- Tag results for Jharkhand
![]() | ಜಾರ್ಖಂಡ್: ಮಾವೋವಾದಿಗಳಿಂದ ಐಇಡಿ ಸ್ಫೋಟ, ಸಿಆರ್ ಪಿಎಫ್ ಯೋಧ ಸಾವು, ಅಧಿಕಾರಿಗೆ ಗಾಯಜಾರ್ಖಂಡ್ ನಲ್ಲಿ ಮಾವೋವಾದಿಗಳು ಸುಧಾರಿತ ಸ್ಫೋಟಕ ಸಾಧನದಿಂದ ಸ್ಫೋಟ ನಡೆಸಿದ್ದು, ಘಟನೆಯಲ್ಲಿ ಓರ್ವ ಸಿಆರ್ ಪಿಎಫ್ ಯೋಧ ಸಾವನ್ನಪ್ಪಿದ್ದಾನೆ. |
![]() | ಜಾರ್ಖಂಡ್: ಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕೆ ಸಿಡಿಲು ಬಡಿದು ಇಬ್ಬರ ಸಾವುಫುಟ್ಬಾಲ್ ಪಂದ್ಯದ ವೇಳೆ ಮೈದಾನಕ್ಕೆ ಸಿಡಿಲು ಬಡಿದು ಇಬ್ಬರ ಸಾವಿಗೀಡಾದ ಘಟನೆ ಜಾರ್ಖಂಡ್ ನಲ್ಲಿ ವರದಿಯಾಗಿದೆ. |
![]() | ಕಾಡಿನ ಮೇಲೆ ಅತ್ಯಂತ ಪ್ರೀತಿ, ಕಾಳಜಿ: ಜಾರ್ಖಂಡ್ ರಾಜ್ಯದ ಈ ಗ್ರಾಮಸ್ಥರಿಗೆ ರಸ್ತೆಯೇ ಬೇಡವಂತೆ!ಕಾಡಿನ ಮೇಲಿನ ಒಂದು ರೀತಿಯ ಪ್ರೀತಿಯಲ್ಲಿ, ರಸ್ತೆಯ ಕೊರತೆಯಿದ್ದರೂ ಯಾವುದೇ ವಾಹನ ತಲುಪಲು ಸಾಧ್ಯವಿಲ್ಲದಿದ್ದರೂ ಕೂಡ ಹೊರ ಪ್ರಪಂಚದಿಂದ ಬಹುತೇಕ ಪ್ರತ್ಯೇಕವಾಗಿರುವ ಜಾರ್ಖಂಡ್ ರಾಜ್ಯದ ಸಿಮ್ಡೆಗಾದ ಚಿಮ್ಟಿಘಾಟಿ ಗ್ರಾಮದ ಆದಿವಾಸಿಗಳು ಎರಡು ಬಾರಿ ರಸ್ತೆ ನಿರ್ಮಿಸುತ್ತೇವೆ ಎಂದು ಪ್ರಸ್ತಾಪ ಬಂದರೂ ನಿರಾಕರಿಸಿದ್ದಾರೆ. |
![]() | ಸುಗ್ಗಿ ಹಬ್ಬದ ಕರ್ಮ ಪೂಜೆಗೆ ಮರಳು ತರಲು ಹೋದ ನಾಲ್ವರು ಬಾಲಕಿಯರು ಕೊಳದಲ್ಲಿ ಮುಳುಗಿ ಸಾವು, ಓರ್ವ ಬಾಲಕಿ ರಕ್ಷಣೆ!ಮಂಗಳವಾರ ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಸುಗ್ಗಿಯ ಹಬ್ಬದ ಕರ್ಮ ಪೂಜೆಗೆ ಮರಳು ತರಲೆಂದು ಹೊಂಡಕ್ಕೆ ತೆರಳಿದ್ದ ನಾಲ್ವರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ. |
![]() | ಇಲ್ಲಿಗೆ ಯಾಕೆ ಬಂದ್ರಿ, ಹೈಕೋರ್ಟಿಗೆ ಹೋಗಿ: ಇಡಿ ಸಮನ್ಸ್ ಕುರಿತಂತೆ ಸಿಎಂ ಹೇಮಂತ್ ಸೋರೆನ್‌ಗೆ 'ಸುಪ್ರೀಂ' ಶಾಕ್ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ನೀಡಿರುವ ಸಮನ್ಸ್ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಗೆ ನಿರಾಸೆಯಾಗಿದೆ. ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದ್ದು ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಸಲಹೆ ನೀಡಿದೆ. |
