• Tag results for Koppala

ಕೊಪ್ಪಳ: 9 ಜನ ಭಿಕ್ಷುಕರ ಕೊರೋನಾ ವರದಿ‌ ನೆಗೆಟಿವ್!

ಪೇಷೆಂಟ್-1173ಯ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನ ಭಿಕ್ಷುಕರು ಸೇರಿದಂತೆ ಮೇ 19 ರಿಂದ ಇದುವರೆಗೂ ಕಳುಹಿಸಿದ್ದ 876 ಜನರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

published on : 23rd May 2020

ಕೊಪ್ಪಳದ ಕೊರೊನಾ ಸೋಂಕಿತರಿಗೆ 9 ಜನ ಭಿಕ್ಷುಕರ ಪ್ರಾಥಮಿಕ ಸಂಪರ್ಕ!

ಕೊರೊನಾ ಸೋಂಕಿನ ವಿಚಾರದಲ್ಲಿ ಇದುವರೆಗೂ ಹಸಿರುವಲಯದಲ್ಲಿದ್ದ ಕೊಪ್ಪಳದಲ್ಲಿ ಸೋಮವಾರ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಆದರೆ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಇದ್ದುದರಿಂದ ಸೋಂಕಿತರ ಟ್ರಾವೆಲ್ ಹಿಸ್ಟರಿ ಅಧಿಕೃತವಾಗಿ ಜಿಲ್ಲಾಡಳಿತದಿಂದ ಬಿಡುಗಡೆಯಾಗಲು ವಿಳಂಬವಾಗಿದೆ. 

published on : 20th May 2020

ಕೊಪ್ಪಳ ಜಿಲ್ಲಾ ಪಂಚಾಯಿತಿ ಗದ್ದುಗೆಗೆ ಶುರುವಾಯ್ತು ಹಗ್ಗ ಜಗ್ಗಾಟ!

ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕಾಗಿ‌ ಇಷ್ಟು ದಿನ ನಡೆದಿದ್ದ ತೆರೆಮರೆಯ ಕಸರತ್ತು ಇದೀಗ ಬಯಲಿಗೆ ಬಂದಿದೆ. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಹಾಲಿ ಅಧ್ಯಕ್ಷ ವಿಶ್ವನಾಥರಡ್ಡಿ ಬಿಜೆಪಿ ಸಖ್ಯ ಬೆಳೆಸಿ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವ ಉತ್ಸಾಹದಲ್ಲಿದ್ದಾರೆ. ಬಿಜೆಪಿ ಸಖ್ಯ ಬೆಳೆಸಿದ ಕಾರಣಕ್ಕಾಗಿ ಹೇಗಾದರೂ ಸರಿ ವಿಶ್ವನಾಥರಡ್ಡಿಯನ್ನು ಅಧಿಕಾರದಿಂದ ಕೆಳ

published on : 18th May 2020

ಕೊಪ್ಪಳ: ಬಡವರ ಅನ್ನಭಾಗ್ಯಕ್ಕೆ ಕನ್ನ, ಅಕ್ಕಿ ಕಾಳಸಂತೆಯಲ್ಲಿ ಮಾರಾಟ!

ರಾಜ್ಯದ ಯಾವೊಬ್ಬ ಬಡವನು ಹಸಿವಿನಿಂದ ಬಳಲಬಾರದು ಎಂದು ರಾಜ್ಯ ಸರಕಾರ ಬಡತನ ರೇಖೆಗಿಂತ ಕೆಳಗಿರುವ ಜನತೆಗೆ ಉಚಿತ ಅಕ್ಕಿ ನೀಡುತ್ತಿದೆ. ಲಾಕ್‌ಡೌನ್ ಪರಿಹಾರವಾಗಿ ಈಚೆಗೆ ಕೇಂದ್ರ ಸರಕಾರವೂ ಸಹ ಗರೀಬ್ ಕಲ್ಯಾಣ ಯೋಜನೆಯಡಿ ಉಚಿತ ಅಕ್ಕಿ ನೀಡುತ್ತಿದೆ. ಆದರೆ ಈ ಅಕ್ಕಿಯನ್ನು ಅಧಿಕಾರಿಗಳು ಸೇರಿಕೊಂಡು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

published on : 12th May 2020

ಕುಡಿಯುವ ನೀರು ಸಿಗದಿದ್ದಕ್ಕೆ ಜನಪ್ರತಿನಿಧಿಗಳನ್ನೇ ಕೂಡಿ ಹಾಕಿದ ಗ್ರಾಮಸ್ಥರು!  

