• Tag results for Fine

ದಂಡ ಮನ್ನಾ ಮಾಡಿ, ಬಾಡಿಗೆ ಪಡೆಯಿರಿ: ಬಿಬಿಎಂಪಿಗೆ ಶಿವಾಜಿನಗರದ ವ್ಯಾಪಾರಿಗಳ ಮನವಿ

ಶಿವಾಜಿನಗರ ಮಾರುಕಟ್ಟೆಗಳಲ್ಲಿ ಬಾಡಿಗೆ ಹಾಗೂ ದಂಡ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ನೋಟಿಸ್‌ ಪಡೆದಿರುವ ವ್ಯಾಪಾರಿಗಳು ಇದೀಗ ದಂಡವನ್ನು ಮನ್ನಾ ಮಾಡಿ ಬಾಡಿಗೆ ಮಾತ್ರ ವಸೂಲಿ ಮಾಡುವಂತೆ ಬಿಬಿಎಂಪಿ ವಲಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.

published on : 5th December 2022

ಬೆಂಗಳೂರು: ರಸ್ತೆಯ ಕಳಪೆ ಕಾಮಗಾರಿಗೆ ದಂಡ ಕಟ್ಟಿದ್ದ ಗುತ್ತಿಗೆದಾರನಿಗೆ ಮತ್ತೆ 99 ಕೋಟಿ ರೂ. ಮೌಲ್ಯದ ಗುತ್ತಿಗೆ!

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜೂನ್‌ನಲ್ಲಿ ಬೆಂಗಳೂರಿಗೆ ಭೇಟಿ ನೀಡುವುದಕ್ಕೆ ಮೊದಲು ಮಾಡಿದ ಕಳಪೆ ರಸ್ತೆ ಕಾಮಗಾರಿಯ ಧೂಳು ಇನ್ನೂ ಮಾಸುವ ಮುನ್ನವೇ ಅದರ ಕಾಮಗಾರಿಯ ಗುತ್ತಿಗೆ ಪಡೆದಿದ್ದ ರಮೇಶ್ ಎಸ್ ಗೆ ಮತ್ತೊಂದು ಕೋಟ್ಯಂತರ ರೂಪಾಯಿ ಮೌಲ್ಯದ ಗುತ್ತಿಗೆ ಕಾಮಗಾರಿ ಸಿಕ್ಕಿದೆ.

published on : 2nd December 2022

ಸಂಚಾರ ನಿಯಮ ಉಲ್ಲಂಘನೆ: ವೈರಲ್ ವಿಡಿಯೋ ನೋಡಿ ತಮಿಳು ನಟ ವಿಜಯ್‌ಗೆ ದಂಡ ವಿಧಿಸಿದ ಪೊಲೀಸರು

ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ತಮಿಳು ನಟ ವಿಜಯ್‌ಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ತನ್ನ ಕಾರಿನ ಮೇಲೆ ಕಪ್ಪು ಟಿಂಟೆಡ್ ಗ್ಲಾಸ್‌ ಅನ್ನು ಹೊಂದಿದ್ದಕ್ಕಾಗಿ ನಟನಿಗೆ 500 ರೂಪಾಯಿ ದಂಡ ವಿಧಿಸಲಾಗಿದೆ.

published on : 24th November 2022

ಅಭಿಮಾನಿಯೊಂದಿಗೆ ಘರ್ಷಣೆ: ಕ್ರಿಸ್ಟಿಯಾನೋ ರೊನಾಲ್ಡೊಗೆ ದಂಡ; 2 ಪಂದ್ಯಗಳಿಗೆ ನಿಷೇಧ

ಮ್ಯಾಂಚೆಸ್ಟರ್ ನ ಮಾಜಿ ಕ್ರೀಡಾಪಟು ಕ್ರಿಸ್ಟಿಯಾನೋ ರೆನಾಲ್ಡೋ ಅಭಿಮಾನಿಯೊಂದಿಗೆ ದುರ್ವರ್ತನೆ ತೋರಿದ್ದಕ್ಕಾಗಿ 50,000 ಪೌಂಡ್ ಗಳಷ್ಟು ದಂಡ ವಿಧಿಸಲಾಗಿದ್ದು 2 ಪಂದ್ಯಗಳಿಗೆ ನಿಷೇಧಿಸಲಾಗಿದೆ.

published on : 24th November 2022

ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಫಲಶ್ರುತಿ: ದಾವಣಗೆರೆಯಲ್ಲಿ ಕಸ ಎಸೆದ 8 ಮಂದಿಗೆ ದಂಡ ವಿಧಿಸಿದ ಅಧಿಕಾರಿಗಳು

