- Tag results for Gadag
![]() | ಗದಗ: ಮಾನವ ಸರಪಳಿ ನಿರ್ಮಿಸಿ, ಕಾರು ಸಮೇತ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಿಸಿದ ಗ್ರಾಮಸ್ಥರು!ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ 2 ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಯು ಹಲವಾರು ಅನಾಹುತ ಸೃಷ್ಟಿ ಮಾಡಿದೆ. ಲಕ್ಷ್ಮೇಶ್ವರದಿಂದ ಬೆಳ್ಳಟ್ಟಿಗೆ ಹೋಗುವ ಮಾರ್ಗದಲ್ಲಿದ್ದ ನೆಲೂಗಲ್ಲ ಗ್ರಾಮದ ಸಮೀಪದ ಹಳ್ಳದಲ್ಲಿ ಕಾರು ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ ನಾಲ್ವರನ್ನು ಗ್ರಾಮಸ್ಥರು ಹಾಗೂ ಪೊಲೀಸರು ಮಾನವ ಸರಪಳಿ... |
![]() | ಗದಗ: ಡಿಜಿಟಲ್ ನಲ್ಲೂ ಜಾನುವಾರಗಳ ಖರೀದಿ, ಮಾರಾಟ ಜೋರು!ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಮುಖಿಯಾದ ನಂತರ ಜಿಲ್ಲೆಯಲ್ಲಿ ಜಾನುವಾರುಗಳ ಮಾರಾಟ ಮತ್ತು ಖರೀದಿ ಡಿಜಿಟಲ್ ಆಗಿದೆ. ಮಾರಾಟಗಾರರು ಜಾನುವಾರುಗಳು ಮಾರುಕಟ್ಟೆಗೆ ಬರುವ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. |
![]() | ಗದಗ: ಕೃಷಿ ಹೊಂಡಕ್ಕೆ ಬಿದ್ದು ಮೂವರು ಬಾಲಕಿಯರು ಸಾವುಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದಾಗ ಕಾಲು ಜಾರಿ ಮೂವರು ಬಾಲಕಿಯರು ಮೃತಪಟ್ಟಿರುವ ದುರ್ಘಟನೆ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ತಾಂಡಾದಲ್ಲಿ ನಡೆದಿದೆ. |
![]() | ಗದಗ ಜಿಲ್ಲೆಯ ದಂಡಿನ ದುರ್ಗಮ್ಮಗೆ ಮಹಿಳೆಯರಿಂದ ಅರೆಬೆತ್ತಲೆ, ಪ್ರಾಣಿಬಲಿ ಸೇವೆ: ಜಿಲ್ಲಾಡಳಿತ, ಪೊಲೀಸರ ಮನವಿ, ಎಚ್ಚರಿಕೆಗೆ ಡೋಂಟ್ ಕೇರ್!ಗದಗ ಜಿಲ್ಲೆಯ ದಂಡಿನ ದುರ್ಗಮ್ಮನ ಮಹಿಳಾ ಭಕ್ತರು ದೇವಿಯನ್ನು ಒಲಿಸಿಕೊಳ್ಳಲು ತಮ್ಮ ದೇಹದ ಮೇಲ್ಭಾಗವನ್ನು ಮಾತ್ರ ಬೇವಿನ ಸೊಪ್ಪಿನಿಂದ ಮುಚ್ಚಿಕೊಂಡು ಅರೆಬೆತ್ತಲೆಯಾಗಿ ವಿಧಿವಿಧಾನ ನಡೆಸಿ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಇದರ ವಿರುದ್ಧ ಭಕ್ತರಿಗೆ ಮನವರಿಕೆ ಮಾಡಿಕೊಡಲು ಹರಸಾಹಸ ಪಡಬೇಕಾಯಿತು. |
![]() | ಮೃತ ಸಂತೋಷ್ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಚಿಂತನೆ- ಮುಖ್ಯಮಂತ್ರಿ ಬೊಮ್ಮಾಯಿಕೆ. ಎಸ್. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಚಿಂತಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. |
![]() | ಮೂರು ವರ್ಷಗಳ ನಂತರ ಮತ್ತೆ ಲಕ್ಕುಂಡಿ ಉತ್ಸವ ಆಯೋಜನೆ: ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ಮೂರು ವರ್ಷಗಳ ನಂತರ ಜಿಲ್ಲೆಯಲ್ಲಿ ಮತ್ತೆ ಲಕ್ಕುಂಡಿ ಉತ್ಸವ ಆಯೋಜಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ. |
![]() | ಗದಗ: ಬೆಟಗೇರಿ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆಗದಗ ಜಿಲ್ಲೆಯ ಬೆಟಗೇರಿಯಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. |
