• Tag results for Ladakh standoff

ಲಡಾಖ್ ಸಂಘರ್ಷ: ಚೀನಾ ಹಿಂದೆ ಸರಿಯುವ ಕುರಿತು 'ನಿರಂತರ ಪರಿಶೀಲನೆ'ಯ ಅಗತ್ಯವಿದೆ - ಭಾರತೀಯ ಸೇನೆ

ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣ(ಎಲ್ ಎಸಿ) ರೇಖೆಯಿಂದ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಪಡೆದುಕೊಳ್ಳುವುದಕ್ಕೆ ಭಾರತ ಮತ್ತು ಚೀನಾ ಸೇನೆ ಒಪ್ಪಿಕೊಂಡಿವೆ.

published on : 16th July 2020

ಲಡಾಖ್ ಗಡಿಯಲ್ಲಿ ಚೀನಾ ಕ್ಯಾತೆ: ಭಾರತದ ನಿಲುವಿಗೆ ತನ್ನ ಸಂಪೂರ್ಣ ಬೆಂಬಲ ಘೋಷಿಸಿದ ಜಪಾನ್

ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿ ಭಾರತಕ್ಕೆ ಗರಿಷ್ಠ ಬೆಂಬಲ ಸೂಚಿಸಿರುವ ಜಪಾನ್ ಈ ಪ್ರದೇಶದಲ್ಲಿನ ಯಥಾಸ್ಥಿತಿಯನ್ನು ಬದಲಿಸುವ ಯಾವುದೇ "ಏಕಪಕ್ಷೀಯ" ಪ್ರಯತ್ನಕ್ಕೆ ತನ್ನ ಪ್ರಬಲ ವಿರೋಧವಿದೆ ಎಂದು ಹೇಳಿದೆ.

published on : 3rd July 2020

ನಿಮ್ಮ ಶೌರ್ಯ ವಿಶ್ವಕ್ಕೇ ಒಂದು ಸಂದೇಶ ರವಾನಿಸಿದೆ: ಲಡಾಖ್ ನಲ್ಲಿ ಭಾರತೀಯ ಯೋಧರನ್ನು ಕೊಂಡಾಡಿದ ಪ್ರಧಾನಿ ಮೋದಿ

ವಿಶ್ವಾದ್ಯಂತ ಭಾರತೀಯ ಸೈನಿಕರ ಶೌರ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು, ಕೋಪವನ್ನು ನೋಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

published on : 3rd July 2020

ಚೀನಾ ಆ್ಯಪ್ ಗಳಿಗೆ ನಿಷೇಧ: ಹೂಡಿಕೆದಾರರ ಕಾನೂನು-ಹಕ್ಕು ರಕ್ಷಣೆ ಭಾರತ ಸರ್ಕಾರದ ಹೊಣೆ- ಚೀನಾ ವಕ್ತಾರ

ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸೋರಿಕೆ ಕಾರಣ ನೀಡಿ ಭಾರತ ಸರ್ಕಾರ 59 ಚೀನಾ ಮೂಲದ ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸಿದ ಬೆನ್ನಲ್ಲೇ ಇದಕ್ಕೆ ಚೀನಾ ಸರ್ಕಾರ ತೀವ್ರ ಆತಂಕ ವ್ಯಕ್ತಪಡಿಸಿದೆ.

published on : 30th June 2020

ಲಡಾಖ್ ಸಂಘರ್ಷ: ನಾಳೆ 3ನೇ ಬಾರಿ ಭಾರತ-ಚೀನಾ ಕಮಾಂಡರ್ ಮಟ್ಟದ ಮಾತುಕತೆ

ಲಡಾಖ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ - ಚೀನಾ ಸೇನಾ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಈಗಾಗಲೇ ಎರಡು ಬಾರಿ ವಿಫಲವಾಗಿದ್ದು, ಈಗ ಮೂರನೇ ಬಾರಿಗೆ ಮಂಗಳವಾರ ಉಭಯ ದೇಶಗಳ ಕಮಾಂಡರ್ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

published on : 29th June 2020

ಚೀನಾಗೆ ಸಡ್ಡುಹೊಡೆದ ಭಾರತ: ಗಡಿಗೆ 3 ಸಾವಿರ ಐಟಿಬಿಪಿ ಸಿಬ್ಬಂದಿ ರವಾನೆ, ರಸ್ತೆ ಕಾಮಗಾರಿ ಮುಂದುವರಿಕೆ

