• Tag results for Jail

ಕೋವಿಡ್ ಎರಡನೇ ಅಲೆ: ಜೈಲುಗಳಲ್ಲಿರುವ ಕೈದಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ದೇಶದಲ್ಲಿ ಕೋವಿಡ್ -19 ಪ್ರಕರಣಗಳಲ್ಲಿ ಅತ್ಯಂತ ಹೆಚ್ಚಳ ಗಮನಿಸಿದ ಸುಪ್ರೀಂ ಕೋರ್ಟ್, ಜೈಲುಗಳಲ್ಲಿರುವ ಕಳೆದ ವರ್ಷ ಜಾಮೀನು ಅಥವಾ ಪೆರೋಲ್ ಪಡೆದ ಎಲ್ಲ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಲು ಆದೇಶಿಸಿದೆ.

published on : 8th May 2021

ಭಾರತದಿಂದ ಬರುವವರಿಗೆ ಆಸ್ಟ್ರೇಲಿಯಾದಲ್ಲಿ ತಾತ್ಕಾಲಿಕ ನಿಷೇಧ: ನಿಯಮ ಉಲ್ಲಂಘಿಸಿದವರಿಗೆ ದಂಡ, 5 ವರ್ಷ ಜೈಲು ಶಿಕ್ಷೆ 

ಭಾರತದಿಂದ ವಾಪಸ್ಸಾಗುವ ಆಸ್ಟ್ರೇಲಿಯಾ ನಾಗರಿಕರಿಗೆ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧ ವಿಧಿಸಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ಜೈಲು ಶಿಕ್ಷೆ ಹಾಗೂ ದಂಡದ ಎಚ್ಚರಿಕೆಯನ್ನು ನೀಡಿದೆ. 

published on : 1st May 2021

ಮಂಗಳೂರು ಜೈಲಿನಲ್ಲಿ ಕೈದಿಗಳ ಮಾರಾಮಾರಿ: ಇಬ್ಬರಿಗೆ ಗಾಯ

ಮಂಗಳೂರು ಜಿಲ್ಲಾ ಉಪ ಕಾರಾಗೃಹದಲ್ಲಿ ಕೈದಿಗಳ  ನಡುವೆ ಮಾರಾಮಾರಿ ನಡೆದಿದ್ದು ಕನಿಷ್ಠ ಇಬ್ಬರಿಗೆ ಗಾಯಗಳಾಗಿದೆ.

published on : 25th April 2021

ಮುಂಬೈನ ಬೈಕುಲ್ಲಾ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ಸೇರಿದಂತೆ 38 ಕೈದಿಗಳಿಗೆ ಕೊರೋನಾ ಸೋಂಕು

ಶೀನಾ ಬೊರಾ ಹತ್ಯೆ ಕೇಸಿನ ಪ್ರಮುಖ ಅಪರಾಧಿ ಇಂದ್ರಾಣಿ ಮುಖರ್ಜಿ ಸೇರಿದಂತೆ ಮುಂಬೈಯ ಬೈಕುಲ್ಲಾ ಜೈಲಿನ 38 ಮಂದಿ ಕೈದಿಗಳಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಜೈಲಿನ ಸಿಬ್ಬಂದಿ ದೃಢಪಡಿಸಿದ್ದಾರೆ.

published on : 21st April 2021

ಉದ್ದೇಶಪೂರ್ವಕವಾಗಿ ಕೆಮ್ಮು, ಪೊಲೀಸ್ ಅಧಿಕಾರಿಗೆ ನಿಂದನೆ: ಸಿಂಗಾಪುರದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಶಿಕ್ಷೆ 

ಪೊಲೀಸ್ ಅಧಿಕಾರಿ ಬಳಿ ದುರ್ವರ್ತನೆ ತೋರಿದ ಭಾರತೀಯ ಮೂಲದ ವ್ಯಕ್ತಿಗೆ ಸಿಂಗಾಪುರ್ ನಲ್ಲಿ 14 ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 

published on : 29th March 2021

ಏಮ್ಸ್  ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಎಎಪಿ ಶಾಸಕ ಸೋಮನಾಥ ಭಾರ್ತಿಗೆ 2 ವರ್ಷ ಜೈಲುಶಿಕ್ಷೆ

2016ರಲ್ಲಿ  ಏಮ್ಸ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ಸೋಮನಾಥ  ಭಾರ್ತಿ ಅವರಿಗೆ ಮ್ಯಾಜಿಸ್ಟ್ರೇಟ್ ನೀಡಿದ್ದ ಎರಡು ವರ್ಷ ಜೈಲು ಶಿಕ್ಷೆ ತೀರ್ಪನ್ನು ಸೆಷನ್ಸ್  ನ್ಯಾಯಾಲಯ ಎತ್ತಿ ಹಿಡಿದಿದೆ

published on : 23rd March 2021

ಜೈಲಲ್ಲಿ ಶಶಿಕಲಾಗೆ ವಿಶೇಷ ಆತಿಥ್ಯ ವಿವಾದ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ ವಿ.ಕೆ.ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

published on : 16th March 2021

ಛತ್ತೀಸ್ ಗಢ: ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ ಎಸಗಿದ ನಕಲಿ ವೈದ್ಯನಿಗೆ 40 ವರ್ಷ ಜೈಲು ಶಿಕ್ಷೆ

