- Tag results for Gotabaya Rajapaksa
![]() | ಪತ್ನಿ, ಮಗನ ಜೊತೆ ಅಮೆರಿಕದಲ್ಲಿ ನೆಲೆಸಲು ಲಂಕಾ ಮಾಜಿ ಅಧ್ಯಕ್ಷ ಗೊಟಬಯ ‘ಗ್ರೀನ್ ಕಾರ್ಡ್’ಗೆ ಅರ್ಜಿ!ಶ್ರೀಲಂಕಾದಿಂದ ಪರಾರಿಯಾಗಿರುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಅಮೆರಿಕದಲ್ಲಿ ಪತ್ನಿ ಮತ್ತು ಮಗನೊಂದಿಗೆ ನೆಲೆಸಲು ‘ಗ್ರೀನ್ ಕಾರ್ಡ್’ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. |
![]() | ಸಿಂಗಾಪುರದಿಂದ ಥೈಲ್ಯಾಂಡ್ಗೆ ತೆರಳಿದ ಗೋಟಬಯ ರಾಜಪಕ್ಸಶ್ರೀಲಂಕಾದ ಪದಚ್ಯುತ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ತಮ್ಮ ಅಲ್ಪಾವಧಿಯ ಭೇಟಿ ಪಾಸ್ ಪೋರ್ಟ್ ಅವಧಿ ಗುರುವಾರ ಮುಕ್ತಾಯಗೊಂಡ ನಂತರ ಸಿಂಗಾಪುರದಿಂದ ಥಾಯ್ಲೆಂಡ್ಗೆ ತೆರಳಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. |
![]() | ಗೋಟಬಯ ರಾಜಪಕ್ಸೆ ಸಹೋದರರಾದ ಮಹಿಂದಾ ಮತ್ತು ಬಸಿಲ್ ಲಂಕಾ ತೊರೆಯದಂತೆ ಸುಪ್ರೀಂ ಕೋರ್ಟ್ ನಿರ್ಬಂಧಶ್ರೀಲಂಕಾದ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜಪಕ್ಸೆ ಅವರು ರಾಜೀನಾಮೆ ನೀಡಿದ ಮಾರನೇ ದಿನವೇ ಅವರ ಇಬ್ಬರು ಸಹೋದರರು ಜುಲೈ 28 ರವರೆಗೆ ದೇಶ ತೊರೆಯದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. |
![]() | ಶ್ರೀಲಂಕಾ ರಾಜಕೀಯ ಬಿಕ್ಕಟ್ಟು: ಗೋಟಬಯ ರಾಜೀನಾಮೆ; ಏಳು ದಿನಗಳೊಳಗೆ ನೂತನ ಅಧ್ಯಕ್ಷರ ಆಯ್ಕೆ- ಸ್ಪೀಕರ್ದ್ವೀಪರಾಷ್ಟ್ರದಲ್ಲಿನ ಆರ್ಥಿಕ ದಿವಾಳಿತ, ಅಸಮರ್ಪಕ ನಿರ್ವಹಣೆಗಾಗಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಒಂದು ವಾರ ನಡೆದ ನಾಟಕೀಯ ಬೆಳವಣಿಗೆ ನಂತರ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ದನ ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ |
![]() | ಶ್ರೀಲಂಕಾ ಬಿಕ್ಕಟ್ಟು: ಇನ್ನೂ ರಾಜೀನಾಮೆ ನೀಡದ ಗೋಟಬಯ ರಾಜಪಕ್ಸ, ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ಪಲಾಯನದ್ವೀಪ ರಾಷ್ಟ್ರ ಅತ್ಯಂತ ಭೀಕರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ತತ್ತರಿಸಿರುವಂತೆಯೇ, ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ಗುರುವಾರ ಮಾಲ್ಡೀವ್ಸ್ನಿಂದ ಸಿಂಗಾಪುರಕ್ಕೆ ಪಲಾಯನ ಮಾಡಿದ್ದಾರೆ. |
