- Tag results for Kambala
![]() | ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ವೀರ ಕಂಬಳ' ಚಿತ್ರದಲ್ಲಿ ಪ್ರಕಾಶ್ ರೈ ವಕೀಲ ಪಾತ್ರ!ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಮ್ಮ ಐತಿಹಾಸಿಕ ಸಿನಿಮಾ ವೀರ ಕಂಬಳದ ಶೂಟಿಂಗ್ ಶೀಘ್ರವೇ ಮುಗಿಸಲಿದ್ದಾರೆ. ಸಿನಿಮಾಗಾಗಿ ಕಥೆ ಬರೆಯಲು ನಿರ್ದೇಶಕರು ಸುಮಾರು 2 ವರ್ಷಗಳ ಮಯ ತೆಗೆದುಕೊಂಡಿದ್ದಾರೆ. |
![]() | 2,000 ವರ್ಷಗಳಷ್ಟು ಹಳೆಯದಾದ 'ಕಂಬಳ' ಕ್ರೀಡೆಯನ್ನು ಇಡೀ ವಿಶ್ವದ ಮುಂದೆ ಪ್ರಸ್ತುತ ಪಡಿಸಲು ಬಯಸುತ್ತೇನೆ: ರಾಜೇಂದ್ರ ಸಿಂಗ್ ಬಾಬುಜನಪ್ರಿಯ ಗ್ರಾಮೀಣ ಕ್ರೀಡೆಯಾದ ಕಂಬಳವು ಕೆಲ ಚಿತ್ರ ನಿರ್ಮಾಪಕರ ಗಮನವನ್ನು ಸೆಳೆದಿದೆ. ಈ ಪೈಕಿ ರಾಜೇಂದ್ರ ಸಿಂಗ್ ಬಾಬು ಅವರು, ವೀರ ಕಂಬಳ ಎಂಬ ಶೀರ್ಷಿಕೆ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. |
![]() | 'ಕಾಂತಾರ' ಸಿನಿಮಾಗಾಗಿ ಕಂಬಳ ಓಟದ ದೃಶ್ಯ ಚಿತ್ರೀಕರಿಸಿದ ರಿಷಬ್ ಶೆಟ್ಟಿರಾಜ್. ಬಿ ಶೆಟ್ಟಿ ನಿರ್ದೇಶನದ ಗರುಡಗಮನ ವೃಷಭ ವಾಹನ ಸಿನಿಮಾದ ನಟನೆಯ ಬಗ್ಗೆ ಭಾರೀ ಪ್ರಮಾಣದಲ್ಲಿ ಪ್ರಶಂಸೆ ಪಡೆದ ನಟ ರಿಷಬ್ ಶೆಟ್ಟಿ ತಮ್ಮ ಮುಂದಿನ ಸಿನಿಮಾ 'ಕಾಂತಾರ' ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. |
![]() | ಕೊರೋನಾ ಕರ್ಫ್ಯೂ ತೆರವು: ಮತ್ತೆ ಮೊಳಗಲಿದೆ ಕಂಬಳದ ಕಹಳೆದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ನೈಟ್ ಕರ್ಫ್ಯೂ ತೆರವುಗೊಂಡಿದ್ದು, ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ 2021-22ನೇ ಸಾಲಿನ ಉಳಿದ ರೇಸ್ಗಳನ್ನು ಪುನರಾರಂಭಿಸಲು ಸಿದ್ಧವಾಗಿದೆ. |
![]() | ಕಂಬಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೋಣ ಓಡಿಸಲಿದ್ದಾರೆ ಐವರು ಹೆಣ್ಣು ಮಕ್ಕಳು!ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಓಟ, ತುಳುನಾಡಿನ ಅಪ್ಪಟ ಜನಪದ ಆಟವಾಗಿದ್ದು, ಇದು ಕರಾವಳಿಯ ಹೆಮ್ಮೆಯ ಕಂಬಳ. ಜಾನಪದ ಕ್ರೀಡೆಯಾದ ಕಂಬಳ ಇದೀಗ ಮತ್ತೊಂದು ಇತಿಹಾಸ ಸೃಷ್ಟಿಸುವತ್ತ ಮುಖ ಮಾಡಿದೆ. ಕಂಬಳದ ಕೋಣಗಳನ್ನು ಹೆಣ್ಣು ಮಕ್ಕಳು ಓಡಿಸುವ ಮೂಲಕ ಇದೆ ಮೊದಲ ಬಾರಿಗೆ ಹೊಸ ಚರಿತ್ರೆಯನ್ನು ಸೃಷ್ಟಿ ಮಾಡುವ ಚಿಂತನೆಯಲ್ಲಿದೆ. |