2017 ರಲ್ಲಿ ಚಿಕಿತ್ಸೆ ನೀಡುವ ನೆಪದಲ್ಲಿ ಇಬ್ಬರು ಸಹೋದರಿಯರ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ನಕಲಿ ವೈದ್ಯನಿಗೆ ಕೋರ್ಟ್ ಎರಡು ಪ್ರಕರಣಗಳಲ್ಲಿ 40 ವರ್ಷ ಜೈಲು ಶಿಕ್ಷೆ ವಿಧಿಸಿದೆ.

published on : 11th March 2021

ಉತ್ತರ ಪ್ರದೇಶ ಜೈಲರ್ ಹತ್ಯೆ ಪ್ರಕರಣದ ಆರೋಪಿ ಎನ್ ಕೌಂಟರ್ ನಲ್ಲಿ ಸಾವು

ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್ ಟಿಎಫ್) ಉತ್ತರ ಪ್ರದೇಶದ ಜೈಲರ್ ಹತ್ಯೆ ಪ್ರಕರಣದ ಆರೋಪಿಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದೆ. 

published on : 4th March 2021

ಜೈಲಾಧಿಕಾರಿ ಸೇರಿ 8 ಮಂದಿ ಮಾರಣಹೋಮ: ಗ್ಯಾಂಗ್ ಸ್ಟರ್ ಸೇರಿದಂತೆ ಹಲವಾರು ಕೈದಿಗಳು ಪರಾರಿ!

ಹೈಟಿ ಪ್ರದೇಶದ ಕ್ರೋಯಿಕ್ಸ್ ಡೇಸ್ ಬಾಕಿಟ್ಸ್ ಪ್ರದೇಶದಲ್ಲಿ ಜೈಲಾಧಿಕಾರಿಯನ್ನು ಕೊಂದು 100ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ.

published on : 26th February 2021

ನೀರವ್‌ ಮೋದಿಗಾಗಿ ಮುಂಬೈ ಆರ್ಥರ್ ಜೈಲಿನಲ್ಲಿ ವಿಶೇಷ ಕೊಠಡಿ ಸಜ್ಜು

ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ಕೋರ್ಟ್‌ ಒಪ್ಪಿಗೆ ನೀಡುತ್ತಿದ್ದಂತೆಯೇ, ಇತ್ತ ಮುಂಬೈನ ಆರ್ಥರ್‌ ರಸ್ತೆಯ ಜೈಲಿನಲ್ಲಿ ಅವರಿಗಾಗಿ ವಿಶೇಷ ಕೊಠಡಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 26th February 2021

ಬ್ಯಾಂಕ್ ವಂಚನೆ: ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ಕೋರ್ಟ್ ಆದೇಶ 

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ನ ನ್ಯಾಯಾಲಯ ಆದೇಶ ನೀಡಿದೆ. 

published on : 25th February 2021

ಶಾಲಾ ಬಾಲಕಿ ಚುಡಾಯಿಸಿದ ಪ್ರಕರಣ: ಮಗನಿಗೆ ಬುದ್ಧಿವಾದ ಹೇಳದಿದ್ದಕ್ಕೆ ತಂದೆಗೂ ಜೈಲು ಶಿಕ್ಷೆ!

ಶಾಲಾ ಬಾಲಕಿಯನ್ನು ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ - ಮಗ ಹಾಗೂ ಮತ್ತೋರ್ವನಿಗೆ ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

published on : 17th February 2021

ಜೈಲನ್ನೂ ಬಿಡದ ಲವ್ ಸೆಕ್ಸ್ ಔರ್ ಧೋಖಾ; ತಿತಿಲಾಘಡ್ ಜೈಲಲ್ಲಿ ಮಹಿಳಾ ಕೈದಿ ಆರೋಪ!

ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡುವುದು ಎಲ್ಲೆಡೆ ಸಾಮಾನ್ಯ.. ಆದರೆ ಜೈಲಲ್ಲಿ.....!!!

published on : 9th February 2021

ತಿಹಾರ್ ಜೈಲಿನಲ್ಲಿ ರೈತರೊಂದಿಗೆ ಮಾತನಾಡಿದ್ದೇನೆ, ಆ ಕುರಿತು ಸಮಗ್ರ ವರದಿ ಬರೆಯುತ್ತೇನೆ: ಪತ್ರಕರ್ತ ಮಂದೀಪ್ ಪುನಿಯಾ

ತಿಹಾರ್ ಜೈಲಿನ ಒಳಗಡೆ ಇರುವ ರೈತರೊಂದಿಗೆ ಮಾತನಾಡಿದ್ದು, ತನ್ನ ಕಾಲಿನ ಮೇಲೆ ಅವರು ಹೇಳಿದ್ದನ್ನು ಬರೆದುಕೊಂಡಿರುವುದಾಗಿ ಸಿಂಘು ಗಡಿಯಲ್ಲಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಪ್ರಿಲಾನ್ಸ್  ಪತ್ರಕರ್ತ  ಮಂದೀಪ್ ಪೂನಿಯಾ ತಿಳಿಸಿದ್ದಾರೆ.

published on : 4th February 2021
1 2 3 4 >