• Tag results for Karnataka BJP

ಮತಾಂಧ ಟಿಪ್ಪು ಜಯಂತಿ ಆಚರಣೆ ತಂದು, ನಾಡಿನ ಅಸ್ಮಿತೆಗೆ ಕೊಳ್ಳಿಯಿಟ್ಟವರು ಸಿದ್ರಾಮುಲ್ಲಾ ಖಾನ್ ಅಲ್ಲದೆ ಇನ್ಯಾರು?

ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತಾಂಧ ಟಿಪ್ಪುವನ್ನು ನುಗ್ಗಿಸಿ, ನಮ್ಮ ನಾಡಿನ ಅಸ್ಮಿತೆಗೆ ಕೊಳ್ಳಿಯಿಟ್ಟ ಪೆಡಂಭೂತದ ಜಯಂತಿಯನ್ನು ಸರ್ಕಾರಿ ಆಚರಣೆಯಾಗಿ ತಂದವರು ಅವರು. ಇಂಥವರು ಸಿದ್ರಾಮುಲ್ಲಾ ಖಾನ್ ಅಲ್ಲದೇ ಇನ್ಯಾರು? ಎಂದು ರಾಜ್ಯ ಬಿಜೆಪಿ ಕಟುವಾಗಿ ಟೀಕಿಸಿದೆ.

published on : 5th December 2022

ಅಭ್ಯರ್ಥಿಗಳ ಆಯ್ಕೆಗೆ ಗುಜರಾತ್ ಮಾದರಿ? ರಾಜ್ಯ ಬಿಜೆಪಿಯಲ್ಲಿನ ಕೆಲ ನಾಯಕರಲ್ಲಿ ಆತಂಕ!

ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 38 ಹಾಲಿ ಶಾಸಕರನ್ನು ಕೈ ಬಿಡಲಾಗಿದೆ. ಇದು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನೇಕ ಶಾಸಕರನ್ನು ಆತಂಕಕ್ಕೆ ತಳ್ಳಿದೆ.

published on : 12th November 2022

ಕಾಂಗ್ರೆಸ್ ಅನ್ನು ರಿಪೇರಿ ಮಾಡೋಕೆ ಹೊರಟ ತರೂರ್ ಸದ್ದಡಗಿಸಿದ ಗಾಂಧಿ ಕುಟುಂಬ ಎಂದ ಬಿಜೆಪಿ; ಸಿದ್ದು ವಿರುದ್ಧ ವಾಗ್ಧಾಳಿ

ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಶಿ ತರೂರ್ ಸೋಲಿಗೆ ಗಾಂಧಿ ಕುಟುಂಬವೇ ಕಾರಣ ಎಂದು ಆರೋಪಿಸಿದೆ.

published on : 19th October 2022

ಬಿಜೆಪಿಗೆ ಯಡಿಯೂರಪ್ಪನೇ ಸರ್ವಸ್ವ, ಅವರನ್ನು ಬಿಟ್ಟು ಪ್ರಚಾರಕ್ಕೆ ಹೋಗಲು ಆಗುತ್ತಿಲ್ಲ: ಸಿದ್ದರಾಮಯ್ಯ ಲೇವಡಿ

ರಾಜ್ಯ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಸರ್ವಸ್ವ, ಅವರನ್ನು ಬಿಟ್ಟರೆ ಬೇರೆ ನಾಯಕರೇ ಇಲ್ಲ. ಯಡಿಯೂರಪ್ಪರನ್ನು ಬಿಟ್ಟು ಪ್ರಚಾರಕ್ಕೆ ಹೋಗಲು ಅವರಿಗೆ ಆಗುತ್ತಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

published on : 13th October 2022

ಯಡಿಯೂರಪ್ಪನವರಿಂದ ಕರ್ನಾಟಕದಲ್ಲಿ ಬಿಜೆಪಿಗೆ ಭಾರೀ ಸಹಾಯ, ಪಕ್ಷದ 'ಮಿಷನ್ ಸೌತ್' ಪ್ರಗತಿ ಕಾಣುತ್ತಿದೆ: ಅರುಣ್ ಸಿಂಗ್

ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಹಾಗೂ ರಾಜಸ್ತಾನ ರಾಜ್ಯಗಳ ಬಿಜೆಪಿ ಉಸ್ತುವಾರಿ 2024ರಲ್ಲಿ ಪಕ್ಷ 2019ರ ಲೋಕಸಭೆ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

published on : 24th August 2022

ಬಿಜೆಪಿಯಲ್ಲಿ ಮಹತ್ವದ ಹುದ್ದೆ ಸಿಕ್ಕಿದ ಬಿ ಎಸ್ ಯಡಿಯೂರಪ್ಪಗೆ ಅಭಿನಂದನೆಗಳ ಮಹಾಪೂರ: ಇಂದು ಸಂಜೆ ತಿರುಪತಿಗೆ

ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿದ, ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಬಿ ಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯ ಸದಸ್ಯ ಸ್ಥಾನದ ಕೇಂದ್ರ ನಾಯಕನ ದೊಡ್ಡ ಜವಾಬ್ದಾರಿಯನ್ನು ಹೈಕಮಾಂಡ್ ನೀಡಿದೆ.

published on : 18th August 2022

ತ್ರಿವರ್ಣ ಧ್ವಜ ತಲೆಕೆಳಗಾಗಿಟ್ಟುಕೊಂಡು ಎಫ್‌ಬಿ ಲೈವ್‌ ಮಾಡಿದ ಬಿಜೆಪಿ ನಾಯಕ, ದೂರು ದಾಖಲು

ಕಳೆದ ವಾರ ಹರ್ ಘರ್ ತಿರಂಗಾ ಅಭಿಯಾನದ ವೇಳೆ ಫೇಸ್‌ಬುಕ್ ಲೈವ್ ವಿಡಿಯೋದಲ್ಲಿ ರಾಷ್ಟ್ರಧ್ವಜ ಸಂಹಿತೆಗೆ ಅವಮಾನ ಮಾಡಿದ ಆರೋಪದ ಮೇಲೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ, ಬಿಜೆಪಿ ನಾಯಕ ಅನಿಲ್ ಚಳಗೇರಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

published on : 16th August 2022

ಕಾಂಗ್ರೆಸ್ ನಾಯಕರ ರಾತ್ರಿ ಬದುಕಿನ ರಂಗ್-ಬಿರಂಗಿ ಬಗ್ಗೆ ದಂತಕತೆಗಳು ಮಾತ್ರವಲ್ಲ, ಗುಪ್ತ ಸಿಡಿಗಳೂ ಇವೆ!

‘ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉದ್ಯೋಗ ಪಡೆಯಬೇಕು ಎಂದರೆ ಯುವತಿಯರು ಮಂಚ ಹತ್ತಬೇಕಾಗಿದೆ’ ಎಂದಿದ್ದ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ಕಾಂಗ್ರೆಸ್ ಮಹಿಳಾ ವಿರೋಧಿ ಎಂದೂ ದೂರಿದೆ.

published on : 13th August 2022

ಸರ್ಕಾರದ 2ನೇ ವರ್ಷದ ವಾರ್ಷಿಕೋತ್ಸವದಲ್ಲಿ ಬಿಎಸ್‌ವೈ ಕಳಿಸಲಾಗಿತ್ತು, 1ನೇ ವಾರ್ಷಿಕೋತ್ಸವದಲ್ಲಿ ಬೊಮ್ಮಾಯಿ!

ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂಬ ಸುದ್ದಿಯ ಸುತ್ತಲೇ ಇದೀಗ ಎಲ್ಲರ ಗಮನ ನೆಟ್ಟಿದೆ. ವಿಧಾನಸಭೆ ಚುನಾವಣೆಗೆ 8 ತಿಂಗಳಷ್ಟೇ ಬಾಕಿ ಇರುವಾಗ ಬಿಜೆಪಿ ನಾಯಕರೊಬ್ಬರು ಆಗಸ್ಟ್ 15ರೊಳಗೆ ಎಲ್ಲವೂ ಬದಲಾಗಬಹುದು ಎಂದಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಕೂಡ ನಿರಂತರವಾಗಿ ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಕುರಿ

published on : 10th August 2022

ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣ; '3ನೇ ಸಿಎಂ' ಸೀಟು ಹತ್ತುವ ಕಾಲ ಸನ್ನಿಹಿತ!

