• Tag results for High court

ಡ್ರಗ್ ದೊರೆಯನ್ನು ಬಂಧಮುಕ್ತಗೊಳಿಸಲು ಸಿಎಂ ಒತ್ತಡವಿತ್ತು: ಹೈಕೋರ್ಟ್ ಗೆ ಮಣಿಪುರ ಮಹಿಳಾ ಪೊಲೀಸ್ ಅಧಿಕಾರಿ ಮಾಹಿತಿ 

ಬಂಧನಕ್ಕೊಳಪಡಿಸಲಾಗಿದ್ದ ಡ್ರಗ್ ದೊರೆಯೊಬ್ಬನನ್ನು ಬಂಧಮುಕ್ತಗೊಳಿಸಲು ಸಿಎಂ ಹಾಗೂ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಒತ್ತಡವಿತ್ತು ಎಂದು ಮಣಿಪುರದ ಮಹಿಳಾ ಪೊಲೀಸ್ ಅಧಿಕಾರಿ ಥೌನೋಜಮ್ ಬೃಂದ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ. 

published on : 14th July 2020

ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ಕ್ರಾಂತಿಕಾರಿ ಕವಿ ವರವರ ರಾವ್ 

 ಕೋವಿಡ್-19 ಸಾಂಕ್ರಾಮಿಕ ರೋಗದ ವ್ಯಾಪಕ ಹರಡುವಿಕೆ ಹಾಗೂ ಆರೋಗ್ಯ ಕ್ಷೀಣಿಸುತ್ತಿರುವುದರಿಂದ ತಾತ್ಕಾಲಿಕವಾಗಿ ಜಾಮೀನು ನೀಡುವಂತೆ ಎಲ್ಗರ್  ಪರಿಷತ್- ಮಾವೋವಾದಿ ನಂಟಿನ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಕವಿ ಹಾಗೂ ಹೋರಾಟಗಾರ ವರವರ ರಾವ್ ಬಾಂಬೆ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದಾರೆ.

published on : 13th July 2020

ಕೊರೋನಾ ಸೋಂಕಿತ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ವಿಳಂಬವಾಗುತ್ತಿರುವುದೇಕೆ: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ನಾಗರಿಕರ ಕೊರೋನಾ ಪರೀಕ್ಷೆ ವರದಿ ಸಿಗುವುದಕ್ಕೆ ತಡವಾಗುತ್ತಿರುವುದು ಮತ್ತು ಕೊರೋನಾ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬವಾಗುತ್ತಿರುವುದು ಏಕೆಂದು ಪ್ರಶ್ನಿಸಿ ರಾಜ್ಯ ಹೈಕೋರ್ಟ್ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಳಿ ವಿವರ ಕೇಳಿದೆ.

published on : 11th July 2020

ಕೋವಿಡ್ ಕುರಿತ ಜಾಹೀರಾತು ಫಲಕ ಲಗತ್ತಿಸಲು ಹೈಕೋರ್ಟ್ ಅನುಮತಿ ಕೋರಿದ ಸರ್ಕಾರ

ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವಿಕೆ ಹೆಚ್ಚಳದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ನಗರದ ಪ್ರಮುಖ ಪ್ರದೇಶಗಳಲ್ಲಿ ಜಾಹೀರಾತು ಪಲಕಗಳ ಅಳವಡಿಕೆ ಕುರಿತು ಮಾಹಿತಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ  ಹೈಕೋರ್ಟ್  ಸೂಚನೆ ನೀಡಿದೆ.

published on : 11th July 2020

ತೆಲಂಗಾಣ ಸಚಿವಾಲಯ ಕಟ್ಟಡ ನೆಲಸಮಕ್ಕೆ ಹೈಕೋರ್ಟ್ ತಡೆ 

ಸಚಿವಾಲಯ ಕಟ್ಟಡ ನೆಲಸಮಗೊಳಿಸಿ ಅಲ್ಲಿ ನೂತನ ಕಟ್ಟಣ ನಿರ್ಮಾಣಕ್ಕೆ ಮುಂದಾಗಿರುವ ತೆಲಂಗಾಣ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ.

