• Tag results for Exam

ಹಳೆಯ ಮಾದರಿಯಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆ ವಿಧಾನ, ಇನ್ನು ಮುಂದೆ ಬಹು ಆಯ್ಕೆ ಪ್ರಶ್ನೆಗಳು

ಕರ್ನಾಟಕ ಸರ್ಕಾರವು ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಹಿಂದಿನ ಮಾದರಿಗೆ ಮರಳಲಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸರಿಯಾಗಿ ಪಾಠಗಳು ನಡೆಯದಿದ್ದುದರಿಂದ ಕಳೆದ ಎರಡು ವರ್ಷ ಬಹು ಆಯ್ಕೆಯ ಪ್ರಶ್ನೆಗಳನ್ನು ನೀಡಲಾಗಿತ್ತು. (MCQ) 

published on : 25th September 2022

ಬೆಂಗಳೂರು: ಸಿಇಟಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಸಿಇಟಿ ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಉತ್ತಮ ಅಂಕ ಗಳಿಸಲಿಲ್ಲ ಎಂಬ ಕಾರಣಕ್ಕೆ 18 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.

published on : 23rd September 2022

ಸಿಇಟಿ: ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

2020-21ರಲ್ಲಿ ಪಿಯು ತೇರ್ಗಡೆಯಾಗಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಈ ವರ್ಷವೂ ಸಿಇಟಿ ಬರೆದಿರುವ 24 ಸಾವಿರ ಅಭ್ಯರ್ಥಿಗಳ ದ್ವಿತೀಯ ಪಿಯು ಅಂಕಗಳನ್ನು ಪರಿಗಣಿಸಿ ರ್‍ಯಾಕಿಂಗ್ ಪಟ್ಟಿಯನ್ನು ಸಿದ್ಧಪಡಿಸಬೇಕೆಂಬ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೇಲ್ಮನವಿ ಸಲ್ಲಿಸಿದೆ.

published on : 14th September 2022

ಸ್ವಯಂ-ಕಲಿಕೆಯಿಂದಲೇ NEET ಪರೀಕ್ಷೆ ಗೆದ್ದ ಕಾಶ್ಮೀರದ ಬೀದಿ ಬದಿ ವ್ಯಾಪಾರಿ ಮಗ

ಮನಸಿದ್ದರೆ ಮಾರ್ಗ ಎಂಬ ನಾಣ್ಣುಡಿ ಕಾಶ್ಮೀರದ ಬೀದಿ ಬದಿ ವ್ಯಾಪಾರಿ ಮಗನ ಜೀವನದಲ್ಲಿ ಅಕ್ಷರಃ ನಿಜವಾಗಿದ್ದು, NEET ಪರೀಕ್ಷೆ ತಯಾರಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಲಕ್ಷಾಂತರ ರೂ ವ್ಯಯಿಸುತ್ತಿರುವ ಈ ಕಾಲಘಟ್ಟದಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬೀದಿ ಬದಿ ವ್ಯಾಪಾರಿ ಮಗ ಸ್ವಯಂಕಲಿಕೆಯ ಮೂಲಕ NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

published on : 10th September 2022

ರೈಲ್ವೆ ಉದ್ಯೋಗಕ್ಕಾಗಿ ಹೆಬ್ಬೆರಳಿನ ಚರ್ಮವನ್ನೇ ತೆಗೆದು ಸ್ನೇಹಿತನ ಕೈಗೆ ಹಾಕಿದ ಉದ್ಯೋಗಾಕಾಂಕ್ಷಿ; ಇಬ್ಬರ ಬಂಧನ

ಸರ್ಕಾರಿ ಉದ್ಯೋಗ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟವೇ. ಅದಕ್ಕಾಗಿ ನಾನಾ ಕಸರತ್ತು ಮಾಡುತ್ತಾರೆ. ಅದೇ ರೀತಿ ರೈಲ್ವೆ ಉದ್ಯೋಗ ಪಡೆಯಲು ಹಲವು ಬಾರಿ ಯತ್ನಿಸಿದ್ದ ಉದ್ಯೋಗಾಕಾಂಕ್ಷಿಯೊಬ್ಬರು ತಮ್ಮ ಹೆಬ್ಬೆರಳಿನ ಚರ್ಮವನ್ನು ಸ್ನೇಹಿತನ ಹೆಬ್ಬೆರಳಿಗೆ ಅಂಟಿಸಿ ಇದೀಗ ಪೇಚಿಗೆ ಸಿಲುಕಿದ್ದಾರೆ.

published on : 25th August 2022

KPTCL ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ತಂದೆ, ಮಗನನ್ನು ಬಂಧಿಸಿದ ಪೊಲೀಸರು

ಕೆಪಿಟಿಸಿಎಲ್ ಕಿರಿಯ ಸಹಾಯಕ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಮುನ್ಸಿಪಲ್ ಕಾಲೇಜಿನ ಉಪ ಪ್ರಾಂಶುಪಾಲ ಮಾರುತಿ ಸೋನಾವನೆ, ಅವರ ಪುತ್ರ ಸಮೀತ್ ಕುಮಾರ್ ನನ್ನು ಬಂಧಿಸಿದ್ದಾರೆ.

published on : 22nd August 2022

ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಯಲು ಪರೀಕ್ಷಾ ಕೇಂದ್ರಗಳ ಸುತ್ತ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತ

ವಿವಿಧ ಇಲಾಖೆಗಳಲ್ಲಿನ 27,000 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ನಡೆಯುತ್ತಿರುವ ಪ್ರಮುಖ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ನಕಲು ಮಾಡುವುದನ್ನು ತಡೆಯಲು ಅಸ್ಸಾಂ ರಾಜ್ಯ ಸರ್ಕಾರವು ಪರೀಕ್ಷಾ ಕೇಂದ್ರಗಳ ಸುತ್ತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

published on : 21st August 2022

ನಾಳೆಯಿಂದ ಆಗಸ್ಟ್ 25 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: ಕೆಎಸ್ ಆರ್ ಟಿಸಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ

ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ನಾಳೆಯಿಂದ ಆಗಸ್ಟ್ 25ರವರೆಗೆ ನಡೆಸಲಿದೆ. 

published on : 11th August 2022

ಕೇರಳ: ಒಟ್ಟಿಗೆ ಪಿಎಸ್ ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ, ಮಗ!

