• Tag results for Indian army

ರಜೌರಿಯಲ್ಲಿ ಗುಂಡಿನ ಚಕಮಕಿ: ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯಾದ ರಜೌರಿಯ ಕಲಕೋಟೆ ಪ್ರದೇಶದಲ್ಲಿ ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿವೆ.

published on : 4th June 2020

ಪೂರ್ವ ಲಡಾಕ್ ನಲ್ಲಿ ಸಾಕಷ್ಟು ಸಂಖ್ಯೆಯ ಚೀನಾ ಸೇನಾಪಡೆ ಬೀಡುಬಿಟ್ಟಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಪೂರ್ವ ಲಡಾಕ್ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚೀನಾದ ಸೇನಾಪಡೆ ಬೀಡುಬಿಟ್ಟಿದ್ದು ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಎದುರಿಸಲು ಭಾರತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

published on : 3rd June 2020

ಭಾರತೀಯ ಸೇನೆಯ ಪರಾಕ್ರಮ: 13 ಭಯೋತ್ಪಾದಕರ ಹೆಡೆಮುರಿ ಕಟ್ಟಿದ ಯೋಧರು!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಬೇಟೆಯಾಡಿದ್ದು 13 ಭಯೋತ್ಪಾದಕರನ್ನು ಹೊಡೆದುರುಳಿಸಿದೆ.

published on : 1st June 2020

ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರ, ಲಾಂಚ್​ಪ್ಯಾಡ್​ಗಳು ಭರ್ತಿ: ಸೇನೆ ಎಚ್ಚರಿಕೆ

ಪಾಕ್​ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಇರುವ ಉಗ್ರರ ಶಿಬಿರಗಳು ಮತ್ತು 15 ಲಾಂಚ್​ಪ್ಯಾಡ್​ಗಳು ಉಗ್ರರಿಂದ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲೂ ವಿಧ್ವಂಸಕ ಕೃತ್ಯಗಳಿಗೆ ಮುಂದಾಗಬಹುದು ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.

published on : 1st June 2020

ಚೀನಾ ಗಡಿಯಲ್ಲಿ ಸೇನೆ ಮೇಲಿನ ಹಿಂಸಾಚಾರದ ವಿಡಿಯೋ ಸತ್ಯಕ್ಕೆ ದೂರವಾದುದ್ದು: ಭಾರತೀಯ ಸೇನೆ

ಭಾರತ-ಚೀನಾ ಗಡಿಯಲ್ಲಿ ಯಾವುದೇ ಹಿಂಸಾಚಾರದ ಘಟನೆಗಳು ನಡೆದಿಲ್ಲ. ಈ ಸಂಬಂಧ ಹೊರಬಿದ್ದಿರುವ ವಿಡಿಯೋಗಳು 'ದುರುದ್ದೇಶ'ದಿಂದ ಕೂಡಿವೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

published on : 31st May 2020

ಹಿಜ್ಬುಲ್‍ ಮುಜಾಹಿದ್ದೀನ್‍ ನ ಇಬ್ಬರು ಸ್ಥಳೀಯ ಮಟ್ಟದ ಕಾರ್ಯಕರ್ತರ ಬಂಧನ: ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶ

ಜಮ್ಮು-ಕಾಶ್ಮೀರದ ಗಡಿ ಜಿಲ್ಲೆಯಾದ ಕುಪ್ವಾರದ ಹಂದ್ವಾರಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್(ಎಚ್‌ಎಂ) ಸಂಘಟನೆಯ ಇಬ್ಬರ ಸ್ಥಳೀಯ ಮಟ್ಟದ ಕಾರ್ಯಕರ್ತರನ್ನು(ಒಜಿಡಬ್ಲ್ಯು) ಭದ್ರತಾ ಪಡೆಗಳು ಬಂಧಿಸಿದ್ದು, ಎರಡು ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ಬಂಧಿಸಿವೆ.

published on : 28th May 2020

ಪುಲ್ವಾಮದಲ್ಲಿ ಮತ್ತೊಮ್ಮೆ ದೊಡ್ಡಮಟ್ಟದ ದಾಳಿಗೆ ಉಗ್ರರ ಸಂಚು: ಯೋಧರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಮತ್ತೊಮ್ಮೆ ಭಾರೀ ದಾಳಿ ನಡೆಸಲು ಉಗ್ರರು ನಡೆಸಿದ್ದ ಸಂಚನ್ನು ಭಾರತೀಯ ಯೋಧರು ವಿಫಲಗೊಳ್ಳುವಂತೆ ಮಾಡಿದ್ದಾರೆ. ಬರೋಬ್ಬರಿ 20 ಕೆಜಿಗೂ ಹೆಚ್ಚು ತೂಕದ ಸುಧಾರಿತ ಸ್ಫೋಟಕ ಸಾಧನ (ಐಟಿಡಿ) ಹೊತ್ತು ಸಾಗುತ್ತಿದ್ದ ವಾಹನವನ್ನು ಭದ್ರತಾ ಪಡೆಗಳು ತಡೆದಿದ್ದು, ಈ ಮೂಲಕ ಭಾರೀ ಅನಾಹುತವೊಂದು ತಪ್ಪುವಂತೆ ಮಾಡಿದ್ದಾರೆ. 

