social_icon
  • Tag results for Kiren Rijiju

ಧಾರ್ಮಿಕ ನೆಲೆಯಲ್ಲಿ ಭಾರತದ ವಿಭಜನೆಗೆ ಕಾರಣವಾದ ಜಿನ್ನಾ ಅವರ ಇಂಡಿಯನ್ ಮುಸ್ಲಿಂ ಲೀಗ್ ಹೇಗೆ ಜಾತ್ಯತೀತ ಪಕ್ಷ?

ಇಂಡಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌) ಒಂದು ಪರಿಪೂರ್ಣವಾದ ಜಾತ್ಯಾತೀತ ಪಕ್ಷ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ  ಹೇಳಿಕೆಗೆ ಕೇಂದ್ರ ಸಚಿವ ಕಿರಣ್ ರಿಜಿಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

published on : 2nd June 2023

ಇದು ಶಿಕ್ಷೆಯಲ್ಲ: ಕೇಂದ್ರ ಭೂ ವಿಜ್ಞಾನ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಿಜಿಜು

ಕೇಂದ್ರ ಭೂ ವಿಜ್ಞಾನ ಸಚಿವರಾಗಿ ಕಿರಣ್ ರಿಜಿಜು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಅವರನ್ನು ನಿನ್ನೆ ಕಾನೂನು ಮತ್ತು ನ್ಯಾಯ ಸಚಿವಾಲಯದಿಂದ ಮುಕ್ತಗೊಳಿಸಿ, ಭೂ ವಿಜ್ಞಾನ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ.

published on : 19th May 2023

ರಿಜಿಜು ಅವರನ್ನು ಕಾನೂನು ಸಚಿವಾಲಯದಿಂದ ಹೊರಕಳಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಜಯ: ಸಂಜಯ್ ರಾವುತ್

ಕಿರಣ್ ರಿಜಿಜು ಅವರಿಗಿರುವ ನ್ಯಾಯಾಂಗದ ಮೇಲಿನ ಅಸಮಾಧಾನವನ್ನು ಕೇಂದ್ರ ಸರ್ಕಾರ ಗಮನಿಸಿದೆ ಮತ್ತು ಅವರನ್ನು ಕೇಂದ್ರ ಕಾನೂನು ಸಚಿವಾಲಯದಿಂದ ಹೊರಹಾಕಲಾಗಿದೆ ಎಂದು ನಾಯಕ ಸಂಜಯ್ ರಾವುತ್ ಗುರುವಾರ ಹೇಳಿದ್ದಾರೆ.

published on : 18th May 2023

ಕೇಂದ್ರ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ: ಕಾನೂನು ಸಚಿವ ಸ್ಥಾನ ಕಳೆದುಕೊಂಡ ಕಿರಣ್‌ ರಿಜಿಜು!

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ಯಾಬಿನೆಟ್‌ ಸಚಿವಾಲಯದಲ್ಲಿ ಪುನರ್‌ ರಚನೆ ಮಾಡಲಾಗಿದೆ. ಕಾನೂನು ಸಚಿವರಾಗಿದ್ದ ಕಿರಣ್‌ ರಿಜಿಜುಗೆ ಭೂ ವಿಜ್ಞಾನ ಸಚಿವ ಸ್ಥಾನವನ್ನು ನೀಡಲಾಗಿದೆ.

published on : 18th May 2023

ಅಧಿಕಾರಕ್ಕೇರಲು ಅಣ್ಣಾ ಹಜಾರೆಯನ್ನು ಆಮ್ ಆದ್ಮಿ ಪಕ್ಷ ಬಳಸಿಕೊಂಡಿದೆ: ಕಾನೂನು ಸಚಿವ ಕಿರಣ್ ರಿಜಿಜು

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿ  ಹಗರಣ ಪ್ರಕರಣದಲ್ಲಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ. 

