• Tag results for Karnataka Government

ಪಿಎಸ್‌ಐ ನೇಮಕಾತಿ ಹಗರಣ: ಎಡಿಜಿಪಿ ಅಮೃತ್ ಪಾಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಒಪ್ಪಿಗೆ

ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತ ಎಡಿಜಿಪಿ ಆಗಿದ್ದ ಅಮೃತ್ ಪಾಲ್ ಅವರನ್ನು ವಿಚಾರಣೆಗೆ ಒಳಪಡಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

published on : 3rd December 2022

ಹಳೆ ವಾಹನಗಳನ್ನು ರದ್ದಿಗೆ ಹಾಕಿ, ಹೊಸ ವಾಹನ ಖರೀದಿ ಮೇಲೆ ರಿಯಾಯಿತಿ ಪಡೆಯಿರಿ

ಕರ್ನಾಟಕ ಸರ್ಕಾರವು ಮುಂದಿನ 15 ದಿನಗಳಲ್ಲಿ ವಾಹನಗಳನ್ನು ರದ್ದಿಗೆ ಹಾಕುವ ನೀತಿ(vehicle scrappage policy)ಯನ್ನು ಹೊರತರಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 15 ವರ್ಷ ಪೂರೈಸಿದ ಎಲ್ಲಾ ಸರ್ಕಾರಿ ವಾಹನಗಳನ್ನು ರದ್ದಿಗೆ ಹಾಕಬೇಕೆಂದು ಘೋಷಿಸಿದ ಬಳಿಕ ರಾಜ್ಯ ಸರ್ಕಾರ ಈ ನಿಯಮ ಜಾರಿಗೆ ತಂದಿದೆ. 

published on : 27th November 2022

ಪರಿಣಾಮಕಾರಿ ಆಡಳಿತಕ್ಕೆ ಕ್ರಮ: ಸಿಇಜಿಐಎಸ್ ಹಾಗೂ ಕರ್ನಾಟಕ ಸರ್ಕಾರ ನಡುವೆ ಒಪ್ಪಂದಕ್ಕೆ ಸಹಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಮ್ಮುಖದಲ್ಲಿ ಸೆಂಟರ್ ಫಾರ್ ಎಫೆಕ್ಟಿವ್ ಗವರ್ನನ್ಸ್ ಆಫ್ ಇಂಡಿಯನ್ ಸ್ಟೇಟ್ಸ್(CEGIS) ಹಾಗೂ ಕರ್ನಾಟಕ ಸರ್ಕಾರದ ನಡುವೆ ಇಂದು ಮಂಗಳವಾರ 5 ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಲಾಯಿತು. 

published on : 15th November 2022

ರವಿಕಾಂತೇಗೌಡ, ರವಿ ಚನ್ನಣ್ಣನವರ್‌ ಸೇರಿ 11 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್​ ಸರ್ಜರಿ ಮಾಡಿದ್ದು, ಬಿಆರ್ ರವಿಕಾಂತೇಗೌಡ ಹಾಗೂ ರವಿ ಚನ್ನಣ್ಣನವರ್‌ ಸೇರಿದಂತೆ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆಮಾಡಿ ಸೋಮವಾರ ಆದೇಶ ಹೊರಡಿಸಿದೆ.

published on : 14th November 2022

'ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ' ಎಂದು ಮುಂದಿನ ವರ್ಷ ದೊಡ್ಡ ಮಟ್ಟದಲ್ಲಿ ಆಚರಿಸಲು ಸರ್ಕಾರ ಯೋಜನೆ

ಕರ್ನಾಟಕ ರಾಜ್ಯ ಸಿರಿಧಾನ್ಯಗಳ ಬೆಳೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಯು ಗೊತ್ತುಪಡಿಸಿದ 2023 ನೇ ವರ್ಷವನ್ನು 'ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ' ಎಂದು ಆಚರಿಸುವ ಪ್ರಯತ್ನದ ಭಾಗವಾಗಿ, ಜನರಲ್ಲಿ ಅದರ ಬಳಕೆಯನ್ನು ಹೆಚ್ಚಿಸುವ ಮೂಲಕ ಬೆಳೆಯನ್ನು ಉತ್ತೇಜಿಸಲು ಸರ್ಕಾರ ಯೋಜಿಸುತ್ತಿದೆ.

published on : 13th November 2022

ಓಲಾ, ಉಬರ್ ಆಟೋರಿಕ್ಷಾ ಸೇವೆ ಪ್ರಕರಣ: ಸೌಹಾರ್ದವಾಗಿ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ 4 ವಾರ ಸಮಯ: ಹೈಕೋರ್ಟ್‌

ಓಲಾ ಮತ್ತು ಉಬರ್‌ ತಮ್ಮ ಆ್ಯಪ್‌ ಮೂಲಕ ಆಟೋರಿಕ್ಷಾ ಸೇವೆ ನೀಡುವುದಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಕರ್ನಾಟಕ ಹೈಕೋರ್ಟ್ 4 ವಾರಗಳ ಕಾಲ ಸಮಯ ನೀಡಿದೆ.

