• Tag results for Hospital

ಬೆಳಗಾವಿ ಆಸ್ಪತ್ರೆಯ 20 ವೈದ್ಯರು, 45 ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್

ಬೆಳಗಾವಿ ಜಿಲ್ಲಾ ಆಸ್ಪತ್ರೆ (ಬೆಳಗಾವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಮತ್ತು ನರ್ಸಿಂಗ್ ಕಾಲೇಜಿನ 20 ವೈದ್ಯರು ಮತ್ತು 45 ಸಿಬ್ಬಂದಿಗಳಿಗೆ ಕೋವಿಡ್-ಪಾಸಿಟಿವ್ ಕಂಡು ಬಂದಿದೆ.

published on : 24th January 2022

ಮನುಷ್ಯನಿಗೆ ಹಂದಿ ಹೃದಯ ಕಸಿ, ಒಂದು ಪ್ರಮುಖ ಮೈಲಿಗಲ್ಲು: ತಜ್ಞರು

ಅಮೆರಿಕದ ಮೇರಿಲ್ಯಾಂಡ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ 57 ವರ್ಷದ ವ್ಯಕ್ತಿಗೆ ನಡೆಸಿದ ಮೊದಲ ಯಶಸ್ವಿ ಹಂದಿ ಹೃದಯ ಕಸಿ ಶಸ್ತ್ರ ಚಿಕಿತ್ಸೆ ವೈದ್ಯಕೀಯ ವಿಜ್ಞಾನದಲ್ಲಿ ಪ್ರಮುಖವಾದ ಮೈಲಿಗಲ್ಲು ಎಂದು ಹೃದಯ ಮತ್ತು ಶ್ವಾಸಕೋಶ ಕಸಿ ಸಂಸ್ಥೆ ಕಿಮ್ಸ್ ಆಸ್ಪತ್ರೆ ಅಧ್ಯಕ್ಷರು ಹಾಗೂ  ಕಾರ್ಯಕ್ರಮ ನಿರ್ದೇಶಕ ಡಾ. ಸಂದೀಪ್ ಅತ್ತಾವರ ಹೇಳಿದ್ದಾರೆ.

published on : 21st January 2022

ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ: ಆಸ್ಪತ್ರೆ ದಾಖಲಾತಿಯಲ್ಲೂ ಅಲ್ಪ ಏರಿಕೆ

ಕೋವಿಡ್-19 2ನೇ ಅಲೆಯಂತೆ ಈ ಬಾರಿ ಮೂರನೇ ಅಲೆಯಲ್ಲಿ ಹೆಚ್ಚಿನ ಆಸ್ಪತ್ರೆ ದಾಖಲಾತಿಗಳು ವರದಿಯಾಗುತ್ತಿಲ್ಲವಾದರೂ ರಾಜ್ಯದಲ್ಲಿ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವಂತೆಯೇ ಇತ್ತ ಆಸ್ಪತ್ರೆಗಳಲ್ಲಿಯೂ ದಾಖಲಾತಿ ಪ್ರಮಾಣ ಕ್ರಮೇಣ ಏರಿಕೆಯಾಗುತ್ತಿದೆ.

published on : 20th January 2022

ಓಮಿಕ್ರಾನ್ ನಿಂದ ಆಸ್ಪತ್ರೆಗೆ ದಾಖಲಾತಿ, ಸಾವು ಜಾಗತಿಕ ಮಟ್ಟದಲ್ಲಿ ಹೆಚ್ಚಳ: ವಿಶ್ವ ಆರೋಗ್ಯ ಸಂಸ್ಥೆ

ಓಮಿಕ್ರಾನ್ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದೆ, ತೀವ್ರತೆ ಕಡಿಮೆ ಎಂಬುದನ್ನು ದಾರಿತಪ್ಪಿಸುವ ಹೇಳಿಕೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ಎಚ್ಚರಿಸಿದೆ.

published on : 19th January 2022

ಸೀಸನಲ್ ಫ್ಲೂ: ನಗರದ ಆಸ್ಪತ್ರೆಗಳ ಒಪಿಡಿಗಳಲ್ಲಿ ಜನವೋ ಜನ!

ನಗರದಲ್ಲಿ ದಿನ ಕಳೆಯುತ್ತಿದ್ದಂತೆಯೇ ಕೊರೋನಾ ಹೊಸ ಸೋಂಕು ಪ್ರಕರಣ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆಯಿದೆ. ಆದರೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗಗಳು (ಒಪಿಡಿ)ಗಳು ಮಾತ್ರ ಜನದಟ್ಟಣೆ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಕಾರಣ ಸೀಸನಲ್ ಫ್ಲೂ ಆಗಿದೆ.

published on : 19th January 2022

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿ ಸಾವು ಪ್ರಕರಣ, ವರದಿ ಕೇಳಿದ ಜಿಲ್ಲಾಧಿಕಾರಿ

ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಕೋವಿಡ್-19 ರೋಗಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಸಿ. ಕರಿಗೌಡರ್ ಅವರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನಿರ್ದೇಶಿಸಿದ್ದಾರೆ.

published on : 18th January 2022

ಧಾರವಾಡದಲ್ಲಿ ಕೊರೋನಾ ಅಬ್ಬರ: ಆಸ್ಪತ್ರೆ ದಾಖಲು ಪ್ರಮಾಣ ಶೇ.5ಕ್ಕೆ ಏರಿಕೆ

ಧಾರವಾಡ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಂಕಿತರ ಜೊತೆಗೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಪ್ರಮಾಣ ಕೂಡ ಏರಿಕೆಯಾಗುತ್ತಿರುವುದು ಕಂಡು ಬಂದಿದೆ.

