• Tag results for Intel

ಇಂದು ಚುನಾವಣೆ ನಡೆದರೆ ಗುಜರಾತ್‌ನಲ್ಲಿ ಎಎಪಿ ಸರ್ಕಾರ ರಚನೆ; ಗುಪ್ತಚರ ಇಲಾಖೆ ವರದಿ ನೀಡಿದೆ ಎಂದ ಕೇಜ್ರಿವಾಲ್

ಗುಜರಾತ್‌ನಲ್ಲಿ ಇಂದು ಚುನಾವಣೆ ನಡೆದರೆ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ರಚನೆ ಮಾಡಲಿದೆ ಎಂದು ಗುಪ್ತಚರ ಇಲಾಖೆ ವರದಿ ಸೂಚಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ತಿಳಿಸಿದ್ದು, ಕಾಂಗ್ರೆಸ್ ತಕ್ಷಣವೇ ಅವರ ಹೇಳಿಕೆಯನ್ನು ತಿರಸ್ಕರಿಸಿದೆ.  

published on : 3rd October 2022

ಗುಪ್ತಚರ ಇಲಾಖೆ ಮುಖ್ಯಸ್ಥರಾಗಿ ತಪನ್ ಕುಮಾರ್ ದೇಕಾ ನೇಮಕ; ರಾ ಮುಖ್ಯಸ್ಥ ಗೋಯಲ್ ಅಧಿಕಾರಾವಧಿ 1 ವರ್ಷ ವಿಸ್ತರಣೆ!

ಹಿರಿಯ ಐಪಿಎಸ್‌ ಅಧಿಕಾರಿ ತಪನ್‌ ಕುಮಾರ್‌ ದೇಕಾ ಅವರನ್ನು ಗುಪ್ತಚರ ಸಂಸ್ಥೆ (ಐಬಿ) ಮುಖ್ಯಸ್ಥರನ್ನಾಗಿ ಶುಕ್ರವಾರ ನೇಮಿಸಲಾಗಿದ್ದು, ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ರಾ) ಮುಖ್ಯಸ್ಥ ಸಮಂತ್‌ ಕುಮಾರ್‌ ಗೋಯೆಲ್‌ ಅವರಿಗೆ ಒಂದು ವರ್ಷದ ಸೇವಾ ಅವಧಿ ವಿಸ್ತರಣೆಯಾಗಿದೆ.

published on : 24th June 2022

ಪ್ರವಾದಿ ಬಗ್ಗೆ ಹೇಳಿಕೆಗೆ ಇಸ್ಲಾಮಿಕ್ ರಾಷ್ಟ್ರಗಳ ಪ್ರತಿಭಟನೆ ಹಿಂದೆ ಪಾಕ್ ಕೈವಾಡ: ಗುಪ್ತಚರ ಇಲಾಖೆ 

ಬಿಜೆಪಿ ವಕ್ತಾರರು ಪ್ರವಾದಿ ಬಗ್ಗೆ ನೀಡಿದ್ದ ಹೇಳಿಕೆಗೆ ಭಾರತ ಸರ್ಕಾರ ಸ್ಪಷ್ಟನೆ ನೀಡಿದ್ದರೂ ಇಸ್ಲಾಮಿಕ್ ರಾಷ್ಟ್ರಗಳ ಪ್ರತಿಭಟನೆ, ಖಂಡನೆ ಇನ್ನೂ ನಿಂತಿಲ್ಲ. ಈ ನಡುವೆ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯೊಂದು ಗಮನ ಸೆಳೆಯುತ್ತಿದೆ. 

published on : 8th June 2022

ಪಂಜಾಬ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ದಾಳಿ ಪ್ರಕರಣ: ಭಯೋತ್ಪಾದಕರ ಕೃತ್ಯ ಶಂಕೆ ನಿರಾಕರಿಸಿದ ಪೊಲೀಸರು, ತಪ್ಪಿತಸ್ಥರ ಸುಮ್ಮನೆ ಬಿಡಲ್ಲ ಎಂದ ಸಿಎಂ ಭಗವಂತ್ ಮಾನ್