published on : 10th July 2020

ವಲಸಿಗರ ಕುರಿತು ವಾಸ್ತವಿಕ ವರದಿ ಸಲ್ಲಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು ನಗರದಲ್ಲಿಯೇ ಉಳಿಯಲು ನಿರ್ಧಾರಕೈಗೊಂಡಿರುವ ವಲಸೆ ಕಾರ್ಮಿಕರ ಕುರಿತು ವಾಸ್ತವಿಕ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ. 

published on : 10th July 2020

ಕೊರೋನಾ ಮಧ್ಯೆ ವಿಶೇಷ ಕೋರ್ಟ್ ರೂಂ ಸ್ಥಾಪಿಸಿದ ಹೈಕೋರ್ಟ್

ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಕರ್ನಾಟಕ ಹೈಕೋರ್ಟ್ ಬೆಂಗಳೂರಿನ ವಸಂತ ನಗರದಲ್ಲಿರುವ ಗುರು ನಾನಕ್ ಭವನದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ ಪಾರದರ್ಶಕತೆಯಿಂದ ಇಬ್ಘಾಗ ಮಾಡಿರುವ ಕೋರ್ಟ್ ರೂಂನ್ನು ಸ್ಥಾಪಿಸಿದೆ.

published on : 6th July 2020

ಅತ್ಯಾಚಾರ ಸಂತ್ರಸ್ತೆ ಕುರಿತ ವಿವಾದಾತ್ಮಕ ಹೇಳಿಕೆ ಹಿಂಪಡೆದ ಹೈಕೋರ್ಟ್ ನ್ಯಾಯಾಧೀಶ

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಅತ್ಯಾಚಾರ ಸಂತ್ರಸ್ತೆ ಕುರಿತು ನಿರೀಕ್ಷಣಾ ಜಾಮೀನು ಆದೇಶದಲ್ಲಿ ಬಳಸಿದ್ದ ವಿವಾದಾತ್ಮಕ ಪದವನ್ನು ಹಿಂಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

published on : 4th July 2020

ಅವಧಿ ಮುಗಿದ ಗ್ರಾಮ ಪಂಚಾಯತ್ ಗಳಿಗೆ ಆಡಳಿತಾಧಿಕಾರಿ ನೇಮಕ ಆದೇಶ ಎತ್ತಿ ಹಿಡಿದ ಹೈಕೋರ್ಟ್

ರಾಜ್ಯದಲ್ಲಿ ಚುನಾಯಿತ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸುವ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

published on : 3rd July 2020

ನಮ್ಮ ಮೆಟ್ರೋ ರೈಲಿಗಾಗಿ ಮರಗಳ ಸ್ಥಳಾಂತರಕ್ಕಾಗಿ ಪರಿಶೀಲಿಸಲು ಜಿಕೆವಿಕೆ ತಜ್ಞರ ನೇಮಕ

ಮೆಟ್ರೋ ರೈಲು ಯೋಜನೆಯ ಕಾಮಗಾರಿಗಾಗಿ ನಗರದಲ್ಲಿ ಕತ್ತರಿಸಲು ಉದ್ದೇಶಿಸುವ ಮರಗಳು ಹಾಗೂ ಈಗಾಗಲೇ ಕತ್ತರಿಸಿದ ಮರಗಳನ್ನು ವೈಜ್ಞಾನಿಕವಾಗಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವ ಬಗ್ಗೆ ವಸ್ತುಸ್ಥಿತಿ ಪರಿಶೀಲಿಸಲು ಬೆಂಗಳೂರು ಕೃಷಿ ವಿವಿಯ (ಜಿಕೆವಿಕೆ) ಅರಣ್ಯ ವಿಭಾಗವನ್ನು ತಜ್ಞ ಸಂಸ್ಥೆಯಾಗಿ ನೇಮಕ ಮಾಡಲು  ಹೈಕೋರ್ಟ್‌  ರಾಜ್ಯ ಸರಕಾರಕ್ಕೆ ಆದೇಶಿಸಿದೆ.