ನಗರದ ರೇಣುಕಾ ಮಂದಿರದ ಬಳಿಯಲ್ಲಿ ಕಸ ಎಸೆಯುವ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ ನಂತರ ದಾವಣಗೆರೆ ಸಿಟಿ ಕಾರ್ಪೊರೇಷನ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಗರದಲ್ಲಿ ಕಸ ಎಸೆಯುವವರ ಮೇಲೆ ಕಣ್ಣಿಟ್ಟಿದ್ದು, ದಂಡ ವಿಧಿಸುತ್ತಿದ್ದಾರೆ.

published on : 16th November 2022

ಪ್ಲೇ ಸ್ಟೋರ್ ನೀತಿ; ಗೂಗಲ್ ಗೆ 936.44 ಕೋಟಿ ರೂಪಾಯಿ ದಂಡ, 1 ತಿಂಗಳ ಅವಧಿಯಲ್ಲಿ ಟೆಕ್ ದೈತ್ಯ ಸಂಸ್ಥೆಗೆ 2 ನೇ ಶಾಕ್! 

ಗೂಗಲ್ ನ ಪ್ಲೇ ಸ್ಟೋರ್ ನೀತಿಗಳ ವಿರುದ್ಧ ಭಾರತದ ಸ್ಪರ್ಧಾತ್ಮಕ ಆಯೋಗ 2 ನೇ ಬಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, 936.44 ಕೋಟಿ ರೂಪಾಯಿ ದಂಡ ವಿಧಿಸಿದೆ.

published on : 25th October 2022

ಹೆಲ್ಮೆಟ್‌ ಧರಿಸದಿದ್ದಕ್ಕೆ ದಂಡ: ಸಾಕ್ಷ್ಯ ಕೇಳಿದ ವ್ಯಕ್ತಿಗೆ ಫೋಟೋ ಸಹಿತ ಉತ್ತರ ನೀಡಿದ ಬೆಂಗಳೂರು ಟ್ರಾಫಿಕ್‌ ಪೊಲೀಸ್‌!

ಹೆಲ್ಮೆಟ್‌ ಧರಿಸದಿದ್ದಕ್ಕೆ ದಂಡ ಹಾಕಿದ್ದ ಪೊಲೀಸರಿಗೆ ಸಾಕ್ಷ್ಯ ಕೇಳಿದ ವ್ಯಕ್ತಿಗೆ ಫೋಟೋ ಸಹಿತ ಟ್ರಾಫಿಕ್‌ ಪೊಲೀಸರು ಖಡಕ್ ಉತ್ತರ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

published on : 22nd October 2022

ಸೀಟ್ ಬೆಲ್ಟ್ ಧರಿಸದವರಿಗೆ 1,000 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ಆದೇಶ

ಸೀಟ್ ಬೆಲ್ಟ್ ಧರಿಸದವರಿಗೆ 1,000 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಈ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಕಮಿಷನರೇಟ್ ಮತ್ತು ಪೊಲೀಸ್ ಅಧೀಕ್ಷಕರುಗಳಿಗೆ ಇಲಾಖೆಯಿಂದ ಸೂಚನೆ ನೀಡಲಾಗಿದೆ.

published on : 20th October 2022

ಅರ್ಜಿಯಲ್ಲಿ ಆಕ್ಷೇಪಾರ್ಹ ಫೋಟೋಗಳು: ಅಡ್ವೊಕೇಟ್ ಗೆ ಬಾಂಬೆ ಹೈಕೋರ್ಟ್ ನಿಂದ 25,000 ರೂಪಾಯಿ ದಂಡ

ತನ್ನ ಕಕ್ಷಿದಾರರ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದ ಅರ್ಜಿಯಲ್ಲಿ ಆಕ್ಷೇಪಾರ್ಗ ಫೋಟೊ ಬಳಸಿದ್ದ ಅಡ್ವೊಕೇಟ್ ಗೆ ಬಾಂಬೆ ಹೈಕೋರ್ಟ್ 25,000 ರೂಪಾಯಿ ದಂಡ ವಿಧಿಸಿದೆ

published on : 11th October 2022

ಕ್ಷುಲ್ಲಕ ಕಾರಣಕ್ಕೆ ಅರ್ಜಿ: ವಕೀಲರಿಗೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರ ನೇಮಕ ಕುರಿತು ಏಕ ಸದಸ್ಯ ನ್ಯಾಯಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ಸಾರ್ವಜನಿಕ ಸಮಯ ಹಾಳು ಮಾಡಿದ್ದಕ್ಕಾಗಿ ಸುಳ್ಯ ತಾಲೂಕಿನ ಪಂಜಿಗರ ಹೌಸ್‌ನ ವಕೀಲ ಪಿ ಮೋಹನ್ ಚಂದ್ರ ಅವರಿಗೆ ಹೈಕೋರ್ಟ್ ರೂ. 5 ಲಕ್ಷ ದಂಡ ವಿಧಿಸಿದೆ. 

