• Tag results for Kolkatta

ಬಂಗಾಳ ರ‍್ಯಾಲಿಯಲ್ಲಿ ರಾಜೀವ್ ಅಣಕಿಸಿದ ರಾಜನಾಥ್..!

ಮಮತಾ ದೀದಿ ಸರ್ಕಾರವನ್ನು ಕಿತ್ತೊಗೆದು, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಜನ ಬಯಸುತ್ತಿರುವುದನ್ನು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಬಿಜೆಪಿ ರ‍್ಯಾಲಿಯಲ್ಲಿ ಸೇರುತ್ತಿರುವ ಬೃಹತ್ ಸಂಖ್ಯೆಯ ಜನರಿಂದಲೇ ಗೊತ್ತಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

published on : 26th February 2021

'ಬಂಗಾಳವು ತನ್ನ ಸ್ವಂತ ಮಗಳನ್ನು ಬಯಸುತ್ತದೆ': ಟಿಎಂಸಿ ಪಕ್ಷದ ಚುನಾವಣಾ ಘೋಷವಾಕ್ಯ

ಮುಂಬರುವ ವಿಧಾನಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಶನಿವಾರ ತನ್ನ ಘೋಷ ವಾಕ್ಯವನ್ನು ಅನಾವರಣಗೊಳಿಸಿದೆ. ವಲಸಿಗರು ಮತ್ತು ಒಳಗಿನವರು ಎಂಬ ಚರ್ಚೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದ ಪುತ್ರಿ ಎಂದು ಬಿಂಬಿಸಿಕೊಂಡಿದ್ದಾರೆ.

published on : 20th February 2021

ಫೆ.18ರಂದು ಪಶ್ಚಿಮ ಬಂಗಾಳದ 1263 ಮಂಡಲಗಳಲ್ಲಿ ಬಿಜೆಪಿಯಿಂದ 'ಕೃಷಿಕರಿಗೆ ಸಹ ಭೋಜನ' ಆಯೋಜನೆ

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೃಷಿಕರನ್ನು ತಲುಪಲು ಬಿಜೆಪಿ ಮೆಗಾ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಇದೇ 18 ರಂದು 1,263 ಮಂಡಲಗಳಲ್ಲಿ  ಕೃಷಿಕರಿಗೆ ಸಹ ಭೋಜನವನ್ನು ಬಿಜೆಪಿ ಕಿಸಾನ್ ಮೋರ್ಚಾ ಆಯೋಜಿಸಿದೆ.

published on : 15th February 2021

ಪಶ್ಚಿಮ ಬಂಗಾಳ: ಬಿಜೆಪಿ ರಥಯಾತ್ರೆಗೆ ಪೊಲೀಸರ ತಡೆ; ಮಾರ್ಗ ಬದಲಾವಣೆ!

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಿಜೆಪಿ 'ರಥಯಾತ್ರೆಯನ್ನು ಸೋಮವಾರ ಪೊಲೀಸರು ತಡೆದಿದ್ದಾರೆ. ಜಿಲ್ಲೆಯ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಪರಿವರ್ತನಾ ಯಾತ್ರೆ ಸಾಗುವುದಕ್ಕೆ ಪೊಲೀಸರು ಅಡ್ಡಿಪಡಿಸಿದ ನಂತರ ಪರ್ಯಾಯ ಮಾರ್ಗದಲ್ಲಿ ಬಿಜೆಪಿ ಯಾತ್ರೆ ಸಾಗಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 8th February 2021

ಪಶ್ಚಿಮ ಬಂಗಾಳದಲ್ಲಿ ನಾಳೆ 'ಪರಿವರ್ತನಾ ಯಾತ್ರೆ'ಗೆ ಜೆ.ಪಿ. ನಡ್ಡಾ ಚಾಲನೆ

 ಪಶ್ಚಿಮ ಬಂಗಾಳದಲ್ಲಿ ತೃಣ ಮೂಲ ಕಾಂಗ್ರೆಸ್ ಪಕ್ಷದ ದಶಕದ ಆಳ್ವಿಕೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಪ್ರಚಾರಾಂದೋಲನ 'ಪರಿವರ್ತನಾ ಯಾತ್ರೆ'ಗೆ ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಚಾಲನೆ ನೀಡಲಿದ್ದಾರೆ.

published on : 5th February 2021

ಪಶ್ಚಿಮ ಬಂಗಾಳ: ಟಿಎಂಸಿ ಮುಖಂಡರ ಸಾಮೂಹಿಕ ಸೇರ್ಪಡೆಗೆ ಬಿಜೆಪಿ ಬ್ರೇಕ್!