![]() | ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ಗೆ ಮಾತೃವಿಯೋಗಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಅವರ ತಾಯಿ ವಿಧಿವಶರಾಗಿದ್ದಾರೆ. |
![]() | ಗದಗ: ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ 7 ಶಿಕ್ಷಕರ ಅಮಾನತುಹಿಜಾಬ್ ಧರಿಸಿ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ ಏಳು ಶಿಕ್ಷಕರನ್ನು ಗದಗ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ. |
![]() | ಗದಗಿನ ತೋಂಟದಾರ್ಯ ಮಠ ಜಾತ್ರೆಯಲ್ಲಿಯೂ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ: ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನಹಿಂದೂ-ಮುಸ್ಲಿಂ ಧರ್ಮೀಯರ ಗಲಾಟೆ-ಗದ್ದಲ ಕರಾವಳಿ, ಮಲೆನಾಡನ್ನು ದಾಟಿ ಬೇರೆ ಜಿಲ್ಲೆಗಳತ್ತಲೂ ಕಾಲಿಡುತ್ತಿದೆ. ಗದಗ ಜಿಲ್ಲೆಯ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳು ವ್ಯಾಪಾರ ನಡೆಸುವುದಕ್ಕೆ ಅವಕಾಶ ನೀಡಬಾರದೆಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೋಷಿಯಲ್ ಮೀಡಿಯಾ ಅಭಿಯಾನ ಆರಂಭಿಸಿದ್ದಾರೆ. |
![]() | ಎಸ್ ಬಿಐನ ಗ್ರಾಮ ಸೇವಾ ಯೋಜನೆ: ಗದಗದ ಅತಿ ಹಿಂದುಳಿದ ಗ್ರಾಮಗಳ ಅಭಿವೃದ್ಧಿ, ಮಾದರಿ ಗ್ರಾಮಗಳಾಗಿ ಪರಿವರ್ತನೆಕರ್ನಾಟಕದ ಗದಗ ಜಿಲ್ಲೆಯ ದೂರದ ಹಳ್ಳಿಗಳಲ್ಲಿ ಅನೇಕರು ಶುದ್ಧ ಕುಡಿಯುವ ನೀರಿನಿಂದ ತಮ್ಮ ಬಾಯಾರಿಕೆಯನ್ನು ನೀಗಿಸುತ್ತಾರೆ ಎಂದು ಭಾವಿಸಿರಲಿಲ್ಲ, ಓದುವ ದಾಹವನ್ನು ತೀರಿಸಿಕೊಳ್ಳುತ್ತಾರೆ, ತಮ್ಮ ಪ್ರೀತಿಪಾತ್ರರನ್ನು ವೈದ್ಯಕೀಯ ಚಿಕಿತ್ಸೆಗೆ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಭಾವಿಸಿರಲಿಲ್ಲ. |
![]() | ಗದಗ: ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿದ 'ಹಿಜಾಬ್ ವಿವಾದ'ಉಡುಪಿಯ ಸರ್ಕಾರಿ ಕಾಲೇಜ್ ವೊಂದರಲ್ಲಿ ಆರು ವಿದ್ಯಾರ್ಥಿನಿಯರಿಂದ ಆರಂಭವಾದ ಹಿಜಾಬ್ ಜ್ವಾಲೆಯ ಕಿಡಿ ಇದೀಗ ರಾಜ್ಯಾದ್ಯಂತ ಹರಡಿದೆ. ಗ್ರಾಮಾಂತರ ಪ್ರದೇಶದಲ್ಲೂ ಪರಿಸ್ಥಿತಿ ಹದಗೆಡುತ್ತಿದೆ. ಇತ್ತೀಚಿನವರೆಗೂ ಕೋಮು ಸೌಹಾರ್ದತೆಗೆ ಹೆಸರಾಗಿದ್ದ ಗದಗ ಜಿಲ್ಲೆಗೂ ಬಿಟ್ಟಿಲ್ಲ. |
![]() | ಮಹದಾಯಿ ಹೋರಾಟ: 2,400 ದಿನ ಕಳೆದರೂ ಯೋಜನೆಯಲ್ಲಿ ಪ್ರಗತಿಯಾಗಿಲ್ಲಮಹದಾಯಿ ನದಿ ನೀರಿಗಾಗಿ ನರಗುಂದದಲ್ಲಿ ನಡೆಯುತ್ತಿರುವ ಹೋರಾಟಕ್ಕೆ 2,400 ದಿನ ತುಂಬಿದೆ. ಆದರೆ, ಯೋಜನೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. |
![]() | ಗದಗ: ಹಿಂಸಾಚಾರಕ್ಕೊಳಗಾದವರಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹಗದಗ ಜಿಲ್ಲೆ ನರಗುಂದದಲ್ಲಿ ಥಳಿತಕ್ಕೊಳಕ್ಕಾಗಿ ಮೃತಪಟ್ಟ ಸಮೀರ್ ಶಹಾಪುರ ಘಟನೆ ಬಳಿಕ ಅಲ್ಲಿನ ಮುಸ್ಲಿಮರು ಭಯದ ವಾತಾವರಣದಲ್ಲಿ ಬದುಕುವಂತಾಗಿದ್ದು, ಅವರಿಗೆ ಭದ್ರತೆ ಕಲ್ಪಿಸಬೇಕು. |
![]() | ಗದಗ ತಾಲ್ಲೂಕು ಪಂಚಾಯಿತಿ ನೇಮಕಾತಿ: 2 ಹುದ್ದೆಗಳು ಖಾಲಿ, ಅರ್ಹರು ಕೂಡಲೇ ಅರ್ಜಿ ಸಲ್ಲಿಸಿಗದಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. |