• Tag results for Karnataka High Court

ಆರೋಗ್ಯ ಸೇತು ಆ್ಯಪ್ ಮೂಲಕ ಸಂಗ್ರಹಿಸಿದ ದತ್ತಾಂಶ ಹಂಚಿಕೆಕೊಳ್ಳದಂತೆ 'ಕೇಂದ್ರ'ಕ್ಕೆ ತಡೆ ನೀಡಿದ ಕರ್ನಾಟಕ ಹೈಕೋರ್ಟ್

ಮಾರಕ ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಆರೋಗ್ಯ ಸೇತು ಆ್ಯಪ್ ಮೂಲಕ ಸಂಗ್ರಹಿಸಿದ ದತ್ತಾಂಶವನ್ನು ಇತರೆ ಸರ್ಕಾರಿ ಅಧಿಕಾರಿಗಳು ಮತ್ತು ಏಜೆನ್ಸಿಗಳೊಂದಿಗೆ ಹಂಚಿಕೊಳ್ಳದಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ತಡೆ ನೀಡಿದೆ.

published on : 25th January 2021

ಡಿನೋಟಿಫಿಕೇಷನ್‌ ಪ್ರಕರಣ: ಸಿಎಂ ಯಡಿಯೂರಪ್ಪ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಲು ಹೈಕೋರ್ಟ್‌ ನಕಾರ

ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

published on : 5th January 2021

ಬಡ್ತಿ ಹುದ್ದೆಗಳಲ್ಲಿ ಮೀಸಲಾತಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೊಟೀಸ್ 

ಸಂವಿಧಾನ ವಿಧಿ 371(1)ಕ್ಕೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೊಟೀಸ್ ಜಾರಿ ಮಾಡಿದೆ. ಈ ತಿದ್ದುಪಡಿಯಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲಾಗುತ್ತದೆ.

published on : 26th December 2020

ಸಿಲಿಕಾನ್ ಸಿಟಿಯ ಅಕ್ರಮ ಧಾರ್ಮಿಕ ಕಟ್ಟಡಗಳ ಬಗ್ಗೆ ಕುರುಡಾದ ಬಿಬಿಎಂಪಿ: ಹೈಕೋರ್ಟ್ ತರಾಟೆ

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ಗುರುತಿಸುವ ಕಾರ್ಯವನ್ನು ಬಿಬಿಎಂಪಿ ಗಂಭೀರವಾಗಿ ಕೈಗೊಂಡಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಗಮನಿಸಿದೆ. ಬೆಂಗಳೂರಿನಲ್ಲಿ ಕೇವಲ 106  ಅಂತಹಾ ಅಕ್ರಮ ಧಾರ್ಮಿಕ ಕಟ್ಟಡ ಇದೆ ಎಂದು ಯಾರೂ ನಂಬುವುದಿಲ್ಲ ಎಂದು ಕೋರ್ಟ್ ಹೇಳಿದೆ.

published on : 15th December 2020

ಕೊನೆಗೂ ನಟಿ ಸಂಜನಾ ಗಲ್ರಾನಿಗೆ ಜಾಮೀನು ನೀಡಿದ ಹೈಕೋರ್ಟ್!

ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣ ಸಂಬಂಧ ಜೈಲುಪಾಲಾಗಿರುವ ನಟಿ ಸಂಜನಾ ಗಲ್ರಾನಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. 

published on : 11th December 2020

ಫ್ಲಿಪ್‌ಕಾರ್ಟ್, ಅಮೆಜಾನ್ ವಿರುದ್ಧ ಸಿಸಿಐ ಅರ್ಜಿ: ಹೈಕೋರ್ಟ್ ವಿಚಾರಣೆಗೆ ದಿನಾಂಕ ನಿಗದಿ

ಕರ್ನಾಟಕ ಹೈಕೋರ್ಟ್ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧ ಭಾರತ ಸ್ಪರ್ಧಾ ಆಯೋಗ(Competition Commission of India-CCI)  ಸಲ್ಲಿಸಿದ್ದ ಅರ್ಜಿಯನ್ನು ಜನವರಿ 18 ರಂದು ವಿಚಾರಣೆ ನಡೆಸಲಿದೆ.

