• Tag results for Karnataka Govt

ಓಲಾ-ಉಬರ್ ವಿವಾದ: ಸರ್ಕಾರದ ಹೊಸ ದರಪಟ್ಟಿಗೂ ವಿರೋಧ, ಮುಂದುವರೆದ ಗೊಂದಲ!

ಅಗ್ರಿಗೇಟರ್ ಆಧಾರಿತ ಆಟೋರಿಕ್ಷಾ ಸೇವೆಗೆ ಇತ್ತೀಚೆಗೆ ರಾಜ್ಯ ಸರ್ಕಾರ ವಿಧಿಸಿದ್ದ ನೂತನ ದರ ಪಟ್ಟಿಗೂ ಓಲಾ-ಉಬರ್ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದು ಮತ್ತೆ ಗೊಂದಲ ಮುಂದುವರೆಯುವಂತಾಗಿದೆ.

published on : 27th November 2022

ರಾಜ್ಯ ಸರ್ಕಾರದಿಂದ 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟ

ರಾಜ್ಯ ಸರ್ಕಾರ 2023ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

published on : 23rd November 2022

ನಾಡ ದೇವಿ ಭುವನೇಶ್ವರಿ ತಾಯಿಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರ ಜಾರಿಗೆ ಸರ್ಕಾರದ ಸಮಿತಿ ಶಿಫಾರಸು!

ನಾಡ ದೇವಿ ಭುವನೇಶ್ವರಿ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಜಾರಿಗೆ ತರುವಂತೆ ಸಮಿತಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗೆ ಶಿಫಾರಸು ಸಲ್ಲಿಸಿದೆ.

published on : 21st November 2022

ಬದುಕು ಕಸಿದ ಕೋವಿಡ್; ಸಾಂಕ್ರಾಮಿಕ ನಂತರದ ರಾಜ್ಯದಲ್ಲಿ ಹೆಚ್ಚುತ್ತಿದೆ ಬಾಲ ಕಾರ್ಮಿಕ ಪ್ರಕರಣಗಳು!

ಕೋವಿಡ್ ಸಾಂಕ್ರಾಮಿಕ ಕರ್ನಾಟಕದಲ್ಲಿ ಬಾಲ ಕಾರ್ಮಿಕ ಪ್ರಕರಣಗಳಲ್ಲಿ ಹೆಚ್ಚಳ ಉಂಟು ಮಾಡಿದ್ದು,  ಕರ್ನಾಟಕದ ಸಾವಿರಾರು ಮಕ್ಕಳು ಮುಖ್ಯವಾಹಿನಿಯಿಂದ ಹೊರಗುಳಿದಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

published on : 20th November 2022

ಓಲಾ, ಉಬರ್ ಆಟೋರಿಕ್ಷಾ ಸೇವೆ: ದರ ಹೆಚ್ಚಳ ಕೋರಿಕೆಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಆ್ಯಪ್‌ ಮೂಲಕ ನೀಡಲಾಗುತ್ತಿರುವ ಓಲಾ ಮತ್ತು ಉಬರ್‌ ಆಟೋರಿಕ್ಷಾ ಸೇವೆ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಸಲ್ಲಿಸಿರುವ ಮಧ್ಯಪ್ರವೇಶ ಮನವಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಬುಧವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದ್ದು, ಮಧ್ಯಂತರ ತಡೆಯಾಜ್ಞೆ ಮುಂದುವರಿಸಿದೆ.

published on : 16th November 2022

4 ವರ್ಷಗಳ ನಂತರವೂ ಕೊಡಗನ್ನು ಬಿಟ್ಟೂ ಬಿಡದೆ ಕಾಡುತ್ತಿದೆ ಭೂ ಕುಸಿತ ಭೂತ!!

2018ರಲ್ಲಿ ಮಡಿಕೇರಿಯಲ್ಲಿ ಸಂಭವಿಸಿದ್ದ ಭೂಕುಸಿತ ದುರಂತ 4 ವರ್ಷಗಳ ಬಳಿಕವೂ ಸ್ಥಳೀಯರನ್ನು ಇನ್ನೂ ಕಾಡುತ್ತಿದ್ದು, ಇಂದಿಗೂ ಭೂಕುಸಿತ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

published on : 14th November 2022

ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳ: ಇಂದಿನಿಂದಲೇ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ

ಕನ್ನಡ ರಾಜ್ಯೋತ್ಸವ ದಿನದಿಂದಲೇ ಅನ್ವಯವಾಗುವಂತೆ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಶೇ. 17 ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 7 ರಷ್ಟು ಮೀಸಲಾತಿ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ.

published on : 1st November 2022

ಬೆಂಗಳೂರಿನ ಸರ್ಕಾರಿ ಶಾಲೆಗಳಲ್ಲಿ ಶೀಘ್ರ 'ಬ್ಯಾಗ್ ಮುಕ್ತ ಶನಿವಾರ'