published on : 24th September 2022

ದೇವರ ಮೂರ್ತಿ ಮುಟ್ಟಿದ್ದಕ್ಕೆ ದಲಿತ ಬಾಲಕನಿಗೆ 60 ಸಾವಿರ ರು. ದಂಡ: ಕೋಲಾರದಲ್ಲೊಂದು ಅಮಾನವೀಯ ಘಟನೆ; 8 ಮಂದಿ ವಿರುದ್ಧ ಪ್ರಕರಣ

ದೇವರ ಉತ್ಸವ ಮೂರ್ತಿ ಮೆರವಣಿಗೆ ವೇಳೆ ದಲಿತ ಬಾಲಕನೊಬ್ಬ ಮೂರ್ತಿ ಮುಟ್ಟಿರುವ ಕಾರಣಕ್ಕೆ ದಲಿತ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿರುವ ಘಟನೆ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಲ್ಲೇರಹಳ್ಳಿ ಗ್ರಾಮದಲ್ಲಿ ನಡೆದಿದೆ.

published on : 22nd September 2022

ಮುಂಬೈನ ಪ್ರತಿಷ್ಠಿತ ಲಾಲ್‌ಬಾಗ್ಚಾ ರಾಜಾ ಗಣೇಶ ಸಮಿತಿಗೆ 3.66 ಲಕ್ಷ ರೂ ದಂಡ..!; ಕಾರಣ ಏನು ಗೊತ್ತಾ?

ದೇಶದ ಪ್ರತಿಷ್ಠಿಕ ಗಣೇಶೋತ್ಸವ ಸಮಿತಿಗಳಲ್ಲಿ ಒಂದಾದ ಮುಂಬೈನ ಪ್ರತಿಷ್ಠಿತ ಲಾಲ್‌ಬಾಗ್ಚಾ ರಾಜಾ ಗಣೇಶ ಸಮಿತಿಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಬರೊಬ್ಬರಿ 3.66 ಲಕ್ಷ ರೂ ದಂಡ ವಿಧಿಸಿದೆ.

published on : 21st September 2022

ಬೆಂಗಳೂರು: ಮಳೆಯಿಂದ ರಕ್ಷಣೆ ಪಡೆಯಲು ಅಂಡರ್ ಪಾಸ್ ನಲ್ಲಿ ವಾಹನ ನಿಲ್ಲಿಸಿದರೆ ದಂಡ!

ಮಳೆ ಬರುವ ವೇಳೆ  ಅಂಡರ್​ಪಾಸ್​ನಲ್ಲಿ ವಾಹನ ನಿಲ್ಲಿಸಿಕೊಂಡು ನಿಂತರೆ ದಂಡ ವಿಧಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ, ಮಳೆ ಬರುವ ಸಂದರ್ಭದಲ್ಲಿ ಬ್ರಿಡ್ಜ್ ಗಳ ಕೆಳಗೆ ಮತ್ತು ಅಂಡರ್ ಪಾಸ್ ಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ.

published on : 2nd September 2022

ಭಾರತ-ಪಾಕ್ ಪಂದ್ಯ ವೀಕ್ಷಿಸುವ ವಿದ್ಯಾರ್ಥಿಗಳಿಗೆ ₹ 5,000 ದಂಡ: ಶ್ರೀನಗರ ಕಾಲೇಜು ಆದೇಶ

ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ಏಷ್ಯಾಕಪ್ ಕ್ರಿಕೆಟ್ ಪಂದ್ಯವನ್ನು ಗುಂಪು ಕಟ್ಟಿಕೊಂಡು ನೋಡದಂತೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡದಂತೆ ಶ್ರೀನಗರದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ) ವಿದ್ಯಾರ್ಥಿಗಳಿಗೆ ತಿಳಿಸಿದೆ.

published on : 28th August 2022

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ಬಿಜೆಪಿ ನಾಯಕ ಮನೋಜ್ ತಿವಾರಿಗೆ ದಂಡ, ಕ್ಷಮೆಯಾಚನೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಮೋಟಾರ್ ಸೈಕಲ್ ರ‍್ಯಾಲಿಯಲ್ಲಿ ಹೆಲ್ಮೆಟ್ ಧರಿಸದಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಮನೋಜ್ ತಿವಾರಿ ಅವರಿಗೆ ದೆಹಲಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ.

published on : 4th August 2022
1 2 3 > 

ರಾಶಿ ಭವಿಷ್ಯ