![]() | ಮೂಡಬಿದಿರೆ: 'ಕಂಬಳದ ಉಸೇನ್ ಬೋಲ್ಟ್' ಖ್ಯಾತಿಯ ಶ್ರೀನಿವಾಸ ಗೌಡರಿಗೆ ಜೀವ ಬೆದರಿಕೆ!'ಕಂಬಳದ ಉಸೇನ್ ಬೋಲ್ಟ್' ಹೆಸರಿನಿಂದ ಜನಪ್ರಿಯವಾಗಿರುವ ಮತ್ತು 'ಕರ್ನಾಟಕ ಕ್ರೀಡಾ ರತ್ನ' ಪ್ರಶಸ್ತಿ ವಿಜೇತ ಅಶ್ವತ್ ಪುರ ಶ್ರೀನಿವಾಸ್ ಗೌಡ ಅವರ ಮೊಬೈಲ್ ಗೆ ಬೆದರಿಕೆ ಕರೆಯೊಂದು ಬಂದಿದೆ. ಅತ್ತ ಕಡೆಯಿಂದ ಕರೆ ಮಾಡಿರುವ ವ್ಯಕ್ತಿ ಬೆದರಿಕೆ ಹಾಕಿದ್ದಲ್ಲದೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನೆಂದು ವರದಿಯಾಗಿದೆ. ಈ ಕರೆಯ ರೆಕಾರ್ಡಿಂಗ್ ಸೋಶಿಯಲ್ ಮೀಡಿಯಾದಲ್ಲ |
![]() | ಕೇವಲ 8.96 ಸೆಂಕೆಂಡ್ ಗಳಲ್ಲಿ 100 ಮೀ. ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದ ಕಂಬಳ ವೀರ ಶ್ರೀನಿವಾಸ್ ಗೌಡಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದಿರುವ ಕಂಬಳ ವೀರ ಶ್ರೀನಿವಾಸ್ ಗೌಡ ಅವರು ಕೇವಲ 8.96 ಸೆಕೆಂಡುಗಳಲ್ಲಿ 100 ಮೀಟರ್ ಕ್ರಮಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. |
![]() | ಕಂಬಳ ಓಟ: ಉಡುಪಿಯ ಬೈಂದೂರಿನ ವಿಶ್ವನಾಥ್ ದೇವಾಡಿಗ ಹೊಸ ದಾಖಲೆ!ಕರಾವಳಿಯ ಜನಪದ ಕ್ರೀಡೆ ಕಂಬಳದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಬೈಂದೂರಿನ ವಿಶ್ವನಾಥ್ ಓಡಿಸಿದ ಕೋಣಗಳು 9.15 ಸೆಕೆಂಡ್ ಗಳಲ್ಲಿ 100 ಮೀಟಲ್ ಓಡಿ ಹೊಸ ದಾಖಲೆ ನಿರ್ಮಿಸಿದೆ. |
![]() | ಜನವರಿ 30ರಂದು ಸುಪ್ರಸಿದ್ಧ ಕಂಬಳ: ನಳಿನ್ ಕುಮಾರ್ ಕಟೀಲ್ಕೋವಿಡ್ 19 ಮಾರ್ಗಸೂಚಿಗಳನ್ನು ಅನುಸರಿಸಿ ಜನವರಿ 30 ರಿಂದ ಕರಾವಳಿ ಕರ್ನಾಟಕದ ಪ್ರಸಿದ್ಧ ಕ್ರೀಡೆ ಕಂಬಳ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. |
![]() | ಗೊಂದಲಗಳಿಗೆ ತೆರೆ: ಜನವರಿ ಅಂತ್ಯದಿಂದ ಕರಾವಳಿಯಲ್ಲಿ ಕಂಬಳ ಋತು ಪ್ರಾರಂಭಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ತಿಂಗಳುಗಳ ಕಾಲದ ಗೊಂದಲದ ನಂತರ ಇದೀಗ ಜನವರಿ ಕಡೆಯ ವಾರದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಇತರೆ ಕರಾವಳಿ ಜಿಲ್ಲೆಗಳಲ್ಲಿ ಕಂಬಳ ಋತು ಮತ್ತೆ ಪ್ರಾರಂಭವಾಗುವ ನಿರೀಕ್ಷೆ ಇದೆ. |