published on : 9th December 2020

ಹಿರಿಯ ನಾಗರಿಕರಿಗೆ ವೈದ್ಯಕೀಯ ವಿಮೆ ಯೋಜನೆ ರೂಪಿಸುವಂತೆ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಹೈಕೋರ್ಟ್ ನಿರ್ದೇಶನ

ಹಿರಿಯ ನಾಗರಿಕರಿಗೆ ವೈದ್ಯಕೀಯ ವಿಮೆ ಯೋಜನೆ ರೂಪಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ. 

published on : 8th December 2020

ಕುದುರೆ ರೇಸ್ ಆನ್ ಲೈನ್ ಬೆಟ್ಟಿಂಗ್ ಗೆ ಅನುಮತಿ ಹೇಗೆ ಕೊಟ್ರಿ? ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ 

ಕುದುರೆ ರೇಸ್ ಗೆ ಆನ್ ಲೈನ್ ಬೆಟ್ಟಿಂಗ್ ಗೆ ಅನುಮತಿ ಹೇಗೆ ಕೊಟ್ರಿ?" ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನಿಸಿದೆ. 

published on : 5th December 2020

6 ವಾರಗಳಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ: ಬಿಬಿಎಂಪಿ ಚುನಾವಣೆ ನಡೆಸಲು ಆಯೋಗಕ್ಕೆ ಹೈಕೋರ್ಟ್ ಆದೇಶ

ಬಿಬಿಎಂಪಿಯ 196 ವಾರ್ಡ್ ಗಳಿಗೆ ಚುನಾವಣೆ ಘೋಷಿಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶಿಸಿದೆ. 

published on : 4th December 2020

ಸಾರಾ ಮಹೇಶ್ ಕೊಚ್ಚೆ ಗುಂಡಿ, ಕಲ್ಲೆಸೆದು ಹೊಲಸು ಮಾಡಿಕೊಳ್ಳಲ್ಲ; 'ಸುಪ್ರೀಂ'ಗೆ ಮೇಲ್ಮನವಿ ಸಲ್ಲಿಸಲು ಎಚ್. ವಿಶ್ವನಾಥ್ ನಿರ್ಧಾರ!

ಸಚಿವ ಸ್ಥಾನಕ್ಕೆ ವಿಶ್ವನಾಥ್ ಅನರ್ಹ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸಲು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ನಿರ್ಧರಿಸಿದ್ದಾರೆ.

published on : 1st December 2020

ಬೆಂಗಳೂರಿಗೆ ಎಷ್ಟು ಶೌಚಾಲಯಗಳ ಅಗತ್ಯವಿದೆ?: ಬಿಬಿಎಂಪಿಗೆ ಹೈಕೋರ್ಟ್ ಪ್ರಶ್ನೆ; ವರದಿ ಸಲ್ಲಿಸಲು ನಿರ್ದೇಶನ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾರ್ವಜನಿಕ ಬಳಕೆಗೆ ಎಷ್ಟು ಶೌಚಾಲಯಗಳ ಅಗತ್ಯತೆ ಇದೆ ಎಂದು ಕರ್ನಾಟಕ ಹೈಕೋರ್ಟ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಪ್ರಶ್ನಿಸಿದೆ.

