• Tag results for Falls

ಕೊಲ್ಕತಾ: ಆಸ್ಪತ್ರೆಯ ಏಳನೇ ಅಂತಸ್ತಿನಿಂದ ಕೆಳಗೆ ಬಿದ್ದ ವ್ಯಕ್ತಿ, ಗಂಭೀರ ಗಾಯ

ನಗರದ ಹೃದಯ ಭಾಗದಲ್ಲಿರುವ ಮುಲಿಕ್ ಬಜಾರ್ ನ ಖಾಸಗಿ ಆಸ್ಪತ್ರೆಯೊಂದರ ಬೆಡ್ ನಿಂದ ಪರಾರಿಯಾಗಿದ್ದ ಪುರುಷ ರೋಗಿಯೊಬ್ಬ ಆಸ್ಪತ್ರೆಯ ಏಳನೇ ಅಂತಸ್ತಿನ ಮೂಲೆಯೊಂದರಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕುಳಿತಿದ್ದು ನಂತರ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 25th June 2022

ಛತ್ತೀಸ್ ಗಢ: ಬೋರ್ ವೆಲ್ ಗೆ ಬಿದ್ದ 11 ವರ್ಷದ ಬಾಲಕ! 16 ಗಂಟೆಗಳಿಂದ ಸತತ ರಕ್ಷಣಾ ಕಾರ್ಯಾಚರಣೆ

ಛತ್ತೀಸ್ ಗಢದ ಜಂಜ್ ಗಿರ್ ಚಾಪಾ ಜಿಲ್ಲೆಯಲ್ಲಿ ಬೋರ್ ವೆಲ್ ನಲ್ಲಿ ಸಿಲುಕಿರುವ 11 ವರ್ಷದ ಬಾಲಕನ ರಕ್ಷಣಾ ಕಾರ್ಯಾಚರಣೆ  ಸತತ 16 ಗಂಟೆಗಳಿಂದ ನಡೆಯುತ್ತಿದೆ.

published on : 11th June 2022

ಎಲ್ ಐಸಿ ಷೇರು ಕುಸಿತ, ಷೇರುದಾರರಿಗೆ ರೂ. 94,116 ಕೋಟಿ ನಷ್ಟ!

ಕಳೆದ 14 ದಿನಗಳಿಂದಲೂ ಭಾರತೀಯ ಜೀವ ವಿಮಾ ನಿಗಮದ ಷೇರುಗಳು ನಿರಂತರವಾಗಿ ಕುಸಿತ ಕಾಣುವುದರೊಂದಿಗೆ ಷೇರುದಾರರು ಬರೋಬ್ಬರಿ ರೂ. 94, 116 ಕೋಟಿ ನಷ್ಟ ಅನುಭವಿಸಿದ್ದಾರೆ.

published on : 4th June 2022

ಕೊಡಗು: ಕೋಟೆಅಬ್ಬಿ ಫಾಲ್ಸ್ ನಲ್ಲಿ ಮುಳುಗಿ ತೆಲಂಗಾಣದ ಮೂವರು ಜಲಸಮಾಧಿ!

ಕೊಡಗಿನ ಕೋಟೆಅಬ್ಬಿ ಜಲಪಾತದಲ್ಲಿ ಮುಳುಗಿ ತೆಲಂಗಾಣದ ಮೂವರು ನೀರುಪಾಲಾಗಿದ್ದಾರೆ.

published on : 29th May 2022

ಚಿಕ್ಕಬಳ್ಳಾಪುರ: ಸ್ಟಂಟ್ ಮಾಡಲು ಹೋಗಿ 30 ಅಡಿ ಎತ್ತರದ ಡ್ಯಾಂ ಗೋಡೆ ಮೇಲಿನಿಂದ ಬಿದ್ದ ಯುವಕ, ಭಯಾನಕ ದೃಶ್ಯ!