published on : 3rd July 2020

ವಿಧಾನಸಭೆ ಕಾರ್ಯದರ್ಶಿಯಾಗಿ ಎಸ್.ಮೂರ್ತಿ ಮರು ನೇಮಕ: ಹೈಕೋರ್ಟ್ ಆದೇಶ

ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಎಸ್.ಮೂರ್ತಿ ಅವರನ್ನು ಅಮಾನತುಗೊಳಿಸಿ ವಿಧಾನಸಭೆ ವಿಶೇಷ ಮಂಡಳಿ ಹೊರಡಿಸಿರುವ ಆದೇಶ‌ವನ್ನು ಹೈಕೋರ್ಟ್ ರದ್ದುಗೊಳಿಸಿದೆ.

published on : 2nd July 2020

ಹೈಕೋರ್ಟ್‌ಗೂ ಕೊರೋನಾ ಭೀತಿ; ಕಲಾಪ ಹಠಾತ್ ಸ್ಥಗಿತ, ಇಡೀ ಕಟ್ಟಡದ ಸ್ವಚ್ಛತೆ

ರಾಜ್ಯ ಹೈಕೋರ್ಟ್‌ಗೂ ಈಗ ಕೊರೋನಾ ಭೀತಿ ಆವರಿಸಿದೆ. ಮಂಗಳವಾರ ನಿಗದಿಯಾಗಿದ್ದ ಕಾರ್ಯಕಲಾಪಗಳನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ. 

published on : 30th June 2020

ತಜ್ಞರ ವರದಿ ಬರುವವರೆಗೂ ಆನ್'ಲೈನ್ ಶಿಕ್ಷಣ ಮುಂದುವರೆಸಿ: ಸರ್ಕಾರಕ್ಕೆ ಹೈ ಸೂಚನೆ

ತಜ್ಞರ ಸಮಿತಿಯು ಅಭಿಪ್ರಾಯ ಪಡೆಯುವ ಮುನ್ನವೇ ರಾಜ್ಯದಲ್ಲಿ ಒಂದರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಆನ್'ಲೈನ್ ಶಿಕ್ಷಣ ನಿಷೇಧಿಸಿದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಸರ್ಕಾರ ಹೀಗೆ ಪೂರ್ಣ ಪ್ರಮಾಣದ ನಿಷೇಧ ಹೇರಿ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಚಾಟಿ ಬೀಸಿದೆ.

published on : 27th June 2020

ಕಂಟೈನ್‌ಮೆಂಟ್, ಸೀಲ್‌ಡೌನ್ ಪ್ರದೇಶಗಳಿಗೆ ಅಗತ್ಯ ವಸ್ತುಗಳ ವಿತರಣೆ ಬಿಬಿಎಂಪಿ ಹೊಣೆ: ಹೈಕೋರ್ಟ್

ಬೆಂಗಳೂರು ನಗರದ ಕಂಟೈನ್‍ಮೆಂಟ್ ವಲಯಗಳು ಮತ್ತು ಸೀಲ್‍ಡೌನ್ ಪ್ರದೇಶಗಳ ಜನರಿಗೆ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವುದು ಬಿಬಿಎಂಪಿ ಜವಾಬ್ದಾರಿ ಎಂದು ಹೈಕೋರ್ಟ್ ಹೇಳಿದೆ.

published on : 26th June 2020

ಬೆಂಕಿಯಿಂದ ಗುಡಿಸಲುಗಳು ನಾಶ: ಕಾರ್ಮಿಕರ ಪತ್ತೆ ಹಚ್ಚಿ, ಪುನರ್ವಸತಿ ಕಲ್ಪಿಸಿ; ಸರ್ಕಾರಕ್ಕೆ 'ಹೈ' ಸೂಚನೆ

ನಗರದ ಕಾಚರಕನಹಳ್ಳಿ ಬಳಿಯ ಕೊಳಗೇರಿಯಲ್ಲಿ ವಲಸೆ ಕಾರ್ಮಿಕರಿಗೆ ಸೇರಿದ 90ಕ್ಕೂ ಅಧಿಕ ಗುಡಿಸಲುಗಳಿಗೆ ಬೆಂಕಿ ಹಚ್ಚಿ ನಾಶಪಡಿಸಿರುವ ಪ್ರಕರಣ ಸಂಬಂಧ ಕಾರ್ಮಿಕರಿಗೆ ಪುನರ್ವಸತಿ ಹಾಗೂ ಪರಿಹಾರ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. 

published on : 25th June 2020
1 2 3 4 5 6 >