published on : 16th April 2023

ಸಂವಿಧಾನ ರಕ್ಷಿಸುವ ಬಗ್ಗೆ ಸೋನಿಯಾ ಗಾಂಧಿ ಮಾತು ಅತ್ಯಂತ ಅಪ್ರಬುದ್ಧ ಹೇಳಿಕೆ: ಕಿರಣ್ ರಿಜಿಜು ತಿರುಗೇಟು

ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆಗಾಗಿ ಕಾಂಗ್ರೆಸ್ ಸಮಾನ ಮನಸ್ಕ ಪಕ್ಷಗಳೊಂದಿಗೆ ಕೈಜೋಡಿಸುತ್ತದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ  ಹೇಳಿಕೆಯನ್ನು 'ಅತ್ಯಂತ ಅಪ್ರಬುದ್ಧತೆಯ ಹೇಳಿಕೆ' ಎಂದು ಕಾನೂನು ಸಚಿವ ಕಿರಣ್ ರಿಜಿಜು ಮಂಗಳವಾರ ಬಣ್ಣಿಸಿದ್ದಾರೆ.

published on : 11th April 2023

ಕಾಶ್ಮೀರದಲ್ಲಿ ಕಿರಣ್ ರಿಜಿಜು ಕಾರಿಗೆ ಟ್ರಕ್ ಡಿಕ್ಕಿ; ಕೇಂದ್ರ ಸಚಿವ ಅಪಾಯದಿಂದ ಪಾರು

ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ.

published on : 8th April 2023

ನಿವೃತ್ತ ಹಾಗೂ ಸೇವೆಯಲ್ಲಿರುವ ನ್ಯಾಯಧೀಶರ ವಿರುದ್ಧ ಸರ್ಕಾರವು ಕಾಲಕಾಲಕ್ಕೆ ದೂರನ್ನು ಸ್ವೀಕರಿಸುತ್ತದೆ: ಕಿರಣ್ ರಿಜಿಜು

ಕಾನೂನು ಸಚಿವಾಲಯವು ಕಾಲಕಾಲಕ್ಕೆ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ನ್ಯಾಯಮೂರ್ತಿಗಳ ಬಗ್ಗೆ ದೂರುಗಳನ್ನು ಸ್ವೀಕರಿಸುತ್ತದೆ. ಆದರೆ ಇದು ಉನ್ನತ ನ್ಯಾಯಾಂಗದ ಸದಸ್ಯರ ನೇಮಕಾತಿ ಮತ್ತು ಸೇವಾ ಷರತ್ತುಗಳಿಗೆ ಮಾತ್ರ ಸಂಬಂಧಿಸಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಗುರುವಾರ ರಾಜ್ಯಸಭೆಗೆ ತಿಳಿಸಿದರು.

published on : 6th April 2023

ರಾಹುಲ್ ಗಾಂಧಿ ಮೇಲ್ಮನವಿ: ಸೂರತ್‌ಗೆ ಕಾಂಗ್ರೆಸ್ ನಾಯಕರ ದಂಡು, ರಿಜಿಜು ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮಾನನಷ್ಟ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದು, ಅವರೊಂದಿಗೆ ಕಾಂಗ್ರೆಸ್ ನಾಯಕರ ದಂಡು ಕೂಡಾ ಸೂರತ್ ಗೆ ತೆರಳುತ್ತಿರುವುದನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಪ್ರಶ್ನಿಸಿದ್ದಾರೆ.

published on : 3rd April 2023

ಕೆಲವು ನಿವೃತ್ತ ನ್ಯಾಯಾಧೀಶರು ಭಾರತ ವಿರೋಧಿ ಗ್ಯಾಂಗ್‌ನ ಭಾಗವಾಗಿದ್ದಾರೆ: ಕಿರಣ್ ರಿಜಿಜು

'ಭಾರತ ವಿರೋಧಿ ಗ್ಯಾಂಗ್'ನ ಭಾಗವಾಗಿರುವ ಕೆಲವು ನಿವೃತ್ತ ನ್ಯಾಯಾಧೀಶರು ಮತ್ತು ಕಾರ್ಯಕರ್ತರು ವಿರೋಧ ಪಕ್ಷಗಳ ರೀತಿಯಲ್ಲಿ ಸರ್ಕಾರದ ವಿರುದ್ಧ ನ್ಯಾಯಾಂಗವನ್ನು ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದ್ದಾರೆ.