ತಂಟೆಕೋರ ಚೀನಾಗೆ ಸಡ್ಡು ಹೊಡೆದ ಭಾರತ ಸಂಘರ್ಷ ಪೀಡಿತ ಗಾಲ್ವಾನ್ ಕಣಿವೆ ಸೇರಿದಂತೆ ಗಡಿಯುದ್ದಕ್ಕೂ 3 ಸಾವಿರ ಐಟಿಬಿಪಿ ಸೈನಿಕರನ್ನು ರವಾನೆ ಮಾಡಿದೆ. ಅಲ್ಲದೆ ಸಂಘರ್ಷದ ಬೆನ್ನಲ್ಲೇ ಸ್ಥಗಿತವಾಗಿದ್ದ ರಸ್ತೆ ಕಾಮಗಾರಿಗಳ ವೇಗವಾಗಿ ಪೂರ್ಣಗೊಳಿಸಲು ಕ್ರಮಕೈಗೊಂಡಿದೆ.

published on : 20th June 2020

ಗಾಲ್ವಾನ್ ಸಂಘರ್ಷ ಹಿನ್ನಲೆ: 33 ರಷ್ಯಾ ಯುದ್ಧವಿಮಾನಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದ ವಾಯುಸೇನೆ!

ಲಡಾಖ್ ನ ಗಾಲ್ವಾನ್ ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷದ ಹಿನ್ನಲೆಯಲ್ಲಿ ಗಡಿಯಲ್ಲಿ ಪರಿಸ್ಥಿತಿ ಗಂಭೀರವಾಗಿರುವಂತೆಯೇ ಇತ್ತ ಭಾರತೀಯ ವಾಯುಸೇನೆ ರಷ್ಯಾದ 33 ಅತ್ಯಾಧುನಿಕ ಯುದ್ಧ ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

published on : 18th June 2020

ಸೈನಿಕರು ನಿರಾಯುಧರಾಗಿರಲಿಲ್ಲ, ಶಸ್ತ್ರಸಜ್ಜಿತರಾಗಿದ್ದರು: ರಾಹುಲ್ ಗಾಂಧಿಗೆ ವಿದೇಶಾಂಗ ಸಚಿವರ ತಿರುಗೇಟು

ಗಾಲ್ವಾನ್ ಸಂಘರ್ಷದ ವೇಳೆ ಸೈನಿಕರು ನಿರಾಯುಧರಾಗಿರಲಿಲ್ಲ, ಶಸ್ತ್ರಸಜ್ಜಿತರಾಗಿ ಹೋಗಿದ್ದರು ಎಂದು ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಹೇಳಿದ್ದಾರೆ.

published on : 18th June 2020

ಗಾಲ್ವಾನ್ ಸಂಘರ್ಷದಲ್ಲಿ ಭಾರತೀಯ ಸೈನಿಕರು ಕಣ್ಮರೆಯಾಗಿಲ್ಲ: ಭಾರತೀಯ ಸೇನೆ ಸ್ಪಷ್ಟನೆ

20 ಸೈನಿಕರ ಸಾವಿಗೆ ಕಾರಣವಾದ ಗಾಲ್ವಾನ್ ಸಂಘರ್ಷದ ಸಂದರ್ಭದಲ್ಲಿ ಭಾರತದ ಯಾವುದೇ ಸೈನಿಕನೂ ಕಣ್ಮರೆಯಾಗಿಲ್ಲ ಎಂದು ಭಾರತೀಯ ಸೇನೆ ಸ್ಫಷ್ಟಪಡಿಸಿದೆ.

published on : 18th June 2020

ಭಾರತೀಯ ಸೈನಿಕರ 'ಆಕ್ರಮಣಶೀಲತೆ, ಲಜ್ಜೆಗೇಡಿತನ' ಗಾಲ್ವಾನ್ ಸಂಘರ್ಷಕ್ಕೆ ಕಾರಣ: ಚೀನಾ ವಿದೇಶಾಂಗ ಸಚಿವ ವಾಂಗ್ ಯೀ

