• Tag results for KSRTC

ಹೊಸಪೇಟೆ: ಕೆಎಸ್ಆರ್'ಟಿಸಿ ಬಸ್​-ಲಾರಿ ಮುಖಾಮುಖಿ ಡಿಕ್ಕಿ; 25 ಜನರಿಗೆ ಗಾಯ

ಕೆಎಸ್ಆರ್'ಟಿಸಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹೊಸಪೇಟೆ ತಾಲೂಕಿನ ಕೊಟಗಿನಾಳ ಗ್ರಾಮದ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ.

published on : 16th June 2022

ಡೀಸೆಲ್ ಬೆಲೆ ಏರಿಕೆ: ಕೆಎಸ್ಆರ್‏ಟಿಸಿ‏ ಬಸ್ ಟಿಕೆಟ್ ದರ ಹೆಚ್ಚಿಸಲು ಚಿಂತನೆ

ಕಳೆದ ಕೆಲವು ತಿಂಗಳುಗಳಿಂದ ಡೀಸೆಲ್ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸಂಸ್ಥೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

published on : 14th June 2022

ಸಾವಿಗೆ ಮುನ್ನ ಅಪಘಾತ ತಪ್ಪಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ!

ತನಗೆ ಹೃದಯಾಘಾತವಾಗಿದೆ ಎಂಬ ಸುಳಿವು ಅರಿತ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಕೂಡಲೇ ಬಸ್‌ ನಿಲ್ಲಿಸಿ ಸಂಭವನೀಯ ಅಪಘಾತ ತಪ್ಪಿಸಿದ ಘಟನೆ ನಡೆದಿದೆ.

published on : 4th June 2022

ಬೆಂಗಳೂರು: ಮಹಿಳೆಯ ಕಪಾಳಕ್ಕೆ ಹೊಡೆದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಬಂಧನ

ದಾಸರಹಳ್ಳಿ ಬಸ್ ನಿಲ್ದಾಣದ ಬಳಿ ಮಂಗಳವಾರ ಬೆಳ್ಳಂಬೆಳಗ್ಗೆ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

published on : 25th May 2022

ಕಾರ್ಮಿಕರ ದಿನಾಚರಣೆ: ಕೆಎಸ್ಆರ್‌ಟಿಸಿಯಲ್ಲಿ ಪ್ರಪ್ರಥಮ ಬಾರಿಗೆ 7200 ನೌಕರರ ಶಿಸ್ತು ಪ್ರಕರಣಗಳು ರದ್ದು‌!

ಕಾರ್ಮಿಕರ ದಿನಾಚರಣೆ ದಿನವೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ್ದು, ಪ್ರಪ್ರಥಮ ಬಾರಿಗೆ 7200 ನೌಕರರ ವಿರುದ್ಧದ ಶಿಸ್ತು ಪ್ರಕರಣಗಳನ್ನು ರದ್ದು ಮಾಡಿದೆ.

published on : 1st May 2022

ಸಾಲು ಸಾಲು ರಜೆ ಹಿನ್ನೆಲೆ, ಕೆಎಸ್‌ಆರ್‌ ಟಿಸಿಯಿಂದ 300 ಹೆಚ್ಚುವರಿ ಬಸ್ ವ್ಯವಸ್ಥೆ

ಗುರುವಾರದಿಂದ ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿಯಿಂದ 300 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ಬೆಳಗಾವಿ, ಕುಂದಾಪುರ, ಧರ್ಮಸ್ಥಳ, ಗೋಕರ್ಣ, ಹೊರನಾಡು, ಮಂಗಳೂರು, ಮಡಿಕೇರಿ, ಶೃಂಗೇರಿ, ಉಡುಪಿ, ಕುಕ್ಕೆ ಸುಬ್ರಹ್ಮಣ್ಯ ಮತ್ತಿತರ ಕಡೆಗಳಿಗೆ ಈ ಬಸ್ ಗಳ ಸಂಚಾರವಿರಲಿದೆ.

published on : 12th April 2022

ಯುಗಾದಿ ಹಬ್ಬದ ಎಫೆಕ್ಟ್: ಹೆಚ್ಚುವರಿ 600 ಬಸ್‌ಗಳ ಓಡಿಸಲು ಕೆಎಸ್ಆರ್ ಟಿಸಿ ನಿರ್ಧಾರ!!

ಯುಗಾದಿ ಹಬ್ಬದ ನಿಮಿತ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಏಪ್ರಿಲ್ 1 ಮತ್ತು 2 ರಂದು ಹೆಚ್ಚುವರಿ 600 ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ.

published on : 27th March 2022

ಉಕ್ರೇನ್ ನಿಂದ ಬಂದ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಿಂದ ಉಚಿತ ಪ್ರಯಾಣ: ರಾಜ್ಯ ಸರ್ಕಾರ ನಿರ್ಧಾರ

ಯುದ್ಧಪೀಡಿತ ಉಕ್ರೇನ್ ನಿಂದ ರಾಜ್ಯಕ್ಕೆ ಬಂದಿಳಿಯುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಿಂದ ಉಚಿತ ಬಸ್ ಸೇವೆ ಒದಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

published on : 28th February 2022

ದೂರ ಪ್ರಯಾಣ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್ ನಿಯೋಜನೆ: ಕೆಎಸ್ಸಾರ್ಟಿಸಿ ನಿರ್ಧಾರ