ಶಾಲಾ ವಿದ್ಯಾರ್ಥಿಗಳ ಭಾರವಾದ ಬ್ಯಾಗ್ ಗಳ ಕುರಿತ ಅಭಿಯಾನಗಳ ಪರಿಣಾಮ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೀಗ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 'ಬ್ಯಾಗ್ ಮುಕ್ತ ಶನಿವಾರ' ಪರಿಚಯಿಸಲು ಶಾಲೆಗಳಿಗೆ ಶಿಫಾರಸು ಮಾಡಿದೆ.

published on : 1st November 2022

ರಾಜ್ಯದಲ್ಲಿ 5 ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ: ಸಚಿವ ಮುರುಗೇಶ್ ನಿರಾಣಿ

ರಾಜ್ಯದಲ್ಲಿ ಶೀಘ್ರದಲ್ಲೇ ಐದು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

published on : 28th October 2022

ನೇಮಕಾತಿ ಹಗರಣ: ಹಲವೆಡೆ ಸಿಐಡಿ ದಾಳಿ, 38 ಶಿಕ್ಷಕರ ಬಂಧನ

ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ) ಬುಧವಾರ ರಾಜ್ಯದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ 38 ಶಿಕ್ಷಕರನ್ನು ಬಂಧಿಸಿದ್ದು, ಈ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 60ಕ್ಕೆ ಏರಿದೆ.

published on : 20th October 2022

ಯಶಸ್ವಿನಿ ಯೋಜನೆ ಮರು ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ, ನವೆಂಬರ್ 1 ರಿಂದ ನೋಂದಣಿ ಆರಂಭ

ರೈತರು ಹಾಗೂ ಬಡವರಿಗಾಗಿ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿ ಬುಧವಾರ ಆದೇಶ ಹೊರಡಿಸಿದ್ದು, ನವೆಂಬರ್ 1 ರಿಂದ ನೋಂದಣಿ ಆರಂಭವಾಗಲಿದೆ.

published on : 13th October 2022

ಯಕ್ಷಗಾನ ವೇಷಭೂಷಣ ಧರಿಸಿ, ಹೆಜ್ಜೆ ಹಾಕಿದ ಸಚಿವ ಸುಧಾಕರ್

ಕರ್ನಾಟಕ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಯಕ್ಷಗಾನ ವೇಷಭೂಷಣ ಧರಿಸಿ ಪೋಸ್ ನೀಡಿದ್ದು, ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

published on : 12th October 2022

ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ- ರಾಹುಲ್ ಗಾಂಧಿ

ಕರ್ನಾಟಕ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.ಪ್ರತಿಯೊಂದು ಕಾಮಗಾರಿಗಳಲ್ಲಿಯೂ ಶೇ.40 ರಷ್ಟು ಕಮೀಷನ್ ಪಡೆಯುತ್ತಿದ್ದಾರೆ. 13,000 ಖಾಸಗಿ ಶಾಲೆಗಳು ಶೇ. 40 ರಷ್ಟು ಕಮೀಷನ್ ನೀಡಿವೆ. ಇದು ಅತ್ಯಂತ ಭ್ರಷ್ಟ ಸರ್ಕಾರ ಅಂತಾ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ ಎಂದರು.

published on : 10th October 2022

5, 8ನೇ ತರಗತಿಗೆ ಬೋರ್ಡ್ ಪರೀಕ್ಷೆ; ಮೌಲ್ಯಮಾಪನ ಮಾಡಿ, ಪರೀಕ್ಷೆಯಲ್ಲ ಎಂದ KAMS

5 ಮತ್ತು 8 ನೇ ತರಗತಿಗಳಿಗೆ ಬೋರ್ಡ್ ಮಾದರಿಯ ಪರೀಕ್ಷೆಗಳನ್ನು ಪರಿಚಯಿಸುವ ಸರ್ಕಾರದ ಯೋಜನೆಯು ಅದರ ಅನುಷ್ಠಾನದ ಬಗ್ಗೆ ಶಾಲೆಗಳು ಮತ್ತು ಸಂಸ್ಥೆಗಳಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಮೌಲ್ಯಮಾಪನ ಮಾಡಿ, ಪರೀಕ್ಷೆಯಲ್ಲ ಎಂದ KAMS (Karnataka Associated Management of School) ಹೇಳಿದೆ.

published on : 9th October 2022

BBMP ಚುನಾವಣೆ: ಸರ್ಕಾರದ ಮೀಸಲಾತಿ ಅಧಿಸೂಚನೆ ರದ್ದು; ನವೆಂಬರ್ 30ರೊಳಗೆ ಹೊಸ ಮೀಸಲಾತಿಗೆ 'ಹೈ' ಸೂಚನೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆ ನಿಮಿತ್ತ ರಾಜ್ಯ ಸರ್ಕಾರ ಹೊರಡಿಸಿದ್ದ ಮೀಸಲಾತಿ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದ್ದು, ನವೆಂಬರ್ 30ರೊಳಗೆ ಹೊಸ ಮೀಸಲಾತಿ ನಿಗದಿಪಡಿಸಿ, ಅಧಿಸೂಚನೆ ಪ್ರಕಟಿಸಬೇಕು ಎಂದು ಹೇಳಿದೆ.

published on : 30th September 2022
1 2 3 4 5 6 > 

ರಾಶಿ ಭವಿಷ್ಯ