published on : 28th May 2020

ಭಾರತೀಯ ಸೇನಾ ಮೇಜರ್ ಸುಮನ್ ಗವಾನಿ, ಬ್ರೆಜಿಲ್ ನೌಕಾಪಡೆ ಅಧಿಕಾರಿಗೆ ವಿಶ್ವಸಂಸ್ಥೆ ಮಿಲಿಟರಿ ಪ್ರಶಸ್ತಿ! 

ಭಾರತೀಯ ಸೇನಾ ಮೇಜರ್ ಸುಮನ್ ಗವಾನಿ ಹಾಗೂ ಬ್ರೆಜಿಲ್ ನ ನೌಕಾಪಡೆ ಅಧಿಕಾರಿ ಕಾರ್ಲಾ ಮಾಂಟೆರೋ ಡಿ ಕ್ಯಾಸ್ಟ್ರೊ ಅರೌಜೊ ಸೇನಾ ಲಿಂಗಸಮಾನತೆ ಪ್ರತಿಪಾದನೆಗಾಗಿ ವಿಶ್ವಸಂಸ್ಥೆಯಿಂದ ಕೊಡಮಾಡಲಾಗುವ ಪ್ರತಿಷ್ಠಿತ ಮಿಲಿಟರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

published on : 26th May 2020

ಗಡಿಯಲ್ಲಿ 5000 ಸೈನಿಕರ ನಿಯೋಜಿಸಿ ಚೀನಾ ದುಸ್ಸಾಹಸ: ಪ್ರತ್ಯುತ್ತರಕ್ಕೆ ಹೆಚ್ಚಿನ ಸೇನೆ ರವಾನಿಸಿದ ಭಾರತ!

ವಾಸ್ತವಿಕ ನಿಯಂತ್ರಣ ರೇಖೆ ಲಡಾಖ್ ಸೆಕ್ಟರ್‌ನ ವಿವಿಧ ಪ್ರದೇಶಗಳಲ್ಲಿ ಚೀನಾ 5 ಸಾವಿರ ಸೈನಿಕರನ್ನು ನಿಯೋಜಿಸಿ ಉಪಟಳ ನೀಡುತ್ತಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ತಮ್ಮ ಬಲಕ್ಕೆ ಸರಿ ಹೊಂದುವಂತೆ ಸೈನಿಕ ಬಲವನ್ನು ಹೆಚ್ಚಿಸುತ್ತೇವೆ ಎಂದು ಹೇಳಿದೆ. 

published on : 25th May 2020

ಜಮ್ಮು-ಕಾಶ್ಮೀರ: ಕುಲ್ಗಾಂನಲ್ಲಿ ಎನ್'ಕೌಂಟರ್, 2 ಉಗ್ರರನ್ನು ಹೊಡೆದುರುಳಿಸಿದ ಸೇನಾಪಡೆ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಭಾರತೀಯ ಸೇನಾಪಡೆ ಎನ್'ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಸೋಮವಾರ ತಿಳಿದುಬಂದಿದೆ. 

published on : 25th May 2020

ಲಡಾಖ್ ನಲ್ಲಿ ಭಾರತೀಯ ಯೋಧರ ಬಂಧಿಸಿದ ಚೀನಾ: ವರದಿ ತಿರಸ್ಕರಿಸಿದ ಭಾರತೀಯ ಸೇನೆ

ಲಡಾಖ್ ನಲ್ಲಿ ಭಾರತ ಹಾಗೂ ಚೀನಾ ನಡುವೆ ಸಂಘರ್ಷ ತಾರಕಕ್ಕೇರಿರುವ ನಡುವಲ್ಲೇ ಭಾರತೀಯ ಯೋಧರನ್ನು ಚೀನಾ ಪಡೆಗಳು ಕಳೆದ ವಾರ ಬಂಧನಕ್ಕೊಳಪಡಿಸಿತ್ತು ಎಂಬ ವರದಿಯನ್ನು ಭಾರತೀಯ ಸೇನಾಪಡೆ ತಿರಸ್ಕರಿಸಿದೆ. 

