• Tag results for Kannada Film

ಯಾವ ನಿರೀಕ್ಷೆಗಳೂ ಇಲ್ಲದೆ ನಾನು ಸಿನಿಮಾ ರಂಗ ಪ್ರವೇಶಿಸಿದ್ದೇನೆ: ನಟಿ ರಚನಾ ಇಂದರ್

ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಚನಾ ಇಂದರ್ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್‌ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ನಟಿಯರಾದ ಅದಿತಿ ಪ್ರಭುದೇವ ಮತ್ತು ಮೇಘಾ ಶೆಟ್ಟಿ ಕೂಡ ಇದ್ದಾರೆ.

published on : 15th November 2022

ಪುನೀತ್ ರಾಜ್‌ಕುಮಾರ್‌ರನ್ನು ಕಿರುತೆರೆಗೆ ಕರೆತಂದಿದ್ದ ಅನುಪ್ ಚಂದ್ರಶೇಖರನ್ ಈಗ ಸಿನಿಮಾ, ವೆಬ್ ಸೀರಿಸ್‌ನತ್ತ

ಟಿವಿ ಮನರಂಜನೆಯಲ್ಲಿ ಮೂರು ದಶಕಗಳ ಅನುಭವ ಹೊಂದಿರುವ ಹಾಗೂ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕಾಗಿ ಪುನೀತ್ ರಾಜ್‌ಕುಮಾರ್ ಅವರನ್ನು ಕಿರುತೆರೆಗೆ ಕರೆತಂದ ಅನುಪ್ ಚಂದ್ರಶೇಖರನ್ ಇದೀಗ ಸಿನಿಮಾ ರಂಗದತ್ತ ಮುಖಮಾಡಿದ್ದಾರೆ.

published on : 15th November 2022

ವಿಜಯಾನಂದ: ನಿಹಾಲ್‌ನನ್ನು ನೋಡಿದಾಗ ನನ್ನ ಚಿಕ್ಕ ವಯಸ್ಸಿನ ದಿನಗಳು ನೆನಪಾದವು ಎಂದ ವಿಜಯ ಸಂಕೇಶ್ವರ್

ರಿಷಿಕಾ ಶರ್ಮಾ ನಿರ್ದೇಶನದ 'ವಿಜಯಾನಂದ' ಸಿನಿಮಾ ಖ್ಯಾತ ಉದ್ಯಮಿ ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ಚಿತ್ರವಾಗಿದೆ. ಈ ಚಿತ್ರ ಡಿಸೆಂಬರ್ 9 ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ.

published on : 8th November 2022

ಕನ್ನಡ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ ತೆಲುಗು ನಟ ವಿಷ್ಣು ಮಂಚು

ಕನ್ನಡದ ಕಾಂತಾರ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿರುವ ತೆಲುಗಿನ ಹಿರಿಯ ನಟ ಮೋಹನ್ ಬಾಬು ಅವರ ಪುತ್ರ, ನಟ ವಿಷ್ಣು ಮಂಚು ಅವರು, ಭವಿಷ್ಯದಲ್ಲಿ ಕನ್ನಡ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

published on : 17th October 2022

ಹೆಡ್ ಬುಷ್ ಸಿನಿಮಾದ ಯಶಸ್ಸು ಕನ್ನಡ ಚಿತ್ರರಂಗದಲ್ಲಿ ಮುಂದಿನ ಹೆಜ್ಜೆ ಇಡಲು ಸಹಾಯ ಮಾಡುತ್ತದೆ: ಪಾಯಲ್ ರಜಪೂತ್

ಪಾಯಲ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುವ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದ್ದು, ಅಂತಿಮವಾಗಿ ಶೂನ್ಯಾ ನಿರ್ದೇಶನದ, ಧನಂಜಯ್ ಅಭಿನಯದ ಹೆಡ್ ಬುಷ್‌ ಚಿತ್ರದೊಂದಿಗೆ ಕೊನೆಗೊಂಡಿದೆ. ಹೆಡ್ ಬುಷ್ ಚಿತ್ರದ ನಾಯಕ ನಟ ಮತ್ತು ನಿರ್ಮಾಪಕ ಧನಂಜಯ್ ತನ್ನನ್ನು ಪಾತ್ರಕ್ಕಾಗಿ ಸಂಪರ್ಕಿಸಿದರು ಎನ್ನುತ್ತಾರೆ ನಟಿ.

