• Tag results for Labourers

ಬೆಂಗಳೂರು: ವಿದ್ಯುತ್ ಸ್ಪರ್ಶಿಸಿ ನಾಲ್ವರು ಕಾರ್ಮಿಕರ ಸಾವು

ಕಾರ್ಯಕ್ರಮವೊಂದಕ್ಕೆ ಲೈಟಿಂಗ್ಸ್‌ ಹಾಕುವಾಗ ವಿದ್ಯುತ್ ಸ್ಪರ್ಶಿಸಿ ನಾಲ್ವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಇಂಡ್ಲಬೆಲೆ ಎಂಬಲ್ಲಿ ಬುಧವಾರ ಸಂಭವಿಸಿದೆ. 

published on : 7th April 2021

ರಾಜ್ಯದಲ್ಲಿ ಕೊರೋನಾ ಹೆಚ್ಚಳ: ಮತ್ತೊಂದು ಲಾಕ್ಡೌನ್ ಆತಂಕ; ಹಣ ಸಂಪಾದಿಸಲು ಓವರ್ ಟೈಮ್ ಕೆಲಸಕ್ಕಿಳಿದ ಕಾರ್ಮಿಕರು!

ರಾಜ್ಯದಲ್ಲಿ ದಿನಕಳೆದಂತೆ ಮಹಾಮಾರಿ ಕೊರೋನಾ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಲಾಕ್ಡೌನ್ ಜಾರಿಯಾಗಲಿದೆ ಎಂದು ಆತಂಕಗೊಂಡಿರುವ ದಿನಗೂಲಿ ಕಾರ್ಮಿಕರು ಹೆಚ್ಚೆಚ್ಚು ಪಾಳಿಯಲ್ಲಿ ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. 

published on : 2nd April 2021

ಉತ್ತರ ಕನ್ನಡ: ಗುಡ್ಡದ ಮಣ್ಣು ಕುಸಿತದಿಂದ ನಾಲ್ವರು ಕೂಲಿ ಕಾರ್ಮಿಕರು ಸಾವು

ಗುಡ್ಡದ ಮಣ್ಣು ಕುಸಿತದಿಂದ ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಇಡಗುಂದಿ ಗ್ರಾಮದ ಸಂಪೇಬೈಲ್ ನಲ್ಲಿ ಈ ಘಟನೆ ಸಂಭವಿಸಿದೆ.

published on : 8th March 2021

ಬಾಲ ಕಾರ್ಮಿಕ, ಬಾಲ್ಯ ವಿವಾಹ ಸಮಸ್ಯೆ ಪರಿಶೀಲನೆಗೆ ಸಚಿವ ಸುರೇಶ್ ಕುಮಾರ್ ಸೂಚನೆ

ಕೊರೋನಾ ಸೋಂಕು ಪ್ರಸರಣದಿಂದಾಗಿ ಹಲವು ತಿಂಗಳು ಶಾಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಬಾಲ ಕಾರ್ಮಿಕರ ಹಾಗೂ ಬಾಲ್ಯ ವಿವಾಹಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿ ಪರಿಹಾರ ಕ್ರಮಗಳಿಗೆ ಮುಂದಾಗಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

published on : 12th February 2021

ಉತ್ತರಾಖಂಡ ಹಿಮ ಪ್ರವಾಹ: 26 ಮೃತದೇಹ ಪತ್ತೆ, ತಪೋವನ್ ಸುರಂಗದಲ್ಲಿ ಯುಪಿಯ 55 ಕಾರ್ಮಿಕರು ನಾಪತ್ತೆ!