![]() | ರಾಜಿನಾಮೆ ಕೊಡಿ, ಇಲ್ಲದಿದ್ದರೆ ನಿಮ್ಮನ್ನು ಕಿತ್ತುಹಾಕಲು ಬೇರೆ ದಾರಿ ಪರಿಗಣಿಸಬೇಕಾಗುತ್ತದೆ: ರಾಜಪಕ್ಸೆಗೆ ಶ್ರೀಲಂಕಾ ಸ್ಪೀಕರ್ಆದಷ್ಟು ಬೇಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ. ಇಲ್ಲದಿದ್ದರೆ ನಿಮ್ಮನ್ನು ಕಚೇರಿಯಿಂದ ತೆಗೆದುಹಾಕಲು ಇತರ ಆಯ್ಕೆಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಶ್ರೀಲಂಕಾದ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ಧನ ಅವರು ಗೋತಬಯ ರಾಜಪಕ್ಸೆಗೆ ಎಚ್ಚರಿಕೆ ನೀಡಿದ್ದಾರೆ. |
![]() | ಶ್ರೀಲಂಕಾ: ಕರ್ಫ್ಯೂ ಹಿಂತೆಗೆತ; ಇನ್ನೂ ರಾಜಿನಾಮೆ ನೀಡದ ರಾಜಪಕ್ಸೆ; ವಿಮಾನ ಸಿಗದೆ ಮಾಲ್ಡೀವ್ಸ್ನಲ್ಲಿ ಠಿಕಾಣಿ!ರಾಜಿನಾಮೆ ನೀಡದೆ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದು ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ರಾಜಧಾನಿಯಲ್ಲಿ ಹಿಂಸಾಚಾರ ಸೃಷ್ಟಿಸಿದ್ದರಿಂದ ಕರ್ಫ್ಯೂ ವಿಧಿಸಲಾಗಿದ್ದು ಇದೀಗ ಆ ಕರ್ಫ್ಯೂವನ್ನು ಅಧಿಕಾರಿಗಳು ಹಿಂತೆಗೆದುಕೊಂಡಿದ್ದಾರೆ. |
![]() | ಪರಿಸ್ಥಿತಿ ನಿಯಂತ್ರಣಕ್ಕೆ ತನ್ನಿ: ಭದ್ರತಾ ಪಡೆಗಳಿಗೆ ಹಂಗಾಮಿ ಅಧ್ಯಕ್ಷ ವಿಕ್ರಮಸಿಂಘೆ ಆದೇಶ; ಸಿಂಗಾಪುರಕ್ಕೆ ಗೋಟಬಯ ಪ್ರಯಾಣಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉಲ್ಬಣವಾಗಿರುವ ನಾಗರೀಕ ಸಂಘರ್ಷವನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತನ್ನಿ ಎಂದು ಶ್ರೀಲಂಕಾ ಭದ್ರತಾಪಡೆಗಳಿಗೆ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಆದೇಶ ನೀಡಿದ್ದಾರೆ. |
![]() | ವಿರೋಧದ ನಡುವೆಯೂ ಹಂಗಾಮಿ ಅಧ್ಯಕ್ಷರಾಗಿ ವಿಕ್ರಮಸಿಂಘೆ ಆಯ್ಕೆ: ಭುಗಿಲೆದ್ದ ಆಕ್ರೋಶ, ಪ್ರಧಾನಿ ನಿವಾಸಕ್ಕೆ ಮುತ್ತಿಗೆ!ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಮತ್ತು ಆಂತರಿಕ ಸಂಘರ್ಷ ಮುಂದುವರೆದಿದ್ದು, ವಿರೋಧದ ನಡುವೆಯೂ ರಣಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರಾಗೆ ಆಯ್ಕೆ ಮಾಡಿದ ಬೆನ್ನಲ್ಲೇ ರಾಜಧಾನಿ ಕೊಲಂಬೋದಲ್ಲಿ ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ. |
![]() | ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಪ್ರತಿಭಟನೆ ನಡುವೆಯೂ ಹಂಗಾಮಿ ಅಧ್ಯಕ್ಷರಾಗಿ ರಣಿಲ್ ವಿಕ್ರಮಸಿಂಘೆ ನೇಮಕ!ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉಂಟಾಗಿರುವ ನಾಗರೀಕರ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ಪ್ರತಿಭಟನಾಕಾರರ ವಿರೋಧದ ನಡುವೆಯೂ ಹಾಲಿ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರನ್ನು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. |