published on : 19th March 2023

"ಕಾನೂನು ಸಚಿವರೊಂದಿಗೆ ಸಮಸ್ಯೆಗಳ ಜೋಡಿಸಲು ಬಯಸುವುದಿಲ್ಲ": ಸಿಜೆಐ ಚಂದ್ರಚೂಡ್

ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆ ಕುರಿತಂತೆ ಕೇಂದ್ರ ಸರ್ಕಾರದೊಂದಿಗಿನ ಗೊಂದಲದ ಕುರಿತು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು, ಕಾನೂನು ಸಚಿವರೊಂದಿಗಿನ ಸಮಸ್ಯೆಗಳಲ್ಲಿ ಭಾಗಿಯಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

published on : 18th March 2023

ಭಾರತವನ್ನು ದೂಷಿಸುವವರ ವಿರುದ್ಧ ಜನರು ಧ್ವನಿ ಎತ್ತಬೇಕು: ರಾಹುಲ್ ಗಾಂಧಿ ವಿರುದ್ಧ ಕಿರಣ್ ರಿಜಿಜು ವಾಗ್ದಾಳಿ

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಗುರುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಲಂಡನ್ ಭಾಷಣಕ್ಕಾಗಿ ವಾಗ್ದಾಳಿ ನಡೆಸಿದ್ದು, ಭಾರತವನ್ನು ದೂಷಿಸುವವರ ವಿರುದ್ಧ ಜನರು ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ.

published on : 16th March 2023

ಲಂಡನ್‌ನಲ್ಲಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವಿರುದ್ಧ ಲೋಕಸಭಾ ಸ್ಪೀಕರ್ ಕ್ರಮ ಕೈಗೊಳ್ಳಬೇಕು: ಗಿರಿರಾಜ್ ಸಿಂಗ್

ಭಾರತೀಯ ಸಂಸತ್ತಿನಲ್ಲಿ ಮೈಕ್ರೊಫೋನ್‌ಗಳು ವಿರೋಧ ಪಕ್ಷದ ವಿರುದ್ಧ ಹೆಚ್ಚಾಗಿ ಮೌನವಾಗಿರುತ್ತವೆ ಎಂದು ಲಂಡನ್‌ನಲ್ಲಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೋಮವಾರ ಒತ್ತಾಯಿಸಿದ್ದಾರೆ.

published on : 13th March 2023

ಭಾರತದ ನ್ಯಾಯಾಂಗವನ್ನು ಪ್ರಶ್ನಿಸುವಂತಿಲ್ಲ: ಕೇಂದ್ರ ಸಚಿವ ಕಿರಣ್ ರಿಜಿಜು

ಪ್ರತಿಪಕ್ಷಗಳು ಭಾರತದ ನ್ಯಾಯಾಂಗದ ಆಶಯಗಳನ್ನು ಅನುಮಾನಿಸುವ ಮೂಲಕ ದೇಶದ ಪ್ರತಿಷ್ಠೆಯನ್ನು ಹಾಳುಮಾಡಲು ಯತ್ನಿಸುತ್ತಿದೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಶನಿವಾರ ಆರೋಪಿಸಿದ್ದಾರೆ.

published on : 4th March 2023

ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗರಿಷ್ಠ ಸ್ಥಾನಗಳನ್ನು ಗೆಲ್ಲುವಂತೆ ಮಾಡಿ: ಬಿಜೆಪಿ ಕಾರ್ಯಕರ್ತರಿಗೆ ಕಿರಣ್ ರಿಜಿಜು

ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಮಂಗಳವಾರ ಬಿಜೆಪಿ ಕಾರ್ಯಕರ್ತರನ್ನು ಒತ್ತಾಯಿಸಿದ್ದಾರೆ.

published on : 28th February 2023
1 2 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9