ಉತ್ತರಾಖಂಡದ ಹಿಮ ಸ್ಫೋಟದಲ್ಲಿ ಇಲ್ಲಿಯವರೆಗೂ ಸುಮಾರು 26 ಮೃತದೇಹಗಳು ಪತ್ತೆಯಾಗಿವೆ. ಇನ್ನು  ತಪೋವನ್ ವಿದ್ಯುತ್ ಯೋಜನೆ ಸ್ಥಳದಲ್ಲಿ ಉತ್ತರ ಪ್ರದೇಶದ ಸುಮಾರು 55 ಕಾರ್ಮಿಕರು ನಾಪತ್ತೆಯಾಗಿದ್ದಾರೆ.

published on : 9th February 2021

ಸೆರಂ ಇನ್ಸ್ ಟಿಟ್ಯೂಟ್ ಅಗ್ನಿ ಅವಘಡ: ಕಾರ್ಮಿಕರ ಸಮಯ ಪ್ರಜ್ಞೆಯಿಂದ 200 ಮಂದಿ ಬಚಾವ್, ಸಂಸ್ಥೆಯಿಂದ 25 ಲಕ್ಷ ರೂ. ಪರಿಹಾರ

ಕೋವಿಡ್-19 ಸಾಂಕ್ರಾಮಿಕಕ್ಕೆ ಲಸಿಕೆ ಅಭಿವೃದ್ಧಿಪಡಿಸಿ ಸುದ್ದಿಯಲ್ಲಿದ್ದ ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ನಲ್ಲಿ ಕಳೆದ ರಾತ್ರಿ ಭಾರೀ ಪ್ರಮಾಣದ ಅಗ್ನಿ ಅವಘಡ ಸಂಭವಿಸಿ ಐವರು ಕಾರ್ಮಿಕರು ಮೃತಪಟ್ಟಿದ್ದು, ಸಂದರ್ಭಕ್ಕೆ ತಕ್ಕ ಸಮಯೋಚಿತ ನಿರ್ಧಾರದಿಂದಾಗಿ 200ಕ್ಕೂ ಹೆಚ್ಚು ಮಂದಿ ಬಚಾವಾಗಿದ್ದಾರೆ. 

published on : 22nd January 2021

ಮಂಗಳೂರು: ಕೋವಿಡ್-19 ಪರೀಕ್ಷಾ ವರದಿ ನಕಲಿ ಕಾರಣ 6 ಕಾರ್ಮಿಕರಿಗೆ ದುಬೈ ವಿಮಾನ ಹತ್ತಲು ಅನುಮತಿ ನಿರಾಕರಣೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಎಎಐ)ಯನ್ನು ಅದಾನಿ ಗ್ರೂಪ್ ತೆಗೆದುಕೊಂಡ ನಂತರ ಮೊನ್ನೆ ನವೆಂಬರ್ 1ರಂದು ದುಬೈಗೆ ತೆರಳಬೇಕಿದ್ದ 6 ಮಂದಿಗೆ ವಿಮಾನ ಪ್ರಯಾಣ ಸಾಧ್ಯವಾಗಿಲ್ಲ. ವಿಮಾನ ನಿಲ್ದಾಣ ಅಧಿಕಾರಿಗಳು 6 ಮಂದಿ ಪ್ರಯಾಣಿಕರ ಕೋವಿಡ್-19 ವರದಿಯ ನಿಖರತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದೇ ಇದಕ್ಕೆ ಕಾರಣವಾಗಿದೆ.

published on : 4th November 2020

ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಲ್ಲಿ 17 ಬಾಲ ಕಾರ್ಮಿಕರ ರಕ್ಷಣೆ

ಮಲ್ಪೆ ಬಂದರಿನಲ್ಲಿ ಮೀನು ಹಿಡಿಯುವ ಕೆಲಸದಲ್ಲಿ ನಿರತರಾಗಿದ್ದ 17 ಬಾಲ ಕಾರ್ಮಿಕರನ್ನು ಗುರುವಾರ ರಕ್ಷಣೆ ಮಾಡಲಾಗಿದೆ. 

published on : 29th October 2020

ಮಹಾರಾಷ್ಟ್ರ ಗಡಿಯಲ್ಲಿ ವಲಸೆ ಕಾರ್ಮಿಕರ ದಟ್ಟಣೆ; ಕೊರೋನಾ ಸೋಂಕು ಹೆಚ್ಚುವ ಭೀತಿ!

