• Tag results for Harsha murder

ಹರ್ಷ ಕೊಲೆ ಪ್ರಕರಣ: ಶಿವಮೊಗ್ಗದಲ್ಲಿ ಎನ್ಐಎ ಕ್ಷಿಪ್ರ ದಾಳಿ; 13 ಕಡೆ ಪರಿಶೀಲನೆ

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳ ತಂಡ ಶಿವಮೊಗ್ಗದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.

published on : 30th June 2022

ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ 10 ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

ಆರೋಪಿಗಳನ್ನು ಇನ್ನೂ ಹೆಚ್ಚಿನ ತನಿಖೆಗೆ ಒಳಪಡಿಸುವ ಅಗತ್ಯವಿರುವುದರಿಂದ ಅವರ ನ್ಯಾಯಾಂಗ ಬಂಧನ ಅವಧಿಯನ್ನು 90 ದಿನಗಳಿಂದ 180 ದಿನಗಳಿಗೆ ಹೆಚ್ಚಿಸಬೇಕೆಂದು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮಾಡಿದ ಮನವಿಯನ್ನು ವಿಶೇಷ ಕೋರ್ಟ್ ಪುರಸ್ಕರಿಸಿದೆ. 

published on : 12th May 2022

ಸಮಾಜದಲ್ಲಿ ಶಾಂತಿ ಕದಡುವುದು ಹರ್ಷ ಕೊಲೆಯ ಹಿಂದಿನ ಉದ್ದೇಶವಾಗಿತ್ತು: ಆರೋಪಪಟ್ಟಿಯಲ್ಲಿ ಎನ್ಐಎ ದಾಖಲು

ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ಆರೋಪಿಗಳ ಮುಖ್ಯ ಉದ್ದೇಶ ಮಾರಕ ಆಯುಧಗಳನ್ನು ಬಳಸಿ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯನ್ನುಂಟುಮಾಡುವುದು, ಭಯೋತ್ಪಾದಕ ಚಟುವಟಿಕೆಯನ್ನು ಮಾಡುವುದಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಸಲ್ಲಿಸಿರುವ ಎಫ್ಐಆರ್ ನಲ್ಲಿ ದಾಖಲಿಸಿದೆ. 

published on : 5th April 2022

ಹರ್ಷ ಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹ ಆರೋಪ; ತನಿಖೆಗೆ ಕೋರ್ಟ್‌ ಆದೇಶ

ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹ ಪ್ರಕರಣ ತನಿಖೆ ನಡೆಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ ಆದೇಶ ನೀಡಿದೆ.

published on : 31st March 2022

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ: ಒಂದು ವಾರ ಬಳಿಕ ಶಿವಮೊಗ್ಗದಲ್ಲಿ ಶಾಲಾ-ಕಾಲೇಜುಗಳು ಪುನಾರಂಭ

ಬಜರಂಗದಳ ಕಾರ್ಯಕರ್ತ 26 ವರ್ಷದ ಯುವಕ ಹರ್ಷ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಒಂದು ವಾರದ ಬಳಿಕ ಶಿವಮೊಗ್ಗ ನಗರದಲ್ಲಿ ಪುನಾರಂಭವಾಗಿದೆ. 

published on : 28th February 2022

ಶಿವಮೊಗ್ಗಕ್ಕೆ ಬಂತು ಡ್ರೋನ್ ಕಣ್ಗಾವಲು, ಕಾನೂನು-ಸುವ್ಯವಸ್ಥೆಗೆ ಕ್ರಮ: ನಗರದಲ್ಲಿ ಸದ್ಯ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ

ಕಳೆದ ಭಾನುವಾರ ರಾತ್ರಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯ ನಂತರ ನಗರದಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಸೆಕ್ಷನ್ 144 ಹಾಕಿ ನಿಷೇಧಾಜ್ಞೆ ಇನ್ನೆರಡು ದಿನಗಳವರೆಗೆ ಮುಂದುವರಿದಿದೆ.

published on : 23rd February 2022

ಹರ್ಷ ಹತ್ಯೆ: ಈವರೆಗೆ 6 ಆರೋಪಿಗಳ ಬಂಧನ: ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್​​

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕರ್ನಾಟಕ ಪೊಲೀಸರು ಮಾಹಿತಿ ನೀಡಿದ್ದಾರೆ.