![]() | ಸೆಲ್ಯೂಟ್ ಹೊಡೆಯದ್ದಕ್ಕೆ ಕೆಂಡಾಮಂಡಲ: ಯುವಕನಿಗೆ ಮನಬಂದಂತೆ ಥಳಿಸಿದ ಜಾರ್ಖಂಡ್ ಕಾಂಗ್ರೆಸ್ ನಾಯಕನ ಪುತ್ರ!ಸೆಲ್ಯೂಟ್ ಹೊಡೆಯದ್ದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡ ಜಾರ್ಖಂಡ್ ಕಾಂಗ್ರೆಸ್ ನಾಯಕನ ಪುತ್ರನೊಬ್ಬ, ಯುವಕನಿಗೆ ಮನಬಂದಂತೆ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. |
![]() | ಕುಕಿ ಸಮುದಾಯಕ್ಕೆ ಸೇರಿದ ಸೊಸೆಯನ್ನು ಬೆಡ್ ಶೀಟ್ ಮುಚ್ಚಿ ರಕ್ಷಣೆ: ಮಣಿಪುರ ಭೀಕರತೆ ಬಿಚ್ಚಿಟ್ಟ ಜಾರ್ಖಾಂಡ್ ಕುಟುಂಬ!ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಹಿಂಸಾಚಾರ ಪೀಡಿತ ರಾಜ್ಯದಿಂದ ಸ್ಥಳಾಂತರಗೊಳ್ಳಲು ಅಲ್ಲಿನ ಜನತೆ ಹರಸಾಹಸ ಪಡುತ್ತಿದ್ದಾರೆ. ಇದರಂತೆ ಮಣಿಪುರದಲ್ಲಿ 50 ವರ್ಷಗಳ ಹಿಂದೆ ವಲಸೆ ಹೋಗಿದ್ದ ಕುಟುಂಬವೊಂದು ಅದೃಷ್ಟವಶಾತ್ ಜಾರ್ಖಂಡ್'ನ ಸಿಮ್ಡೆಗಾದ ತಮ್ಮ ಸ್ವಗ್ರಾಮಕ್ಕೆ ಮರಳಿದ್ದು, ಮಣಿಪುರದಲ್ಲಿನ ಭೀಕರತೆಯನ್ನು ಬಿಚ್ಚಿಟ್ಟಿದೆ. |
![]() | ಬೆಂಗಳೂರು: ಬುದ್ಧಿ ಹೇಳಿದ್ದಕ್ಕೆ ಸಂಬಂಧಿಯನ್ನು ಕೊಂದ ಮದ್ಯವ್ಯಸನಿ!ಕೆಲಸದ ನಿಮಿತ್ತ ಜಾರ್ಖಂಡ್‌ನಿಂದ ಬೆಂಗಳೂರಿಗೆ ಬಂದಿದ್ದ 32 ವರ್ಷದ ಮದ್ಯವ್ಯಸನಿಯೊಬ್ಬ ತನ್ನ ಸಂಬಂಧಿಯನ್ನು ಕೊಲೆ ಮಾಡಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. |
![]() | ಜಾರ್ಖಂಡ್: ರಾಷ್ಟ್ರಧ್ವಜ ತಿರುಚಿದ ಆರೋಪದಲ್ಲಿ 18 ಜನರ ವಿರುದ್ಧ ಕೇಸ್ ದಾಖಲುಜಾರ್ಖಂಡ್ನ ಪಲಾಮು ಜಿಲ್ಲೆಯ ಚೈನ್‌ಪುರ್ ಪೊಲೀಸ್ ಠಾಣೆಯಲ್ಲಿ ಮೊಹರಂ ಮೆರವಣಿಗೆ ವೇಳೆ ರಾಷ್ಟ್ರಧ್ವಜವನ್ನು ತಿರುಚಿದ ಆರೋಪದ ಮೇಲೆ 18 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ... |
![]() | ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ತಂತಿ ತಗುಲಿ ನಾಲ್ವರು ಸಾವು: 10 ಮಂದಿಗೆ ಗಾಯಮೊಹರಂ ಹಬ್ಬದ ಮೆರವಣಿಗೆ ವೇಳೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ನಾಲ್ವರು ಮೃತಪಟ್ಟಿದ್ದಾರೆ 10 ಮಂದಿ ಗಾಯಗೊಂಡ ಘಟನೆ ಬೊಕಾರೊ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. |
