• Tag results for KRS dam

ಕೆಆರ್‌ಎಸ್‌ ಜಲಾಶಯಕ್ಕೆ ಅಪಾಯ ವಿಷಯ ಕೇಂದ್ರದ ಅಂಗಳಕ್ಕೆ: ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಸುಮಲತಾ

ಅಕ್ರಮ ಗಣಿಗಾರಿಕೆಯಿಂದ ವಿಶ್ವವಿಖ್ಯಾತ ಕೆಆರ್ ಎಸ್ ಜಲಾಶಯಕ್ಕೆ ಅಪಾಯ ಉಂಟಾಗುತ್ತಿದ್ದು ಇದರ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಿ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಜಲಾಶಯದ ಸುರಕ್ಷತೆ ಕಾಪಾಡುವಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಮಾಡಿದ್ದಾರೆ.

published on : 20th July 2021

ಪದೇ ಪದೇ ಕೆಆರ್ ಎಸ್ ಬಿರುಕು ಬಿಟ್ಟಿದೆ ಎನ್ನುವುದು ಸರಿಯಲ್ಲ, ಜನರು ಭಯಭೀತರಾಗುತ್ತಾರೆ: ಆರ್.ಅಶೋಕ್ 

ಕೆಆರ್ ಎಸ್ ಡ್ಯಾಂ ಸುರಕ್ಷಿತವಾಗಿದೆ ಎಂದು ಸರ್ಕಾರ ಹೇಳಿದ ಮೇಲೂ ಪದೇ ಪದೇ ಬಿರುಕು ಬಿಟ್ಟಿದೆ ಎಂದು ಹೇಳುವುದು ಸರಿಯಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ.

published on : 14th July 2021

ಕೆಆರ್ ಎಸ್ ಬಿರುಕು ಬಿಟ್ಟಿದೆಯಾ ಎಂದು ನಾನು ಆತಂಕ ವ್ಯಕ್ತಪಡಿಸಿ ಪ್ರಶ್ನೆ ಮಾಡಿದ್ದೆ, ಅದು ತಪ್ಪೇ: ಸಂಸದೆ ಸುಮಲತಾ

ನಾನು ಹೇಳುವುದು ರಾಜಕೀಯ ಲಾಭಕ್ಕಾದರೆ ಮಾಧ್ಯಮಗಳು ಕೂಡ ಹಾಗಾದರೆ ತಪ್ಪಾಗಿ ವರದಿ ಮಾಡುತ್ತಿವೆಯೇ, ಅಷ್ಟಕ್ಕೂ ಕೆಆರ್ ಎಸ್ ಬಿರುಕು ಬಿಟ್ಟಿದೆಯೇ ಎಂದು ಆತಂಕ ವ್ಯಕ್ತಪಡಿಸುವುದರಲ್ಲಿ ತಪ್ಪೇನಿದೆ ಎಂದು ಮಂಡ್ಯ ಸಂಸದೆ ಸುಮಲತಾ ಪ್ರಶ್ನಿಸಿದ್ದಾರೆ.

published on : 14th July 2021

ಕೆಆರ್‌ಎಸ್‌ ಸುರಕ್ಷತೆಯ ದೃಷ್ಟಿಯಿಂದ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಕ್ಕೆ ಚಿಂತನೆ: ನಾರಾಯಣಗೌಡ

ಕೆಆರ್‌ಎಸ್‌ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಪಾಂಡವಪುರ ತಾಲ್ಲೂಕು ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಲು ತೀರ್ಮಾನಿಸಲಾಗಿದೆ.

published on : 13th July 2021

ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ನಿಲ್ಲುವುದಿಲ್ಲ, ಸದ್ಯದಲ್ಲಿಯೇ ಕೆಆರ್ ಎಸ್ ಗೆ ಹೋಗುತ್ತೇನೆ: ಸುಮಲತಾ ಅಂಬರೀಷ್

ಸದ್ಯದಲ್ಲಿಯೇ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಮತ್ತು ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಅಕ್ರಮ ಗಣಿಗಾರಿಕೆ ಬಗ್ಗೆ ಪರಿಶೀಲಿಸುತ್ತೇನೆ ಎಂದು ಮಂಡ್ಯ ಸಂಸದ ಸುಮಲತಾ ಅಂಬರೀಷ್ ಹೇಳಿದ್ದಾರೆ.

published on : 10th July 2021

ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ; ಮುಖ್ಯ ಎಂಜಿನಿಯರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ: ಸಚಿವ ಮುರುಗೇಶ್ ನಿರಾಣಿ