ಕೇರಳದ ಮಲಪ್ಪುರಂನ 42 ವರ್ಷದ ಮಹಿಳೆ ಮತ್ತು ಆಕೆಯ 24 ವರ್ಷದ ಮಗ ಸಾರ್ವಜನಿಕ ಸೇವಾ ಆಯೋಗದ (ಪಿಎಸ್‌ಸಿ) ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾಗಿದ್ದಾರೆ.

published on : 10th August 2022

ಶಿಕ್ಷಕರ ನೇಮಕ ಪರೀಕ್ಷೆ ಫಲಿತಾಂಶ ಪ್ರಕಟ ಶೀಘ್ರದಲ್ಲೆ: ಸಚಿವ ಬಿಸಿ ನಾಗೇಶ್

ಶಿಕ್ಷಕರ ನೇಮಕ ಪರೀಕ್ಷೆ ಫಲಿತಾಂಶ ಇದೇ ತಿಂಗಳಲ್ಲಿ ಪ್ರಕಟಿಸಲಾಗುತ್ತದೆ. ನವೆಂಬರ್ ತಿಂಗಳಲ್ಲಿ ಟಿಇಟಿ ಪರೀಕ್ಷೆ ನಡೆಸಲಾಗುತ್ತದೆ.

published on : 8th August 2022

ಸಿಇಟಿ ಫಲಿತಾಂಶ; ಹುಡುಗರೇ ಟಾಪರ್ಸ್, ಬೆಂಗಳೂರು ಪ್ರಾಬಲ್ಯ

ಈ ವರ್ಷ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯ ಎಲ್ಲಾ ಕೋರ್ಸ್ ಶ್ರೇಯಾಂಕಗಳಲ್ಲಿ ಬಾಲಕರೇ ಅಗ್ರಸ್ಥಾನ ಪಡೆದಿದ್ದು, ಫಲಿತಾಂಶದಲ್ಲಿ ಬೆಂಗಳೂರು ನಗರ ಪ್ರಾಬಲ್ಯ ಸಾಧಿಸಿದೆ.

published on : 31st July 2022

ಉತ್ತರ ಪ್ರದೇಶ: ನಾಲ್ವರು ಒಡಹುಟ್ಟಿದವರು ಈಗ ಐಎಎಸ್-ಐಪಿಎಸ್ ಅಧಿಕಾರಿಗಳು!

ಬಡತನದಲ್ಲೇ ಬೆಳೆದ ಉತ್ತರ ಪ್ರದೇಶದ ಲಾಲ್‌ಗಂಜ್‌ನ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇದೀಗ ಅವರೆಲ್ಲರೂ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗಿದ್ದಾರೆ.

published on : 28th July 2022

ಬಿಗಿ ಭದ್ರತೆ ನಡುವೆ ಅಗ್ನಿವೀರ್ ವಾಯುಪಡೆ ನೇಮಕಾತಿ ಪರೀಕ್ಷೆ ಪ್ರಾರಂಭ

ಭಾರತೀಯ ವಾಯುಪಡೆಗೆ ಅಗ್ನಿಪಥ್ ಯೋಜನೆಯಡಿ ಮೊದಲ ನೇಮಕಕ್ಕೆ ಇಂದು ಬಿಗಿ ಭದ್ರತೆ ನಡುವೆ ಪರೀಕ್ಷೆ ದೇಶಾದ್ಯಂತ ಪ್ರಾರಂಭವಾಗಿದೆ. 

published on : 24th July 2022

ಎಸ್ಎಸ್ ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ: ಇಂದು ಮಧ್ಯಾಹ್ನ ವೆಬ್ ಸೈಟ್ ನಲ್ಲಿ ಲಭ್ಯ: ಈ ಲಿಂಕ್ ನಲ್ಲಿ ವೀಕ್ಷಿಸಿ

ಎಸ್ಎಸ್ ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಪೂರಕ ಪರೀಕ್ಷೆಯಲ್ಲಿ 37 ಸಾವಿರದ 479 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

published on : 21st July 2022

ನೀಟ್ ಪರೀಕ್ಷೆ: ಒಳಉಡುಪು ತೆಗೆದು ಪರೀಕ್ಷೆ ಬರೆಯುವಂತೆ ಹೇಳಿದ್ದ ಐವರ ಬಂಧನ

ಕೇರಳದ ಕೊಲ್ಲಂನಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರಿಗೆ ಬ್ರಾ ತೆಗೆಯುವಂತೆ ಹೇಳಿದ ಮೂವರು ಸೇರಿದಂತೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಕೇರಳ ಪೊಲೀಸ್ ಮೂಲಗಳು ತಿಳಿಸಿವೆ.

published on : 20th July 2022
1 2 3 4 5 6 > 

ರಾಶಿ ಭವಿಷ್ಯ