published on : 15th October 2022

ಹಿಂದಿ ಅವತರಣಿಕೆಯಲ್ಲಿ ಅಕ್ಟೋಬರ್ 14ಕ್ಕೆ ಕನ್ನಡದ 'ಕಾಂತಾರ' ಸಿನಿಮಾ ಬಿಡುಗಡೆ

ಕನ್ನಡ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಸಿನಿಮಾದ ಹಿಂದಿ ಆವೃತ್ತಿಯನ್ನು ಅಕ್ಟೋಬರ್ 14 ರಂದು ಬಿಡುಗಡೆ ಮಾಡುವುದಾಗಿ ಭಾನುವಾರ ಹೊಂಬಾಳೆ ಫಿಲಂಸ್ ಪ್ರಕಟಿಸಿದೆ.

published on : 9th October 2022

ಕಾಂತಾರ ಚಿತ್ರ ವೀಕ್ಷಣೆ ವೇಳೆ ಗಲಾಟೆ: ಪೊಲೀಸ್ ಮೊರೆ ಹೋದ ಸಂಗೀತ ನಿರ್ದೇಶಕ ವಾಸುಕಿ ವೈಭವ್!

ಕನ್ನಡದ ಕಾಂತಾರ ಚಿತ್ರ ವೀಕ್ಷಣೆಗೆಂದು ತೆರಳಿದ್ದ  ಖ್ಯಾತ, ಉದಯೋನ್ಮುಖ ಸಂಗೀತ ನಿರ್ದೇಶಕ ವಾಸುಕಿ ವೈಭವ್ ರೊಂದಿಗೆ ಯುವಕರ ಗುಂಪೊಂದು ಗಲಾಟೆ ಮಾಡಿದ್ದು, ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿದೆ.

published on : 7th October 2022

ಪ್ಯಾನ್ ಇಂಡಿಯಾದತ್ತ 'ಕಾಂತಾರ': ಅಕ್ಟೋಬರ್ 9 ರಂದು ಹಿಂದಿ ಟ್ರೈಲರ್ ಬಿಡುಗಡೆ!

ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಗಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಪ್ಯಾನ್ ಇಂಡಿಯಾದತ್ತ ಮುಖ ಮಾಡಿದೆ.

published on : 7th October 2022

‘ಹೈಪರ್ ಆಕ್ಟಿವ್’ ಮಕ್ಕಳ 'ರೂಬಿಕ್ಸ್' ಶೀಘ್ರದಲ್ಲೇ ತೆರೆಗೆ

ಮಕ್ಕಳ ಮನಸ್ಸು ಬಹಳ ಮುಗ್ದ. ಒಂದು ಚೂರು ನೋವಾದರೂ ತಡೆದುಕೊಳ್ಳಲಾಗದಷ್ಟು ಸೂಕ್ಮ್ಮ. ಇತ್ತೀಚಿನ ಮಕ್ಕಳಂತೂ ಬಹಳ ಚುರುಕು, ‘ಹೈಪರ್ ಆಕ್ಟಿವ್’ ಎಂಬಷ್ಟು. ಇಂತಹ ಮಕ್ಕಳಲ್ಲಿ ಹುಟ್ಟುವುದು ತರಹೇವಾರಿ, ವೈವಿಧ್ಯಮಯ...

published on : 6th October 2022

ಕರುನಾಡಿನಲ್ಲಿ 'ಶ್ರೀಮಂತ' ರೈತನಾದ ನಟ ಸೋನು ಸೂದ್!

ದರ್ಶನ್ ಅವರ ಕುರುಕ್ಷೇತ್ರ (2019) ಚಿತ್ರದಲ್ಲಿ ಅರ್ಜುನ ಪಾತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸೋನು ಸೂದ್, ಒಂದು ವಿರಾಮದ ನಂತರ ಮತ್ತೆ ಕನ್ನಡ ಸಿನಿಮಾಗೆ ಮರಳಿದ್ದಾರೆ.

