- Tag results for Karkala
![]() | ಕಾರ್ಕಳ: ರಸ್ತೆಗೆ ನಾಥೂರಾಂ ಗೋಡ್ಸೆ ಹೆಸರು; ಕಾಂಗ್ರೆಸ್ ಆಕ್ರೋಶ, ನಾಮಫಲಕ ತೆರವು!ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಯೊಂದಕ್ಕೆ ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಸ್ಥಳೀಯ ಯುವ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿತ್ತು. |
![]() | ಕಸಮುಕ್ತ ತಾಲ್ಲೂಕಿಗೆ ಕಾರ್ಕಳ ಬ್ರಿಗೇಡ್ ಪಣ: ಸ್ವಚ್ಛತಾ ಅಭಿಯಾನಕಾರ್ಕಳದ ರಸ್ತೆಗಳು, ಪ್ರವಾಸಿ ತಾಣಗಳು, ಪರ್ವತಗಳು, ನದಿ ದಡಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇತರ ಜೈವಿಕವಾಗಿ ಕರಗದ ವಸ್ತುಗಳನ್ನು ಅಜಾಗರೂಕತೆಯಿಂದ ಎಸೆಯುವುದರಿಂದ ತನ್ನ ಸಹಜ ಸೌಂದರ್ಯವನ್ನು ಕಳೆದುಕೊಂಡಿತ್ತು. ಇಲ್ಲಿನ ಸೌಂದರ್ಯವನ್ನು ಮರುಕಳಿಸಲು ಕೆಲವರು ಪಣತೊಟ್ಟು ಪರಿಸರ ಸ್ವಚ್ಛತೆ ಕಾಪಾಡಲು ಮುಂದಾಗಿದ್ದಾರೆ. |
![]() | ಐತಿಹಾಸಿಕ ಖಟ್ಕರ್ಕಲನ್ ನಲ್ಲಿ ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣಪಂಜಾಬ್ ವಿಧಾನಸಭಾ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತ ಅಧಿಕಾರಕ್ಕೇರಲಿದೆ. ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರು ಧುರಿ ಕ್ಷೇತ್ರದಲ್ಲಿ ಜಯದ ಪತಾಕೆ |
![]() | ಹಿಜಾಬ್ ವಿವಾದ ಹಿಂದೆ ಕಾಂಗ್ರೆಸ್ ಷಡ್ಯಂತ್ರ, ಕಾಲೇಜು ಫೀಸ್ ಕಟ್ಟಲು ಆಗದವರು ಕೋರ್ಟ್ ಮೆಟ್ಟಿಲೇರುವುದು ಹೇಗೆ?: ಬಿಜೆಪಿ ಸಚಿವರ ಆರೋಪಸರ್ಕಾರಿ ಶಾಲೆಗೆ ಫೀಸ್ ಕಟ್ಟಲು ಆಗದವರಿಗೆ ಕೋರ್ಟ್ ಮೆಟ್ಟಿಲು ಹತ್ತುವುದಕ್ಕೆ ಯಾರು ಬೆಂಬಲ ಕೊಟ್ಟಿದ್ದಾರೆ, ಕೋರ್ಟ್, ವ್ಯಾಜ್ಯಗಳಿಗೆ ನೀಡಲು ಎಲ್ಲಿಂದ ಹಣ ಬರುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ. |
![]() | ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶ ನೀಡಲಿ: ಸಚಿವ ಸುನಿಲ್ ಕುಮಾರ್ಹಿಜಾಬ್ ವಿವಾದ ವ್ಯವಸ್ಥಿತ ಷಡ್ಯಂತ್ರ. ಹಿಜಾಬ್, ಬುರ್ಖಾ ಇತ್ಯಾದಿಗಳನ್ನು ಮುಸಲ್ಮಾನ ಹೆಣ್ಣುಮಕ್ಕಳು ಮನೆಯಿಂದ ಶಾಲೆ, ಕಾಲೇಜು ಕಂಪೌಂಡ್ ವರೆಗೆ ಹಾಕಿಕೊಂಡು ಬರಲಿ, ಅದಾದ ನಂತರ ತರಗತಿಗಳಲ್ಲಿ ಕುಳಿತುಕೊಳ್ಳುವಾಗ ಎಲ್ಲಾ ವಿದ್ಯಾರ್ಥಿಗಳಂತೆಯೇ ಸಮವಸ್ತ್ರದಲ್ಲಿ ಕುಳಿತುಕೊಳ್ಳುವುದು ಸಂಪ್ರದಾಯ ಎಂದು ಸಚಿವ ಸುನಿಲ್ ಕುಮಾರ್ ಕಾರ್ಕಳ ಹೇಳಿದ್ದಾರೆ. |