published on : 1st December 2020

ಸಚಿವರಾಗಲು 'ಹಳ್ಳಿಹಕ್ಕಿ' ಎಚ್. ವಿಶ್ವನಾಥ್ ಅನರ್ಹ: ಕರ್ನಾಟಕ ಹೈಕೋರ್ಟ್

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಹಳ್ಳಿಹಕ್ಕಿ ಎಚ್.ವಿಶ್ವನಾಥ್ 2021ರವರೆಗೆ ಸಚಿವರಾಗಲು ಅನರ್ಹರು ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದ್ದು, ಮೇಲ್ಮನೆ ಸದಸ್ಯರಾದ ಆರ್. ಶಂಕರ್, ಎಂ.ಟಿ.ಬಿ. ನಾಗರಾಜ್ ಗೆ ಸಚಿವ ಸ್ಥಾನ ನೀಡಲು ನಿಶಾನೆ ತೋರಿದೆ.

published on : 30th November 2020

ಕಾನೂನುಬಾಹಿರ ಎನ್ನಲು ಪುರಾವೆಗಳಿಲ್ಲ: ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕದ ವಿರುದ್ಧ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

ಶಾಸಕರ ಸಂಖ್ಯೆ ಒಟ್ಟೂ 225 ಇದ್ದು ಇವರ ಪೈಕಿ ಸಚಿವರು, ಮಂತ್ರಿಗಳ ಸಂಖ್ಯೆ ಶೇಕಡಾ 15 ರಷ್ಟು ಮೀರಿದೆ ಎಂಬ ಕಾರಣಕ್ಕೆ ಮಂತ್ರಿಗಳ ಸಮಾನ ಶ್ರೇಣಿಯೊಂದಿಗೆ ನಿಗಮ ಹಾಗೂ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ರಾಜ್ಯ ಹೈಕೋರ್ಟ್ ವಜಾಮಾಡಿದೆ.

published on : 28th November 2020

ಹೈಕೋರ್ಟ್ ಛಾಟಿ ಬೆನ್ನಲ್ಲೇ ವಿವಾದಿತ ಸುತ್ತೋಲೆ ವಾಪಸ್ ಪಡೆದ ಬಿಡಿಎ

ಅನುಮತಿ ಇಲ್ಲದೆ ಯಾವುದೇ ತನಿಖಾ ಸಂಸ್ಥೆಗಳ ಎದುರು ಹಾಜರಾಗಬಾರದು, ಮಾಹಿತಿ ನೀಡಬಾರದು ಹಾಗೂ ದಾಖಲೆಗಳನ್ನು ಒದಗಿಸಬಾರದು ಎಂಬ ವಿವಾದಾತ್ಮಕ ಸುತ್ತೋಲೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಾಪಸ್ ಪಡೆದಿದೆ.

published on : 25th November 2020

ಕಾಗದ ಬಳಕೆ ತಪ್ಪಿಸಿ ಪರಿಸರ ಉಳಿಸಿ: ನ್ಯಾಯಾಲಯದಲ್ಲಿ ಕಾಗದ ಬಳಕೆಯ ವಿರುದ್ಧ ಪ್ರಕರಣ ಗೆದ್ದ ಕಾನೂನು ವಿದ್ಯಾರ್ಥಿಗಳು

ಕಾಗದಗಳ ಬಳಕೆ ಕಡಿಮೆ ಮಾಡಿ ಅದರ ಮೂಲಕ ಹೆಚ್ಚಿನ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಮೂವರು ವಿದ್ಯಾರ್ಥಿಗಳು ಮಾಡಿದ ಪ್ರಯತ್ನ ಸಫಲವಾಗಿದೆ. ರಾಜ್ಯ ಹೈಕೋರ್ಟ್ ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎ4 ಗಾತ್ರದ ಹಾಳೆಯ ಎರಡೂ ಬದಿಗಳಲ್ಲಿ ಮುದ್ರಿಸುವ ಮೂಲಕ ಹೆಚ್ಚುವರಿ ಕಾಗದ ಬಳಕೆ ಕಡಿತಗೊಳಿಸಲು ತೀರ್ಮಾನಿಸಿದ್ದು ಕಾಗದದ ಬಳಕೆಯನ್ನು ಕಡ್ಡಾಯಗೊಳಿಸುವ ನಿಯಮಗಳಿ

published on : 20th November 2020
1 2 3 >