![]() | ಅನೈತಿಕ ಸಂಬಂಧ: ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಥಳಿತ!ಮಣಿಪುರದಂತೆಯೇ ಜಾರ್ಖಂಡ್‌ನ ಗಿರಿಹಿಡ್‌ನಲ್ಲಿಯೂ ದಲಿತ ಮಹಿಳೆಯನ್ನು ಥಳಿಸಿರುವ ಪ್ರಕರಣ ಮುನ್ನೆಲೆಗೆ ಬಂದಿದೆ. ಈ ಪ್ರಕರಣವು ಗಿರಿದಿಹ್‌ನ ಸರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ದಲಿತ ಮಹಿಳೆಯನ್ನು ದುಷ್ಕರ್ಮಿಗಳು ಮೊದಲು ವಿವಸ್ತ್ರಗೊಳಿಸಿ ತೀವ್ರವಾಗಿ ಥಳಿಸಿ ಇಡೀ ರಾತ್ರಿ ಕಾಡಿನ ಮರಕ್ಕೆ ಕಟ್ಟಿ ಹಾಕಿದ್ದರು. |
![]() | ಜಾರ್ಖಂಡ್: ವಿದ್ಯಾರ್ಥಿನಿಯ ಅಶ್ಲೀಲ ವಿಡಿಯೋ ಮಾಡಿ, ಆನ್‌ಲೈನ್‌ನಲ್ಲಿ ಶೇರ್ ಮಾಡಿದ್ದ ಶಿಕ್ಷಕನ ಬಂಧನ9ನೇ ತರಗತಿ ವಿದ್ಯಾರ್ಥಿಯ ಅಶ್ಲೀಲ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ 28 ವರ್ಷದ ಶಿಕ್ಷಕನನ್ನು ಸೋಮವಾರ ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು... |
![]() | ಮಣಿಪುರ ಹಿಂಸಾಚಾರ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಪ್ರವೇಶಕ್ಕೆ ಜಾರ್ಖಾಂಡ್ ಸಿಎಂ ಆಗ್ರಹಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಮಧ್ಯಪ್ರವೇಶಿಸಿ ಈಶಾನ್ಯ ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಜಾರ್ಖಾಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಆಗ್ರಹಿಸಿದ್ದಾರೆ. |
![]() | ಹಣೆಗೆ ಬಿಂದಿ ಇಟ್ಟುಕೊಂಡಿದ್ದಕ್ಕೆ ಶಾಲೆಯಲ್ಲಿ ಥಳಿತ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಹಣೆಗೆ ಬಿಂದಿ (Bindi) ಧರಿಸಿ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿಯನ್ನು (Student) ಶಿಕ್ಷಕಿಯೊಬ್ಬರು (Teacher) ಥಳಿಸಿದ್ದು, ಘಟನೆಯಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. |
![]() | ಜಾರ್ಖಂಡ್: ಡಿಆರ್ ಎಂ ಪತ್ನಿಗೆ ಶೂ ಕಳಚಲು ಹೇಳಿದ್ದೇ ತಪ್ಪಾಯ್ತು!: ಕಳಚಿದ್ದು ಆಸ್ಪತ್ರೆಯ ಸಿಬ್ಬಂದಿಯ ಬಟ್ಟೆ!ವೈದ್ಯರ ಚೇಂಬರ್ ಗೆ ಬರುವುದಕ್ಕೂ ಮುನ್ನ ಶೂ ಕಳಚಿ ಒಳ ಪ್ರವೇಶಿಸುವಂತೆ ಡಿಆರ್ ಎಂ ಪತ್ನಿಗೆ ಕೇಳಿದ ಆಸ್ಪತ್ರೆಯ ಸಿಬ್ಬಂದಿಯನ್ನು ಅರೆನಗ್ನಗೊಳಿಸಿ ಮನೆಗೆ ಕಳಿಸಿರುವ ವಿಕೃತ ಘಟನೆ ಜಾರ್ಖಂಡ್ ನಲ್ಲಿ ವರದಿಯಾಗಿದೆ. |