ರಾಜ್ಯದ ಬಿಜೆಪಿ ನಾಯಕರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎನ್ನುವ ಮಾತುಗಳನ್ನಾಡುತ್ತಿದ್ದು, ವಿಧಾನಸಭೆ ಚುನಾವಣೆಗೆ 8 ತಿಂಗಳಷ್ಟೇ ಬಾಕಿ ಇರುವಾಗ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಕೂಡ ಮುಖ್ಯಮಂತ್ರಿ ಬದಲಾವಣೆ ಕುರಿತು ವ್ಯಂಗ್ಯವಾಡಿದೆ.

published on : 9th August 2022

2023ರ ವಿಧಾನಸಭೆ ಚುನಾವಣೆಗೆ 'ಎಲೆಕ್ಷನ್ ಹಿಂದೂ' ರಾಹುಲ್ ಗಾಂಧಿ ತಯಾರಿ: ಬಿಜೆಪಿ ಟೀಕೆ

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವಕ್ಕೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರೊಂದಿಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದರು. ಈ ವೇಳೆಯಲ್ಲಿನ ವಿಡಿಯೊವನ್ನು ಹಂಚಿಕೊಂಡಿರುವ ಬಿಜೆಪಿ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

published on : 3rd August 2022

ಸಿದ್ದರಾಮಯ್ಯ ಅವರದ್ದು ಬಾಬರ್‌, ಘಜಿನಿ ಆಡಳಿತವಾಗಿತ್ತೇ ಹೊರತು ಶಾಂತಿಯದ್ದಲ್ಲ: ಕಾಂಗ್ರೆಸ್ ಜಾಹಿರಾತಿಗೆ ಬಿಜೆಪಿ ಕಿಡಿ

ಸರ್ವಜನಾಂಗದ ಶಾಂತಿಯ ತೋಟವಂತೆ, ಸಿದ್ದರಾಮಯ್ಯನವರೇ ಎಲ್ಲಿತ್ತು ಶಾಂತಿ? ನೀವೇ ನೀಡಿದ ಲೆಕ್ಕದ ಪ್ರಕಾರ ನೀವು ಸಿಎಂ ಆಗಿದ್ದಾಗಿನ ಕಾಲದ ಮೂರು ವರ್ಷದಲ್ಲಿ 23 ಕೊಲೆ ನಡೆದಿದ್ದವು. ಅದು ಕೂಡಾ ದ್ವೇಷದ ಕೊಲೆ. ಸಿದ್ದರಾಮಯ್ಯ ಅವರದ್ದು ಬಾಬರ್‌, ಘಜಿನಿ ಆಡಳಿತವಾಗಿತ್ತೇ ಹೊರತು ಶಾಂತಿಯದ್ದಲ್ಲ ಎಂದು ಬಿಜೆಪಿ ಟೀಕಿಸಿದೆ.

published on : 2nd August 2022

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಪಂಚರಾಜ್ಯ ಚುನಾವಣೆ ಫಲಿತಾಂಶ: ಬಿಜೆಪಿ- ಕಾಂಗ್ರೆಸ್ ಪರಸ್ಪರ ವ್ಯಂಗ್ಯ, ಜೈಶ್ರೀರಾಮ್, ಜೈ ಹನುಮಾನ್ ಘೋಷಣೆ

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಮುನ್ನಡೆ ರಾಜ್ಯ ಬಿಜೆಪಿ ನಾಯಕರಲ್ಲಿ ಸಂಭ್ರಮ ಮನೆಮಾಡಿದೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ. 

published on : 10th March 2022

ರಾಶಿ ಭವಿಷ್ಯ