ಅಣೆಕಟ್ಟು ಎತ್ತರ ಅಳೆಯುತ್ತೇನೆಂದು ಡ್ಯಾಂ ಗೋಡೆಯ ಮೇಲೆ ಸ್ಟಂಟ್ ಮಾಡುವ ವೇಳೆ ಯುವಕನೊಬ್ಬ ಜಾರಿಬಿದ್ದು ಪ್ರಕರಣ ಎದುರಿಸುವಂತಾಗಿದೆ.

published on : 23rd May 2022

ಆಗ್ರಾ: ವೇದಿಕೆಯ ಮೇಲೆ ಕಬ್ಬಿಣದ ಮಾಸ್ಟ್ ಕುಸಿದು ಬಿದ್ದು ಓರ್ವ ಸಾವು, ಕೇಂದ್ರ ಸಚಿವರು ಜಸ್ಟ್ ಬಚಾವ್

ಆಗ್ರಾದಲ್ಲಿ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ದೀಪಗಳನ್ನು ಅಳವಡಿಸಿದ್ದ ಕಬ್ಬಿಣದ ಮಾಸ್ಟ್ ಕುಸಿದು ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ...

published on : 16th April 2022

ಮಾರ್ಗ ಮಧ್ಯದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕ, ಭುವನೇಶ್ವರದಲ್ಲಿ ವಿಮಾನ ತುರ್ತು ಲ್ಯಾಂಡಿಂಗ್!

ಬೆಂಗಳೂರಿನಿಂದ ಕೋಲ್ಕತ್ತಾ ಕಡೆಗೆ ಭಾನುವಾರ ಹೊರಟ್ಟಿದ್ದ ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮಾರ್ಗ ಮಧ್ಯದಲ್ಲಿ ಹಠಾತ್ತನೇ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಬಿಜು ಪಾಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ  ತುರ್ತು ಲ್ಯಾಂಡಿಂಗ್ ಆಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 13th March 2022

ರಾಮನಗರ: ಚುಂಚಿ ಫಾಲ್ಸ್ ನಲ್ಲಿ ಮುಳುಗಿ ಪದವಿ ವಿದ್ಯಾರ್ಥಿ ಸಾವು  

ಕನಕಪುರ ತಾಲೂಕಿನ ಪ್ರವಾಸಿ ತಾಣ ಚುಂಚಿ ಫಾಲ್ಸ್​​ಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

published on : 7th March 2022

ಬೆಂಗಳೂರಿನಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ.3.5ಕ್ಕೆ ಇಳಿಕೆ

ಬೆಂಗಳೂರು ನಗರದಲ್ಲಿ ಕೋವಿಡ್-19 ದೈನಂದಿನ ಪಾಸಿಟಿವಿಟಿ ದರದಲ್ಲಿ ಶೇ. 3.55 ರಷ್ಟು ಇಳಿಕೆಯಾಗಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಬುಧವಾರ ರಾಜ್ಯದಲ್ಲಿ 5,339, ಬೆಂಗಳೂರಿನಲ್ಲಿ 2,161 ಹೊಸ ಪ್ರಕರಣ ವರದಿಯಾಗಿದೆ. 

published on : 10th February 2022

ಷೇರು ಮಾರುಕಟ್ಟೆಯಲ್ಲಿ ಜೊಮ್ಯಾಟೋ ಶೇ.19 ರಷ್ಟು ಕುಸಿತ; 100 ರೂಪಾಯಿಗಿಂತಲೂ ಕಡಿಮೆ

ಷೇರು ಮಾರುಕಟ್ಟೆ ಕುಸಿತದಲ್ಲಿ ಪೇಟಿಯೆಂ ಬಳಿಕ ಈಗ ಜೊಮ್ಯಾಟೋ ಸರದಿ, ಜ.24 ರಂದು ಆರಂಭಗೊಂಡ ಷೇರು ಮಾರುಕಟ್ಟೆಯಲ್ಲಿ ಜೊಮ್ಯಾಟೋ ಷೇರುಗಳು ಶೇ.19 ರಷ್ಟು ಕುಸಿತ ಕಂಡಿದ್ದು, ಬಿಎಸ್ಇಯಲ್ಲಿ 92.25 ರೂಪಾಯಿಗಳಿಗೆ ಕುಸಿದಿದೆ.