ಗಾಲ್ವಾನ್ ಸಂಘರ್ಷಕ್ಕೆ ಭಾರತೀಯ ಸೈನಿಕರ ಆಕ್ರಮಣಶೀಲತೆಯೇ ಕಾರಣ. ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ಚಾಲ್ತಿಯಲ್ಲಿರುವಾಗಲೇ ಸೈನಿಕರು ಲಜ್ಜೆಗೆಟ್ಟವರಂತೆ ವರ್ತಿಸಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಹೇಳಿದ್ದಾರೆ. 

published on : 17th June 2020

ಗಾಲ್ವಾನ್ ಸಂಘರ್ಷ ಪೂರ್ವನಿಯೋಜಿತ: ಚೀನಾ ಸಚಿವರೊಂದಿಗಿನ ಮಾತುಕತೆ ವೇಳೆ ಭಾರತ ತೀವ್ರ ಅಸಮಾಧಾನ!

ಭಾರತ ಮತ್ತು ಚೀನಾ ಸೈನಿಕರ ನಡುವೆ ಗಾಲ್ವಾನ್ ನಲ್ಲಿ ನಡೆದ ಸಂಘರ್ಷ ಪೂರ್ವನಿಯೋಜಿತ ಕೃತ್ಯ ಎಂದು ಕೇಂದ್ರ ಸರ್ಕಾರ ಚೀನಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

published on : 17th June 2020

ಲಡಾಖ್ ಸಂಘರ್ಷ: ಚೀನಾ ಸೈನಿಕರೊಂದಿಗೆ ಸೆಣಸಿ ಹುತಾತ್ಮರಾದ 20 ವೀರ ಯೋಧರ ಪಟ್ಟಿ

ಇಂಡೋ-ಚೀನಾ ಗಡಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಮಲ್ಲಯುದ್ಧದಲ್ಲಿ ಚೀನೀ ಯೋಧರೊಂದಿಗೆ ಸೆಣಸಿ ವೀರಮರಣವನ್ನಪ್ಪಿದ ಭಾರತದ 20 ಯೋಧರ ವಿವರವನ್ನು ಸೇನೆ ಬಿಡುಗಡೆ ಮಾಡಿದೆ. 

published on : 17th June 2020

ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಇಂಡೋ-ಚೀನಾ ಸಂಘರ್ಷ ಸಂಬಂಧ ಪ್ರಧಾನಿ ಮೋದಿ ಹೇಳಿಕೆ

ಲಡಾಖ್ ಗಡಿಯಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಈ ವಿಚಾರವಾಗಿ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದು,ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

published on : 17th June 2020

ಚೀನೀ ಸೈನಿಕರಿಂದ ಭಾರತೀಯ ಯೋಧರ ಹತ್ಯೆ; ಆಘಾತ ವ್ಯಕ್ತಪಡಿಸಿದ ಕಾಂಗ್ರೆಸ್

ಲಡಾಖ್ ಗಡಿಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಚೀನೀ ಸೈನಿಕರು ಭಾರತೀಯ ಯೋಧರನ್ನು ಕೊಂದಿರುವ ಘಟನೆ ಕುರಿತಂತೆ ಪ್ರತಿಪಕ್ಷ ಕಾಂಗ್ರೆಸ್ ಆಘಾತ ವ್ಯಕ್ತಪಡಿಸಿದೆ.

published on : 16th June 2020

ಭಾರತ-ಚೀನಾ ಸಂಘರ್ಷ: 3 ಭಾರತೀಯ ಯೋಧರು ಹುತಾತ್ಮ, ಚೀನಾ ಕಡೆಯೂ ಸಾವು ನೋವು ವರದಿ!

ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವಿನ ಮಲ್ಲಯುದ್ಧದಲ್ಲಿ ಭಾರತದ ಮೂವರು ಯೋಧರು ಹತ್ಯೆಯಾಗಿದ್ದು ಸಂಚಲನ ಮೂಡಿಸಿತ್ತು. ಇದೀಗ ಚೀನಾ ಕಡೆಯೂ ಸಾವು-ನೋವು ಸಂಭವಿಸಿದೆ ಎಂದು ವರದಿಯಾಗಿದೆ.

published on : 16th June 2020
1 2 >