 3rd April 2020

ಮಾಧ್ಯಮಗಳನ್ನು ದೂಷಿಸಿ ಸೋಂಕು ವಿರುದ್ಧ ಹೋರಾಡಲು ಸಾಧ್ಯವಿಲ್ಲ: ಸರ್ಕಾರದ ಬಗ್ಗೆ ಸಂಪಾದಕರ ಸಂಘ ತೀವ್ರ ಆಕ್ಷೇಪ

ಮಾಧ್ಯಮಗಳು ವಲಸೆ ಕಾರ್ಮಿಕರಲ್ಲಿ ಆತಂಕ ಉಂಟುಮಾಡಿವೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮಾಧ್ಯಮಗಳನ್ನು ದೂಷಿಸುತ್ತಿರುವುದನ್ನು ಭಾರತ ಸಂಪಾದಕರ ಸಂಘ(ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ತೀವ್ರವಾಗಿ ಆಕ್ಷೇಪಿಸಿದೆ.

published on : 3rd April 2020

ಮಹಾಮಾರಿ ಕೊರೋನಾ ಕೊಲ್ಲಲು ಔಷಧಿ ಸಿದ್ಧ: ಅನುಮತಿಗಾಗಿ ಕೇಂದ್ರ ಆರೋಗ್ಯ ಇಲಾಖೆಗೆ ಪತ್ರ

ಕೊರೋನಾ ವೈರಸ್ ನಾಶಪಡಿಸಲು ಔಷಧಿ ಕಂಡುಹಿಡಿಯುವಲ್ಲಿ ಕರ್ನಾಟಕದ ವೈದ್ಯರ ತಂಡ ಯಶಸ್ವಿಯಾಗಿದ್ದು, ಅದನ್ನು ಪ್ರಯೋಗಾತ್ಮಕವಾಗಿ ಬಳಸುವಂತೆ ರಾಜ್ಯ ಸರ್ಕಾರ ಕೇಂದ್ರದ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದೆ.

published on : 3rd April 2020
1 2 3 4 5 6 >