ಸುಗ್ಗಿ ಕಾಲ ಹತ್ತಿರ ಬಂದಿದ್ದು, ಪ್ರತಿವರ್ಷ ಕಬ್ಬಿನ ಕಟಾವು ಅಕ್ಟೋಬರ್ ತಿಂಗಳಿನಲ್ಲಿ ಆರಂಭಗೊಳ್ಳಲಿದೆ. ಪ್ರತೀವರ್ಷ ಕಬ್ಬು ಕಡಿಯಲು ಮಹಾರಾಷ್ಟ್ರದ ಕುಶಲ ಕಾರ್ಮಿಕರು ರಾಜ್ಯಕ್ಕೆ ಧಾವಿಸುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಭೀತಿ ಎದುರಾಗಿದೆ. 

published on : 24th October 2020

ಕೆಲಸ ಇಲ್ಲ, ಕೈಯಲ್ಲಿ ಹಣವಿಲ್ಲ: ಅಸಂಘಟಿತ ವಲಯ ಕಾರ್ಮಿಕರ ಕಷ್ಟ ಕೇಳೋರಿಲ್ಲ, ಇದು ಕೊರೋನಾ ಎಫೆಕ್ಟ್!

ಕೊರೋನಾ ಲಾಕ್ ಡೌನ್ ನಂತರ ಉಂಟಾಗಿರುವ ಆರ್ಥಿಕ ದುಸ್ಥಿತಿ ಅಸಂಘಟಿತ ವಲಯ ಕಾರ್ಮಿಕರ ಮೇಲೆ ತೀವ್ರವಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರು ಉದ್ಯೋಗವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ.

published on : 9th October 2020

ಬೋರ್ವೆಲ್ ಕೊರೆಯುವ ಘಟಕದಲ್ಲಿದ್ದ ಐವರು ಜೀತ ಕಾರ್ಮಿಕರ ರಕ್ಷಣೆ

ಸಹಕಾರ ನಗರದಲ್ಲಿರುವ ಬೋರ್ವೆಲ್ ಕೊರೆಯುವ ಘಟಕದ ಕಚೇರಿಯಲ್ಲಿ ಮಾಲೀಕನಿಂದ ಶೋಷಣೆಗೊಳಪಟ್ಟಿದ್ದ 5 ಮಂದಿ ಜೀತ ಕಾರ್ಮಿಕರನ್ನು ಪೊಲೀಸರು ಹಾಗೂ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

published on : 12th August 2020

ಸೋನು ಸೂದ್ ಗೆ 47 ನೇ ವಸಂತದ ಸಂಭ್ರಮ: ಅಭಿಮಾನಿಗಳಿಂದ ಸೃಜನಾತ್ಮಕ ಶುಭ ಹಾರೈಕೆ! 

ಕೊರೋನಾ ಸಂದರ್ಭದಲ್ಲಿ ವಲಸಿಗ ಕಾರ್ಮಿಕರು, ಬಡವರಿಗೆ ಸಹಾಯ ಹಸ್ತ ಚಾಚಿದ್ದ ಬಾಲಿವುಡ್ ನಟ ಸೋನು ಸೂದ್ 47 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

published on : 30th July 2020

ವಲಸಿಗ ಕಾರ್ಮಿಕರ ವಿಷಯದಲ್ಲಿ ಎಲ್ಲವೂ ಸರಿ ಇದೆ ಎಂದ 'ಮಹಾ' ಸರ್ಕಾರಕ್ಕೆ ಸುಪ್ರೀಂ ತರಾಟೆ

ವಲಸಿಗ ಕಾರ್ಮಿಕರ ವಿಷಯದಲ್ಲಿ ರಾಜ್ಯದಲ್ಲಿ ಎಲ್ಲವೂ ಸರಿ ಇದೆ ಎಂದು ಪ್ರಮಾಣಪತ್ರ ಸಲ್ಲಿಸಿದ್ದ ಮಹಾರಾಷ್ಟ್ರದ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 

published on : 9th July 2020