ಪರಿಶೀಲನೆಯಿಲ್ಲದೆ ತೃಣಮೂಲ ಕಾಂಗ್ರೆಸ್ ಪಕ್ಷದ ಬಂಡಾಯಗಾರರನ್ನು ಪಕ್ಷದೊಳಗೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಬಗ್ಗೆ ಬಿಜೆಪಿಯಲ್ಲಿಯೇ ಅಸಮಾಧಾನವಿರುವಂತೆಯೇ, ಪಶ್ಚಿಮ ಬಂಗಾಳದಲ್ಲಿ ಸಾಮೂಹಿಕವಾಗಿ ಟಿಎಂಸಿ ಮುಖಂಡರನ್ನು ಸೇರ್ಪಡೆ ಮಾಡಿಕೊಳ್ಳದಿರಲು ಬಿಜೆಪಿ ನಿರ್ಧರಿಸಿದೆ ಎಂದು ಹಿರಿಯ ಮುಖಂಡರೊಬ್ಬರು ಮಂಗಳವಾರ ಹೇಳಿದ್ದಾರೆ.

published on : 2nd February 2021

ಮಮತಾ ಸೋದರಳಿಯ ಮುಂದಿನ ಮುಖ್ಯಮಂತ್ರಿ ಹೇಳಿಕೆ ಮೂಲಕ ಗೊಂದಲ ಸೃಷ್ಟಿಗೆ ಪ್ರಯತ್ನ: ಅಮಿತ್ ಶಾ ವಿರುದ್ಧ ಟಿಎಂಸಿ ಟೀಕೆ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೃಣ ಮೂಲ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

published on : 1st February 2021

ಸೌರವ್ ಗಂಗೂಲಿ ಆರೋಗ್ಯ ಸ್ಥಿತಿ ಉತ್ತಮ, ಪ್ರಮುಖ ನಿಯತಾಂಕಗಳು ಸ್ಥಿರ- ಆಸ್ಪತ್ರೆ

 ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸ್ಥಿತಿ ಉತ್ತಮವಾಗಿದ್ದು, ಅವರ ಎಲ್ಲಾ ಪ್ರಮುಖ  ನಿಯತಾಂಕಗಳು ಸ್ಥಿರವಾಗಿವೆ ಎಂದು ಅಪೊಲೊ ಗ್ಲೆನೆಗಲ್ಸ್ ಆಸ್ಪತ್ರೆ ಶನಿವಾರ ಬಿಡುಗಡೆ ಮಾಡಿರುವ ವೈದ್ಯಕೀಯ ಬುಲೆಟಿನ್  ನಲ್ಲಿ ತಿಳಿಸಿದೆ.

published on : 30th January 2021

ಅಮಿತ್ ಶಾ ನಾಳೆಯಿಂದ ಎರಡು ದಿನ ಪಶ್ಚಿಮ ಬಂಗಾಳ ಭೇಟಿ!

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆಯಿಂದ ಎರಡು ದಿನ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಇಂದು ರಾತ್ರಿ ಕೊಲ್ಕತ್ತಾಕ್ಕೆ ಆಗಮಿಸಲಿದ್ದಾರೆ.

published on : 29th January 2021

'ಬಂಗಾಳಕ್ಕೆ ಸಾಕಷ್ಟು ಲಸಿಕೆಗಳು ಸಿಕ್ಕಿಲ್ಲ, ಅಗತ್ಯವಿದ್ದರೆ ತಯಾರಕರಿಂದ ಖರೀದಿ- ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ  ಕೋವಿಡ್-19 ಲಸಿಕೆಗಳನ್ನು ಪೂರೈಸಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿನ ಮುಂಚೂಣಿ ಕೋವಿಡ್ -19 ಕಾರ್ಯಕರ್ತರಿಗಾಗಿ 5 ಲಕ್ಷದ 96 ಸಾವಿರ ಲಸಿಕೆಗಳನ್ನು ಕೇಂದ್ರ ಸರ್ಕಾರ ರವಾನಿಸಿದೆ.