published on : 18th January 2022

ಕೋವಿಡ್ ಓಮಿಕ್ರಾನ್ ರೂಪಾಂತರಿ: ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಶೇ.4 ಕ್ಕಿಂತ ಕಡಿಮೆ- ಸಂಶೋಧನೆ

ಕೋವಿಡ್-19 ಲಸಿಕೆ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲದಂತೆ ಸಾಕಷ್ಟು ರಕ್ಷಣೆ ನೀಡದೇ ಇರಬಹುದು ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಶೇ.4 ರಷ್ಟಕ್ಕಿಂತಲೂ ಕಡಿಮೆ ಇದೆ.

published on : 17th January 2022

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 3 ಮಕ್ಕಳ ನಿಗೂಢ ಸಾವು, ವರದಿ ಕೇಳಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ 

ಜಿಲ್ಲಾಸ್ಪತ್ರೆ ಬಿಮ್ಸ್​ನಲ್ಲಿ ಮೂರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಸಾವಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ಆರಂಭವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕಾರಣ ಹೊರ ಬೀಳಲಿದೆ. ಮಕ್ಕಳ ಸಾವಿನ ಬಗ್ಗೆ ಕುಲಗೋಡ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

published on : 16th January 2022

ಮುಂದಿನ 2 ವಾರಗಳ ಕಾಲ ತೀವ್ರ ಅನಾರೋಗ್ಯದವರು, ಎಮರ್ಜೆನ್ಸಿ ಇರುವವರು ಮಾತ್ರ ಆಸ್ಪತ್ರೆಗೆ ಬನ್ನಿ: ಕರ್ನಾಟಕ ಸರ್ಕಾರ

ರಾಜ್ಯದಲ್ಲಿ ಕೊರೊನಾ ಹೆಚ್ಚಳ ಕಾಣುತ್ತಿರುವ ಹಿನ್ನೆಲೆಯಲ್ಲಿ ಎಮರ್ಜೆನ್ಸಿ ಚಿಕಿತ್ಸೆ ಅಗತ್ಯ ಇರುವವರು ಮಾತ್ರ ಆಸ್ಪತ್ರೆ ಪ್ರವೇಶಿಸಬಹುದೆಂದು ಕರ್ನಾಟಕ ಸರ್ಕಾರ ಸೂಚನೆ ಹೊರಡಿಸಿದೆ.

published on : 16th January 2022

ಶಿವಮೊಗ್ಗ: ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಗೃಹ ಸಚಿವ

ತೀರ್ಥಹಳ್ಳಿ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾನವೀಯತೆ ಮೆರೆದಿದ್ದಾರೆ.

published on : 15th January 2022

ಓಮಿಕ್ರಾನ್ ಏರಿಕೆ: ಸಕ್ರಿಯ ಪ್ರಕರಣಗಳ ಪೈಕಿ ಶೇ.5-10 ಕ್ಕೆ ಆಸ್ಪತ್ರೆಗಳ ಅಗತ್ಯವಿತ್ತು, ಪರಿಸ್ಥಿತಿ ಕ್ಷಿಪ್ರವಾಗಿ ಬದಲಾಗಬಹುದು- ಕೇಂದ್ರ

ಭಾರತದಲ್ಲಿ 24 ಗಂಟೆಗಳ ಅವಧಿಯಲ್ಲಿ 1,79,723 ಕೊರೋನಾ ಪ್ರಕರಣಗಳು 146 ಸಾವು ಸಂಭವಿಸಿದೆ.

published on : 10th January 2022

ದೆಹಲಿ: ಮೊಬೈಲ್ ಫೋನ್ ನುಂಗಿದ ತಿಹಾರ್ ಜೈಲಿನ ಕೈದಿ; ಆಸ್ಪತ್ರೆಗೆ ದಾಖಲು!

ಅತ್ಯುನ್ನತ ಭದ್ರತೆ ಇರುವ ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಕೈದಿಯೊಬ್ಬ ಮೊಬೈಲ್ ಪೋನ್ ಒಂದನ್ನು ನುಂಗಿ ಆಸ್ಪತ್ರೆ ಸೇರಿರುವುದಾಗಿ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಬುಧವಾರ ಈ ಘಟನೆ ನಡೆದಿರುವುದಾಗಿ  ಮಹಾನಿರ್ದೇಶಕ (ಕಾರಾಗೃಹ) ಸಂದೀಪ್ ಗೋಯೆಲ್ ಐಎಎನ್ ಎಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

published on : 7th January 2022

ಮೂರನೇ ಅಲೆ: ಕೋವಿಡ್-19 ಕಾರಣದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳ, ಲಸಿಕೆ ಪಡೆದವರೂ ಹೊರತಲ್ಲ!

ಕೋವಿಡ್-19 ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಲಸಿಕೆ ಪಡೆದವರು ಹಾಗೂ ಲಸಿಕೆ ಪಡೆಯದೇ ಇರುವವರೂ ಸಹ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. 

published on : 7th January 2022

ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿ ಹಾಸಿಗೆ ಕಾಯ್ದಿರಿಸಲು ಸರ್ಕಾರ ಆದೇಶ

ಕೋವಿಡ್ -19 ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ತಕ್ಷಣವೇ ಹಾಸಿಗೆಗಳ ಖಾತ್ರಿಗಾಗಿ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜ್ ಆಸ್ಪತ್ರೆಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಬುಧವಾರ ಆದೇಶ ಹೊರಡಿಸಿದ್ದಾರೆ. 

published on : 6th January 2022
1 2 3 4 5 6 > 

ರಾಶಿ ಭವಿಷ್ಯ