![]() | ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಗೋಟಾಬಯ ಪರಾರಿ ಹಿಂದೆ ನನ್ನ ಪಾತ್ರವಿಲ್ಲ; ಭಾರತ ಸ್ಪಷ್ಟನೆಶ್ರೀಲಂಕಾ ಗೋಟಬಯ ರಾಜಪಕ್ಸ ಮಾಲ್ಡೀವ್ಸ್ ಪರಾರಿಯಾಗುವುದರಲ್ಲಿ ತನ್ನ ಯಾವುದೇ ರೀತಿಯ ಪಾತ್ರವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟನೆ ನೀಡಿದೆ. |
![]() | ಅಧ್ಯಕ್ಷ ಗೋಟಬಯ ಮಾಲ್ಡೀವ್ಸ್ ಗೆ ಪರಾರಿ: ಶ್ರೀಲಂಕಾದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿ; ತೀವ್ರಗೊಂಡ ಪ್ರತಿಭಟನೆಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಜನರ ಆಕ್ರೋಶಕ್ಕೆ ತುತ್ತಾಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್ ಪರಾರಿಯಾದ ಬೆನ್ನಲ್ಲೇ ಇದೀಗ ಶ್ರೀಲಂಕಾದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ. |
![]() | ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸ ಕುಟುಂಬ ಸಮೇತ ಮಾಲ್ಡೀವ್ಸ್ ಗೆ ಪರಾರಿ!ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಜನರ ಆಕ್ರೋಶಕ್ಕೆ ತುತ್ತಾಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ, ಬುಧವಾರ ಮುಂಜಾನೆ ಕುಟುಂಬ ಸಮೇತ ದೇಶ ಬಿಟ್ಟು ಮಾಲ್ಡೀವ್ಸ್ಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. |
![]() | ಶ್ರೀಲಂಕಾ ಬಿಕ್ಕಟ್ಟು: ಅಮೆರಿಕಾ ಪ್ರವೇಶಿಸಲು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆಗೆ ವೀಸಾ ನಿರಾಕರಣೆ!ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ನಿನ್ನೆ ರಾತ್ರಿ ದ್ವೀಪದಿಂದ ಪಲಾಯನ ಮಾಡಲು ಪ್ರಯತ್ನಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಯುಎಸ್ ರಾಯಭಾರ ಕಚೇರಿಯು ದೇಶಕ್ಕೆ ಪ್ರವೇಶಿಸಲು ವೀಸಾವನ್ನು ನಿರಾಕರಿಸಿದೆ ಎಂದು ವರದಿಯಾಗಿದೆ. |
![]() | ವಿದೇಶಕ್ಕೆ ಪರಾರಿ ಯತ್ನ: ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಜೊತೆ ಗಲಾಟೆ; ಗೋಟಬಯ, ಮಾಜಿ ಸಚಿವ ಬೆಸಿಲ್ ಗೆ ಫ್ಲೈಟ್ ಮಿಸ್ಈ ಹಿಂದೆ ರಾಜಿನಾಮೆ ಘೋಷಣೆ ಮಾಡಿದ್ದ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆಗೆ ವಿಮಾನ ನಿಲ್ದಾಣದಲ್ಲಿ ಮತ್ತೆ ತೀವ್ರ ಮುಖಭಂಗವಾಗಿದ್ದು, ಸಂಘರ್ಷ ಪೀಡಿತ ಶ್ರೀಲಂಕಾವನ್ನು ತೊರೆಯಲು ಯತ್ನಿಸಿದ್ದ ರಾಜಪಕ್ಸೆ ಅವರು ವಿಮಾನ ನಿಲ್ದಾಣದ ಸಿಬ್ಬಂದಿಗಳ ಜೊತೆಗಿನ ಗಲಾಟೆಯಿಂದಾಗಿ ಹಲವು ಬಾರಿ ವಿಮಾನಗಳನ್ನು ಮಿಸ್ ಮಾಡಿಕೊಂಡು ನಿಲ್ದಾಣದಲ್ಲೇ ಸಿಲುಕಿದ ಘಟನೆ ವರದಿಯಾಗಿದೆ. |