ಪಂಜಾಬ್​ನ ಮೊಹಾಲಿಯಲ್ಲಿರುವ ರಾಜ್ಯ ಗುಪ್ತಚರ ಇಲಾಖೆ ಕಚೇರಿ ಮೇಲೆ ನಡೆಸಲಾಗಿರುವ ದಾಳಿ ಪ್ರಕರಣದ ಹಿಂದೆ ಉಗ್ರರ ಕೈವಾಡ ಇರುವ ಶಂಕೆಗಳನ್ನು ಪಂಜಾಬ್ ಪೊಲೀಸರು ಮಂಗಳವಾರ ನಿರಾಕರಿಸಿದ್ದಾರೆ.

published on : 10th May 2022

ಪಂಜಾಬ್: ಗುಪ್ತಚರ ಕೇಂದ್ರ ಕಚೇರಿಯಲ್ಲಿ ಗ್ರೆನೇಡ್ ಸ್ಫೋಟ!

ಪಂಜಾಬ್ ಪೊಲೀಸ್‌ನ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿದೆ. 

published on : 9th May 2022

ಯುದ್ಧಭೂಮಿಯಲ್ಲಿ ಕೃತಕ ಬುದ್ಧಿಮತ್ತೆ: ನಾಳಿನ ಸಮರಕ್ಕೆ ಇಂದೇ ಸಜ್ಜುಗೊಳ್ಳುತ್ತಿದೆ ನಮ್ಮ ಭಾರತ

ಮಿಲಿಟರಿ ಕಾರ್ಯಾಚರಣೆಗಳಲ್ಲಿ ಬಳಸುವ ವಿಭಿನ್ನ ಹೋರಾಟದ ವ್ಯವಸ್ಥೆಗಳ ತರಬೇತಿಯಲ್ಲಿ ಸೈನಿಕರಿಗೆ ಸಹಾಯ ಮಾಡಲು ಶಕ್ತವಾದ ಮಾದರಿಗಳನ್ನು ರೂಪಿಸಲು ಸಿಸ್ಟಮ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್ ಕಲ್ಪನೆಗಳನ್ನು ಬಳಸಿಕೊಳ್ಳಲು ಎಐ ಸಹಾಯ ಮಾಡುತ್ತದೆ.

published on : 29th April 2022

ಉಕ್ರೇನ್ ಯುದ್ಧ ಕುರಿತು ಸಲಹೆಗಾರರಿಂದ ಪುಟಿನ್ ಗೆ ತಪ್ಪು ಮಾಹಿತಿ: ಅಮೆರಿಕ ಇಂಟೆಲ್

ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳ ಕಾರ್ಯಕ್ಷಮತೆಯ ಬಗ್ಗೆ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಸಲಹೆಗಾರರಿಂದ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಯುಎಸ್ ಗುಪ್ತಚರ ಅಧಿಕಾರಿಗಳು ನಿರ್ಣಯಿಸಿರುವುದಾಗಿ  ಎಂದು ಯುಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 30th March 2022

ಉಕ್ರೇನ್ ವಿಭಜಿಸಲು ರಷ್ಯಾ ಪ್ರಯತ್ನಿಸಬಹುದು- ಇಂಟೆಲ್

 ರಷ್ಯಾ ಉಕ್ರೇನ್ ಅನ್ನು ಎರಡು ಭಾಗಗಳಾಗಿ ಒಡೆಯಲು ಪ್ರಯತ್ನಿಸಬಹುದು ಎಂದು ಉಕ್ರೇನ್ ಮಿಲಿಟರಿ ಗುಪ್ತಚರ ಮುಖ್ಯಸ್ಥರು ಹೇಳಿದ್ದಾರೆ. 