published on : 24th January 2022

ಭೀಕರ ವಿಡಿಯೋ: ಜಾಲಿ ಮೂಡ್ ನಲ್ಲಿ ಬೋಟಿಂಗ್ ಮಾಡುತ್ತಿದ್ದ ಬೋಟ್ ಗಳ ಮೇಲೆ ಬಿದ್ದ ಬೃಹತ್ ಬಂಡೆ, 7 ಸಾವು, 20 ಮಂದಿ ನಾಪತ್ತೆ

ಜಾಲಿ ಮೂಡ್ ನಲ್ಲಿ ಬೋಟಿಂಗ್ ಮಾಡುತ್ತಿದ್ದ ಬೋಟ್ ಗಳ ಮೇಲೆ ದೈತ್ಯಾಕಾರದ ಬೃಹತ್ ಬಂಡೆಯೊಂದು ಉರುಳಿದ್ದು, 2 ಬೋಟ್ ಗಳಲ್ಲಿದ್ದ ಕನಿಷ್ಛ 7 ಮಂದಿ ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ.

published on : 9th January 2022

ಜೋಗ್ ಫಾಲ್ಸ್ ನಲ್ಲಿ ರೋಪ್ ವೇ, ಸ್ಟಾರ್ ಹೊಟೇಲ್ ನಿರ್ಮಾಣಕ್ಕೆ ಸಂಪುಟ ಅನುಮೋದನೆ: ಪರಿಸರವಾದಿಗಳು, ಅರಣ್ಯಾಧಿಕಾರಿಗಳ ಆತಂಕ

ಕರ್ನಾಟಕದ ಖ್ಯಾತ ಪ್ರವಾಸಿ ತಾಣ ಶಿವಮೊಗ್ಗ ಜಿಲ್ಲೆಯ ಜೋಗ್ ಫಾಲ್ಸ್‌ನಲ್ಲಿ ರೋಪ್‌ವೇ ಮತ್ತು ಪಂಚತಾರಾ ಹೋಟೆಲ್ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ ನಂತರ, ಪರಿಸರವಾದಿಗಳು ಮತ್ತು ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ.

published on : 7th January 2022

ರಾಜ್ಯಪಾಲ ಗೆಹ್ಲೋಟ್ ನಿರ್ಗಮನದ ಬಳಿಕ ಧುಮ್ಮಿಕ್ಕಿ ಹರಿದ ಜೋಗ ಜಲಪಾತ!

ಕೆಪಿಸಿಎಲ್ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಭೋರ್ಗರೆಯುವ ಜೋಗ ಜಲಾಪಾತ ನೋಡಲು ಹೋದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ಗೆ ನಿರಾಸೆಯಾಗುವಂತಾಗಿದೆ.

published on : 27th November 2021

ಬೆಳಗಾವಿ: ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜಾರಿ ಬಿದ್ದ ಯುವಕ; 140 ಅಡಿ ಕೆಳಗೆ ಬಿದ್ದರೂ ಬದುಕುಳಿದ ಭೂಪ!

ಕಲ್ಲು ಬಂಡೆಗಳ ನಡುವೆ 140 ಅಡಿ ಕಂದಕಕ್ಕೆ‌ ಬಿದ್ದರೂ ಯುವಕ ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿದ್ದಾನೆ.

published on : 4th October 2021

ಮಂಗಳೂರು: ಕಲ್ಲಿನ ಕ್ವಾರಿಯಲ್ಲಿ ಬಿದ್ದು 11 ವರ್ಷದ ಬಾಲಕ ಸಾವು

ಬಂಟ್ವಾಳ ತಾಲ್ಲೂಕಿನ ಕಾಸ್ಬಾ ಗ್ರಾಮದ 11 ವರ್ಷದ ಬಾಲಕ ಕಲ್ಲಿನ ಕ್ವಾರಿಗೆ ಜಾರಿ ಬಿದ್ದು, ನೀರು ಪಾಲಾಗಿರುವ ದಾರುಣ ಘಟನೆ ಶನಿವಾರ ನಡೆದಿದೆ.

published on : 5th September 2021
1 2 > 

ರಾಶಿ ಭವಿಷ್ಯ