• Tag results for Jammu-Kashmir

ಜಮ್ಮು-ಕಾಶ್ಮೀರ: ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆ ಸಹಚರ್ಯ ಹೊಂದಿದ್ದ ನಾಲ್ವರ ಬಂಧನ

ಲಷ್ಕರ್ ಎ-ತೊಯ್ಬಾ ಉಗ್ರಗಾಮಿ ಸಂಘಟನೆಯೊಂದಿಗೆ ಸಹಚರ್ಯ ಹೊಂದಿದ್ದ ನಾಲ್ಕು ಮಂದಿಯನ್ನು ಭದ್ರತಾ ಪಡೆ ಯೋಧರು ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಭಾನುವಾರ ಬಂಧಿಸಿದ್ದಾರೆ.

published on : 24th May 2020

ಶ್ರೀನಗರದಲ್ಲಿ ಎನ್ ಕೌಂಟರ್: ಇಬ್ಬರು ಯೋಧರಿಗೆ ಗಾಯ, ಮೊಬೈಲ್, ಇಂಟರ್ನೆಟ್ ಸೇವೆ ಕಡಿತ

ಇಲ್ಲಿನ ನವಕದಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಎನ್ ಕೌಂಟರ್ ನಲ್ಲಿ ಇಬ್ಬರು ಭದ್ರತಾ ಪಡೆ ಯೋಧರಿಗೆ ಗಾಯವಾಗಿದೆ. ಸದ್ಯ ಆ ಭಾಗದಲ್ಲಿ ಮೊಬೈಲ್ , ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದೆ.

published on : 19th May 2020

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಗಳಿಗೆ ನೀಡಿದ್ದ ಸವಲತ್ತುಗಳನ್ನು ಹಿಂಪಡೆದ ಮೋದಿ ಸರ್ಕಾರ!

ಜಮ್ಮು-ಕಾಶ್ಮೀರದ ಮಾಜಿ ಸಿಎಂ ಗಳಿಗೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಿಂಪಡೆದಿದೆ. 

published on : 1st April 2020

ಜಮ್ಮು-ಕಾಶ್ಮೀರ: ಏಳು ತಿಂಗಳ ಹಸುಗೂಸು, 8 ವರ್ಷದ ಬಾಲಕನಿಗೆ ಕೊರೋನಾ ಪಾಸಿಟಿವ್! 

ಜಮ್ಮು- ಕಾಶ್ಮೀರದಲ್ಲಿ ಏಳು ತಿಂಗಳ ಹಸುಗೂಸು ಹಾಗೂ ಎಂಟು ವರ್ಷದ ಬಾಲಕನೋರ್ವನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 27th March 2020

'ಒಮರ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡುವುದಾದರೆ ಮುಂದಿನ ವಾರದೊಳಗೆ ತಿಳಿಸಬೇಕು': ಕೇಂದ್ರಕ್ಕೆ ಸುಪ್ರೀಂ ತಾಕೀತು 

ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಗೃಹ ಬಂಧನದಲ್ಲಿಟ್ಟಿರುವ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಬಿಡುಗಡೆ ಮಾಡಲಾಗುತ್ತದೆಯೇ,ಇಲ್ಲವೇ ಎಂದು ಮುಂದಿನ ವಾರದೊಳಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಆಡಳಿತಕ್ಕೆ ತಿಳಿಸಿದೆ.

published on : 18th March 2020

ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಎನ್ ಕೌಂಟರ್: ನಾಲ್ವರು ಉಗ್ರರು ಹತ 

ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಭಾನುವಾರ ಬೆಳಿಗ್ಗೆ ಆರಂಭಿಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರು ಹತರಾಗಿದ್ದಾರೆ.

published on : 15th March 2020

ಗೃಹ ಬಂಧನದಿಂದ ಬಿಡುಗಡೆಯಾದ ಫಾರೂಕ್ ಅಬ್ದುಲ್ಲಾ ಹೇಳಿದ್ದಿಷ್ಟು 

ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಎನ್ ಸಿ ನಾಯಕ ಫಾರೂಕ್ ಅಬ್ದುಲ್ಲಾ ಗೃಹ ಬಂಧನದಿಂದ ಬಿಡುಗಡೆಯಾಗಿದ್ದು, ತಮ್ಮ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದ ಎಲ್ಲಾ ಸಂಸದರಿಗೂ ಧನ್ಯವಾದ ತಿಳಿಸಿದ್ದಾರೆ. 

published on : 13th March 2020

ಜಮ್ಮು-ಕಾಶ್ಮೀರದಲ್ಲಿ 7 ತಿಂಗಳ ಬಳಿಕ ಸಾಮಾಜಿಕ ಜಾಲತಾಣದ ಮೇಲಿನ ನಿರ್ಬಂಧ ತೆರವು

ಆರ್ಟಿಕಲ್ 370 ನೇ ವಿಧಿ ರದ್ದತಿ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಬರೊಬ್ಬರಿ 7 ತಿಂಗಳ ನಂತರ ತೆರವುಗೊಳಿಸಲಾಗಿದೆ. 