published on : 7th November 2022

ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ; ಅಪ್ಪು ದೇವರ ಮಗ-ರಜನಿ, ನಗುವಿನಿಂದಲೇ ರಾಜ್ಯ ಗೆದ್ದ ರಾಜ ಪುನೀತ್- ಜ್ಯೂ.ಎನ್ ಟಿಆರ್

ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ, ಗಣ್ಯರ ಸಮ್ಮುಖದಲ್ಲಿ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ನ.1 ರಂದು  ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

published on : 1st November 2022

ಸರ್ಕಾರಿ ಶಾಲೆ ಮಕ್ಕಳಿಂದ ತಿಂಗಳಿಗೆ 100 ರೂ. ದೇಣಿಗೆ ಸಂಗ್ರಹಿಸುವ ಸುತ್ತೋಲೆ ವಾಪಸ್‌

ತೀವ್ರ ವಿರೋಧದ ನಂತರ ರಾಜ್ಯಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ 100 ರೂಪಾಯಿ ದೇಣಿಗೆ ಸಂಗ್ರಹಿಸಲು ಹೊರಡಿಸಿದ್ದ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಶನಿವಾರ ಹಿಂಪಡೆದಿದೆ.

published on : 22nd October 2022

ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 21 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಆಡಳಿತ ಯಂತ್ರ ಚುರುಕುಗೊಳಿಸಲು ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರವು ಶುಕ್ರವಾರ ಸಂಜೆ ಆದೇಶ ಹೊರಡಿಸಿದೆ.

published on : 22nd October 2022

300 ಅಧಿಕಾರಿಗಳ ನೇಮಕ ಮಾಡಲು ಕೃಷಿ ಕೇಡರ್ ನಿಯಮಗಳಿಗೆ ತಿದ್ದುಪಡಿ: ಸಂಪುಟ ಸಭೆ ಅನುಮೋದನೆ

ಸಹಾಯಕ ಕೃಷಿ ಅಧಿಕಾರಿಗಳ ನೇಮಕಕ್ಕೆ ಕೇಡರ್ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಗುರುವಾರ ಅಂಗೀಕರಿಸಿದ್ದು, ಶೀಘ್ರದಲ್ಲಿಯೇ 300 ಅಧಿಕಾರಿಗಳ ನೇಮಕಾತಿಗೆ ಮುಂದಾಗಲು ಸರ್ಕಾರ ಯೋಜಿಸಿದೆ. 

published on : 21st October 2022

ಸಿವಿಲ್ ಪೊಲೀಸ್ ಪೇದೆಯ 1137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ; ತೃತೀಯ ಲಿಂಗಿಗಳಿಗೂ ಅವಕಾಶ; ಆನ್ ಲೈನ್ ನಲ್ಲೂ ಸಲ್ಲಿಸಬಹುದು!

ಕರ್ನಾಟಕ ಸಿವಿಲ್ ಪೊಲೀಸ್ ಪೇದೆಗಳ (ಸಿಪಿಸಿ) 1137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು,  ರಾಜ್ಯ ಪೊಲೀಸ್‌ ಇಲಾಖೆಯು ಗೆಜೆಟ್ ಅಧಿಸೂಚನೆ ಹೊರಡಿಸಿದೆ.

published on : 14th October 2022

ಕೇಂದ್ರ ಸರ್ಕಾರದಿಂದ ಟಿ-ಮನಸ್ ಯೋಜನೆ ಜಾರಿ, ಕರ್ನಾಟಕದ ಇ-ಮನಸ್‌ ಯೋಜನೆಯೇ ಇದಕ್ಕೆ ಮಾದರಿ!

ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ, ಕೇಂದ್ರ ಸರ್ಕಾರವು ಟಿ-ಮನಸ್‌ ಎಂಬ ಯೋಜನೆ ಜಾರಿ ಮಾಡಿದೆ. ಕರ್ನಾಟಕದ ಇ-ಮನಸ್‌ ಯೋಜನೆಯೇ ಇದಕ್ಕೆ ಪ್ರೇರಣೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

published on : 10th October 2022

ಬಗ್ಗಿದ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳು, ಆಟೋ ಸೇವಾದರ ಇಳಿಕೆ!

ರಾಜ್ಯ ಸರ್ಕಾರದ ಛಾಟಿಗೆ ಬಗ್ಗಿದ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳು ಕೊನೆಗೂ ತಮ್ಮ ಆಟೋ ಸೇವಾದರಗಳನ್ನು ಇಳಿಕೆ ಮಾಡಿವೆ.

published on : 9th October 2022

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಹೆಚ್ಚಿಸಿದ ಸಿಎಂ ಬೊಮ್ಮಾಯಿ ಸರ್ಕಾರ

ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಂತಸ ಸುದ್ದಿ ನೀಡಿದ್ದು, ಕಳೆದ ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

published on : 7th October 2022

ಎಸ್​ಸಿ, ಎಸ್​ಟಿಗೆ ಬಂಪರ್ ಗಿಫ್ಟ್: ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ವಪಕ್ಷ ಸಭೆ ತೀರ್ಮಾನ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(SC-ST)ಕ್ಕೆ ಬೊಮ್ಮಾಯಿ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದು, ಎಸ್​ಸಿ, ಎಸ್​ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

published on : 7th October 2022
1 2 3 4 5 > 

ರಾಶಿ ಭವಿಷ್ಯ