ಕೃಷ್ಣ ರಾಜ ಸಾಗರ ಅಣೆಕಟ್ಟು ಬಿರುಕು ಬಿಟ್ಟಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ನೀಡಿರುವ ಹೇಳಿಕೆ ಈಗ ಸಂಸದೆ ಮತ್ತು ಜೆಡಿಎಸ್ ನಾಯಕರ ಮಧ್ಯೆ ತೀವ್ರ ವಾಗ್ಯುದ್ಧಗಳಿಗೆ ಕಾರಣವಾಗಿರುವುದರ ಮಧ್ಯೆ ಗಣಿ ಇಲಾಖೆ ಸಚಿವ ಮುರುಗೇಶ್ ನಿರಾಣಿ ವಿಜಯಪುರದಲ್ಲಿ ಹೇಳಿಕೆ ನೀಡಿದ್ದಾರೆ.

published on : 10th July 2021

ಕೆಆರ್ ಎಸ್ ಡ್ಯಾಂ ಬಿರುಕುಬಿಟ್ಟಿದ್ದರೆ ಕರೆದುಕೊಂಡು ಹೋಗಿ ತೋರಿಸಲಿ, ಮುಖ್ಯಮಂತ್ರಿಗಳ ಗಮನಕ್ಕೆ ತರಲಿ: ಸಂಸದ ಪ್ರತಾಪ್ ಸಿಂಹ 

ಕೆಆರ್ ಎಸ್ ಬಿರುಕು ಬಿಟ್ಟಿದೆಯೇ, ಮಾಧ್ಯಮದವರು ಖುದ್ದಾಗಿ ಹೋಗಿ ನೋಡಿದ್ದೀರಾ ಅಥವಾ ಬಿರುಕು ಬಿಟ್ಟಿದೆ ಎನ್ನುವವರು ಮಾಧ್ಯಮದವರನ್ನು ಕರೆದುಕೊಂಡು ಹೋಗಿ ತೋರಿಸಿದ್ದಾರಾ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

published on : 8th July 2021

ಮಹಿಳೆಯ ಬಗ್ಗೆ ಹಗುರ ಮಾತು ಸರಿಯಲ್ಲ.. ಮೈಶುಗರ್ ಕಾರ್ಖಾನೆ ಬಗ್ಗೆ ಸಿಎಂ ಆಗಿದ್ದಾಗ ಏಕೆ ಮಾತನಾಡಲಿಲ್ಲ: ಎಚ್ ಡಿಕೆ ವಿರುದ್ಧ ಸಂಸದೆ ಸುಮಲತಾ

ಕೃಷ್ಣ ರಾಜ ಸಾಗರ ಅಣೆಕಟ್ಟು ಬಿರುಕು ವಿಚಾರವಾಗಿ ತಮ್ಮ ವಿರುದ್ಧ ಮಾತನಾಡಿರುವ ಮಾಜಿ ಸಿಎಂ ಎಚ್ ಡಿ ಕುಮಾರ ಸ್ವಾಮಿ ಅವರ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಅಂಬರಿಷ್ ಅವರು ವಾಗ್ದಾಳಿ ನಡೆಸಿದ್ದು, ಮಹಿಳೆಯ ಬಗ್ಗೆ ಹೀಗೆಲ್ಲಾ ಹಗುರವಾಗಿ ಮಾತನಾಡುವುದು ಸರಿಯೇ?.. ಮೈಶುಗರ್  ಕಾರ್ಖಾನೆ ಬಗ್ಗೆ ಸಿಎಂ ಆಗಿದ್ದಾಗ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

published on : 5th July 2021

ನಿಷೇಧವಿದ್ದರೂ ಕೆಆರ್ಎಸ್ ಡ್ಯಾಂ ಮೇಲೆ ಪೊಲೀಸ್ ಜೀಪ್‌ನಲ್ಲೇ ಯುವಕನ ಜಾಲಿ ರೈಡ್, ವಿಡಿಯೋ ವೈರಲ್!

ಭದ್ರತೆಯ ದೃಷ್ಟಿಯಿಂದ ಕೆಆರ್ಎಸ್ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದೆ. ಆದರೆ ಯುವಕನೋರ್ವ ಪೊಲೀಸ್ ಜೀಪ್ ನಲ್ಲಿ ಕುಳಿತು ಜಾಲಿ ರೈಡ್ ಮಾಡಿದ್ದಾನೆ. ಅಲ್ಲದೆ ಯುವಕ ಆಟಾಟೋಪವನ್ನು ಪೊಲೀಸಪ್ಪನೇ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

published on : 27th February 2021

ರಾಶಿ ಭವಿಷ್ಯ