published on : 27th March 2022

ಬೆಂಗಳೂರು: ಪುರಾತನ ಗೋಡೆ ಗಡಿಯಾರದಲ್ಲಿ ಬಚ್ಚಿಟ್ಟಿದ್ದ 40 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪುರಾತನ ಗೋಡೆ ಗಡಿಯಾರದಲ್ಲಿ ಬಚ್ಚಿಟ್ಟಿದ್ದ 40 ಲಕ್ಷ ರೂಪಾಯಿ ಮೌಲ್ಯದ ಅರ್ಧ ಕೆಜಿ ಆಂಫೆಟಮೈನ್ ಮತ್ತು ಆಮದು ಮಾಡಿಕೊಂಡ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಸಿಗರೇಟ್‌ಗಳನ್ನು ಇತ್ತೀಚೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಬೆಂಗಳೂರು ಘಟಕವು ಎರಡು ಪ್ರಮುಖ ವಶಪಡಿಸಿಕೊಂಡಿದೆ.

published on : 7th March 2022

ಗಣರಾಜ್ಯೋತ್ಸವ ದಿನದಂದು ಉಗ್ರರ ದಾಳಿ ಸಾಧ್ಯತೆ: ಇಂಟೆಲ್ ಎಚ್ಚರಿಕೆ, ದೆಹಲಿಯಲ್ಲಿ ಕಟ್ಟೆಚ್ಚರ

ಗಣರಾಜೋತ್ಸವ ಹಿನ್ನೆಲೆಯಲ್ಲಿ, ಸಂಭಾವ್ಯ ದಾಳಿ ಬಗ್ಗೆ ಗುಪ್ತಚರ ಏಜೆನ್ಸಿಗಳಿಂದ ಪೊಲೀಸರು ಮಾಹಿತಿ ಪಡೆದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

published on : 18th January 2022

9/11 ವಿಡಿಯೋದಲ್ಲಿ ಕಾಣಿಸಿಕೊಂಡ ಅಲ್ ಖೈದಾ ಮುಖ್ಯಸ್ಥ ಜವಾಹಿರಿ: ಸಾವಿನ ಸುದ್ದಿಗಳಿಗೆ ತೆರೆ

ಈ ಹಿಂದೆ ಜವಾಹಿರಿ ಸತ್ತಿದ್ದಾನೆ ಎಂದೇ ಹೇಳಲಾಗಿತ್ತು. ಅದರ ನಡುವೆಯೇ ಆತನ ವಿಡಿಯೋ ಬಿಡುಗಡೆಯಾಗಿದೆ. ವಿಡಿಯೋದಲ್ಲಿ ಆತ ಜೆರೂಸಲೇಂ ಕುರಿತು ಮಾತನಾಡಿದ್ದಾನೆ.

published on : 12th September 2021

ಅಫ್ಘಾನಿಸ್ತಾನ ಕುರಿತು ಪಂಚ ದೇಶಗಳ ಗುಪ್ತಚರ ಮುಖ್ಯಸ್ತರ ಸಭೆ ಕರೆದ ಪಾಕ್ ಐಎಸ್ ಐ ಮುಖ್ಯಸ್ಥ: ಭಾರತಕ್ಕೆ ಆಹ್ವಾನವಿಲ್ಲ

ದಕ್ಷಿಣ ಏಷ್ಯಾ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಬಗ್ಗೆ ಸಭೆಯಲ್ಲಿ ಮಾತುಕತೆ ನಡೆಯಿತು ಎನ್ನಲಾಗಿದೆ. ಈ ಸಭೆ ಬಗ್ಗೆ ಅಧಿಕೃತ ಮಾಹಿತಿಯನ್ನು ಪಾಕ್ ಬಹಿರಂಗಪಡಿಸಿಲ್ಲ. 

published on : 12th September 2021

ರಾಶಿ ಭವಿಷ್ಯ