published on : 22nd February 2022

ನಿಷೇಧಾಜ್ಞೆ ಮಧ್ಯೆ ಮೆರವಣಿಗೆಗೆ ಅನುಮತಿ ನೀಡಿದ್ದು ಹೇಗೆ; ಸಚಿವ ಈಶ್ವರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು: ಸಿದ್ದರಾಮಯ್ಯ

ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ  ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಗೃಹ ಸಚಿವರು, ಸಚಿವ ಕೆ ಎಸ್ ಈಶ್ವರಪ್ಪ ಮತ್ತು ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.

published on : 22nd February 2022

ಜಿಲ್ಲಾ ಎಸ್ಪಿ ನೀಡಿದ ಮಾಹಿತಿ ಆಧರಿಸಿ ಹರ್ಷನ ಕೊಲೆಗೆ ಮುಸ್ಲಿಂ ಗೂಂಡಾಗಳು ಕಾರಣ ಎಂದು ಹೇಳುತ್ತಿದ್ದೇನೆ: ಈಶ್ವರಪ್ಪ

ನಮ್ಮ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷನ ಕೊಲೆಯಾದ ವಿಷಯ ಗೊತ್ತಾದ ಕೂಡಲೇ ನಾನು ಜಿಲ್ಲಾ ಎಸ್ಪಿಯ ಬಳಿ ಮಾತನಾಡಿದೆ, ಅವರು ಮತ್ತು ಹರ್ಷ ಮನೆಯ ಸುತ್ತಮುತ್ತಲ ಜನರು ನೀಡಿದ ಮಾಹಿತಿ ಆಧರಿಸಿ ಹರ್ಷನನ್ನು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. 

published on : 22nd February 2022

ಬಜರಂಗದಳ ಕಾರ್ಯಕರ್ತ ಹರ್ಷ ಭೀಕರ ಹತ್ಯೆ ಪ್ರಕರಣ: ರಾಜಕೀಯ ನಾಯಕರ ಕೆಸರೆರಚಾಟ ಆರಂಭ

ಭಜರಂಗ ದಳದ ಕಾರ್ಯಕರ್ತ ಹರ್ಷ ಅವರ ಭೀಕರ ಹತ್ಯೆ ಪ್ರಕರಣ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಹಿಂಸಾಚಾರಕ್ಕೆ ದಾರಿ ಮಾಡಿಕೊಡುತ್ತಿದ್ದಂತೆಯೇ ಇತ್ತ ಪ್ರಕರಣ ಸಂಬಂಧ ಸೋಮವಾರ ವಿಧಾನಸೌಧದ ಒಳಗೆ ಹಾಗೂ ಹೊರಗೆ ಸೋಮವಾರ ರಾಜಕೀಯ ಕೆಸರೆರಚಾಟ ಆರಂಭಗೊಂಡಿತ್ತು.

published on : 22nd February 2022

ಹರ್ಷನ ಶವಯಾತ್ರೆ ವೇಳೆ ಹಿಂಸಾಚಾರ: ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ ಜಾರಿ

ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು ಜಿಲ್ಲೆಯಲ್ಲಿ 2 ದಿನಗಳ ಕಾಲ ಕರ್ಫ್ಯೂ ಜಾರಿ ಮಾಡಲಾಗಿದೆ. 

published on : 21st February 2022

ಪ್ರವಾದಿ ನಿಂದನೆಗೆ ಪ್ರತೀಕಾರ: ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಸಮರ್ಥಿಸಿ ಪೋಸ್ಟ್, ವ್ಯಕ್ತಿ ವಿರುದ್ಧ ಎಫ್ಐಆರ್

ಶಿವಮೊಗ್ಗದಲ್ಲಿ ನಡೆದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಯನ್ನು ಸಮರ್ಥಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ್ದ ಅಪರಿಚಿತ ವ್ಯಕ್ತಿ ವಿರುದ್ಧ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

published on : 21st February 2022

ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ನಗರದಲ್ಲಿ ಕಳೆದ ರಾತ್ರಿ ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಎಡಿಜಿಪಿ ಎಸ್ ಮುರುಗನ್ ತಿಳಿಸಿದ್ದಾರೆ.

published on : 21st February 2022

ರಾಶಿ ಭವಿಷ್ಯ