published on : 3rd October 2022

ನನ್ನ ಜೀವನದ ಅನುಭವಗಳಿಂದಲೇ ನನ್ನ ಸಿನಿಮಾದ ಕಥೆಗಳನ್ನು ರಚಿಸಲಾಗಿದೆ: ವಿಜಯ್ ಪ್ರಸಾದ್

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ವಿಜಯ ಪ್ರಸಾದ್, ಡಬಲ್ ಮೀನಿಂಗ್‌ನೊಂದಿಗೆ ಹಾಸ್ಯವನ್ನು ಬೆರೆಸುವಲ್ಲಿ ಹೆಸರುವಾಸಿ. ಆದರೆ, ಅವರ ಕಥೆಗಳು ಯಾವಾಗಲೂ ಪ್ರಮುಖ ಸಂದೇಶವನ್ನು ಕೂಡ ಹೊಂದಿರುತ್ತವೆ. ಅವರ ಮುಂದಿನ ತೋತಾಪುರಿ ಕೂಡ ಆಸಕ್ತಿದಾಯಕ ವಿಷಯವನ್ನು ಹೊಂದಿದೆ.

published on : 29th September 2022

ಭಕ್ತಿ ಪ್ರಧಾನ ಚಿತ್ರ 'ವಿಶ್ವರೂಪಿಣಿ ಹುಲಿಗೆಮ್ಮ' ಅವತಾರದಲ್ಲಿ ಪ್ರಿಯಾಂಕಾ ಉಪೇಂದ್ರ

ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್ ಅವರ ಮೊದಲ ಭಕ್ತಿ ಪ್ರಧಾನ ಸಿನಿಮಾ 'ವಿಶ್ವರೂಪಿಣಿ ಹುಲಿಗೆಮ್ಮ' ಚಿತ್ರದಲ್ಲಿ ಮೊದಲ ಬಾರಿಗೆ ದೇವಿ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಹೊಸಪೇಟೆಯಲ್ಲಿ ಶೂಟಿಂಗ್‌ನಲ್ಲಿರುವ ನಟಿ, ಚಿತ್ರದ ಬಗ್ಗೆ ಕೆಲವು ವಿವರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

published on : 10th August 2022

'ವಿಕಿಪೀಡಿಯ’ ಸಿನಿಮಾ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಯಶವಂತ್‌ ಎಂಟ್ರಿ!

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ವಿಕಿಪೀಡಿಯ’ ಸಿನಿಮಾದ ಕೆಲಸಗಳು ಸದ್ದಿಲ್ಲದೆ ಪೂರ್ಣಗೊಂಡಿದ್ದು, ಈಗಾಗಲೇ ಪ್ರಾದೇಶಿಕ ಸೆನ್ಸಾರ್‌ ಮಂಡಳಿಯಿಂದ ಸಿನಿಮಾಕ್ಕೆ “ಯು/ಎ’ ಪ್ರಮಾಣ ಪತ್ರ ಕೂಡ ಸಿಕ್ಕಿದೆ.

published on : 4th August 2022

'ಲವ್‌ ಲಿ' ಚಿತ್ರದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೆಫಿ ಪಟೇಲ್ ಕನ್ನಡಕ್ಕೆ ಎಂಟ್ರಿ!

ಈಗಾಗಲೇ ತೆಲುಗಿನಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಟೆಫಿ ಪಟೇಲ್, ತಮಿಳಿನಲ್ಲಿ ಇನ್ನೂ ಬಿಡುಗಡೆಯಾಗದಿರುವ ಬಾರ್ಡರ್, ಚೈನೀಸ್-ಇಂಗ್ಲಿಷ್ ಚಿತ್ರ ಮತ್ತು ಮುಂಬರುವ ಹಿಂದಿ ಚಿತ್ರ ಹರಿ ಓಂ ಹರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

published on : 18th July 2022

ರಾಕಿಂಗ್ ಸ್ಟಾರ್ ಯಶ್ ನಟನೆಯ 19ನೇ ಸಿನಿಮಾ ಇನ್ನೂ ನಿಗೂಢ; ಮುಂದಿನ ಚಿತ್ರದಲ್ಲೂ ಮಾಡ್ತಾರಾ ಹಂಗಾಮ?

ಕೆಜಿಎಫ್ ಸಿನಿಮಾ ನಂತರ ರಾಕಿಂಗ್ ಸ್ಟಾರ್ ಯಶ್ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರ ಗಡ್ಡಕ್ಕೂ ಅಪಾರ ಪ್ರಮಾಣದ ಅಭಿಮಾನಿಗಳಿದ್ದಾರೆ.

published on : 14th July 2022
1 2 3 4 5 > 

ರಾಶಿ ಭವಿಷ್ಯ