ರಾಜ್ಯದ ದೂರದ ಸ್ಥಳಗಳ ಮಾರ್ಗಗಳಿಗೂ ಎಲೆಕ್ಟ್ರಿಕ್ ಬಸ್ಸುಗಳನ್ನು ನಿಯೋಜಿಸಲು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ಧರಿಸಿದೆ. 

published on : 11th February 2022

ಕೆಎಸ್ ಆರ್ ಟಿಸಿ ಬಸ್ ಚಾಲಕನಿಗೆ ಜೈಲು ಶಿಕ್ಷೆ ಬದಲು ದಂಡಕ್ಕೆ ಸೀಮಿತಗೊಳಿಸಿದ ಹೈಕೋರ್ಟ್: ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದು

ವಿಚಾರಣಾಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಿದ್ದುಪಡಿ ತಂದು ಆದೇಶ ಹೊರಡಿಸಿದೆ. ಅದು ಕೆಎಸ್ ಆರ್ ಟಿಸಿ ಚಾಲಕರಿಗೆ ಸಂಬಂಧಿಸಿದ್ದು. ಚಾಲಕನಿಗೆ ನೀಡಿದ ಶಿಕ್ಷೆ ಆತನ ವೃತ್ತಿಯ ಮೇಲೆ ಪರಿಣಾಮ ಬೀರಿ ಆತನ ಉದ್ಯೋಗದ ಬಗ್ಗೆ ಕಪ್ಪುಚುಕ್ಕೆ ತೋರಿಸಬಾರದು ಎಂದು ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಚಾಲಕನಿಗೆ ಕೇವಲ ದಂಡ ವಿಧಿಸುವ ಮೂಲಕ ಜೈಲುಶಿಕ್ಷೆಯಿಂದ ಪಾರುಮಾಡಿ

published on : 30th January 2022

ದಾವಣಗೆರೆ: ಸ್ಕೂಟರ್ ಸವಾರನ ಜೀವ ಬದುಕಿಸಿದ ಹೆಲ್ಮೆಟ್!

ಹೆಲ್ಮೆಟ್ ಅಥವಾ ಶಿರಸ್ತ್ರಾಣ ಅನೇಕ ಸಲ ದ್ವಿಚಕ್ರ ವಾಹನ ಸವಾರರ ಪ್ರಾಣ ಉಳಿಸಿದ ಘಟನೆಗಳು ನಮ್ಮ ಮುಂದೆ ಬೇಕಾದಷ್ಟು ಸಲ ನಡೆದಿರುತ್ತವೆ. ಇಲ್ಲವೇ ಕೇಳಿರುತ್ತೇವೆ. 

published on : 22nd January 2022

ಬಂದ್'ಗೆ ಬೆಂಬಲ ವ್ಯಕ್ತಪಡಿಸಿ ಕರ್ತವ್ಯಕ್ಕೆ ಗೈರು ಹಾಜರಾಗದಿರಿ: ಸಿಬ್ಬಂದಿಗೆ ಕೆಎಸ್ಆರ್'ಟಿಸಿ ಸೂಚನೆ

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಿಸುವಂತೆ ಆಗ್ರಹಿಸಿ ಡಿ.31ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಈ ಬಂದ್'ಗೆ ಸಾರಿಗೆ ನೌಕರರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಗೈರು ಹಾಜರಾಗದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

published on : 27th December 2021

ಕೆಎಸ್ ಆರ್ ಟಿಸಿ, ಬಿಎಂಟಿಸಿ ಖಾಸಗೀಕರಣ ಇಲ್ಲ: ಮೇಲ್ಮನೆಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಖಾಸಗೀಕರಣದ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಮಾಜ ಕಲ್ಯಾಣ ಸಚಿವರು ಆಗಿರುವ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ನಲ್ಲಿ ಹೇಳಿದ್ದಾರೆ.

published on : 24th December 2021

ಕೆಎಸ್ಆರ್ ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರ ದುರ್ಮರಣ

ದಾವಣಗೆರೆ ಜಿಲ್ಲೆಯ ನ್ಯಾಮತಿ ಬಳಿ ಕೆಎಸ್ಆರ್ ಟಿಸಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ನಾಲ್ವರು ದುರ್ಮರಣ ಹೊಂದಿದ್ದಾರೆ. 

published on : 17th December 2021

ಬಸ್ಸಿನಲ್ಲಿ ಪ್ರಯಾಣಿಸುವಾಗ ಮೊಬೈಲ್‌ನಲ್ಲಿ ಜೋರಾಗಿ ಹಾಡು ಹಾಕಿದ್ರೆ ಕೆಳಗಿಳಿಸುತ್ತಾರೆ ಹುಷಾರ್!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಮೊಬೈಲ್ ಸ್ಪೀಕರ್‌ಗಳಲ್ಲಿ...

published on : 12th November 2021
1 2 3 4 5 > 

ರಾಶಿ ಭವಿಷ್ಯ