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಗಳೂರಿನ ಗ್ರಾಮಸ್ಥರು ನೇರ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ, ಒಳಗಿದ್ದ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳನ್ನು ಕೂಡಿ ಹಾಕಿದರು

published on : 7th May 2020

ಕೊಪ್ಪಳಕ್ಕೂ ಬಂತು ಕೊರೋನಾ ಭೀತಿ!

ಹಸಿರು ವಲಯದಲ್ಲಿರುವ ಕೊಪ್ಪಳದಲ್ಲಿ ಈವರೆಗೆ 970 ಕೊವಿಡ್-19 ಪರೀಕ್ಷೆ ನಡೆಸಲಾಗಿದ್ದು ಎಲ್ಲ ನೆಗೆಟಿವ್ ರಿಜಲ್ಟ್ ಬಂದಿವೆ. ಆದರೆ ಪಕ್ಕದ ಬಾಗಲಕೋಟೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಧ್ಯೆಯೂ ನಡೆದ ಮದುವೆಯೊಂದು ಕೊಪ್ಪಳಕ್ಕೂ ಕೊರೋನಾ ಹಬ್ಬುವ ಗುಮ್ಮ ತಂದಿಟ್ಟಿದೆ.

published on : 7th May 2020

ಕೊಪ್ಪಳ: ಭತ್ತದ ಬೆಳೆ ನಷ್ಟಕ್ಕೆ ರೈತ ನೇಣಿಗೆ ಶರಣು

ಸಾಲದ ಬಾಧೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. 

published on : 27th April 2020

ರೈತರಿಂದ ಆನ್‌ಲೈನ್‌ ಟ್ರೇಡಿಂಗ್ ಆರಂಭ: ಬಿ.ಸಿ. ಪಾಟೀಲ್

ಕೃಷಿ ಸಚಿವನಾಗಿ ತಾವು ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದು, ರೈತರ ಕೆಲಸಗಳನ್ನು ಮಾಡುತ್ತಿರುವ ಹೆಮ್ಮೆ ಹಾಗೂ ಆತ್ಮತೃಪ್ತಿ ಎರಡೂ ತಮಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿಯೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

published on : 18th April 2020

ಕೂಲಿಕಾರ್ಮಿಕನಿಗೆ ಲಾಠಿ ಏಟು: ವಾಟ್ಸಪ್ ನಲ್ಲಿ ತಕ್ಷಣ ಸ್ಪಂದಿಸಿದ ಡಿಸಿ, ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ

ಕೊರೋನಾದಂತಹ ತುರ್ತು ಪರಿಸ್ಥಿತಿ ನಿಭಾಯಿಸುವಲ್ಲಿ ಸದಾ ಮಗ್ನರಾಗಿರುವ  ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ ಕುಮಾರ್, ಸಾಮಾನ್ಯ ಕಾರ್ಮಿಕನೊಬ್ಬ ಮಾಡಿದ ಕೇವಲ ವಾಟ್ಸಫ್ ಮೆಸೇಜಿಗೂ ಸ್ಪಂದಿಸುವ ಮೂಲಕ ಜಿಲ್ಲೆಯ ಜನರಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

published on : 10th April 2020

ಅಕಾಲಿಕ ಮಳೆಯಿಂದ ನಷ್ಟವಾದ ಜಮೀನುಗಳಿಗೆ ಭೇಟಿ: ರೈತರಿಗೆ ಆತ್ಮಸ್ಥೈರ್ಯ ತುಂಬಿದ ಬಿಸಿ ಪಾಟೀಲ್ 

ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾಗಿದ್ದನ್ನು ಗಮನಿಸಿದ ಕೃಷಿ ಸಚಿವ ಬಿ‌.ಸಿ.ಪಾಟೀಲ್ ಇಂದು ಹಾನಿಯಾದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

published on : 9th April 2020

ಕೊಪ್ಪಳ: ಎಣ್ಣೆ ಸಿಗದಿದ್ದಕ್ಕೆ ಬಾರ್‌ಗೆ ಕನ್ನ ಹಾಕಿದ ಕುಡುಕರು!

