• Tag results for Farmers protests

'ಕೃಷಿ ಕಾಯ್ದೆ ವಾಪ್ಸಿ ಬಳಿಕವೇ ಘರ್ ವಾಪ್ಸಿ' ಎಂದ ರೈತರು: ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿರಲಿ ಎಂದ ಕೃಷಿ ಸಚಿವರು!

ವಿವಾದಿತ ಮೂರು ಕೃಷಿ ಕಾಯ್ದೆ ಹಿಂಪಡೆಯಬೇಕು ಎಂಬ ತಮ್ಮ ಪ್ರಮುಖ ಬೇಡಿಕೆಗೆ ಅಂಟಿಕೊಂಡಿರುವ ರೈತ ಮುಖಂಡರು ತಮ್ಮ 'ಘರ್ ವಾಪ್ಸಿ' 'ಕಾಯ್ದೆ ವಾಪ್ಸಿ' ನಂತರವೇ ಆಗುತ್ತದೆ ಎಂದು ರೈತರು ಹೇಳಿದ್ದು ಇನ್ನು ಇದಕ್ಕೆ ಕೇಂದ್ರ ಸರ್ಕಾರ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿರಲಿ ಎಂದು ಹೇಳಿದ್ದಾರೆ.

published on : 8th January 2021

ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ಹಕ್ಕುಚ್ಯುತಿ ನೋಟೀಸ್ ದಾಖಲಿಸಿದ ಸಂಸದೆ ಸೋನಾಲ್ ಮಾನ್ಸಿಂಗ್

ವಿವಾದಾತ್ಮಕ ಕೃಷಿ ಮಸೂದೆಗಳ ಕುರಿತು ದೆಹಲಿ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್ಯಸಭೆಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ರಾಜ್ಯಸಭಾ ಸಂಸದೆ ಸೋನಾಲ್ ಮಾನ್ಸಿಂಗ್ ಆರೋಪಿಸಿದ್ದು ಕೇಜ್ರಿವಾಲ್ ವಿರುದ್ಧ ಹಕ್ಕುಚ್ಯುತಿ ನೋಟೀಸ್ ದಾಖಲಿಸಿದ್ದಾರೆ.

published on : 24th December 2020

ಕೃಷಿ ಕಾಯ್ದೆ ವಿರೋಧಿಸಿ ರೈತರ ಪ್ರತಿಭಟನೆ: ಪ್ರತಿನಿತ್ಯ 3,500 ಕೋಟಿ ರೂ. ನಷ್ಟ!

ರೈತರ ಪ್ರತಿಭಟನೆಯಿಂದ ಪಂಜಾಬ್‌, ಹರಿಯಾಣ ಮತ್ತು ಹಿಮಾಚಲ ಪ್ರದೇಶದಂತಹ ಪ್ರದೇಶಗಳ ಆರ್ಥಿಕತೆಯಲ್ಲಿ ಪ್ರತಿನಿತ್ಯ 3,000ದಿಂದ 3,500 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಅಸೋಚಾಮ್‌ ತಿಳಿಸಿದೆ.

published on : 15th December 2020

ರೈತರ ಪ್ರತಿಭಟನೆ: ಸಿಂಘು ಗಡಿಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಕೊರೋನಾ ಪಾಸಿಟಿವ್

ದೆಹಯಲಿಯ ಸಿಂಘು ಗಡಿಯಲ್ಲಿ ಕಳೆದ ಎರಡು ವಾರಗಳಿಂದ ಸಾವಿರಾರು ರೈತರು ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು, ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.

published on : 11th December 2020

ದೆಹಲಿ: ರೈತರ ಪ್ರತಿಭಟನೆ ವೇಳೆ ಮತ್ತೋರ್ವ ರೈತನ ಸಾವು, ಹೃದಯಾಘಾತದಿಂದ 57 ವರ್ಷದ ಲಖ್ವೀರ್ ಸಿಂಗ್ ನಿಧನ

ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆಯನ್ನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ರೈತರ ಸಾವಿನ ಸರಣಿ ಕೂಡ ಮುಂದುವರೆದಿದೆ.

published on : 3rd December 2020