![]() | ಬಿಪಿನ್ ರಾವತ್ ಹೆಲಿಕಾಪ್ಟರ್ ಪತನ: ಮೃತಪಟ್ಟ ಲೆ.ಕ. ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭಾರತೀಯ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಉಡುಪಿ ಜಿಲ್ಲೆಯ ಕಾರ್ಕಳದ ಅಳಿಯ. |
![]() | ಉಡುಪಿ: ಕಂದಕಕ್ಕೆ ಉರುಳಿ ಬಿದ್ದ ಟ್ರಕ್, ನಾಲ್ವರು ಸಾವುಜಿಲ್ಲೆಯ ಆಗುಂಬೆ ಘಾಟಿಯ 5ನೇ ಕ್ರಾಸ್ ನಲ್ಲಿ ಟ್ರಕ್ ಕಂದಕಕ್ಕೆ ಉರುಳಿಬಿದ್ದು ನಾಲ್ವರು ಮೃತಪಟ್ಟು ಇತರ ಐವರಿಗೆ ಗಾಯಗೊಂಡಿರುವ ಘಟನೆ ನಡೆದಿದೆ. |
![]() | ಕಾಂಕ್ರೀಟ್ ಸೇತುವೆಗೆ ಸಡ್ಡು; ಹಸಿರು ಅರೇಕಾ ಸೇತುವೆಗಳ ನಿರ್ಮಾಣ; ಪರಿಸರ ಪ್ರೇಮಿಯ ಮಹತ್ವದ ಸೇವೆಪುರುಷೋತ್ತಮ್ ಅಡ್ವೆ... ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಮ್ಮ ಪರಿಸರ ಸ್ನೇಹಿ ಕಾರ್ಯಗಳಿಂದಲೇ ತಕ್ಕ ಮಟ್ಟಿಗೆ ಖ್ಯಾತಿ ಗಳಿಸಿದವರು. ಸ್ಥಳೀಯ ಗ್ರಾಮಸ್ಥರ ಕೌಶಲ್ಯಗಳನ್ನೇ ಬಳಸಿಕೊಂಡು ವಿನೂತನ ರೀತಿಯಲ್ಲಿ ಪರಿಸರ ಸ್ನೇಹಿ ಸೇತುವೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. |
![]() | ಕಾರ್ಕಳ: ನಿರ್ಮಾಣ ಹಂತದ ಬಾವಿಗಿಳಿದ ಕಾರ್ಮಿಕ ಉಸಿರುಗಟ್ಟಿ ಸಾವುನಿರ್ಮಾಣ ಹಂತದ ಬಾವಿಗಿಳಿದ ಕಾರ್ಮಿಕನೊಬ್ಬ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದು ಇನ್ನಿಬ್ಬರು ಅನಾರೋಗ್ಯಕ್ಕೆ ಒಳಗಾಗಿರುವ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ನಡೆದಿದೆ. |
![]() | ಕಾರ್ಕಳ: ರಸ್ತೆ ಮೇಲೆ ಹೊಸ ವರ್ಷಕ್ಕೆ ಶುಭಾಶಯ ಸಂದೇಶ ಬರೆಯುತ್ತಿದ್ದಾಗ ವಾಹನ ಡಿಕ್ಕಿ; ಇಬ್ಬರು ಸಾವು, ಇಬ್ಬರಿಗೆ ಗಾಯಹೊಸ ವರ್ಷಕ್ಕೆ ಶುಭಾಶಯ ಕೋರಿ “ಹ್ಯಾಪಿ ನ್ಯೂ ಇಯರ್” ಎಂದು ರಸ್ತೆಯಲ್ಲಿ ಸಂದೇಶ ಬರೆಯಲು ಹೋಗಿ ಇಬ್ಬರು ಯುವಕರು ಅಪಘಾತಕ್ಕೆ ಬಲಿಯಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. |