published on : 24th May 2020

ಯೋಧನಲ್ಲಿ ಕೊರೋನಾ ಸೋಂಕು: ಭಾರತೀಯ ಸೇನೆ ಕೇಂದ್ರ ಕಚೇರಿ ಭಾಗಶಃ ಬಂದ್

ರಾಜಧಾನಿ ದೆಹಲಿಯಲ್ಲಿರುವ ಭಾರತೀಯ ಸೇನೆ ಕೇಂದ್ರ ಕಚೇರಿಯಲ್ಲಿ ಸೈನಿಕರೊಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇನಾ ಭವನದ ಒಂದು ಭಾಗವನ್ನು ಮುಚ್ಚಲಾಗಿದೆ.

published on : 15th May 2020

ಉತ್ತರ ಸಿಕ್ಕಿಂನಲ್ಲಿ ಭಾರೀ ಹಿಮಪಾತ: ಭಾರತೀಯ ಸೇನೆ ಲೆಫ್ಟಿನೆಂಟ್ ಕರ್ನಲ್, ಯೋಧ ಬಲಿ

ಉತ್ತರ ಸಿಕ್ಕಿಂನ ಲುಗ್'ನಕ್ ಪರ್ವತ ಪ್ರದೇಶದಲ್ಲಿ ಗುರುವಾರ ಭಾರೀ ಹಿಮಪಾತ ಸಂಭವಿಸಿದ್ದು, ಪರಿಣಾಮ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಮತ್ತು ಯೋಧರೊಬ್ಬರು ಬಲಿಯಾಗಿದ್ದಾರೆಂದು ತಿಳಿದುಬಂದಿದೆ. 

published on : 15th May 2020

ಭಾರತೀಯ ಸೇನೆಯಿಂದ 'ಟೂರ್ ಆಫ್ ಡ್ಯೂಟಿ' ಪ್ರಸ್ತಾವನೆ: ಪ್ರತಿಭಾವಂತ ಯುವ ಜನತೆಗೆ ದೇಶ ಸೇವೆ ಮಾಡುವ ಅವಕಾಶ!

ದೇಶದ ಯುವ ಸದೃಢ ಕಾರ್ಯಕರ್ತರಿಗೆ ಭಾರತೀಯ ಸೇನೆಗೆ ಸೇರಿ ಮೂರು ವರ್ಷಗಳ ಕಾಲ ದೇಶಸೇವೆ ಮಾಡುವ ಅವಕಾಶ ಸಿಗಲಿದೆ. ಟೂರ್ ಆಫ್ ಡ್ಯೂಟಿ (Tour of Duty) ಎಂಬ ಪರಿಕಲ್ಪನೆಯಡಿ ಭಾರತೀಯ ಸೇನೆ ಪ್ರಸ್ತಾವನೆ ಸಲ್ಲಿಸಿದ್ದು ಇದು ಅನುಮೋದನೆ ಹಂತದಲ್ಲಿದೆ.

published on : 14th May 2020

ಸವಾಲಿಗೆ ತಕ್ಕ ಪ್ರತ್ಯುತ್ತರ: ಗಡಿಯಲ್ಲಿ ಹಾರಾಡಿದ ಚೀನಾ ಹೆಲಿಕಾಪ್ಟರ್‌ಗಳು, ರಂಗಕ್ಕಿಳಿದ ಭಾರತದ ಯುದ್ಧ ವಿಮಾನಗಳು!

ಕೊರೋನಾ ಮಹಾಮಾರಿಯನ್ನು ಬಿಟ್ಟಿದ್ದಲ್ಲದೆ ಚೀನಾ ಮತ್ತೊಮ್ಮೆ ಅಕ್ರಮಣಕಾರಿ ಕೃತ್ಯದಲ್ಲಿ ಭಾಗಿಯಾಗಿದೆ. ಇತ್ತೀಚಿಗೆ ಸಿಕ್ಕಿಂನ ನಾಕು ಲಾ ಪಾಸ್ ವಲಯದಲ್ಲಿ ಭಾರತೀಯ ಸೇನೆಯೊಂದಿಗೆ ಘರ್ಷಣೆಗೆ ಇಳಿದಿದ್ದ ಚೀನಾ ಪಡೆಗಳು, ಮತ್ತೊಮ್ಮೆ ಪ್ರಚೋದಾನಾತ್ಮಕ ಕೃತ್ಯ ನಡೆಸಿವೆ.

published on : 12th May 2020
1 2 3 4 5 6 >