published on : 4th March 2020

ಪುಲ್ವಾಮಾ ದಾಳಿ: ಬಾಂಬರ್ ಗೆ ಆಶ್ರಯ ನೀಡಿದ್ದ ತಂದೆ, ಮಗಳನ್ನು ಬಂಧಿಸಿದ ಎನ್ ಐಎ

ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯಾ ಬಾಂಬರ್ ಅದಿಲ್ ಅಹ್ಮದ್ ದಾರ್ ನಿಗೆ ಆಶ್ರಯ ನೀಡಿದ್ದ ಒಬ್ಬ ಉಗ್ರನನ್ನು ಬಂಧಿಸಿದ ನಾಲ್ಕು ದಿನದ ನಂತರ ಇದೇ ಪ್ರಕರಣದಲ್ಲಿ ಇನ್ನಿಬ್ಬರನ್ನು ರಾಷ್ಟ್ರೀಯ ತನಿಖಾ ದಳ ಇಂದು ಬಂಧಿಸಿದೆ.

published on : 3rd March 2020

ಬೆಂಕಿಯಿಂದ ನಾಯಿಯನ್ನು ರಕ್ಷಿಸಲು ಹೋಗಿ ತಾನೇ ಬಲಿಯಾದ ಸೇನಾ ಅಧಿಕಾರಿ!

ಕೇಂದ್ರಾಡಳಿತ ಪ್ರದೇಶ ಜಮ್ಮು- ಕಾಶ್ಮೀರದ ಬಾರಮುಲ್ಲಾ ಡಿಲ್ಲೆಯ ಗುಲ್ನಾರ್ಗ್ ಪ್ರದೇಶದಲ್ಲಿ ಗುಂಡಿನ ದಾಳಿಯ ವೇಳೆಯಲ್ಲಿ ನಾಯಿಯನ್ನು ರಕ್ಷಿಸಲು ಹೋಗಿ ಸೇನಾ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

published on : 1st March 2020

ಜಮ್ಮು-ಕಾಶ್ಮೀರ: ಬಾರಮುಲ್ಲಾದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನ ಸೆರೆ, ಶಸ್ತ್ರಾಸ್ತ್ರಗಳ ವಶ

ಮಹತ್ವದ ಬೆಳವಣಿಗೆಯೊಂದರಲ್ಲಿ  ಜಮ್ಮು- ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ತಾಪ್ಪರ್ ಪಠಾಣ್ ಗ್ರಾಮದಲ್ಲಿ ಅನೇಕ ಉಗ್ರ ಸಂಬಂಧಿತ ಘಟನೆಗಳಲ್ಲಿ ಬೇಕಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಜುನೈದ್ ಫಾರೂಕ್ ಪಂಡಿತ್ ನನ್ನು ಭದ್ರತಾ ಪಡೆಗಳು ಇಂದು ಬಂಧಿಸಿದ್ದಾರೆ.

published on : 22nd February 2020

ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್: ಇಬ್ಬರು ಉಗ್ರರ ಹತ್ಯೆ, ಶಸ್ತ್ರಾಸ್ತ್ರಗಳ ವಶ 

ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಸಂಗಮ್ ಎಂಬಲ್ಲಿ ಶನಿವಾರ ನಸುಕಿನ ಜಾವ ನಡೆದ ಎನ್ ಕೌಂಟರ್ ನಲ್ಲಿ ಲಷ್ಕರ್ ಇ ತೊಯ್ಬಾ ಉಗ್ರಗಾಮಿ ಸಂಘಟನೆಯ ಇಬ್ಬರು ಮೃತಪಟ್ಟಿದ್ದಾರೆ.

published on : 22nd February 2020

'ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ': ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾಪವನ್ನೇ ತಿರಸ್ಕರಿಸಿದ ಭಾರತ!

ಕಾಶ್ಮೀರ ವಿಷಯದಲ್ಲಿ ಅಮೆರಿಕಾ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಭಾರತ ಇದೀಗ ವಿಶ್ವಸಂಸ್ಥೆಯ ಪ್ರಸ್ತಾಪವನ್ನೇ ತಳ್ಳಿಹಾಕಿದೆ.

published on : 17th February 2020

ಜಮ್ಮು-ಕಾಶ್ಮೀರ:ಷಾ ಫಾಸಲ್ ವಿರುದ್ಧ ಪಿಎಸ್ಎ ಪ್ರಕರಣ ದಾಖಲು, ಬಂಧನ

ಮಾಜಿ ನಾಗರಿಕ ಸೇವೆ ಅಧಿಕಾರಿ ಮತ್ತು ಜಮ್ಮು-ಕಾಶ್ಮೀರ ಪೀಪಲ್ಸ್ ಮೂವ್ ಮೆಂಟ್ (ಜೆಕೆಪಿಎಂ) ಮುಖ್ಯಸ್ಥ ಶಾ ಫಾಸಲ್ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ) ಅಡಿ ಕೇಸು ದಾಖಲಾಗಿದೆ. 

published on : 15th February 2020

ಕಣಿವೆ ರಾಜ್ಯದಲ್ಲಿ ತ್ವರಿತಗತಿಯಲ್ಲಿ ನಿರ್ಬಂಧ ತೆರವಿಗೆ ಯುರೋಪಿಯನ್ ಒಕ್ಕೂಟದ ನಿಯೋಗ ಕರೆ 

ಜಮ್ಮು- ಕಾಶ್ಮೀರದಲ್ಲಿ ಸಹಜ ಪರಿಸ್ಥಿತಿ ಮರುಕಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿರುವ ಯುರೋಪಿಯನ್ ಒಕ್ಕೂಟದ ನಿಯೋಗ ತ್ವರಿತಗತಿಯಲ್ಲಿ ನಿರ್ಬಂಧ ತೆರವುಗೊಳಿಸಲು ಕರೆ ನೀಡಿದೆ.

published on : 14th February 2020
1 2 3 4 5 6 >