published on : 17th January 2021

ಪಶ್ಚಿಮ ಬಂಗಾಳದಲ್ಲಿ ಉಚಿತವಾಗಿ ಕೋವಿಡ್ ಲಸಿಕೆ- ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಎಲ್ಲ ಜನರಿಗೂ ಉಚಿತವಾಗಿ ಕೋವಿಡ್-19 ಲಸಿಕೆ ಲಭ್ಯವಾಗುವಂತೆ ರಾಜ್ಯ ಸರ್ಕಾರ ಸಿದ್ಧತೆ ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಹೇಳಿದ್ದಾರೆ.

published on : 10th January 2021

ಟಿಎಂಸಿ ಕಾರ್ಯಕರ್ತರಿಂದ ಸುವೇಂದು ಅಧಿಕಾರಿಯ ಕಚೇರಿ ಧ್ವಂಸ- ಬಿಜೆಪಿ ಆರೋಪ

ಶನಿವಾರ ರಾತ್ರಿ ನಂದಿಗ್ರಾಮ ಪ್ರದೇಶದಲ್ಲಿ ಬಿಜೆಪಿ ಮುಖಂಡ ಸುವೇಂದು ಅಧಿಕಾರಿಯ ಕಚೇರಿಯನ್ನು ತೃಣ ಮೂಲ ಕಾಂಗ್ರೆಸ್ ಕಾರ್ಯಕರ್ತರು ಧ್ವಂಸಗೊಳಿಸಿರುವುದಾಗಿ ಬಿಜೆಪಿ ಆರೋಪಿಸಿದೆ. ಈ ಕೃತ್ಯದ ಹಿಂದಿರುವ ವ್ಯಕ್ತಿಗಳನ್ನು ಬಂಧಿಸುವಂತೆ ಬಿಜೆಪಿ ಒತ್ತಾಯಿಸಿದೆ.

published on : 10th January 2021

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆರೋಗ್ಯ ಸ್ಥಿರ, ಚಿಕಿತ್ಸೆಗೆ ಸ್ಪಂದನೆ: ಜಯ್ ಶಾ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಎದೆನೋವಿನ ಸಮಸ್ಯೆಯಿಂದಾಗಿ  48 ವರ್ಷದ ಸೌರವ್ ಗಂಗೂಲಿ ಇಲ್ಲಿನ ವುಡ್ ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

published on : 2nd January 2021

ಮಮತಾ ಬ್ಯಾನರ್ಜಿ,ವಿಶ್ವಭಾರತಿ ಆಡಳಿತ ಮಧ್ಯೆ ತೀವ್ರಗೊಂಡ ಕ್ಯಾಂಪಸ್ ರಸ್ತೆ ವಿವಾದ

ನಾಲ್ಕು ವರ್ಷಗಳ ಹಿಂದೆ ಕೇಂದ್ರಿಯ ವಿಶ್ವವಿದ್ಯಾಲಯದ ಆಡಳಿತಕ್ಕೆ ನೀಡಲಾಗಿದ್ದ ರಸ್ತೆಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯುವುದಾಗಿ ಘೋಷಿಸಿದ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ವಿಶ್ವ ಭಾರತಿ ಆಡಳಿತ ಮಂಡಳಿ ನಡುವಿನ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.

published on : 28th December 2020

ಬುದ್ಧದೇವ ಭಟ್ಟಾಚಾರ್ಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ, ಆದರೂ ಗಂಭೀರ: ಆಸ್ಪತ್ರೆ ಮೂಲಗಳು

ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬುದ್ದದೇವ ಭಟ್ಟಾಚಾರ್ಯ ಅವರ ಆರೋಗ್ಯದಲ್ಲಿ ಇಂದು ಬೆಳಗ್ಗೆ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಆದರೂ ಪರಿಸ್ಥಿತಿ ಇನ್ನೂ ಗಂಭೀರವಾಗಿರುವುದಾಗಿ ಆಸ್ಪತ್ರೆ ಮೂಲಗಳು ಹೇಳಿವೆ. 

published on : 10th December 2020
1 2 >