ಕೊರೋನಾ ವೈರಸ್  ಹರಡದಂತೆ ತಡೆಯುವ ನಿಟ್ಟಿನಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಾಗಿದ್ದು, ಕುಡುಕರಿಗೆ ಎಣ್ಣೆ ಸಿಗದಂತಾಗಿದೆ.  ಇದರಿಂದ ಕಂಗೆಟ್ಟಂತಾಗಿರುವ ಕುಡುಕರು ಕೊಪ್ಪಳದಲ್ಲಿ ಬಾರ್ ಗೆ ಕನ್ನ ಹಾಕಿ, ಸಾವಿರಾರು ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ.

published on : 5th April 2020

ರಾಮಸೇತು ಮಾದರಿಯಲ್ಲಿ ತುಂಗಭದ್ರಾ ನದಿಗೂ ಬಂತು ಕಾಲು ಸೇತುವೆ

ಮಾಧ್ವ ಅನುಯಾಯಿಗಳ ಪುಣ್ಯಭೂಮಿ ತಲುಪಲು ವಿನೂತನ ಮಾರ್ಗ, ತಾಲ್ಲೂಕಿನ ಆನೆಗೊಂದಿ ಸಮೀಪ ಇರುವ ನವವೃಂದಾವನ ಗಡ್ಡೆ ಮಾಧ್ವ ಯತಿಗಳ ಹಾಗೂ ಅನುಯಾಯಿಗಳ ತಪೋಭೂಮಿ ಹಾಗೂ ಪುಣ್ಯ ಕ್ಷೇತ್ರ.

published on : 13th March 2020

ಅಯೋಧ್ಯೆಯಲ್ಲಿ ರಾಮಭಕ್ತಿ, ಕೊಪ್ಪಳದಲ್ಲಿ ಹನುಮ ಶಕ್ತಿ; ಆಂಜನೇಯಸ್ವಾಮಿ ದೇವಾಲಯಕ್ಕೆ 20 ಕೋಟಿ   

ಪ್ರವಾಸೋದ್ಯಮ ಇಲಾಖೆಗೆ ಬಜೆಟ್ ನಲ್ಲಿ 500 ಕೋೋಟಿ ರು ಮೀಸಲಿಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ  ಕೊಪ್ಪಳದ ಆಂಜನೇಯ ಸ್ವಾಮಿ ದೇವಾಲದ ಅಭಿವೃದ್ಧಿಗಾಗಿ  20 ಕೋಟಿ ರೂ ನೀಡಿದ್ದಾರೆ.

published on : 6th March 2020

ಕೊಪ್ಪಳ: ಅವಧಿಗೆ ಮುನ್ನ ತೆನೆಕಟ್ಟಿದ ಭತ್ತ, ಆತಂಕದಲ್ಲಿ ಅನ್ನದಾತ!

ಅದು ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ. ಭತ್ತದ ನಾಡು ಎಂದು ಖ್ಯಾತಿ ಪಡೆದ ಭತ್ತದ ಕಣಜ. ಇಲ್ಲಿ ಬೆಳೆಯುವ ಭತ್ತ  ಒಂದೊಮ್ಮೆ ವಿದೇಶಗಳಿಗೆ ರಫ್ತು ಆಗುತ್ತಿತ್ತು ಹಾಗೂ ಪಕ್ಕದ ರಾಜ್ಯಗಳಿಗೂ ರಫ್ತು ಮಾಡಲಾಗುತ್ತದೆ. ಆದ್ರೆ ಇದೀಗ ಈ ಪ್ರದೇಶ ಒಂದಲ್ಲ ಒಂದು ಸಮಸ್ಯೆಗೆ ಸುದ್ದಿಯಾಗುತ್ತಿದೆ.

published on : 25th February 2020

ರಾಷ್ಟ್ರೀಯ ಹೆದ್ದಾರಿ 50 ರಲ್ಲಿ  ಭೀಕರ ಅಪಘಾತ:ಲಾರಿ ಹರಿದು ಸ್ಥಳದಲ್ಲೇ ವ್ಯಕ್ತಿ ಸಾವು

ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತವಾಗಿದೆ.ಕೊಪ್ಪಳದ ಕುಷ್ಟಗಿ ತಾಲ್ಲೂಕಿನ  ಕಲಕೇರಿ ಗ್ರಾಮದ ಬಳಿ ಲಾರಿ ಹರಿದು ಸ್ಥಳದಲ್ಲಿಯೇ ವ್ಯಕ್ತಿಯೊರ್ವ ಮೃತಪಟ್ಟಿದ್ದಾನೆ

published on : 20th February 2020
1 2 3 >